Posts

Showing posts from July, 2026

ಗುರುವಿನ ವಾಕ್ಯ

  ಗುರುವಿನ ವಾಕ್ಯ : ನೀನು ರಾತ್ರಿ ಕಾಣುವ ಕನಸಿನಲ್ಲಿ ಒಂದು ಲೋಕವೇ ಇರುತ್ತದೆ. ಆ ಕನಸಿನ ಲೋಕದಲ್ಲಿ ನೀನೇ ನಿನ್ನ ಸ್ನೇಹಿತನಾಗಿರುತ್ತೀಯ. ನೀನೇ ನಿನ್ನ ಶತ್ರು ಆಗಿರುತ್ತಿಯಾ. ನೀನೇ ತಂದೆ, ತಾಯಿ, ಬಂಧು ಬಳಗ ಎಲ್ಲವೂ ನೀನೇ ಆಗಿರುತ್ತಿಯಾ. ನಿನ್ನ ಕನಸಿನ ಲೋಕದಲ್ಲಿ ನಿನ್ನ ಬಿಟ್ಟು ಬೇರೆ ಯಾರು ಇಲ್ಲ. ಹಾಗೆಯೇ ಎಚ್ಚರದ ಲೋಕದಲ್ಲಿ ಆ ಒಬ್ಬ ದೇವರೇ ಎಲ್ಲವೂ ಆಗಿ ನಿನ್ನ ಜೊತೆ ವ್ಯವಹರಿಸುತ್ತಿದ್ದಾನೆ. ಕನಸಿನ ಲೋಕದಲ್ಲಿ ಇದ್ದದ್ದು ನಾನೊಬ್ಬನೇ. ನನ್ನನ್ನು ಬಿಟ್ಟು ಅಲ್ಲಿ ಯಾರು ಇರಲಿಲ್ಲ ಎನ್ನುವುದು ನಾವು ಕನಸಿನಲ್ಲಿ ಇರುವಾಗ ಗೊತ್ತಾಗುವುದಿಲ್ಲ. ನಾವು ಕನಸಿನ ಲೋಕದಿಂದ ಹೊರಗಡೆ ಬಂದಾಗ ಮಾತ್ರ ಗೊತ್ತಾಗುತ್ತದೆ. ಅಂದರೆ ಕನಸಿನಿಂದ ಎಚ್ಚರವಾದಾಗ ಮಾತ್ರ ಕನಸಿನಲ್ಲಿ ನಾನು ಮಾತ್ರ ಇದ್ದೆ ಎನ್ನುವುದು, ಗೊತ್ತಾಗುತ್ತದೆ. . ಇದೇ ರೀತಿ ಎಲ್ಲಿಯವರೆಗೆ ನಾವು ಜಗತ್ತಿನಲ್ಲಿ ಮುಳುಗಿ ಹೋಗಿರುತ್ತೇವೆ, ಅಲ್ಲಿಯವರೆಗೆ ಜಗತ್ತಿನಲ್ಲಿ ದೇವರು ಮಾತ್ರ ಇದ್ದಾನೆ ಎನ್ನುವುದು ತಿಳಿಯುವುದಿಲ್ಲ. ನಾವು ಅಜ್ಞಾನದ ನಿದ್ರೆಯಿಂದ ಎಚ್ಚರವಾದಾಗ ಮಾತ್ರ ಜಗತ್ತಿನಲ್ಲಿ ಇದ್ದದ್ದು ದೇವರು ಮಾತ್ರ ಎನ್ನುವುದು ಗೊತ್ತಾಗುತ್ತದೆ. ಇದನ್ನೇ ಜಾಗೃತಿ ENLIGHTENMENT ಎಂದು ಕರೆಯುತ್ತಾರೆ. ಮನುಷ್ಯರಾಗಿ ನಾವು, ನಮ್ಮ ಜೀವ ವಿಕಾಸದ, ಜ್ಞಾನ ವಿಕಾಸದ ಹಾದಿಯಲ್ಲಿ ತಲುಪಬೇಕಾಗಿರುವ ಕಟ್ಟಕಡೆಯ ಹಂತವೇ... ನೀನೇ ಎಲ್ಲಾ, ನಾನು ಏನು ಇಲ್ಲಾ, ಎನ್ನುವ ಸ್ಥಿತಿ.  U...