Posts

Showing posts from September, 2026
Image
 "*ಸಂತರ, ಜೀವನದ ಶೂನ್ಯ (ಸೊನ್ನೆ) ದೃಷ್ಟಿಕೋನ ಸತ್ಯವೇ ? ಮತ್ತು ಭ್ರಷ್ಟಾಚಾರಿಗಳ ಜೀವನ-ಅಶೂನ್ಯ ದೃಷ್ಟಿಕೋನ ಸತ್ಯವೇ ?*" ಎಲ್ಲರಿಗೂ ನಮಸ್ಕಾರ 🙏  ಆತ್ಮೀಯರೇ,  ಜಗತ್ತಿನ ನಿಜವಾದ ವಿರಾಗಿ ಸಂತರು ಜಗತ್ತಿನಿಂದ ದೂರವಾಗಿ ಅಥವಾ ಜಗತ್ತಿನಲ್ಲಿದ್ದು ಜಗತ್ತಿನ ಆಸೆ ಆಕಾಂಕ್ಷೆಗಳಿಗೆ ಬಲಿಯಾಗದೆ ಬದುಕುತ್ತಿರುವುದಕ್ಕೆ ಕಾರಣ. ಜಗತ್ತು ಅಥವಾ ಜೀವನವನ್ನು ಶೂನ್ಯ ಎಂದು ತಿಳಿದುಕೊಂಡಿದ್ದು. ಇದಕ್ಕೆ ವಿರುದ್ಧವಾಗಿ ಈ ಜಗತ್ತಿನಲ್ಲಿರುವ ಅನೇಕ ಭ್ರಷ್ಟಾಚಾರಿಗಳು, ಭ್ರಷ್ಟಾಚಾರ ಮಾಡುತ್ತಿರುವುದಕ್ಕೆ ಕಾರಣ ಜಗತ್ತು ಅಶೂನ್ಯ, ಜಗತ್ತು ಸತ್ಯ ಎಂದು ತಿಳಿದುಕೊಂಡಿರುವುದು.  ಇಲ್ಲಿ ಪ್ರಶ್ನೆ ಎಂದರೆ ಯಾರ ದೃಷ್ಟಿಕೋನ ಸತ್ಯ ?  * ಸಂತರ ದೃಷ್ಟಿಕೋನವೇ ?  * ಭ್ರಷ್ಟಾಚಾರಿಗಳ ದೃಷ್ಟಿಕೋನವೇ ? ನಾವು ಭ್ರಷ್ಟಾಚಾರ ಮಾಡುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಗುರುತಿಸಬಹುದು.  1. ಅನಿವಾರ್ಯ ಕಾರಣ.  2. ಅವಕಾಶದ ಕಾರಣ.  *"ಅನಿವಾರ್ಯ ಕಾರಣ"* : ಸತ್ಯ ಮಾರ್ಗದಲ್ಲಿ "ಗಟ್ಟಿ ನಿಷ್ಠೆ" ಉಳ್ಳವರು ಎರಡು ಕಾರಣದಿಂದಲೂ ಭ್ರಷ್ಟಾಚಾರಕ್ಕೆ ಇಳಿಯುವುದಿಲ್ಲ. ಆದರೆ ಸತ್ಯ ಮಾರ್ಗದಲ್ಲಿರುವವರು ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಭ್ರಷ್ಟ ಆಚರಣೆಗಳನ್ನು ಮಾಡುತ್ತಾರೆ.  ಭ್ರಷ್ಟಾಚಾರ ಮಾಡಿದ ನಂತರ ಪಶ್ಚಾತ್ತಾಪ ಪಟ್ಟು ಮುಂದಿನ ದಿನಗಳಲ್ಲಿ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಾರೆ. *"ಅವಕಾ...
Image
 *ಹನುಮಾನ ದೇವರು, ಒಂದು ಸೇಬು ತೋರಿಸುತ್ತಾ, ಈ ಹಣ್ಣನ್ನು ನೀವು ಇಲ್ಲವಾಗಿ ಹೇಗೆ ಮಾಡುತ್ತೀರಿ ? ಎಂದು ಕೇಳಿದ ಪ್ರಶ್ನೆಗೆ ಉತ್ತರ.* ಈ ಪ್ರಶ್ನೆಗೆ ಉರ್ವಾ ಎನ್ನುವ ಮಾತಂಗ ಯುವಕ ಹನುಮಾನ ದೇವರಿಗೆ ನಮಿಸಿ ಕೊಟ್ಟ ಉತ್ತರವೆಂದರೆ, "ಪ್ರಭು, ನಾನು ಕಣ್ಣು ಮುಚ್ಚಿಕೊಂಡಾಗ, ನನ್ನ ಪಾಲಿಗೆ ಈ ಸೇಬು ಹಣ್ಣು ಇಲ್ಲವಾಗುತ್ತದೆ" ಎಂದು ಹೇಳಿದ. ಇದನ್ನು ಕೇಳಿದ ಹನುಮಾನ ದೇವರು ಹೌದು ನೀನು ಹೇಳಿದ್ದು ಸತ್ಯ.. ಆದರೆ ನೀನು ಕಣ್ಣು ತೆರೆದಿದ್ದರೂ ಇದನ್ನು ಇಲ್ಲವಾಗಿ ಮಾಡಲು ಸಾಧ್ಯವೇ ? ಎಂದು ಕೇಳಿದರು. ಆಗ ಊರ್ವಾ, ಪುನಃ ಯೋಚಿಸಿ ನನ್ನ ಮೆದುಳಿನಲ್ಲಿ ಇದರ ಹೆಸರು, ಬಣ್ಣ ರುಚಿ ಇನ್ನಿತರ ಅನೇಕ ಮಾಹಿತಿಗಳ ಸಂಗ್ರಹ ಇದೆ. ನನ್ನ ಮೆದುಳಿನ ಆ ಮಾಹಿತಿಗಳ ಸಂಗ್ರಹ ನಾಶ ಮಾಡಿದರೆ, ನಾನು ಕಣ್ಣು ತೆರೆದಿದ್ದರೂ ಸೇಬು ಹಣ್ಣು ನನಗೆ ಇಲ್ಲವಾಗುತ್ತದೆ, ಎಂದು ಹೇಳಿದ. ಆದರೆ ಸೇಬಿನ ಹೊರತು ಯಾವುದೋ ಬೇರೆ ಒಂದು ವಸ್ತು ಅಂತು ಅಲ್ಲಿಯೇ ಇದೆ. ಅದನ್ನು ಇಲ್ಲವಾಗಿ ಮಾಡಲು ಸಾಧ್ಯವೇ ? ಎಂದು ಹನುಮಾನ ದೇವರು ಕೇಳಿದರು. .. ಆಗ ಊರ್ವಾ ನಮ್ಮ ಮೆದುಳಿನಲ್ಲಿ ಯಾವುದು ಗಟ್ಟಿ ? ಯಾವುದು ದ್ರವ ? ಯಾವುದು ಅನಿಲ ? ಯಾವುದು ಖಾಲಿ ? ಎಂದು ತಿಳಿಯುವ ನರ ತಂತುಗಳು ಇವೆ. ಇವುಗಳ ಸಹಾಯದಿಂದ ನಾನು ಗಟ್ಟಿಯಾದದ್ದನ್ನು ಖಾಲಿಯಾಗಿರುವದರ ವ್ಯತ್ಯಾಸ ಕಂಡುಕೊಂಡು ಅವುಗಳನ್ನು ಬೇರೆ ಬೇರೆಯಾಗಿ ಗುರುತಿಸುತ್ತೇವೆ.  ಒಂದು ವೇಳೆ ಮೆದುಳಿನ ಈ ಜ್ಞಾನ ತಂತುಗಳು ಸಾಮರ್ಥ್ಯ ತೆಗೆ...

ಪ್ರಶ್ನೆ ಎಂದರೇನು

Image
 
Image
 *ರಾಜ್ಯ ಹೆದ್ದಾರಿಯಲ್ಲಿ, ಮುಂದಿರುವ ವಾಹನ ಒಮ್ಮೆಗೆ ವೇಗ ಕಡಿಮೆ ಮಾಡಿದರೆ ಹಿಂದಿರುವ ವಾಹನ ಸವಾರನ ಗತಿ ಏನು?* ನಿನ್ನೆ (ಶನಿವಾರ 19/09/26) ಕೆಲಸ ಮುಗಿಸಿ ರಾತ್ರಿ ಸೇಡಂ ಕಡೆಗೆ ನನ್ನದೆಯಾದ ವೇಗದಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದೆ. ನನ್ನ ಮುಂದಿರುವ ವಾಹನವು ತನ್ನದೆಯಾದ ವೇಗದಲ್ಲಿ ಮುಂದೆ ಹೋಗುತ್ತಿತ್ತು. ನನಗೂ ಆ ವಾಹನಕ್ಕೂ ಬಹುಶಃ 3 ರಿಂದ 4 ಮೀಟರ್ ಅಂತರವಿತ್ತು. ಆದರೆ ಎರಡು ವಾಹನ ಒಂದೇ ದಿಕ್ಕಿನಲ್ಲಿ ನೇರವಾಗಿ ಇದ್ದವು. ಆದರೆ ಮುಂದಿರುವ ಇಬ್ಬರು ಕುಳಿತುಕೊಂಡಿರುವ ದ್ವಿಚಕ್ರ ವಾಹನ ನಡು ರಸ್ತೆಯಲ್ಲಿ ಒಮ್ಮೆಗೆ ತನ್ನ ಚಲಿಸುವ ವೇಗ ಕಡಿಮೆ ಮಾಡಿತು. ಹಿಂದೆ ನನ್ನ ವಾಹನ ಮೊದಲಿನ ವೇಗದಲ್ಲಿ ಇದೆ. ಅದೇ ದಿಕ್ಕಿನಲ್ಲಿ ಹೋದರೆ ಮುಂದಿನ ಗಾಡಿಗೆ ಡಿಕ್ಕಿ ಹೊಡೆಯುತ್ತದೆ. ಬಲ ಪಕ್ಕಕ್ಕೆ ತಿರುಗಿಸಬೇಕೆಂದು ಯೋಚನೆ ಮಾಡಿದೆ. ಅಷ್ಟರಲ್ಲಿ ಒಂದು ಕಾರ್ ಆ ಕಡೆ ಬರುತ್ತಿದೆ. ಮುಂದೆ ಹೋಗುವ ಹಾಗಿಲ್ಲ. ಬಲ ಪಕ್ಕಕ್ಕೆ ತಿರುಗುವ ಹಾಗಿಲ್ಲ. ನನಗೆ ಒಂದೇ ಸಮನೆ ಎದುರು ಇರುವ ಸವಾರನ ಮೇಲೆ ಸಿಟ್ಟು ಬರುತ್ತಿದೆ. ಸಮಯ ಪ್ರಜ್ಞೆಯಿಂದ ಎಡಕ್ಕೆ ಸ್ವಲ್ಪ ಜಾಗವಿತ್ತು. ನನ್ನ ಅದೇ ವೇಗದಲ್ಲಿ ಎಡಕ್ಕೆ ವಾಹನ ತೆಗೆದುಕೊಂಡೇ. ಆಗ ಒಂದೇ ಸಮಯಕ್ಕೆ ಎರಡು ವಿಷಯಗಳ ತಾಕಲಾಟ ಎದುರಿಸಿದೆ..  1.. ಮುಂದಿನವರು ಏಕೆ ಗಾಡಿ ನಿಧಾನ ಮಾಡಿದರು ಎನ್ನುವ ಕಾರಣ ತಿಳಿಯಿತು. 2. ಈಗ ನಾನು ಹೇಗೆ ಎರಡು ತಪ್ಪಿನಿಂದ ಪಾರಾಗಬೇಕು ? ಎನ್ನುವ ಸವಾಲು ಎದುರಾಯಿತು...
