Posts

Showing posts from October, 2026
Image
  *ಸೀತಾ ಮಾತೆ ಭೂಮಿಯಿಂದ ಜನ್ಮ ಪಡೆಯಲು ಕಾರಣ - ಭಾಗ - 2* *(ಪ್ರಶ್ನೆ : ಒಬ್ಬ ವ್ಯಕ್ತಿ ತನ್ನ ತಪ್ಪಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ?)* ಒಬ್ಬ ವ್ಯಕ್ತಿ ತನ್ನ ತಪ್ಪಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಕಾರಣ, ಆತನ ಶಿಕ್ಷೆ ಇನ್ನೂ ಹೆಚ್ಚುತ್ತಲೇ ಹೋಗುತ್ತದೆ. ಆ ಕರ್ಮ ನಾಶವಾಗದಿದ್ದರೆ, ಧರ್ಮ ಇನ್ನೂ ಹೆಚ್ಚು ಪತನದ ಕಡೆಗೆ ಹೋಗಿ, ಭೂಮಿಗೆ , ಭೂ ಲೋಕ ವಾಸಿಗಳಿಗೆ ಅನಾಹುತ ಸಂಭವಿಸುವ ಸಾಧ್ಯತೆಯಿರುತ್ತದೆ‌. ಈ ಕಾರಣದಿಂದ ಲಕ್ಷ್ಮಿ ಮಾತೆ ಭೂಲೋಕದ ಎಲ್ಲರ ಕರ್ಮ ಸಂಬಂಧಿಯಾಗಲು ಭೂಮಿಯನ್ನು ತನ್ನ ತಾಯಿಯಾಗಿ ಮಾಡಿಕೊಂಡು, ಭೂಮಿಯ ಮೂಲಕ ಜನ್ಮ ಪಡೆಯುತ್ತಾರೆ.  ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ತನ್ನ ತಪ್ಪಿನ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ ? ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡುತ್ತದೆ. ಈ ಪ್ರಶ್ನೆಯ ಉತ್ತರಕ್ಕೆ ಮುಂಚೆ ಒಂದು ಉದಾಹರಣೆ ನೋಡೋಣ.  ಒಂದು ಕುಕ್ಕರಿನಲ್ಲಿ ನೀರು ತುಂಬಿ, ಮೇಲಿನ ಮುಚ್ಚಳವನ್ನು ಒಂದು ಸ್ವಲ್ಪವೂ ಗಾಳಿ ಆಡದಂತೆ ಮುಚ್ಚಿ, ಒಲೆಯ ಮೇಲೆ ಇಟ್ಟಿದ್ದೇವೆ. ಕೆಳಗಿನಿಂದ ಬೆಂಕಿ ಹಚ್ಚುವ ಕೆಲಸ ಮಾಡಿದ್ದೇವೆ ಎಂದು ಭಾವಿಸೋಣ.  ಕುಕ್ಕರ್ ಮೇಲ್ಭಾಗದಿಂದ ಬಿಸಿ ಗಾಳಿ (ನೀರಾವಿ) ಹೊರಹೋಗಲು ಒಂದು ಛಿದ್ರ ಇದ್ದಲ್ಲಿ, ಬಿಸಿ ಆವಿ ಹೊರಹೋಗುವುದರಿಂದ, ಎಷ್ಟೇ ಹೊತ್ತು ಕುಕ್ಕರ್ ಕಾಯಿಸಿದರೂ, ಏನು ಆಗುವುದಿಲ್ಲ. ಆದರೆ ಬಿಸಿ ಗಾಳಿ ಹೋಗುವ ಛಿದ್ರ ಇಲ್ಲದ ಕಾರಣ, ಕುಕ್ಕರ್ ಉಷ್ಣತೆ ಹೆಚ್ಚಾಗಿ ಸ್ವಲ್ಪ...
Image
 *"ಸೀತಾ ಮಾತೆ ಭೂಮಿಯ ಮೂಲಕ ಜನ್ಮ ತೆಗೆದುಕೊಳ್ಳುವ ನಿರ್ಧಾರವನ್ನು ಏಕೆ ಮಾಡಿದರು ?"* ರಾಮನ ಪರಮಭಕ್ತ, ಸೀತಾ ಮಾತೆಯನ್ನು ತಾಯಿ ರೂಪದಲ್ಲಿ ನೋಡುತ್ತಿದ್ದ ಹನುಮಾನ ದೇವರು ಈ ವಿಷಯವನ್ನು ಹೇಳುವಾಗ ದುಃಖದಿಂದ ಅತಿ ಭಾವುಕರಾಗುತ್ತಾರೆ. ಅವರ ಗಂಟಲಿನಿಂದ ಮಾತುಗಳೇ ಬರುವುದಿಲ್ಲ. ಒಂದು ಸ್ವಲ್ಪ ಸಮಯಕ್ಕೆ ತಮ್ಮ ಪ್ರವಚನದ ಸ್ಥಳದಿಂದ ಅವರು ಕಣ್ಮರೆಯಾಗಿ ಬೇರೆ ಕಡೆಗೆ ಹೋಗುತ್ತಾರೆ. ಸ್ವಲ್ಪ ಸಮಯದ ನಂತರ ತಮ್ಮನ್ನು ತಾವು ಸುಧಾರಿಸಿಕೊಂಡು ಬರುತ್ತಾರೆ.  ಹನುಮಾನ ದೇವರು ದುಃಖದಿಂದ, ಕಥೆ ಹೇಳಲು ಆರಂಭಿಸುತ್ತಾರೆ. ಅನೇಕ ದೇವತೆಗಳು ಲಕ್ಷ್ಮಿ ಮಾತೆಗೆ ಭೂಮಿಯ ಮೂಲಕ ಜನ್ಮ ತೆಗೆದುಕೊಳ್ಳದಂತೆ ಸಲಹೆ ನೀಡುತ್ತಾರೆ. ನೀವು ಯಾವ ಉದ್ದೇಶದಿಂದ ಭೂಮಿಯ ಮೂಲಕ ಜನ್ಮ ತೆಗೆದುಕೊಳ್ಳುವ ಇಚ್ಛೆ ಹೊಂದಿದ್ದೀರಿ ಅದನ್ನು ಬೇರೆ ರೀತಿಯಿಂದಲೂ ಪೂರ್ಣ ಮಾಡಬಹುದು ಎಂದು ಹೇಳುತ್ತಾರೆ.  ಆದರೆ ಲಕ್ಷ್ಮೀ ಮಾತೆ, ಅವರ ಮಾತನ್ನು ಕೇಳದೆ, ನನ್ನ ಈ ಉದ್ದೇಶಕ್ಕಾಗಿ ಭೂಮಿಯಿಂದಲೇ ನಾನು ಜನ್ಮ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ.  ಲಕ್ಷ್ಮಿ ಮಾತೆಯ ಉದ್ದೇಶ ಏನಾಗಿತ್ತು ? ಇದನ್ನು ತಿಳಿದುಕೊಳ್ಳಬೇಕಾದರೆ, ನಾವು ಕರ್ಮ ಸಂಬಂಧಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.  *"ಕರ್ಮ ಸಂಬಂಧಗಳು"*: ಒಂದು ಕುಟುಂಬ ಇದೆಯೆಂದರೆ, ಅಲ್ಲಿಯ ಹತ್ತು ಸದಸ್ಯರಲ್ಲಿ ಎಂಟು ಜನ ಒಳ್ಳೆಯವರು ಇದ್ದಾರೆ ,ಇಬ್ಬರು ಕೆಟ್ಟವರು ಇದ್ದಾರೆ. ಎಂದು ಭಾವಿಸೋಣ. ಆ ಇಬ್ಬರು ಒಂದ...
Image
 *ಸೇಡಂನ ಈಶ್ವರ ದೇವಾಲಯದಲ್ಲಿ ಮಳೆಗಾಗಿ ನಿರಂತರ ಪ್ರಾರ್ಥನೆ ಮಾಡುತ್ತಿರುವವರಿಗೆ ಅಭಿನಂದನೆಗಳು.* *ನಾನೇಕೆ ಇವರನ್ನು ಅಭಿನಂದಿಸುತ್ತೇನೆ ?* ಕರೋನಾ ಸಮಯದಲ್ಲಿ ಇದೆ ರೀತಿ ಜಗತ್ತಿನಲ್ಲಿ ಆತಂಕ ತಲೆದೋರಿತ್ತು. ಎಷ್ಟೋ ಜನರು ಭಯಭೀತರಾಗಿ ಜೀವನ ಕಳೆದುಕೊಂಡರು. ಚಿಂತಿತರಾಗಿದ್ದರು, ಪೂರ್ಣ ಜನತಾ ಕರ್ಫ್ಯೂ ಹೇರಲಾಗಿತ್ತು.  ನಮ್ಮ ಉದ್ಯೋಗಕ್ಕೂ ರಜೆ ನೀಡಲಾಗಿತ್ತು. ಆಗ ನಿರಂತರ 55 ದಿನಗಳ ಕಾಲ ಮನೆಯಲ್ಲಿಯೇ ಮಹಾ ಮೃತ್ಯುಂಜಯ ಹೋಮ ಮಾಡಿದ್ದು. ಇದರಿಂದ ನಮ್ಮ ಗಲ್ಲಿಯಲ್ಲಿ ಪೌರ ಕಾರ್ಮಿಕರಿದ್ದರೂ ಕರೋನಾ ಕಾರಣದಿಂದ ಯಾರ ಮೃತ್ಯು ಆಗಲಿಲ್ಲ.  ಈಗ ಕೆಲಸ ಕಾರಣದಿಂದ ಮೊದಲಿನಂತೆ ಬಿಡುವು ಇಲ್ಲ. ಆದರೆ ನಾಡಿಗೆ ಬಂದಂತಹ ಕಂಟಕ ದೂರ ಮಾಡಲು ಪ್ರಯತ್ನಿಸುತ್ತಿರುವವರನ್ನಾದರೂ ಅಭಿನಂದಿಸಬೇಕು. ಅವರನ್ನು ಪ್ರೋತ್ಸಾಹಿಸಬೇಕು, ಇದರಿಂದ ಅವರ ಮನೋಬಲ ಮತ್ತಷ್ಟು ಹೆಚ್ಚಿಸಬೇಕು ಎನ್ನುವ ಕಾರಣದಿಂದ ಅಭಿನಂದಿಸುತ್ತೇನೆ.    ಇವರಂತೆ ನಾವೆಲ್ಲರೂ ಉತ್ತಮ ಮಳೆಗಾಗಿ ಪ್ರಾರ್ಥಿಸೋಣ. ಉತ್ತಮ ಮಳೆಯನ್ನು ಬಯಸೋಣ. ನಾಡಿಗೆ ಬಂದಿರುವ ಕಂಟಕ ದೂರ ಮಾಡೋಣ.  *ಮೋಡ ಕವಿಯಲಿ*, *ಮಬ್ಬುಗತ್ತಲು ಆವರಿಸಲಿ*     *ಗುಡುಗು ಕೇಳಲಿ*,  *ಸಿಡಿಲು ಮಿಂಚು ಕಾಣಲಿ*     *ಎಲ್ಲೆಲ್ಲೂ ಮಳೆಯ ತಂಪು* *ಅನುಭವಕ್ಕೆ ಬರಲಿ*      *ರಸ್ತೆಯ ಮೇಲೆ ನೀರು ಆವರಿಸಲಿ*     ...
Image
  *"ಇಂದು ನನ್ನ ಕಾರ್ಯಕ್ರಮ ಇದೆ. ದೇವರೇ, ಇವತ್ತು ಮಳೆ ಬಾರದಿರಲಿ ."* ನಾನು ಆಫೀಸ್ ಹೋಗುತ್ತಿದ್ದೇನೆ. ನಾನು ಆಫೀಸ್ ಮುಟ್ಟುವತನ ಮಳೆ ಬಾರದೇ ಇರಲಿ ದೇವರೇ.  ಮಳೆ ಬಂದರೆ ನನ್ನ ವ್ಯಾಪಾರ ನಡೆಯೋದಿಲ್ಲ. ಏನು ಮಾಡಲಿ ? ಮಳೆ ಬಂದರೆ, ರೋಡ್ ಮೇಲೆ ನೀರು ನಿಂತಿರುತ್ತದೆ. ನಡೆಯುವುದಕ್ಕೆ ಕಷ್ಟ. ಕಾಲು ಹೊಲಸು, ಬಟ್ಟೆ ಹೊಲಸು.  ಇಂದು ನನ್ನ ಕಾರ್ಯಕ್ರಮ ಇದೆ. ಇವತ್ತು ಮಳೆ ಬರಬಾರದು ದೇವರೇ. ಮೋಡ ಕವಿದ, ಮಬ್ಬು ವಾತಾವರಣದಲ್ಲಿ, ಮನಸ್ಸಿಗೂ ಮಬ್ಬು, ಬೋರ್ ಹೊಡೆಯುತ್ತದೆ. ಮನಸ್ಸೆ ಬರಲ್ಲ. ಮೋಡ ಇಲ್ಲದ ಸ್ವಚ್ಛ ಆಕಾಶ ಚೆನ್ನಾಗಿರುತ್ತದೆ.  ಇಂದು ಛತ್ರಿ ತಂದಿಲ್ಲ. ಮಳೆ ಬಂದರೆ ಹೇಗೆ ?  ಮಳೆ ಬಂದರೆ ನನ್ನ ಲಾರಿ ಹಸಿ ಆಗುತ್ತದೆ. ಸಿಮೆಂಟು ತುಂಬುವುದಕ್ಕೆ ಆಗಲ್ಲ.  ಈ ರೀತಿಯ ಒಂದಲ್ಲ ಒಂದು ಯೋಚನೆ ಇದನ್ನು ಓದುತ್ತಿರುವ ನಾವೆಲ್ಲರೂ ಮಾಡಿಯೇ ಇರುತ್ತೇವೆ. ಈ ಮೊದಲು ಕೃಷಿ ಪ್ರಧಾನ ಅರ್ಥ ವ್ಯವಸ್ಥೆಯಿತ್ತು. ಕೃಷಿಯಿದ್ದರೆ ಸಂಪತ್ತು ಎನ್ನುವ ಭಾವನೆಯಿತ್ತು. ಆಗ ಎಲ್ಲರೂ ಕೃಷಿಗೆ ಬೇಕಾದಂತಹ ಮಳೆ ಬಯಸುತ್ತಿದ್ದರು.  ಈಗ ನಮ್ಮ ಅರ್ಥ ವ್ಯವಸ್ಥೆ ನೌಕರಿ, ಉದ್ಯಮ, ಕಾರ್ಖಾನೆ, ಅಂಗಡಿ ಮುಂತಾದವುಗಳ ಮೇಲೆ ಅವಲಂಬಿತವಾಗಿದೆ. ಹಣಕ್ಕಾಗಿ ನೇರವಾಗಿ ಕೃಷಿಯ ಮೇಲೆ ಅವಲಂಬಿತರಾದವರು ಕಡಿಮೆ.  ಇಂದಿನ ದಿನಗಳಲ್ಲಿ ರೈತ ಮಾತ್ರ ನೇರವಾಗಿ ಕೃಷಿಯ ಮೇಲೆ ಅವಲಂಬಿತನಾಗಿದ್ದಾನೆ. ಆದ್ದರಿಂದ ರೈತ ಮಳೆಯನ್ನು ಎಷ್ಟು ಬಯಸ...
Image
  *"ನಮ್ಮ ಪಾಲುಗಳನ್ನು ಯಾರು ಹಂಚಿಕೊಳ್ಳುತ್ತಾರೆ ?"* ನಾವು ಗಳಿಸಿದ ಹಣ, ಸಂಪತ್ತು, ಭೂಮಿಯಲ್ಲಿ ಪಾಲನ್ನು ಎಲ್ಲರೂ ಪಡೆಯಲು ಮುಂದಾಗಬಹುದು. ಆದರೆ ಅದನ್ನು ಪಾಪದ ಮೂಲಕ ಗಳಿಸಿದರೆ, ಆ ಪಾಪದಲ್ಲಿ ಪಾಲು ಪಡೆದುಕೊಳ್ಳಲು ಯಾರು ಮುಂದೆ ಬರುತ್ತಾರೆ ?  ಯಾರು ಮುಂದೆ ಬರುವುದಿಲ್ಲ.  ನಾವು ಮಾಡುವ ಪಾಪ ಕರ್ಮದ ಪಾಲನ್ನು ನಾವೇ ಅನುಭವಿಸಬೇಕಾಗುತ್ತದೆ ಈ ವಿಷಯ ರತ್ನಾಕರ ಎನ್ನುವ ಬೇಡನಿಗೆ ತಿಳಿದಾಗ, ರತ್ನಾಕರ ಎನ್ನುವ ಕೊಲೆ, ಸುಲಿಗೆ, ದರೋಡೆ ಮಾಡುವ ಬೇಡ, ವಾಲ್ಮೀಕಿ ಎನ್ನುವ ಋಷಿಯಾಗಿ ಪರಿವರ್ತನೆಯಾಗುತ್ತಾನೆ. ಕಥೆ : ಬಹಳ ಹಿಂದೆ ತೆತ್ರಾಯುಗದಲ್ಲಿ ರತ್ನಾಕರ ಎನ್ನುವ ಬೇಡ ಇರುತ್ತಾನೆ. ಕಾಡಿನಲ್ಲಿ ದಾರಿಹೋಕರನ್ನು ದೋಚಿ ಆತನ ಕುಟುಂಬ ಪೋಷಣೆ ಮಾಡುತ್ತಿರುತ್ತಾನೆ.  ಒಮ್ಮೆ ಆತನ ದಾರಿಯಲ್ಲಿ ನಾರದ ಮಹರ್ಷಿಗಳು ಬರುತ್ತಾರೆ. ಆಗ ರತ್ನಾಕರ ಎಂದಿನಂತೆ ನಾರದರಿಗೆ, ಪ್ರಾಣ ಭಯ ಉಂಟುಮಾಡಿ ದೋಚಲು ಹೋಗುತ್ತಾನೆ.  ಆಗ ನಾರದ ಮಹರ್ಷಿ  1. ನೀನು ಕುಟುಂಬಕ್ಕಾಗಿ ಎಷ್ಟು ದೊಡ್ಡ ಪಾಪದ ಕೆಲಸ ಮಾಡುತ್ತಿದ್ದೀಯಾ ?  2. ಇದರ ಫಲ ನಿನ್ನ ಕುಟುಂಬದಲ್ಲಿ ಯಾರಾದರೂ ಪಡೆಯುತ್ತಾರೆಯೇ ? ಎಂದು ಕೇಳುತ್ತಾರೆ.  ಆಗ, ರತ್ನಾಕರ ಹೌದು ನನ್ನ ಕುಟುಂಬದಲ್ಲಿ ನನ್ನ ಹೆಂಡತಿ ಮತ್ತು ಕುಟುಂಬಸ್ಥರು  ನನ್ನ ಪಾಪದ ಪಾಲು ತೆಗೆದುಕೊಳ್ಳುತ್ತಾರೆ, ಎಂದು ಹೇಳುತ್ತಾನೆ. ಆಗ ನಾರದ ಮಹರ್ಷಿಯ ಕೋರಿಕೆಯಂತೆ, ಆತ ಮನೆಗೆ ಹೋಗಿ ತನ್ನ...
