ಆದರ್ಶ ಶಿಕ್ಷಕರು ಹೇಗಿರಬೇಕು ?- ಸ್ಪರ್ಧೆ ಅನಿಸಿಕೆಗಳಲ್ಲಿ ಕಂಡಂತಹ ಒಬ್ಬ ಶಿಕ್ಷಕರ ಎರಡು ವಿಭಿನ್ನ ದೃಷ್ಟಿಕೋನದ ಮತ್ತು ಸತ್ಯತೆಯನ್ನು ಹೊಂದಿರುವ ಅನಿಸಿಕೆಗಳು. ಎಲ್ಲರಿಗೂ ನಮಸ್ಕಾರ 🙏 ಶಿಕ್ಷಕರ ದಿನಾಚರಣೆ ಹಾಗೂ ನಮ್ಮ ತಂದೆಯವರ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ ಶಿಕ್ಷಕರ ಅನಿಸಿಕೆ ಸ್ಪರ್ಧೆಯಲ್ಲಿ ಕೆಲವು ಅನಿಸಿಕೆಗಳು, ಎಲ್ಲಾ ಶಿಕ್ಷಕರ ಅನಿಸಿಕೆಯಲ್ಲಿ, ಸಾಮ್ಯತೆಯಿಂದ ಕೂಡಿವೆ. ಆದರೆ, *ಒಬ್ಬ ಶಿಕ್ಷಕರ ಎರಡು ವಿಭಿನ್ನ, ಸತ್ಯ ಅನಿಸಿಕೆಗಳು* ನನ್ನ ಗಮನಕ್ಕೆ ಪದೇ ಪದೇ ಬರುತ್ತಿವೆ ಮತ್ತು ನನಗೆ ಪುನಃ ಪುನಃ ಯೋಚನೆ ಮಾಡುವಂತೆ ಮಾಡುತ್ತಿವೆ. ಆದ್ದರಿಂದ ಈ ಅನಿಸಿಕೆಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಅನಿಸಿಕೆ ಸತ್ಯವೇ ಆಗಿವೆ. ಆದರೂ ಈ ಅನಿಸಿಕೆಗಳಂತೆ ಎಲ್ಲರೂ ಯೋಚಿಸುವುದು ಮತ್ತು ಅದರಂತೆ ನಡೆಯುವುದು ಬಹಳ ಕಷ್ಟ ಎಂದು ನನಗೆ ಅನಿಸುತ್ತದೆ. ಆದರೂ ಈ ಅನಿಸಿಕೆಯಂತೆ ಯೋಚಿಸಿ ಎಷ್ಟು ಸಾಧ್ಯವೋ ಅಷ್ಟು, ಈ ಅನಿಸಿಕೆಯಂತೆ ನಡೆಯಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಕೋರುತ್ತೇನೆ. ಈ ಅನಿಸಿಕೆ ವ್ಯಕ್ತಪಡಿಸಿದವರು *ಸರ್ಕಾರಿ ಪ್ರಾಥಮಿಕ ಶಾಲೆ ವಿಭಾಗದ ಶಿಕ್ಷಕರು*. ಅವರ ಅನಿಸಿಕೆ ವಿಡಿಯೋ ಹಂಚಿಕೊಳ್ಳಲು ಅನುಮತಿಯಿಲ್ಲದ ಕಾರಣ ಇದನ್ನು ಹಂಚಿಕೊಳ್ಳುವದಿಲ್ಲ. ನನಗೆ ಕಂಡ ಎರಡು ವಿಭಿನ್ನ ಅನಿಸಿಕೆಗಳಲ್ಲಿ ಮೊದಲ ಅನಿಸಿಕೆ 1. ಹಲವು ಶಿಕ್ಷಕರು ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕ...
Posts
Showing posts from August, 2026