Image
 *"ಶಿಕ್ಷಕರು ಹೇಳಿರುವ ಹೊಸ ಸ್ವಾತಂತ್ರ್ಯ ಹೋರಾಟ.*"  ಎಲ್ಲರಿಗೂ ನಮಸ್ಕಾರ ಆತ್ಮೀಯರೇ, ಇತ್ತೀಚೆಗೆ ಮುಕ್ತಾಯವಾದ ಆದರ್ಶ ಶಿಕ್ಷಕರು ಹೇಗಿರಬೇಕು ? ಎನ್ನುವ ಶಿಕ್ಷಕರ ಅನಿಸಿಕೆಗಳ ಸ್ಪರ್ಧೆಯಲ್ಲಿ, ತಮ್ಮ ಮೂರು ನಿಮಿಷಗಳ ಸಮಯದಲ್ಲಿ ಬಹುತೇಕ ಸಮಯವನ್ನು ಎಲ್ಲಾ ಶಿಕ್ಷಕರು ಸಮಾನ ಅಂಶಗಳನ್ನು ಹೇಳಿದರೆ, ಸ್ವಲ್ಪ ಸಮಯ ಬೇರೆಯವರಿಗಿಂತ ವಿಭಿನ್ನ ಅಂಶಗಳನ್ನು ಹೇಳಿದ್ದಾರೆ. ನಾವು ಸಹ ಶಿಕ್ಷಕರಿಗೆ ಭ್ರಷ್ಟಾಚಾರ ನಿವಾರಣೆಯಲ್ಲಿ ಶಿಕ್ಷಕರ ಪಾತ್ರ ಎನ್ನುವ ಅಂಶವನ್ನು ಸಹ ನೀಡಿದ್ದೇವು. ಈ ವಿಷಯಕ್ಕೆ ಸಂಬಂಧಿಸಿದಂತೆ ಒಬ್ಬ ಶಿಕ್ಷಕರು ಒಂದು ಹೊಸ ಕಲ್ಪನೆ, ಒಂದು ಹೊಸ ದೃಷ್ಟಿಕೋನವನ್ನು ನಮ್ಮೆಲ್ಲರಿಗೆ ನೀಡಿದ್ದಾರೆ.  ಈ ಶಿಕ್ಷಕರು ತಮ್ಮ ವಿಡಿಯೋ ಜಾಲತಾಣದಲ್ಲಿ ಹಾಕಲು ಅನುಮತಿ ನೀಡಿಲ್ಲ. ಹೀಗಾಗಿ ಅವರ ಹೆಸರು ಮತ್ತು ಶಾಲೆ ಹೇಳುವುದಿಲ್ಲ. ಈ ವಿಡಿಯೋದಲ್ಲಿ ಕೇವಲ ಅವರ ಧ್ವನಿ ತಮಗೆ ಕೇಳಲಿದೆ. ಈ ಶಿಕ್ಷಕರು ಸಮಾಜದ ಭ್ರಷ್ಟಾಚಾರ ಸಮಸ್ಯೆಯನ್ನು ಈ ಹಿಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಿದ್ದಾರೆ. ಆಗ ಹೇಗೆ ಭಾರತೀಯರು ಬ್ರಿಟಿಷರ ವಿರುದ್ದ ಹೋರಾಡಿದ್ದರು? ಹಾಗೆಯೇ ಇಂದು ಪ್ರತಿಯೊಬ್ಬರೂ ಸಮಾಜದ ಭ್ರಷ್ಟ ಆಚರಣೆಗಳ ವಿರುದ್ಧ ಹೋರಾಡಬೇಕಾಗಿದೆ, ಅದಕ್ಕಾಗಿ ಶಿಕ್ಷಕರು ಸಹ ಶಾಲೆಗಳಲ್ಲಿ ಈ ವಿಷಯ ಕುರಿತು ಮಕ್ಕಳಿಗೆ ಪ್ರೇರಣೆ ನೀಡಬೇಕಾಗಿದೆ ಎಂದು ಹೇಳಿದ್ದಾರೆ.  ಈ ಒಂದು ಕಲ್ಪನೆ, ಈ ಒಂದು ದೃಷ್ಟಿಕೋನ ಎಲ್ಲಾ ಶಿಕ್ಷಕರಿಗೆ ಹಾಗೂ ಎಲ...