Image
  *"ಎಲ್ಲರೂ ಬಯಸುವುದು ಸತ್ಯವನ್ನು, ಆದರೆ ಸತ್ಯಯುಗ ಅವಾಸ್ತವಿಕ ಎನ್ನುವ ಭಾವನೆ ಏಕೆ ?"* ನಿನ್ನೆ ಸೇಡಂ, ಹಾಗೂ ಮಳಖೇಡ ಸಂತರ ದಿವ್ಯ ಸಾನಿಧ್ಯದಲ್ಲಿ , ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶ್ರೀ ಬಸವರಾಜ ಪಾಟೀಲರವರಿಂದ ಉದ್ಘಾಟಿಸಲಾಯಿತು.  *ನೂತನ ಪತ್ರಕರ್ತರ ಸಂಘಕ್ಕೆ  ತುಂಬು ಹೃದಯದ ಶುಭಾಶಯಗಳು* 🌷🌷🌷. ಕಾರ್ಯಕ್ರಮದಲ್ಲಿ  ಆಗ ನನ್ನಲ್ಲಿ ಮೂಡಿದಂತಹ ಯೋಚನೆಯಿದು. ಯಾವುದೇ ಮುದ್ರಣ ಮಾಧ್ಯಮದ ಪತ್ರಕರ್ತರು, ಸಂಪಾದಕರು ಜಗತ್ತಿನ ಯಾವುದೇ ಸುದ್ದಿ, ಸಮಾಚಾರ ತಮ್ಮ ಕಡೆಯಿಂದ ಪ್ರಕಟಿಸುವ ಮೊದಲು  ಇದರಲ್ಲಿ ಎಷ್ಟು ಸತ್ಯಾಂಶವಿದೆ ? ಎಂದು ಚಿಂತಿಸಿ ಪ್ರಕಟಿಸುತ್ತಾರೆ. ಇದರ ಕಾರಣ ಕುರಿತು ಯೋಚಿಸಿದಾಗ ಖಡ್ಗಕ್ಕಿಂತ ಬಲಿಷ್ಠವಾದುದು, ಲೇಖನಿ ಎಂದು ಕೇಳಿದ್ದೇವೆ. ಆದರೆ ಲೇಖನಿಗಿಂತ ಬಲಿಷ್ಠವಾದುದು ವಿಶ್ವಾಸ. ಈ ವಿಶ್ವಾಸ ಬರುವುದು ಸತ್ಯದ ಅವಲಂಬನೆಯಿಂದ. ಜನರ ವಿಶ್ವಾಸ ಕಾಪಾಡಿಕೊಳ್ಳಲು (ಮುದ್ರಣ) ಮಾಧ್ಯಮ ಸತ್ಯವನ್ನು ಬಯಸುತ್ತದೆ. ಇದೇ ರೀತಿ ಸಮಾಜದಲ್ಲಿಯೂ ಸಹ ಅನೇಕರು ಸತ್ಯವನ್ನು ಬಯಸುತ್ತಾರೆ. * ಗಂಡ ತನ್ನ ಹೆಂಡತಿ ತನ್ನ ಜೊತೆ ಸತ್ಯ ನಿಷ್ಠೆ ಹೊಂದಿರಬೇಕು ಎಂದು ಬಯಸಿದರೆ, ಹೆಂಡತಿಯೂ ಗಂಡ ತನ್ನ ಜೊತೆ ಸತ್ಯ ನಿಷ್ಠೆ ಹೊಂದಿರಬೇಕು, ಎಂದು ಬಯಸುತ್ತಾರೆ. * ಒಂದು ಅಂಗಡಿಯ ಮಾಲೀಕ ತನ್ನ ಕೆಲಸಗಾರರು ಸತ್ಯವಾಗಿರಬೇಕು. ತನ್ನ ಜೊತೆ ಮೋಸ ವಂಚನೆ ಮಾಡಬಾರದು ಎಂದು ಬಯಸುತ್ತಾರೆ. * ಒಂದು ರಾಜಕೀಯ ಪಕ್ಷ, ಇನ್ನೊಂದು ...
Image
 **ಸಮಯಚಲನ* ನಾವು ಬಯಸಿದರು, ಬಯಸದೆ ಇದ್ದರೂ ನಿಲ್ಲಿಸದು ಸಮಯ ತನ್ನ ಚಲನ. ಮೆಲ್ಲ ಮೆಲ್ಲನೆ ನಾಜೂಕಾಗಿ ಕಳೆದು ಹೋಗುತ್ತಿರುವುದು ಸಮಯ... ಹೋಗುತಾ..., ಕಳೆಯುತಾ.... ಕಳೆಯುತ್ತಿರುವುದು ಸಮಯ ಸರ್ವರನ್ನು......ಸರ್ವಸ್ವವನ್ನೂ.. ಸುಖ ಬಂದಾಗ ಸಮಯ ನಿಲ್ಲಲು ಬಯಸುವೆವು ಕಷ್ಟ ಬಂದಾಗ ಸರ್ರನೆ ಚಲಿಸಲು ಹೇಳುವೆವು ಗಡಿಬಿಡಿಯಲ್ಲಿ ಸಮಯ ನಿಲ್ಲಲು ಬಯಸುವೆವು ಕಾಯುವಾಗ ಸಮಯ ಸರ್ರನೆ ಚಲಿಸಲು ಹೇಳುವೆವು ಸುಖವಿರಲಿ, ಕಷ್ಟವಿರಲಿ ಗಡಿಬಿಡಿಯಿರಲಿ, ಕಾಯುವಿಕೆವಿರಲಿ ಎಂದಿಗೂ ನಿಲ್ಲಿಸಲಾಗದು ಈ ಜಗತ್ತಿನ ಸಮಯಚಲನ.  ಕಾರಣ ನಮ್ಮ ನಿಯಂತ್ರಣದಲ್ಲಿಲ್ಲ ಈ ಜಗತ್ತಿನ ಸಮಯಚಲನ  ಅಗರ್ಭ ಶ್ರೀಮಂತರ ಅಷ್ಟು ಸಂಪತ್ತನ್ನು ನೀಡಿದರು ಕಳೆದ ಸಮಯ ಮತ್ತೆ ಮರಳಿ ಬಾರದು. ಸಂಪತ್ತಿಗೆ ಸರಿಸಮವಲ್ಲವಿದು ಸಮಯ ಸಂಪತ್ತಿಗಿಂತ ಮಿಗಿಲಾದುದಿದು, ವಿಸ್ಮಯ  ನಿತ್ಯ ನಿರಂತರ ಸಮಯ ಚಲಿಸುತ್ತಿರುವುದು. ಬಾಲಕನನ್ನು ಯುವಕನಾಗಿಸುತ್ತಿರುವುದು.  ಯುವಕನನ್ನು ಮುಪ್ಪಿಗೆ ತಳ್ಳುತ್ತಿರುವುದು. ಎಲ್ಲರ ದೇಹವನ್ನು ನಿಧಾನ, ಸಾವಧಾನವಾಗಿ ಮೆಲ್ಲ ಮೆಲ್ಲನೆ ಕೊಲ್ಲುತ್ತಿರುವುದು....  ಅದು ಸಹ ನಿರಪರಾಧಿಯಾಗಿ ಕೊಲ್ಲುತ್ತಿರುವುದು. ಕಾಣುತ್ತಿಲ್ಲ, ಅನುಭವಕ್ಕೆ ಬರುತ್ತಿಲ್ಲ ನಮಗೆ ಆವರಿಸಿದೆ ಕರ್ಮ, ಆಸಕ್ತಿ, ರಾಗ, ದ್ವೇಷದ ಮುಸುಕು ಮೆಲ್ಲ ಮೆಲ್ಲನೆ ಕೈಯಲ್ಲಿ ಹಿಡಿದ, ಸಣ್ಣ ಉಸುಕಿನಂತೆ  ಗೊತ್ತಿಲ್ಲದಂತೆ ಜಾರಿ ಹೋಗುತ್ತಿರುವುದು ಸಮಯ. ...
Image
  *"ನಾವು ಪಡೆದಿದ್ದನು, ಪುನಃ ನೀಡುವ ವಿಧಾನಗಳು"* ಒಂದು ಪ್ರಶ್ನೆ : ಒಂದು ಸ್ಥಳದಲ್ಲಿ ಒಬ್ಬರು ಹೇಳುವವರಿದ್ದಾರೆ. ಅದನ್ನು ಇಬ್ಬರು ಕೇಳುತ್ತಿದ್ದಾರೆ. ಪ್ರಶ್ನೆ ಏನೆಂದರೆ, 1. ಆ ಸ್ಥಳದಲ್ಲಿ ಎಷ್ಟು ಜನ ಹೇಳುತ್ತಿದ್ದಾರೆ ? ಮತ್ತು 2. ಅದನ್ನು ಎಷ್ಟು ಜನ ಕೇಳುತ್ತಿದ್ದಾರೆ ? ಬಹುತೇಕರು ಒಬ್ಬರು ಹೇಳುತ್ತಿದ್ದಾರೆ. ಇಬ್ಬರು ಕೇಳುತ್ತಿದ್ದಾರೆ ಎಂದು ಹೇಳಬಹುದು. ಆದರೆ, ಅಲ್ಲಿ ನಿಜವಾಗಿಯೂ ಒಬ್ಬರು ಹೇಳುತ್ತಿದ್ದಾರೆ. ಅದನ್ನು ಕೇಳುವವರು ಮೂವರಿದ್ದಾರೆ. ಇದು ಹೇಗೆ !!! ? ಎನ್ನಬಹುದು.  ಹೌದು ಇಬ್ಬರು ಕೇಳುಗರು ಇದ್ದಾರೆ, ಆದರೆ ಅದನ್ನು ಕೇಳುವವರು ಈಗ ಮೂವರಾಗಿದ್ದಾರೆ. ಯಾರು ಹೇಳುತ್ತಾರೆ, ಅವರು ಹೇಳುವ ಕೆಲಸ ಮಾತ್ರ ಮಾಡುವುದಿಲ್ಲ. ಹೇಳುವದರೊಂದಿಗೆ ಕೇಳುವ ಕೆಲಸ ಸಹ ಅವರು ಮಾಡುತ್ತಾರೆ. ಇದರಿಂದಲೇ ನಾವು ಏನಾದರೂ ಹೇಳುವಾಗ ತಪ್ಪಾಯಿತು, ಎಂದರೆ ಪುನಃ ಸರಿಪಡಿಸಿಕೊಳ್ಳುತ್ತೇವೆ. ಏಕೆಂದರೆ ನಾವು ಹೇಳುವಾಗ, ಹೇಳುವದರೊಂದಿಗೆ, ಕೇಳುವ ಕೆಲಸ ಸಹ ಮಾಡುತ್ತೇವೆ. ಇದರಿಂದ ತಿಳಿಯುವುದೇನೆಂದರೆ, ನಾವು ಪಡೆದ ಜ್ಞಾನವನ್ನು ಬೇರೆಯವರೊಂದಿಗೆ ಹಂಚಿಕೊಂಡರೆ, ನಾವು ಪಡೆದ ಜ್ಞಾನ ಇನ್ನೂ ಸ್ಪಷ್ಟವಾಗಿ ನಮಗೆ ಅರ್ಥವಾಗುತ್ತದೆ. ಆದ್ದರಿಂದ ಸುದರ್ಶನ ಪೂರ್ಣ ಚಕ್ರ ಸಿದ್ಧಾಂತದಂತೆ, ನಾವು ಪಡೆದ ಜ್ಞಾನವನ್ನು ಇನ್ನೊಬ್ಬರಿಗೆ ನೀಡುವುದರಿಂದಲೂ, ನಾವು ಪಡೆದ ಜ್ಞಾನದ ಋಣ ಕಡಿಮೆ ಮಾಡಿಕೊಳ್ಳಬಹುದು. ****" ***" "...
Image
  "*ನವರಾತ್ರಿಯ ಒಂಬತ್ತನೇ ದೇವಿ ಸಿದ್ಧಿದ್ದಾತ್ರಿ ಮಾತೆಯ ಸಂದೇಶ*" ನಮ್ಮ ಭವಿಷ್ಯವನ್ನು ಶುದ್ಧಿಕರಿಸುವ ಮೂರನೇ ದೇವಿ ಮಾ ಸಿದ್ಧಿದ್ದಾತ್ರಿ.  ಸಿದ್ಧಿ ಎಂದರೆ ನಾವು ಮಾಡುವ ಸಾಧನೆಗೆ ಸಿಗುವ ಫಲ. ನಾವು ಅನೇಕ ಸಲ ಒಳ್ಳೆಯ ರೀತಿಯಿಂದ ಕೆಲಸ ಮಾಡುತ್ತೇವೆ. ಆದರೆ ಅದಕ್ಕೆ ಫಲ ಸಿಗುವ ಸಮಯ ಬಂದಾಗ ಎಲ್ಲಾ ಕೆಟ್ಟು ಹೋಗುತ್ತದೆ.  1. ಅತಿ ಆತ್ಮ ವಿಶ್ವಾಸ : ನಮ್ಮ ಪ್ರಯತ್ನ ಕೊನೆಯ ಹಂತದಲ್ಲಿ  ನಮಗೆ ಯಶಸ್ಸು ಸಿಕ್ಕೇ ಬಿಟ್ಟಿತ್ತು, ಎನ್ನುವ ಯೋಚನೆ ಬಂದಾಗ ನಾವು ಮುಂದಿನ ಸಮಯವನ್ನು ಹಗುರವಾಗಿ ತೆಗೆದುಕೊಳ್ಳುತ್ತೇವೆ,  ಮೈ ಮರೆತುಬಿಡುತ್ತೇವೆ. ಆಗ ಯಶಸ್ಸು ಸೋಲು ಆಗುವ ಸಾಧ್ಯತೆಯೂ ಇರುತ್ತದೆ.  ಉದಾಹರಣೆಗೆ: ಆಮೆ ಮತ್ತು ಮೊಲದ ಓಟದ ಸ್ಪರ್ಧೆಯಲ್ಲಿ, ಮೊಲ ವೇಗವಾಗಿ ಓಡಿ, ಆಮೆ ದೂರದಲ್ಲಿ ಇದೆಯೆಂದು, ನಿದ್ರೆಯ ಯೋಚನೆ ಮಾಡುತ್ತದೆ. ಆ ಸಮಯದಲ್ಲಿ ಆಮೆಯನ್ನು ಹಗುರವಾಗಿ ತೆಗೆದುಕೊಂಡು, ಮೈ ಮರೆತ ಕಾರಣ ಮೊಲ ನಿದ್ರೆಯಲ್ಲಿಯೇ ಇರುತ್ತದೆ. ಆಮೆ ಸ್ಪರ್ಧೆ ಗೆಲ್ಲುತ್ತದೆ.  ಕ್ರಿಕೆಟ್ ನಲ್ಲಿಯೂ, ಗೆಲ್ಲುವ ಪಂದ್ಯ ಆಟಗಾರರ ಅತಿ ಆತ್ಮವಿಶ್ವಾಸದಿಂದ ಸೋಲಾಗುತ್ತದೆ.  2. ಯಶಸ್ಸಿಗೆ ಸ್ವಯಂ ವಿರೋಧ : ಕೆಲವೊಮ್ಮೆ  ನಾವು ಯಶಸ್ಸು ಎಲ್ಲವನ್ನು ಪಡೆದಿರುತ್ತೇವೆ. ಆದರೆ ಆ ಯಶಸ್ಸನ್ನು ಯಾವುದೋ ಚಿಂತನೆಯ ಕಾರಣದಿಂದ ಬಹಳ ಚಿಕ್ಕದು ಎಂದು ಭಾವಿಸುತ್ತೇವೆ ಅಥವಾ ಅದಕ್ಕೆ ಅಷ್ಟೊಂದು ಮಹತ್ವ ಕೊಡುವುದಿಲ್ಲ. ...
Image
  "*ನವರಾತ್ರಿಯ ಎಂಟನೇ ದೇವಿ ಮಾ ಮಹಾ ಗೌರಿ ಸಂದೇಶ*" ನಮ್ಮ ಭವಿಷ್ಯವನ್ನು ಶುದ್ಧಿಕರಿಸುವ ಎರಡನೇ ಮಾತೆ ಮಹಾ ಗೌರಿ.  ಮಹಾ ಗೌರಿ ಮಾತೆ ಪೂರ್ಣ ಬೆಳ್ಳಗೆ ಇರುತ್ತಾರೆ. ಇದೇ ರೀತಿ ಏನು ಬರೆಯದ ಖಾಲಿ ಕಾಗದವು ಸಹ ಬೆಳ್ಳಗೆ ಕಾಣುತ್ತದೆ. ನಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡುವಾಗ, ನಾವು ಅನೇಕ ಸಲ ಖಾಲಿ ಕಾಗದದಂತಹ, ಖಾಲಿ  ಕನಸುಗಳನ್ನು, ಖಾಲಿ ಕಲ್ಪನೆಗಳನ್ನು ಮಾಡುತ್ತೇವೆ.  * ನಮ್ಮ ಗಮನಕ್ಕೆ ಯಾರಾದರೂ ಈಗತಾನೇ ಯಶಸ್ಸು ಪಡೆದ ಚಿತ್ರ ನಟಿ/ನಟರ ವಿಷಯ ಬಂತೆಂದರೆ, ನಾನು ಸಹ ಆ ರೀತಿಯ ನಟಿ, ನಟ ಆದರೆ ಹೇಗಿರುತ್ತದೆ? ಎನ್ನುವ ಕಲ್ಪನೆ ಮಾಡಲು ಆರಂಭಿಸುತ್ತೇವೆ.  * ನಮ್ಮ ಗಮನಕ್ಕೆ ಯಾವುದೋ ಕ್ರಿಕೆಟ್ ಆಟಗಾರರ ದೊಡ್ಡ  ಹೋಗಳುವಿಕೆ ವಿಷಯ ಬಂತೆಂದರೆ, ನಾನು ಆ ರೀತಿಯ ಕ್ರಿಕೆಟ್ ಪಟು ಆದರೆ ಹೇಗಿರುತ್ತದೆ ? ಎಂದು ಕನಸು ಕಾಣುತ್ತೇವೆ.  * ಹೀಗೆ ಯಶಸ್ವಿ ರಾಜಕಾರಣಿ ವಿಷಯ ಕೇಳಿದಾಗ, ನಾನು ಆ ರೀತಿಯ ರಾಜಕಾರಣಿಯಾದರೆ ಹೇಗಿರುತ್ತದೆ ? ಎಂದು ಯೋಚಿಸುತ್ತೇವೆ. * ಪ್ರಸಿದ್ಧ ಅಧಿಕಾರಿಗಳ ಬಗ್ಗೆ ಕೇಳಿದಾಗ, ನಾನು ಆ ರೀತಿಯಾದರೆ ಹೇಗೆ ? ಎಂದು ಕನಸು ಕಾಣುತ್ತೇವೆ. ಆದರೆ, ನಮ್ಮ ಜೀವನದ ಬಗ್ಗೆ  * ಯಾವುದೇ ಕನಸು ಕಂಡಾಗ, * ಯಾವುದೇ ಕಲ್ಪನೆ ಮಾಡಿಕೊಂಡಾಗ  ನಾವು ಆ ಕನಸು ನನಸು ಮಾಡುವ *ಪುರುಷಾರ್ಥ* ಮಾಡಬೇಕು. ಕಲ್ಪನೆ ಸತ್ಯವಾಗುವಂತಹ *ಪ್ರಯತ್ನ* ಮಾಡಬೇಕು.  ಪುರುಷಾರ್ಥವು ಮಾಡದೆ, ಪ್ರಯತ್ನವೂ...
Image
 *"ನವರಾತ್ರಿಯ ಏಳನೇ ದಿನದ ದೇವಿ, ಮಾ ಕಾಳರಾತ್ರಿ ಸಂದೇಶ"*" ನಮ್ಮ ಭವಿಷ್ಯವನ್ನು ಶುದ್ಧಿಕರಿಸುವ ಮೊದಲನೇ ದೇವಿ. ಮಾ ಕಾಳರಾತ್ರಿ. ಬಹುತೇಕ ಎಲ್ಲರಿಗೂ ಕತ್ತಲೆ ಎಂದರೆ ಭಯ. ಏಕೆಂದರೆ ಸ್ವಲ್ಪ ಬೆಳಕು ಸಹ ಇಲ್ಲದ ಕತ್ತಲೆಯಲ್ಲಿ ನಮಗೆ ಏನೇನು ಕಾಣುವುದಿಲ್ಲ.  * ಆಗ ಮುಂದೆ ಏನಿದೆ ? ಹಿಂದೆ ಏನಿದೆ ? ಗೊತ್ತಾಗುವುದಿಲ್ಲ.  * ಮುಂದೆ, ಹಿಂದೆ ಯಾರಿದ್ದಾರೆ ? ಯಾವ ಶಕ್ತಿಯಿದೆ ? ಎನ್ನುವುದು ಗೊತ್ತಾಗುವುದಿಲ್ಲ.  * ಮುಂದೆ ಏನಾಗಬಹುದು? ಎನ್ನುವ ಅರಿವು ಇರುವುದಿಲ್ಲ.  ಸಾಮಾನ್ಯ ರಾತ್ರಿಗಳೇ ಈ ರೀತಿಯಾದರೆ, ನಾವು ಕಾಳ ರಾತ್ರಿ ಬಗ್ಗೆ ಯೋಚಿಸುತ್ತಿದ್ದೇವೆ. ಕತ್ತಲೆಯಲ್ಲಿ ಕತ್ತಲೆಯ ರಾತ್ರಿ, ಕಾಳರಾತ್ರಿ. ಸಾಮಾನ್ಯವಾಗಿ ಇಂತಹ ಕತ್ತಲು ಭಯವನ್ನು ಹುಟ್ಟಿಸುತ್ತದೆ.  ನಮ್ಮ ಜೀವನದಲ್ಲಿರುವ ಇಂತಹ ಕಾಳರಾತ್ರಿಯೇ ನಮ್ಮ ಜೀವನದ ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆ.   ಬಹಳಷ್ಟು ಜನರಿಗೆ ಭವಿಷ್ಯ ಎನ್ನುವುದು ಕತ್ತಲೆಯ ಭಯ ನೀಡುತ್ತದೆ.  * ಮುಂದೆ ಏನಾಗುತ್ತದೆ ? ಎನ್ನುವುದು ತಿಳಿದಿಲ್ಲ.  * ನಮಗೆ ಬೇಕಾದವರು, ಸಂಬಂಧಿಕರು ನಮ್ಮ ಜೊತೆಗೆ ಇರುತ್ತಾರಾ?  * ನಾವು ನಾಳೆ ಇರುತ್ತೇವೆಯೇ ? ಎನ್ನುವ ಖಚಿತತೆ ಇಲ್ಲಾ.  * ನನ್ನನ್ನು ನಾಳೆ ಯಾರು ನೋಡಿಕೊಳ್ಳುತ್ತಾರೆ ?  * ನಮ್ಮ ಭವಿಷ್ಯ ಹೇಗಿರುತ್ತದೆ ? ಎನ್ನುವ ಖಚಿತತೆ ಇಲ್ಲಾ.  ಈ ರೀತಿಯಿಂದ ಬಹಳಷ್ಟು ಜನರಿಗೆ ಭವಿಷ...