Image
 *"ನಮ್ಮ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಬಹುಮಾನವಾಗಿ ಕೊಡಬೇಕೆಂದಿರುವ ಪುಸ್ತಕದ  ( Immortal talk -1) ಪರಿಚಯ"* ಎಲ್ಲರಿಗೂ ನಮಸ್ಕಾರ,  ಆತ್ಮೀಯರೇ, ಪ್ರೌಢ ಶಾಲಾ ವಿಧ್ಯಾರ್ಥಿಗಳ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕನ್ನಡ ಇಂಗ್ಲೀಷ್ ನಿಘಂಟು ನೀಡಲಾಗಿತ್ತು. ಶಿಕ್ಷಕರ ದಿನಾಚರಣೆ ಹಾಗೂ ಹಿರಿಯ ಮುಖಂಡರು, ಸಮಾಜ ಸೇವಕರಾದ ಶ್ರೀ ಗಣಪತರಾವ ಚಿಮ್ಮನಚೋಡಕರ್ ರವರ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಶಿಕ್ಷಕರ ಅನಿಸಿಕೆ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, ಗೌರವ ಸನ್ಮಾನದೊಂದಿಗೆ  ಒಂದು ವಿಶೇಷ ಪುಸ್ತಕ ನೀಡಲು ಬಯಸಿದ್ದೇವೆ. ಈ ಪುಸ್ತಕ ನಮ್ಮ ಯೋಚನೆ ವಿಚಾರ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಪುಸ್ತಕವಾಗಿದೆ. ಈ ಪುಸ್ತಕದ ಹಿನ್ನೆಲೆ ಹೇಳಬೇಕಾದರೆ, ಇದು ಒಂದು ಮಹಾನ ಉಪನ್ಯಾಸದ ಸಂಕಲನ ಆಗಿದೆ. ಇದು ಯಾರ ಉಪನ್ಯಾಸ ಎಂದು ಹೇಳುವ ಮುಂಚೆ ಇನ್ನೊಂದು ವಿಷಯ ತಿಳಿದುಕೊಳ್ಳುವುದು ಅವಶ್ಯವಾಗಿದೆ. ತೆತ್ರಾಯುಗದಲ್ಲಿ ಪ್ರಕಟವಾದವರು ಶ್ರೀ ಹನುಮಾನ ದೇವರು. ಅವರು ಇಂದಿಗೂ ಈ ಭೂಮಿಯ ಮೇಲೆ ಚಿರಂಜೀವಿಯಾಗಿದ್ದಾರೆಯೆಂದು ನಂಬಲಾಗಿದೆ.  ಚಿರಂಜೀವಿಯಾದರೂ ಅವರು ಸಾಮಾನ್ಯವಾಗಿ ಯಾರಿಗೂ ಭೇಟಿ ಆಗುವುದಿಲ್ಲ. ಹಾಗೂ ಯಾರಿಗೂ ಕಾಣುವುದಿಲ್ಲ. ಆದರೆ "ಶ್ರೀಲಂಕಾದಲ್ಲಿ ಒಂದು ಪುಣ್ಯವಂತ ಮಾತಂಗ ಎನ್ನುವ ಬುಡಕಟ್ಟು ಜನಾಂಗ ಇದೆ".  ಅಲ್ಲಿಗೆ ಹನುಮಾನ ದೇವರ...
Image
 *ಎಲ್ಲಾ ಆತ್ಮೀಯರಲ್ಲಿ ಒಂದು ವಿನಂತಿ : ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಗಳಂತಹ ಪ್ರಾಮಾಣಿಕರನ್ನು ನಿರ್ಮಾಣ ಮಾಡಲು ನಮ್ಮಿಂದ ಮಾಡುತ್ತಿರುವ ಒಂದು ಪ್ರಯತ್ನಕ್ಕೆ ಬೆಂಬಲಿಸಿ* ಚಿತ್ರದಲ್ಲಿ ಕಾಣುವ ಈ ಸರ್ಕಾರಿ ನೌಕರಿಯಲ್ಲಿರುವ ಈ ಅಧಿಕಾರಿ, ತಮ್ಮ ಹಿಂದೆ, ಒಂದು ಬ್ಯಾನರನ್ನೆ ಹಚ್ಚಿದ್ದಾರೆ, *ನನಗೆ ಲಂಚ ಕೊಡಬೇಡಿ ನಾನು ಭ್ರಷ್ಟ ಅಧಿಕಾರಿ ಆಗಲಾರೆ*. ಈ ರೀತಿ ಭ್ರಷ್ಟಾಚಾರ ರಹಿತ ಸತ್ಯ ಪ್ರಾಮಾಣಿಕತೆ ಹೊಂದಿರುವ ಅಧಿಕಾರಿಗಳ ಅವಶ್ಯಕತೆ ಇಂದು ಬಹಳ ಇದೆ. ಇಂತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಾದಾಗಲೇ ಸಮಾಜದಿಂದ ಭ್ರಷ್ಟಾಚಾರ ಹೋಗಲಿದೆ.   