Image
  ಕ್ಯಾತ್ಯಾಯನಿ ದೇವಿ ಸಂದೇಶ. ಧನಾತ್ಮಕ ಪ್ರತಿಕ್ರಿಯೆ  *"ಒಬ್ಬ ರಾಜನಿಗೆ ಕೆಟ್ಟದ್ದು ಆದಾಗ ಅವನ ಮಂತ್ರಿ ಋಣಾತ್ಮಕ ಪ್ರತಿಕ್ರಿಯೆ ನೀಡಬೇಕೇ ? ಧನಾತ್ಮಕ ಪ್ರತಿಕ್ರಿಯೆ ನೀಡಬೇಕೇ?"* (ರಾಜನಿಗೆ ತೊಂದರೆ ಆದಾಗ ಸಂತೋಷ ಪಡುತ್ತಾನೆ.  ಮುಂದೇನಾಯಿತು.... ಧನಾತ್ಮಕ ಪ್ರತಿಕ್ರಿಯೆಗೆ ರಾಜ ಮಂತ್ರಿಯ ಪುಟ್ಟ ಕಥೆ.) ಒಬ್ಬ ರಾಜನ ಉಗುರುಗಳನ್ನು ಕ್ಷೌರಿಕ ಕತ್ತರಿಸುವಾಗ ಕತ್ತಿಯು ರಾಜನ ಬೆರಳಿನ ಸ್ವಲ್ಪ ಭಾಗವನ್ನು ಕತ್ತರಿಸಿ ಬಿಡುತ್ತದೆ.  ಆಗ ಅಲ್ಲಿಯೇ ಇರುವ ಮಂತ್ರಿಗೆ ಯಾವಾಗಲೂ ಧನಾತ್ಮಕ ಪ್ರತಿಕ್ರಿಯೆ ನೀಡುವ ಅಭ್ಯಾಸವಿರುತ್ತದೆ. ಆಗ ಆತನು ಇದ್ದಕ್ಕಿದ್ದಂತೆ ಖುಷಿಯಿಂದ, ದೇವರೇ ! ಬಹಳ ಒಳ್ಳೆಯದಾಯಿತು. ನಿಮಗೆ ಅನಂತ ಧನ್ಯವಾದಗಳು ಎನ್ನುತ್ತಾನೆ. (ಇಂತಹ ಸ್ಥಿತಿಯಲ್ಲಿ ರಾಜನ ಸ್ಥಾನದಲ್ಲಿ ನಾವು ನೀವು ಇದ್ದರೆ ಏನು ಮಾಡುತ್ತಿದ್ದೆವು?) ನಿರೀಕ್ಷೆಯಂತೆ ರಾಜ ಮಂತ್ರಿಯನ್ನು ರಾಜ್ಯದಿಂದ ಗಡಿಪಾರು ಮಾಡುತ್ತಾನೆ. ಸ್ವಲ್ಪ ದಿನಗಳ ನಂತರ ರಾಜ ಬೇಟೆಯಾಡಲು ಸೈನಿಕರೊಂದಿಗೆ ಕಾಡಿಗೆ ಹೋಗುತ್ತಾನೆ. ಆಗ ದಟ್ಟವಾದ ಕಾಡಿನಲ್ಲಿ ಸೈನಿಕರು ರಾಜ ಬೇರ್ಪಟ್ಟು, ರಾಜ ಒಂಟಿಯಾಗುತ್ತಾನೆ.  ಆಗ ರಾಜ, ದೇವಿಯ ಆರಾಧನೆ ಮಾಡುತ್ತಿರುವ ಕಾಡು ಜನರಿಗೆ ಸಿಗುತ್ತಾನೆ. ಅವರು ರಾಜನನ್ನು ಕಂಡು ದೇವಿಯ ಬಲಿಗೆ ಒಳ್ಳೆಯ ಬೇಟೆಯೇ ಸಿಕ್ಕಿತ್ತು, ಎಂದು ಖುಷಿಪಡುತ್ತಾರೆ. ರಾಜನನ್ನು ಬಲಿ ಕೊಡಲು ಸಿದ್ಧಪಡಿಸಿ, ಕೊನೆಯದಾಗಿ ಆತನ ದೇಹದಲ್ಲಿ ಯಾವುದೇ ನ್...
Image
  "*ನವರಾತ್ರಿಯ ಆರನೇ ದೇವಿ ಕ್ಯಾತ್ಯಾಯನಿ ಮಾತೆ ನಮಗೆ ನೀಡುವ ಸಂದೇಶ*" ನಮ್ಮ ವರ್ತಮಾನವನ್ನು ಶುದ್ಧೀಕರಿಸುವ ಮೂರನೇ ಮಾತೆ ದೇವಿ ಕ್ಯಾತ್ಯಾಯನಿ. ಮಾತೆ ಬಹುದೊಡ್ಡ ಸಂದೇಶವನ್ನು ನಮಗೆ ನೀಡುತ್ತಿದ್ದಾರೆ. ಈ ಸಂದೇಶ ಸರಿಯಾಗಿ ಪಾಲಿಸದಿದ್ದರಿಂದ ಅನೇಕ ತಪ್ಪುಗಳು ನಮ್ಮ ಜೀವನದಲ್ಲಿ ಘಟಿಸುತ್ತವೆ.  ಒಂದು ಘಟನೆ ಘಟಿಸಿದಾಗ ಮೂರು ಸಂಗತಿಗಳು ನಡೆಯುತ್ತವೆ.  1. ಘಟನೆಯ *"ಸೂಚನೆ"* ಲಭಿಸುತ್ತದೆ.  2. ಆ ಸೂಚನೆಯನ್ನು ನಮ್ಮ ವಿವೇಕದಂತೆ ನಾವು *"ಅರ್ಥ"* ಮಾಡಿಕೊಳ್ಳುತ್ತೇವೆ. 3. ಅದಕ್ಕೆ *"ಪ್ರತಿಕ್ರಿಯೆ"* ನೀಡುತ್ತೇವೆ. ಕ್ಯಾತ್ಯಾಯನಿ ಮಾತೆ ನಮ್ಮ ಪ್ರತಿಕ್ರಿಯೆಗಳನ್ನು ಶುದ್ಧಿಕರಿಸಿಕೊಳ್ಳುವ ಸಂದೇಶ ನೀಡುತ್ತಿದ್ದಾರೆ.  ನಾವು ಪಡೆದ ಸೂಚನೆಗೆ ಸಂಬಂಧಿಸಿದಂತೆ ನಮ್ಮ ಪ್ರತಿಕ್ರಿಯೆ ಮೂರು ವಿಧಗಳು ಇರುತ್ತವೆ. 1. ಧನಾತ್ಮಕ ಪ್ರತಿಕ್ರಿಯೆ Positive reaction 2. ಋಣಾತ್ಮಕ ಪ್ರತಿಕ್ರಿಯೆ Nagative reaction 3. ತಟಸ್ಥತೆ Neutral  ನಾವು ಬಹಳಷ್ಟು ಸಲ ಪ್ರತಿಕ್ರಿಯೆ ನೀಡುವ ಮುಂಚೆ ಯೋಚನೆಯನ್ನೇ ಮಾಡುವುದಿಲ್ಲ. ಈ ಅಭ್ಯಾಸ ದೊಡ್ಡ ತಪ್ಪಿಗೆ ಕಾರಣವಾಗುತ್ತದೆ. ಒಂದು ಉದಾಹರಣೆ : ಒಬ್ಬ ಮಹಿಳೆ ತನ್ನ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಅಲ್ಲಿಯೇ ತಾನು ಸಾಕಿದ ಮುಂಗುಸಿ ಬಿಟ್ಟು ನೀರು ತರಲು ಹೋಗುತ್ತಾಳೆ.  ಬರುವಾಗ ಮನೆ ಬಾಗಿಲಲ್ಲಿ ಮುಂಗುಸಿಯ ಮುಖಕ್ಕೆ ರಕ್ತ ಹತ್ತಿರುವುದನ್ನು ನೋಡುತ್ತಾ...
Image
  *"ನವರಾತ್ರಿಯ ಐದನೇ ದಿನದ ದೇವಿಯ ಆರಾಧನೆ*" ನಮ್ಮ ವರ್ತಮಾನ ಕಾಲವನ್ನು ಶುದ್ಧೀಕರಿಸುವ ಎರಡನೇ ದೇವಿ, ಸ್ಕಂದ ಮಾತಾ.  ಜಗತ್ತಿನಲ್ಲಿ ಮಾಹಿತಿಯೇ (ಸೂಚನೆ) ಎಲ್ಲವೂ ಆಗಿದೆ. ಶ್ರೇಷ್ಠ ಮಾಹಿತಿಯಿಂದ ಜಗತ್ತಿನಲ್ಲಿ ಶ್ರೇಷ್ಠ ಘಟನೆಗಳು ಘಟಿಸುತ್ತವೆ. ಕೆಟ್ಟ ಮಾಹಿತಿಯಿಂದ ಜಗತ್ತಿನಲ್ಲಿ ಕೆಟ್ಟ ಘಟನೆಗಳು ಘಟಿಸುತ್ತವೆ.  ಮಾಹಿತಿಗಳ ಸೂಚನೆಗಳ ಅಪಾರ್ಥದಿಂದ Misunderstanding ನಿಂದ ಒಳ್ಳೆಯ ಕೆಲಸ ಆಗುವ ಜಾಗದಲ್ಲಿ ಕೆಟ್ಟ ಕೆಲಸಗಳಾಗುತ್ತವೆ.  ಅಪಾರ್ಥದಿಂದ  * ಮಿತ್ರರು ಶತ್ರುಗಳಾಗುತ್ತಾರೆ * ಸಂಬಂಧಿಗಳು, ಸಂಬಂಧ ಕಳೆದುಕೊಳ್ಳುತ್ತಾರೆ  * ಶ್ರೇಷ್ಠರಾದವರು ಕನಿಷ್ಠರಾಗುತ್ತಾರೆ ಕನಿಷ್ಠರು, ಶ್ರೇಷ್ಠರಾಗುತ್ತಾರೆ. * ಪ್ರೇಮವು ವೈಮನಸ್ಸಾಗಿ ಪರಿವರ್ತನೆಯಾಗುತ್ತದೆ.  ನಾವು ಮಾಹಿತಿ ಅಥವಾ ಸೂಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣ, ವಿಷಯದ ಬಗ್ಗೆ ವ್ಯಕ್ತಿಯ ಬಗ್ಗೆ ನಾವು ಈಗಾಗಲೇ ಹೊಂದಿರುವ ನಿರ್ಧಾರ ಅಥವಾ ಪೂರ್ವಾಗ್ರಹಗಳು.  ಉದಾಹರಣೆಗೆ : ನಮ್ಮ ಮೋಬೈಲ್ ಗೆ ಯಾವುದೇ ವೀಡಿಯೊ ಬಂದ ಕೂಡಲೇ ಅದು ಸತ್ಯ ಎಂದು ತಿಳಿದು, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತೇವೆ. ಒಂದು ವೇಳೆ ಅದು ತಪ್ಪು ಎಂದು ಗೊತ್ತಾದರೆ ನಮ್ಮ ಪ್ರತಿಕ್ರಿಯೆಗೆ ಪಶ್ಚಾತ್ತಾಪ ಪಡುತ್ತೇವೆ.  ಹೀಗಾಗಿ ನಮಗೆ  * ಒಬ್ಬ ವ್ಯಕ್ತಿ ಹೇಳುವ ಮಾತುಗಳು  * ನಾವು ನೋಡುವ ದೃಶ್ಯ * ಒಬ...
Image
  *"ಸೂಚನೆಗಳ ಅಪಾರ್ಥದಿಂದ ಆದಂತಹ ಬಹು ದೊಡ್ಡ ಅನಾಹುತಗಳು"*  ಸ್ಕಂದ ಮಾತಾ ದೇವಿ, ಅಷ್ಟು ದೊಡ್ಡ ದೇವಿ, ಆದರೆ ಸೂಚನೆಗಳನ್ನು ಅರ್ಥ ಮಾಡಿಕೊಳ್ಳಿ ಎನ್ನುವ ಚಿಕ್ಕ ಸಂದೇಶ ಕೊಡುತ್ತಿದ್ದಾರೆ, ಎನ್ನುವ ಭಾವನೆ ಹಲವರಲ್ಲಿ ಮೂಡಿರಬಹುದು.  ಆದರೆ ಈ ಹಿಂದೆ ಘಟಿಸಿದ ಅನಾಹುತಗಳನ್ನು ಯೋಚಿಸಿದಾಗ ಈ ಸಂದೇಶ ಎಷ್ಟು ದೊಡ್ಡದು ? ಎನ್ನುವುದು ತಿಳಿಯುತ್ತದೆ.  ರಾಮಾಯಣದ ವನವಾಸದಲ್ಲಿ ಸೀತಾಮಾತೆ, ಬಂಗಾರದ ವರ್ಣದ ಜಿಂಕೆಯನ್ನು ನೋಡಿ, ಅದು ಬೇಕು ಎನ್ನುವ ಹಠ ಮಾಡಿದಳು. ಅದನ್ನು ತರಲು ಶ್ರೀರಾಮ ಹೋದಾಗ ರಾವಣ ಸೀತೆಯನ್ನು ಅಪಹರಿಸಿದ.  *ಬಂಗಾರದ ಬಣ್ಣದ ಜಿಂಕೆ ನಿಜವಾದ ಜಿಂಕೆಯಲ್ಲ, ಮಾಯಾ ಜಿಂಕೆ,  ಎನ್ನುವ ನಿಜ ಸಂಗತಿ ಸೀತಾ ಮಾತೆಗೆ ಅರ್ಥವಾಗಿದ್ದರೆ ಅಥವಾ ಅದನ್ನು ಅರ್ಥ ಮಾಡಿಕೊಳ್ಳಲು ಸಮಯ ಕೊಟ್ಟಿದ್ದರೆ,, ಸೀತಾ ಮಾತೆ ಆ ಹಠ ಮಾಡುತ್ತಿರಲಿಲ್ಲ. ಶ್ರೀರಾಮ ಸೀತೆ ಬಿಟ್ಟು ಹೋಗುತ್ತಿರಲಿಲ್ಲ. ರಾವಣ ಸೀತೆಯನ್ನು ಅಪಹರಿಸುತ್ತಿರಲಿಲ್ಲ*.  2. ರಾವಣ ಸಾಧು ವೇಷ ಹಾಕಿಕೊಂಡು ಬಿಕ್ಷೆ ಬೇಡಲು ಸೀತಾ ಮಾತೆಯ ಗುಡಿಸಲಿಗೆ ಬಂದಾಗ, ಆತನನ್ನು ಸಾಧು ಎಂದು ನಿರ್ಣಯ ಮಾಡುವ ಮೊದಲು, ಸೀತಾ ಮಾತೆ ಆತನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಮಯ ನೀಡಿದ್ದರೆ ? * ಬಂಗಾರದ ಜಿಂಕೆ ಕಾಣುವುದಕ್ಕೂ, * ಪತಿ ಶ್ರೀರಾಮ ಹೊರಹೋಗುವುದಕ್ಕೂ *  ಇದೇ ಸಂದರ್ಭದಲ್ಲಿ ಅರಣ್ಯದಲ್ಲಿ ಸಾಧು ಬಿಕ್ಷೆ ಬೇಡಲು ಬಂದಿರುವುದಕ್ಕೂ, ಒಂದಕ್ಕೊಂದು ಸ...
Image
 *"ನವರಾತ್ರಿಯ ನಾಲ್ಕನೇ ದಿನದ ದೇವಿಯ ಆರಾಧನೆ"*.  ನಮ್ಮ ವರ್ತಮಾನವನ್ನು ಶುದ್ಧೀಕರಿಸುವ ಮೊದಲ ದೇವಿ, ಕುಷ್ಮಾಂಡ ಮಾತೆ.  ಈ ಜಗತ್ತನ್ನು ಪ್ರಪಂಚ ಎಂದು ಕರೆಯಲಾಗುತ್ತದೆ.*"ಪ್ರಪಂಚ, ಎಂದರೆ ಯಾವುದು ನಮ್ಮ ಪಂಚ ಇಂದ್ರಿಯಗಳ ತಿಳುವಳಿಕೆಗೆ ಬರುತ್ತದೆಯೋ ? ಅದುವೇ, ಪ್ರಪಂಚ."* ಈ ಪ್ರಪಂಚದಿಂದ ನಮ್ಮೆಲ್ಲರ ಮೇಲೆ ಮಾಹಿತಿ, ಸೂಚನೆಗಳ ದೊಡ್ಡ ಮಳೆಯೇ ಆಗುತ್ತಿದೆ.  ಕುಷ್ಮಾಂಡ ದೇವಿ ನಮ್ಮ ಪಂಚೇಂದ್ರಿಯಗಳಿಗೆ ಬರುವ  ಈ ಮಾಹಿತಿ ಸೂಚನೆಗಳನ್ನು ಶುದ್ಧೀಕರಿಸುವ ಸಂದೇಶ ನೀಡುತ್ತಿದ್ದಾರೆ.  ಪ್ರಶ್ನೆ : ಮಾಹಿತಿ ಅಥವಾ ಸೂಚನೆಗಳ ಶುದ್ಧೀಕರಣದ ಅವಶ್ಯಕತೆ ಏಕಿದೆ ?  ಉತ್ತರ : ನಾವು ನೀರನ್ನು ಕುಡಿಯುವ ಮುಂಚೆ ನೀರನ್ನು ಶುದ್ಧೀಕರಿಸುವುದು, ಎಷ್ಟು ಅವಶ್ಯಕವೋ  ? ನಮ್ಮ ಪಂಚೇಂದ್ರಿಯಗಳಿಗೆ ಬರುವ ಸೂಚನೆಗಳನ್ನು ಶುದ್ಧೀಕರಿಸುವುದು ಸಹ ಅಷ್ಟೇ ಅವಶ್ಯಕವಾಗಿದೆ.  ನೀರು ಶುದ್ಧೀಕರಿಸದಿದ್ದರೆ, ನಮ್ಮ ದೇಹ ಅನಾರೋಗ್ಯ ಪೀಡಿತವಾಗುತ್ತದೆ. ಸೂಚನೆಗಳನ್ನು ಶುದ್ಧೀಕರಿಸದಿದ್ದರೆ, ನಮ್ಮ ಮನಸ್ಸು, ದೇಹ ಬುದ್ದಿ ಕೊನೆಗೆ ನಮ್ಮ ಜೀವನವೇ ಹಾಳಾಗುತ್ತದೆ. ಉದಾಹರಣೆಗೆ : ನಮ್ಮ ಕಿವಿ, ಕಣ್ಣುಗಳಿಗೆ ಶ್ರೇಷ್ಠ ಪುಸ್ತಕದ  ಸೂಚನೆ ದೊರೆತಾಗ, ನಾವು ಅದರ ಕುರಿತು ಇನ್ನೂ ಹೆಚ್ಚು ತಿಳಿಯಲು ಬಯಸುತ್ತೇವೆ. ಇದನ್ನು ಆಸಕ್ತಿ ಎಂದು ಕರೆಯುತ್ತಾರೆ. ಆಸಕ್ತಿ ಹೆಚ್ಚಿದಾಗ ಆ ಪುಸ್ತಕ ಬೇಕು ಎನ್ನುವ ಇಚ್ಛೆ ಬರುತ್ತದೆ. ಇ...