ನಮ್ಮ ಟ್ರಸ್ಟ ವತಿಯಿಂದ ವಿದ್ಯಾರ್ಥಿಗಳಿರುವಾಗಲೇ ಮಕ್ಕಳಿಗೆ ಈ ವಿಚಾರ ಮೂಡಲಿ ಎನ್ನುವ ಉದ್ದೇಶದಿಂದ ಭ್ರಷ್ಟಾಚಾರ ಹಾಗೂ ಅನೈತಿಕತೆ ಕುರಿತು ಸೇಡಂ ತಾಲೂಕಿನ ಎಲ್ಲಾ ಪ್ರೌಢ ಶಾಲೆಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಭ್ರಷ್ಟಾಚಾರದಿಂದ ಉಂಟಾಗುವ ಸಮಸ್ಯೆಗಳು ಹಾಗೂ ಪರಿಹಾರ ಉಪಾಯಗಳು ಬಗ್ಗೆ ಅಧ್ಯಯನ ಚಿಂತನೆ ಮನನವನ್ನು ಮಾಡಿದ್ದಾರೆ. ಇದು ಅವರು ನಾಗರಿಕರಾಗಿ ಪರಿವರ್ತನೆ ಆದಾಗ ಸ್ವಲ್ಪವಾದರೂ ಭ್ರಷ್ಟಾಚಾರ ವಿರುದ್ಧ ನಿಲ್ಲುವಂತೆ ಸತ್ಯ, ಪ್ರಾಮಾಣಿಕತೆ ಪರವಹಿಸುವಂತೆ ಮಾಡಲಿದೆ ಎನ್ನುವುದು ನಮ್ಮ ಆಶಾವಾದ.  ನಮ್ಮ ಪ್ರಯತ್ನ ಒಂದು ಗಾಢವಾದ ಪ್ರಭಾವ ಅವರ ಮೇಲೆ ಬೀರಲಿ ಎನ್ನುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ 26 ಶಾಲೆಯ 74 ವಿಧ್ಯ...
Image
 *ಶಾಲು ಮತ್ತು ಹಾರ, ದ ಕಥೆ* ಹಾರ ಮತ್ತು ಶಾಲು ಖರೀದಿಸಿ, ಸನ್ಮಾನ ಮಾಡಲು ತೆಗೆದುಕೊಂಡು ಹೋಗಲಾಗಿತ್ತು.  * ಹಾರ ಒಬ್ಬರ ಕೊರಳನ್ನು ಅಲಂಕರಿಸುತ್ತೇನೆ, ಎನ್ನುವ ಉತ್ಸಾಹದಲ್ಲಿತ್ತು.  * ಶಾಲು ನಾನು ಒಬ್ಬರ ಹೆಗಲು ಏರುತ್ತೇನೆ, ಎನ್ನುವ ಸಂಭ್ರಮದಲ್ಲಿತ್ತು. * ಹಾರ ನಿರುತ್ಸಾಹಗೊಂಡಿತು. * ಶಾಲಿನ ಸಂಭ್ರಮ ದೂರದಲ್ಲಿಯೇ ಉಳಿಯಿತು. ಕಾರಣ ಸನ್ಮಾನ ಪಡೆದುಕೊಳ್ಳುವವರು ಎಷ್ಟು ಕೇಳಿದರೂ ಒಪ್ಪಲಿಲ್ಲ. "ನಾನು ಇದನ್ನು ಪಡೆದುಕೊಂಡರೆ, ನನ್ನ ಕರ್ತವ್ಯಕ್ಕೆ ಲಂಚ ಪಡೆದುಕೊಂಡಂತೆ ಎಂದು, *ಹಾರ, ಶಾಲುಗಳಿಗೆ ನೋವಾಗುತ್ತದೆ*, ಎಂದು ಸ್ವಲ್ಪವೂ ಕೂಡಾ ಯೋಚಿಸದೆ ನಿರ್ದಾಕ್ಷಿಣ್ಯವಾಗಿ ಎಷ್ಟು ಬಾರಿ ವಿನಂತಿಸಿದರು ನಿರಾಕರಿಸಿಬಿಟ್ಟರು. *ಹಾರ, ಶಾಲುಗಳು ಇಂತಹವರ ಹೆಗಲು ಏರಲು ನಮಗೆ ಆಗಲಿಲ್ಲ ಎಂದು ಮರಗಿದವು.* 👉 ಇಂತಹವರಿಂದ ಬೇರೆಯವರು ಸಹ ಪ್ರೇರಣೆ ಪಡೆದುಕೊಳ್ಳಬೇಕಾಗಿದೆ. 👉 ಸರ್ಕಾರದಲ್ಲಿ ಇಂತಹ ಅಧಿಕಾರಿಗಳ, ಇಂತಹ ಸರ್ಕಾರಿ ಉದ್ಯೋಗಿಗಳ ಸಂಖ್ಯೆ ಹೆಚ್ಚಬೇಕಾಗಿದೆ.  ಆಗ ಮಾತ್ರ ಸತ್ಯ ಯುಗ ಪುನಃ ನಿರ್ಮಾಣವಾಗಲು ಸಾಧ್ಯ. *ಹಾರ, ಶಾಲುಗಳಿಗೆ ನೋವಾದರೂ ಚಿಂತೆಯಿಲ್ಲ.*  ಆದರೆ, ಇನ್ನೊಬ್ಬರಿಗೆ ಪ್ರೇರಣೆದಾಯಕರಾದ *ಸೇಡಂ ತಾಲೂಕಿನ ಗೌರವಾನ್ವಿತ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಶ್ರೀ ಮಾರುತಿ ಹಾಜರಾತಿ ಸರ್ ಅವರ ಕರ್ತವ್ಯಪ್ರಜ್ಞೆ ಗೆ ಅನಂತ ವಂದನೆಗಳು.* ಸತ್ಯ ಯುಗ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ಯಶಸ್ವಿ ಮುಕ್ತ...

ಶಿಕ್ಷಕರ ಸ್ಪರ್ಧೆ

Image
 *"ಆದರ್ಶ ಶಿಕ್ಷಕರು ಸತ್ಯ ಯುಗ ನಿರ್ಮಾಪಕರು"* (ಶೀರ್ಷಿಕೆಯಡಿ) .... .... ..... .... ... .... ... ...  *ಆದರ್ಶ ಶಿಕ್ಷಕರು ಹೇಗಿರಬೇಕು ?* ಎನ್ನುವ "ಶಿಕ್ಷಕರ ಅನಿಸಿಕೆಗಳ" ಸ್ಪರ್ಧೆ  ಹಿರಿಯ ಮುಖಂಡರಾದ ಶ್ರೀ ಗಣಪತರಾವ ಚಿಮ್ಮನಚೋಡಕರ್ ರವರ *"ಅಮೃತ ಮಹೋತ್ಸವ"* ಹಾಗೂ *"ಶಿಕ್ಷಕ ದಿನಾಚರಣೆ"* ಪ್ರಯುಕ್ತ ಸೇಡಂ ತಾಲೂಕಿನ  * ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು  * ಖಾಸಗಿ ಪ್ರಾಥಮಿಕ ಶಾಲೆ ಶಿಕ್ಷಕರು * ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರು * ಖಾಸಗಿ ಪ್ರೌಢ ಶಾಲೆ ಶಿಕ್ಷಕರಿಗೆ ಸತ್ಯ ಯುಗ ಫೌಂಡೇಷನ್ ವತಿಯಿಂದ *ಆದರ್ಶ ಶಿಕ್ಷಕ ಎಂದರೆ ಹೇಗಿರಬೇಕು ?* ಎನ್ನುವ ಕುರಿತು "ಶಿಕ್ಷಕರ ಅನಿಸಿಕೆ ಸ್ಪರ್ಧೆ" (ಭಾಷಣ ಅಲ್ಲಾ) ಏರ್ಪಡಿಸಲಾಗಿದೆ.  ಇದರಲ್ಲಿ ಭಾಗವಹಿಸುವ ಪ್ರತಿ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಟ್ರಸ್ಟ್ ಪದಾಧಿಕಾರಿಗಳ ಹಸ್ತಾಕ್ಷರ ಇರುವ ಪ್ರಶಸ್ತಿ ಪತ್ರ ನೀಡಲಾಗುವುದು.  ನಿರ್ಣಾಯಕರಿಂದ  1. ಪ್ರಾಥಮಿಕ ಸರ್ಕಾರಿ ಶಾಲೆ ವಿಭಾಗ  2. ಪ್ರಾಥಮಿಕ ಖಾಸಗಿ ಶಾಲೆ ವಿಭಾಗ 3. ಪ್ರೌಢ ಸರ್ಕಾರಿ ಶಾಲೆ ವಿಭಾಗ 4. ಪ್ರೌಢ ಖಾಸಗಿ ಶಾಲೆ ವಿಭಾಗ  ನಾಲ್ಕು ವಿಭಾಗದಲ್ಲಿ ಮೂರು ಅನಿಸಿಕೆಗಳನ್ನು (ಉತ್ತಮ, ಅತ್ಯುತ್ತಮ, ಸರ್ವಶ್ರೇಷ್ಠ ಅನಿಸಿಕೆ) ಆಯ್ಕೆ ಮಾಡಿ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರದೊಂದಿಗೆ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಟ್ರಸ್ಟ್ ಅಥವಾ ಶಿ...