Image
  "*ನವರಾತ್ರಿಯ ಮೂರನೇ ದೇವಿ ಚಂದ್ರ ಘಂಟಾ ದೇವಿಯ ಆರಾಧನೆ*" ನಮ್ಮ ಭೂತಕಾಲವನ್ನು ಶುದ್ಧೀಕರಿಸುವ ಮೂರನೇ ದೇವಿ ಚಂದ್ರಘಂಟಾ ದೇವಿ.  ನಮ್ಮ ಭೂತಕಾಲದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಮೂಲಕ, ನಮ್ಮ ಭೂತಕಾಲದ ತಪ್ಪುಗಳು ನಮಗೆ ದುರಾದೃಷ್ಟ ತರದಂತೆ ಶುದ್ಧಿಕರಿಸಿಕೊಳ್ಳಬಹುದು.   ( ಪ್ರಾಯಶ್ಚಿತ್ತ : ನಮ್ಮ ತಪ್ಪುಗಳಿಗೆ ಇಂದ್ರಿಯಗಳ ಸುಖ ಸಂತೋಷ, ಅಹಂಕಾರದ ಮತ್ತು ಸಂಪತ್ತಿನ ತ್ಯಾಗ ಮಾಡುವುದು.) ನಾವು ಪ್ರಾಯಶ್ಚಿತ್ತ ಯಾವಾಗ ಮಾಡಿಕೊಳ್ಳುತ್ತೇವೆ ಎಂದರೆ, ನಮ್ಮ ಜೀವನದ ಘಟನೆಗಳನ್ನು ಹಾಗೂ ಜಗತ್ತಿನ ಘಟನೆಗಳನ್ನು ಸರಿಯಾದ ದೃಷ್ಟಿಕೋನದಿಂದ ನೋಡಿದಾಗ.  ಆದರೆ ಚಂದ್ರನನ್ನು ಕವಿ, ವಿಜ್ಞಾನಿ, ಮಕ್ಕಳು, ತಾಯಂದಿರು ವಿಭಿನ್ನ ಜನರು ವಿಭಿನ್ನವಾಗಿ ನೋಡುವಂತೆ, ಒಂದು ಘಟನೆಯನ್ನು ವಿಭಿನ್ನ ಜನರು ವಿಭಿನ್ನವಾಗಿ ನೋಡುತ್ತಾರೆ.  ಉದಾಹರಣೆಗೆ :  * ಯಾವುದೇ ತಪ್ಪು, ನಮ್ಮಿಂದ ಅಥವಾ ನಮ್ಮವರಿಂದ ಆದಾಗ ಅದು ತಪ್ಪೆಂದು ಅನಿಸುವುದಿಲ್ಲ.  ಆದರೆ ಅದೇ ತಪ್ಪನ್ನು ಬೇರೆಯವರು ಮಾಡಿದರೆ, ಅದನ್ನು ತಪ್ಪು ಎಂದು ಹೇಳುತ್ತೇವೆ. * ನಮಗೆ ಸಂಬಂಧಿಸಿದವರಿಗೆ ನೋವಾದಾಗ, ನಮ್ಮ ಸಂಬಂಧಿಗಳ ಜೀವ ಹತ್ಯೆ ಆದಾಗ ಅದನ್ನು ತಪ್ಪು ಎನ್ನುತ್ತೇವೆ. ನಮಗೆ ಸಂಬಂಧವಿಲ್ಲದ ಮುಗ್ಧರ, ಮುಗ್ಧ ಪ್ರಾಣಿಗಳ ಜೀವ ಹತ್ಯೆ ಆದಾಗ ಅದು ತಪ್ಪು ಅನಿಸುವುದಿಲ್ಲ. ಈ ರೀತಿ ಪಕ್ಷಪಾತದ ಸ್ವಭಾವದಿಂದ ನಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ...
Image
 "ನವರಾತ್ರಿಯ ಎರಡನೇ ದೇವಿ ಬ್ರಹ್ಮಚಾರಿಯ ಆರಾಧನೆ" ನಮ್ಮ ಎಲ್ಲಾ ಕೆಲಸಗಳು ಅದು ಒಳ್ಳೆಯ ಕೆಲಸಗಳು ಆಗಿರಬಹುದು. ಕೆಟ್ಟ ಕೆಲಸಗಳು ಆಗಿರಬಹುದು, ಜಗತ್ತಿನ ಮೇಲೆ ತನ್ನದೇಯಾದ ಪ್ರಭಾವವನ್ನು ಬೀರುತ್ತವೆ. ನಮ್ಮ ಹಿಂದಿನ ಒಳ್ಳೆಯ, ಕೆಟ್ಟ ಕೆಲಸಗಳನ್ನು ಯಾರು ನೋಡದೆ ಇದ್ದರೂ ಜಗತ್ತಿನಲ್ಲಿ ಅದರ ಪ್ರಭಾವ ಇರುತ್ತದೆ. *ಹಿಂದಿನ ನಮ್ಮ ಒಳ್ಳೆಯ ಕೆಲಸಗಳು ನಮಗೆ ಒಳ್ಳೆಯ ಅದೃಷ್ಟ ತೆಗೆದುಕೊಂಡು ಬಂದರೆ, ನಮ್ಮ ಭೂತಕಾಲದ ಕೆಟ್ಟ ಕೆಲಸಗಳು ನಮಗೆ ದುರಾದೃಷ್ಟ ತೆಗೆದುಕೊಂಡು ಬರುತ್ತವೆ*. ಬ್ರಹ್ಮಚಾರಿಣಿ ದೇವಿ ನಮ್ಮ ಹಿಂದಿನ ಕೆಟ್ಟ ಕೆಲಸಗಳನ್ನು ಶುದ್ಧಿ ಮಾಡಲು ಸಹಾಯ ಮಾಡುತ್ತಾಳೆ. ಹೇಗೆಂದರೆ, ನಮ್ಮ ಸಂಪರ್ಕ ಜಗತ್ತಿನೊಂದಿಗೆ ಇರುವುದೇ ಇಂದ್ರಿಯಗಳ ಕಾರಣದಿಂದ. ಈ ಇಂದ್ರಿಯಗಳ ಮೂಲಕವೇ ನಾವು ಸುಖ ಸಂತೋಷ ಅನುಭವಿಸುತ್ತೇವೆ. ಬ್ರಹ್ಮಚಾರಿಣಿ ದೇವಿ ತನ್ನ ಇಂದ್ರಿಯಗಳನ್ನು ಜಗತ್ತಿನ ಸಂಪರ್ಕದಿಂದ ಒಳಗೆ ಎಳೆದುಕೊಂಡಿದ್ದಾರೆ. ಇದೇ ರೀತಿ ನಾವು ಸಹ ನಮ್ಮ ಇಂದ್ರಿಯಗಳಿಗೆ ಜಗತ್ತಿನ ಸುಖ ಸಂತೋಷ ಕೊಡದೆ ಇರುವ ಮೂಲಕ ನಾವು ಈ ಹಿಂದೆ ಮಾಡಿರುವ ತಪ್ಪು ಕೆಲಸಗಳು ನಮಗೆ ದುರಾದೃಷ್ಟ ತರದಂತೆ ಸರಿ ಮಾಡಿಕೊಳ್ಳಬಹುದು. *ಉದಾಹರಣೆಗೆ: ನಮ್ಮ ಕಣ್ಣು ನಾಲಿಗೆ ಕಿವಿ ಚರ್ಮ ಮೂಗು ಇವುಗಳಿಗೆ ರೂಪ ರಸ (ಆಹಾರ) ರಾಗ ಸ್ಪರ್ಶ ಗಂಧ ಕೊಡದೆ ಇರುವುದರಿಂದ ನಮ್ಮ ಭೂತಕಾಲ ಶುದ್ಧ ಮಾಡಬಹುದು*. ಇಲ್ಲಿ ಒಂದು ರೀತಿಯಿಂದ *ಸುದರ್ಶನ ಪೂರ್ಣ ಚಕ್ರ  ಸಿದ್ದಾಂತ* ಕೆಲಸ ಮಾಡುತ್ತ...