ಶಿಕ್ಷಕರ ಸ್ಪರ್ಧೆ ಆಯೋಜಿಸಿದಾಗ ಮೂಡಿದ ಆರಂಭಿಕ ಭಾವನೆಗಳು  ಎಲ್ಲರಿಗೂ ನಮಸ್ಕಾರ, ನಿನ್ನೆ ದಿನ ಈ ಮೊದಲು ತಿಳಿಸಿದಂತೆ *ಆದರ್ಶ ಶಿಕ್ಷಕರು ಎಂದರೆ ಹೇಗಿರಬೇಕು ?* ಎನ್ನುವ ಕುರಿತು ಸ್ಪರ್ಧೆಗೆ ಕೊನೆಯ ದಿನವಾಗಿತ್ತು. ಆದರೆ ಇದನ್ನು ಈಗ ನಾಳೆ 29 ಆಗಸ್ಟ್ ವರೆಗೆ ವಿಸ್ತರಿಸಲಾಗಿದೆ. ನಿಜಕ್ಕೂ ನಾನು ಈ ಸ್ಪರ್ಧೆ ಏರ್ಪಡಿಸಿದ ಕುರಿತು ನನಗೆ ಬಂದ ಯೋಚನೆಗಳು  * *"ನಾನು ಯಾವ ಲೋಕದಲ್ಲಿ ಇದ್ದೇನೆ ?"*  * *ಇಂತಹ ಸ್ಪರ್ಧೆ ನಿಜಕ್ಕೂ ನನಗೆ ಬೇಕಿತ್ತಾ ?* ಎನ್ನುವ ಕುರಿತು ನನ್ನನ್ನು ನಾನು ಪುನರ್ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿತು.  ಆದರ್ಶ ಶಿಕ್ಷಕರ ಕುರಿತ ಯೋಚನೆಗಳು ಕೇವಲ 05 ನೇ ಸೆಪ್ಟೆಂಬರ್ ಗೆ ಒಂದು ದಿನಕ್ಕೆ ಮಾತ್ರ ಸೀಮಿತವೇ ? ಎಂದು ಯೋಚಿಸುವಂತೆ ಮಾಡಿತು.  ಇದಕ್ಕೆ ಕಾರಣ ಈ ಸ್ಪರ್ಧೆಗೆ ಸಿಕ್ಕ ಸ್ಪಂದನೆ. ಅದರಲ್ಲಿಯೂ ಮುಖ್ಯವಾಗಿ ಸರ್ಕಾರಿ ಶಿಕ್ಷಕರ ಸ್ಪಂದನೆ.  ಹೀಗೆಯೇ ಮನಸ್ಸು ಬೇಜಾರಿನಲ್ಲಿ ಇರುವಾಗ ರಾತ್ರಿ ಮೊಬೈಲ್ ಗೆ ಬಂದ ಈ ಸರ್ಕಾರಿ ಶಿಕ್ಷಕರ (ನಂದಕಿಶೋರ) ವಿಡಿಯೋ ಅನಿಸಿಕೆಯನ್ನು ನೋಡಿದೆ.  ಇದನ್ನು ನೋಡಿದ ನಂತರ ಮನಸ್ಸಿನ ಬೇಜಾರಿಗೆ, ತುಂಬಾ ಹಸಿವಿನಿಂದ ವ್ಯಥೆ ಪಡುವಾಗ ಹೊಟ್ಟೆ ತುಂಬಾ ಸಿಹಿ ಹಾಲು ಕುಡಿದಾಗ ಸಿಗುವ ಸಮಾಧಾನದಂತಹ ಸಮಾಧಾನ, ತೃಪ್ತಿ ನನಗೆ ಲಭಿಸಿತು.  ಈ ಸ್ಪರ್ಧೆ ಏರ್ಪಡಿಸಿದ್ದು ಸರಿ ಇದೆ. ಸ್ಪರ್ಧೆ ಏರ್ಪಡಿಸಿದಕ್ಕೂ ಸಾರ್ಥಕವಾಯಿತು, ಎನ್ನುವ ಹಾರ್ದಿ...
Image
 *ಒಬ್ಬ ಶಿಕ್ಷಕರೊಂದಿಗೆ ಒಂದೇ ದಿನದ ಒಡನಾಟ. ಈಗ ಅವರ ಭಾರವಾದ ನೆನಪು ಮೂಡಿದಾಗ, ಎರಡು, ಮೂರು ರೀತಿಯ ಯೋಚನೆಗಳು* ಎಲ್ಲರಿಗೆ ನಮಸ್ಕಾರಗಳು 🙏,  ಆತ್ಮೀಯರೇ,  2025 ಜನೆವರಿಯಲ್ಲಿ ಸೇಡಂ ತಾಲೂಕಿನ ಒಂದು ಪ್ರಾಥಮಿಕ ಶಾಲೆಯಲ್ಲಿ ನಮ್ಮ ಕಾರ್ಯಕ್ರಮ ಮಾಡಲು ಹೋಗಿದ್ದೇವು. ಆ ಸಂದರ್ಭದಲ್ಲಿ ಶಾಲೆಯಲ್ಲಿದ್ದಂತಹ ಒಬ್ಬ ಯುವ ಉತ್ಸಾಹಿ ಶಿಕ್ಷಕರು ನಮ್ಮ ಜೊತೆ ಶಾಲೆಯ ಬಗ್ಗೆ, ಶಾಲೆ ವಿಧ್ಯಾರ್ಥಿಗಳ ಬಗ್ಗೆ ಕಳಕಳಿಯ ಮಾತುಗಳನ್ನು ಆಡಿದರು. ಅವರು "ಸರ್ ದಯವಿಟ್ಟು, ಶಾಲಾ ವಿದ್ಯಾರ್ಥಿಗಳು ದಿನಾಲು ಶಾಲೆಗೆ ಬರುವಂತೆ, ಅವರಿಗೆ ಪ್ರೇರಣೆ ಮಾತುಗಳನ್ನಾಡಿ ಪ್ರೋತ್ಸಾಹಿಸಿ, ಎಂದು" ಹೇಳಿದ್ದರು. ಆ ಶಿಕ್ಷಕರು ಹೇಳಿದ ಇನ್ನೊಂದು ವಿಷಯ ಕೇಳಿ ನನಗೆ ಆಶ್ಚರ್ಯವಾಯಿತು. ಅದೇನೆಂದರೆ, ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಿಂದ ಹೊರ ಬಂದು ಪ್ರೌಡ ಶಾಲೆ ಸೇರಿದ ನಂತರವೂ ಹತ್ತನೇ ತರಗತಿಯಲ್ಲಿ ಅವರು ಉತ್ತೀರ್ಣರಾಗುವದಕ್ಕೆ ಸಾಯಂಕಾಲ ವಿಶೇಷ ತರಗತಿ ತೆಗೆದುಕೊಳ್ಳುವ ಕುರಿತು ಅವರು ಹೇಳಿದರು. ಇಂದು, ಶಿಕ್ಷಕರು ತಾವು ತೆಗೆದುಕೊಳ್ಳುವ ತರಗತಿಯ ವಿದ್ಯಾರ್ಥಿಗಳನ್ನು ಕಾಳಜಿ ಮಾಡುವುದೇ ದೊಡ್ಡ ವಿಷಯ. ಆದರೆ ತಮ್ಮ ಶಾಲೆಯಿಂದ ಹೊರಹೋದ ವಿಧ್ಯಾರ್ಥಿಗಳ ಬಗ್ಗೆಯೂ ಕಾಳಜಿ ಮಾಡುವುದನ್ನು ಕೇಳಿ ನನಗೆ ಬಹಳ ಆಶ್ಚರ್ಯವಾಯಿತು.  ಅವರ ಒಂದು ದಿನದ ಒಡನಾಟದಲ್ಲಿ ಶಾಲೆ, ವಿಧ್ಯಾರ್ಥಿ ಇವುಗಳ ಕಾಳಜಿ ಹೊರತಾಗಿ ಯಾವುದೇ ವೈಯಕ್ತಿಕ ವಿಚಾರಗಳನ್ನು ಅವರು ಮಾತನಾಡಲಿಲ್...

ವಿಧ್ಯಾರ್ಥಿ, ಶಿಕ್ಷಕ, ಶಿಕ್ಷಣ, ಸಮಾಜ ಬದಲಾವಣೆ.*"

 *"ವಿಧ್ಯಾರ್ಥಿ, ಶಿಕ್ಷಕ, ಶಿಕ್ಷಣ, ಸಮಾಜ ಬದಲಾವಣೆ.*" ಶಿಕ್ಷಕರ ದಿನಾಚರಣೆ ಹಾಗೂ ಹಿರಿಯ ಮುಖಂಡರಾದ ಶ್ರೀ ಗಣಪತರಾವ ಚಿಮ್ಮನಚೋಡಕರ್ ರವರ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ "ಆದರ್ಶ ಶಿಕ್ಷಕರು ಹೇಗಿರಬೇಕು?" ಎನ್ನುವ ಸ್ಪರ್ಧೆಯಲ್ಲಿ ಬಾಲ ಭಾರತಿ ವಿಧ್ಯಾ ಮಂದಿರ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಜಗದೇವಿ ಮಠಪತಿಯವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.  (ಇವರು ತಮ್ಮ ಅನಿಸಿಕೆ ಜಾಲತಾಣದಲ್ಲಿ ಹಂಚಿಕೊಳ್ಳಲು ಪೂರ್ಣ ಅನುಮತಿ ನೀಡಿದ್ದಾರೆ. ) ಅವರು ವ್ಯಕ್ತಪಡಿಸಿರುವ ಅನಿಸಿಕೆಗಳಲ್ಲಿ ಮೂರು ವಿಷಯಗಳ ಕುರಿತು ನಾನು ಚರ್ಚಿಸಲು ಬಯಸುತ್ತೇನೆ.  1. ಶಿಕ್ಷಕರು ತಮ್ಮ ಅನಿಸಿಕೆಗಳ ಆರಂಭದಲ್ಲಿಯೇ, ಹಿಂದಿನ ಕಾಲ ಹಾಗೂ ಇಂದಿನ ಕಾಲದ ಶಿಕ್ಷಕರ ಮತ್ತು ವಿಧ್ಯಾರ್ಥಿಗಳ ನಡುವಿನ ಸಂಬಂಧದಲ್ಲಿ ವ್ಯತ್ಯಾಸವನ್ನು ಪ್ರಸ್ತಾಪ ಮಾಡಿದ್ದಾರೆ.  ಈ ವಿಷಯವನ್ನು ಶಿಕ್ಷಣ ತಜ್ಞರು, ಶಿಕ್ಷಣ ಪ್ರೇಮಿಗಳು, ದೇಶದ ಭವಿಷ್ಯವನ್ನು ಚಿಂತಿಸುವ ಸರ್ವರು ಗಂಭೀರವಾಗಿ ಚಿಂತಿಸುವ ಅವಶ್ಯಕತೆವಿದೆ. ಗಂಭೀರವಾಗಿ ಚಿಂತಿಸಿ ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕಾಗಿದೆ. (ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಘಟನೆ ದೇಶವೇ ಬೆಚ್ಚಿಬೀಳಿಸುವಂತೆ ಮಾಡಿತ್ತು.) ಸಂಸ್ಕೃತದಲ್ಲಿ ಒಂದು ಹೇಳಿಕೆಯಿದೆ ಅದೇನೆಂದರೆ,*ಶ್ರದ್ಧಾವಾನ ಲಭ್ಯತೆ ಜ್ಞಾನಂ* ಯಾರಲ್ಲಿ ಶ್ರದ್ಧೆ ಇರುತ್ತದೆ, ಅವರಿಗೆ ಜ್ಞಾನ ಲಭಿಸುತ್ತದೆ. ಶಿಕ್ಷಕರು ಪ್ರಸ್ತಾಪ ಮಾಡಿರುವ ವಿಷಯವೆಂದರ...