Image
 *"ನವರಾತ್ರಿಯ ಮೊದಲನೇ ದೇವಿ ಶೈಲ ಪುತ್ರಿಯ ಆರಾಧನೆ"* ಶ್ರೀಕೃಷ್ಣನು ಅಷ್ಟೊಂದು ಶಕ್ತಿವಂತನಾದರೂ ತನ್ನ ಪ್ರಿಯ ಪಾಂಡವರನ್ನು ವನವಾಸದಿಂದ, ಕಷ್ಟಗಳಿಂದ ಏಕೆ ರಕ್ಷಿಸಲಿಲ್ಲ ? ಎನ್ನುವ ಪ್ರಶ್ನೆ ತಮಗೆ ಕೇಳಲಾಗಿತ್ತು. ಕುರುಕ್ಷೇತ್ರದ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಹನುಮಾನ ದೇವರಿಗೆ ದುರ್ಗಾ ದೇವಿಯ ಆರಾಧನೆ ಮಾಡಿಸಲು ಹೇಳುತ್ತಾರೆ. ಈ ಸಂಧರ್ಭದಲ್ಲಿ ಶ್ರೀಕೃಷ್ಣ ಪಾಂಡವರ ಕಷ್ಟಗಳಿಗೆ ಕಾರಣ ಹೇಳುವಾಗ, ದುರ್ಯೋಧನ ಹಾಗೂ ಕೌರವರು ಬಹಳ ಕೆಟ್ಟವರು, ಅವರ ಅನ್ಯಾಯ ಅನೀತಿ ಅಧರ್ಮದಿಂದ ಪಾಂಡವರಿಗೆ ಕೆಟ್ಟದ್ದು ಆಗುತ್ತಿದೆ, ಎಂದು ಹೇಳುವುದಿಲ್ಲ. ಶ್ರೀಕೃಷ್ಣ ಹೇಳುವುದೇನೆಂದರೆ, ಪಾಂಡವರ ಪೂರ್ವ ಜನ್ಮದ ಕರ್ಮಗಳಿಂದ ಅವರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅವರ ಆ ಕರ್ಮಗಳಿಂದಲೇ ವನವಾಸ ಮತ್ತು ಈಗ ಯುದ್ದದಲ್ಲಿ ಸೋಲುವ ಲಕ್ಷಣ ನನಗೆ ಕಾಡುತ್ತಿದೆ. ಆದರೆ ಈಗ ಇದು ಪಾಂಡವರ ಪ್ರಶ್ನೆಯಾಗಿ ಉಳಿದಿಲ್ಲ. ಮಾನವೀಯತೆ ಪ್ರಶ್ನೆಯಾಗಿದೆ. ಆದ್ದರಿಂದ ಅವರು ಯುದ್ದದಲ್ಲಿ ಗೆಲ್ಲಲೇ ಬೇಕು ಆಗ ಧರ್ಮಕ್ಕೆ ಜಯ ಎನ್ನುವ ಸಂದೇಶ ಹೋಗುತ್ತದೆ. ಹೀಗಾಗಿ ಅವರ ಕರ್ಮ ಕಳೆಯಲು ನವ ದುರ್ಗಾ ದೇವಿಯ ಆರಾಧನೆ ಮಾಡಲು ಹೇಳುತ್ತಾರೆ. ಇಲ್ಲಿ ಹೇಳುತ್ತಿರುವ ದುರ್ಗಾ ದೇವಿಯ ಆರಾಧನೆ ಬಹುಶಃ ಯಾರು ಕೇಳಿಲ್ಲ, ಯಾರು ಹೇಳಿಲ್ಲ. ಹಾಗೂ ಇದು ಕೇವಲ ನವರಾತ್ರಿಗೆ ಸೀಮಿತವಾದ ಆರಾಧನೆಯಲ್ಲ. ವರ್ಷಪೂರ್ತಿ ಮಾಡುವ ಆರಾಧನೆಯಾಗಿದೆ. ಈ ಆರಾಧನೆಗೆ ಯಾವುದೇ ಧರ್ಮ, ಪಂಥ ಅಡ್ಡ...
Image
 *ನಾನೇಕೆ ವಿಧಾನ ಪರಿಷತ್ತಿನ (ಶಿಕ್ಷಕರ ಕ್ಷೇತ್ರ) ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸಿದೆ ?* *(ಈಶಾನ್ಯ ಶಿಕ್ಷಕರ ವಿಧಾನ ಪರಿಷತ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಬಹಿರಂಗ ಪತ್ರ)* ನಮ್ಮ ಮನೆಯಲ್ಲಿಯೂ ಹಾಗೂ ನಮ್ಮ ಮನೆಯ ಹೊರಗಡೆಯೂ ಬಹಳ ಜನರಿಗೆ ನನ್ನ ಚುನಾವಣೆ ಸ್ಪರ್ಧೆಯ ಪ್ರಯತ್ನ ಬಹಳ ಆಘಾತವಾಗಿತ್ತು. ಕೆಲವರು ನಾನು ಮಹತ್ವಾಕಾಂಕ್ಷಿ ಎಂದು ಭಾವಿಸಿರಬಹುದು. ಹೌದು, ನಾನು ಸತ್ಯ ಯುಗ ನಿರ್ಮಾಣದ ಮಹತ್ವಾಕಾಂಕ್ಷಿ. ನನ್ನ ಪಾಲಿಗೆ ಈ ಚುನಾವಣೆ ನನ್ನ ಜೀವನದ ಉದ್ದೇಶದ ವಿಚಾರವನ್ನು ಇನ್ನೂ ವಿಸ್ತಾರವಾಗಿ ಪ್ರಸಾರ ಮಾಡುವುದು ಈ ಸ್ಪರ್ಧೆಯ ಉದ್ದೇಶವಾಗಿತ್ತು. ಒಂದು ನಿರ್ಜೀವ ಶಿಲೆಯನ್ನು ಜೀವಂತ ಮೂರ್ತಿಯ ಹಾಗೆ ಮಾಡುವವ ಶಿಲ್ಪಿಯಾದರೆ, ಒಬ್ಬ ಜೀವಂತ ವ್ಯಕ್ತಿಯನ್ನು ಸುಶಿಕ್ಷಿತ ನಾಗರಿಕರನ್ನಾಗಿ ಮಾಡುವವನು ಶಿಕ್ಷಕ. ಒಂದು ಸಮಾಜ ಕತ್ತಲೆಯ ಅಜ್ಞಾನದಲ್ಲಿದೆಯೆಂದರೆ, ಶಿಕ್ಷಣದ ಕೊರತೆ ಅದಕ್ಕೆ ಕಾರಣ. ಒಂದು ಸಮಾಜ ಸುಜ್ಞಾನದ ಬೆಳಕಿನಲ್ಲಿದೆಯೆಂದರೆ ಅದಕ್ಕೆ ಉತ್ತಮ ಶಿಕ್ಷಣ ಕಾರಣ. ಈ ಜಗತ್ತಿನಲ್ಲಿ ಪುನಃ ಸತ್ಯ ಯುಗ ನಿರ್ಮಾಣದ ಉದ್ದೇಶ ಹೊಂದಿದ ನಾನು "ಶಿಕ್ಷಕರನ್ನು ಸತ್ಯ ಯುಗದ ನಿರ್ಮಾಪಕರನ್ನಾಗಿ ಕಾಣುತ್ತಿದ್ದೇನೆ"". " ಶಿಕ್ಷಣವನ್ನು ಸತ್ಯ ಯುಗ ನಿರ್ಮಾಣದ ಅಸ್ತ್ರವನ್ನಾಗಿ ನೋಡುತ್ತಿದ್ದೇನೆ." ಈ ಕಾರಣದಿಂದ ಶಿಕ್ಷಣ, ಶಿಕ್ಷಕರಿಗೆ ಸಂಬಂಧಿಸಿದ ಚುನಾವಣೆಯಲ್ಲಿ ನಾನು ಸ್ಪರ್ಧಿಸಲು ಯೋಚಿಸಿದೆ. ಈ ಮೂ...
Image
 *"ಈಗ ನಡೆಯುತ್ತಿರುವ ಸಮಯ, ಸುದರ್ಶನ ಪೂರ್ಣ ಚಕ್ರ ಸಿದ್ದಾಂತದ ಸಮಯ*" ಸುದರ್ಶನ ಪೂರ್ಣ ಚಕ್ರ ಸಿದ್ದಾಂತ ಎಂದರೆ, ಕೊಡುವುದು ಮತ್ತು ತೆಗೆದುಕೊಳ್ಳುವುದು ಒಟ್ಟುಗೂಡಿ ಸೊನ್ನೆಗೆ ಸಮ ಆಗಬೇಕು.  ಇದನ್ನು ಇನ್ನೊಂದು ರೀತಿ ಹೀಗೆ ಹೇಳಬಹುದು ಅದೇನೆಂದರೆ, ನಾನು ಯಾರಿಂದಲೂ ಏನನ್ನು ಪಡೆದಿಲ್ಲ, ಯಾರು ನನಗೆ ಏನನ್ನು ಕೊಟ್ಟಿಲ್ಲ ಎನ್ನುವ ಭಾವನೆ ನಮಗೆ ಬಂದರೆ ಅದು ಸುದರ್ಶನ ಪೂರ್ಣ ಚಕ್ರ ಸಿದ್ದಾಂತ.  ಹೇಗೆಂದರೆ, ನಾವು ಪಡೆದಿರುವುದಕ್ಕೆ ಸಮನಾಗಿ ಪುನಃ ಕೊಟ್ಟರೆ, ನಾವು ಯಾರಿಂದಲೂ ಪಡೆದಿಲ್ಲ ಎನ್ನಬಹುದು. ನಾವು ಕೊಟ್ಟಿರುವುದಕ್ಕೆ ಸಮನಾಗಿ ಪಡೆದರೆ, ನಾವು ಯಾರಿಗೂ ಕೊಟ್ಟಿಲ್ಲ ಎನ್ನಬಹುದು. ಇದನ್ನೇ ಸುದರ್ಶನ ಪೂರ್ಣ ಚಕ್ರ ಸಿದ್ದಾಂತ ಹೇಳುತ್ತದೆ. ನಾನು ಈಗ ಬರೆಯುತ್ತಿರುವ ಲೇಖನ ಮೊದಲೇ ಬರೆಯಬೇಕಿತ್ತು, ಆದರೆ ನನ್ನ ಕೆಲಸ ಮತ್ತು ಈಶಾನ್ಯ ಶಿಕ್ಷಕರ ಚುನಾವಣೆ ತಯಾರಿಯಲ್ಲಿ ಇದರ ಬಗ್ಗೆ ಯೋಚನೆಯೇ ಬರಲಿಲ್ಲ. ವಿಷಯ ಏನೆಂದರೆ ಈಗ ಒಂದು ರೀತಿಯಲ್ಲಿ ಸುದರ್ಶನ ಪೂರ್ಣ ಚಕ್ರ ಸಿದ್ದಾಂತದ ಪಕ್ಷ (15 ದಿನ) ನಡೆಯುತ್ತಿದೆ. ಇದನ್ನೇ ಪ್ರಚಲಿತ ಭಾಷೆಯಲ್ಲಿ ಪಿತೃ ಪಕ್ಷ ಎಂದು ಕರೆಯುತ್ತಾರೆ.   ಇಲ್ಲಿ ಮುಖ್ಯವಾಗಿ ಸುದರ್ಶನ ಪೂರ್ಣ ಚಕ್ರ ಸಿದ್ದಾಂತದ ಎರಡನೇ ಪ್ರಕ್ರಿಯೆ ನಡೆಯುತ್ತದೆ. ನಾವು ಪಡೆದಿರುವುದಕ್ಕೆ ಪ್ರತಿಯಾಗಿ  *ಪುನಃ ಮರಳಿ ಕೊಡುವುದು*. *ಪ್ರಶ್ನೆ : ಸತ್ತವರಿಗೆ ಮರಳಿ ಕೊಡುವುದೇ?*  ಜೀವಂತ ಇರುವವರಿ...
Image
 ಚಂದ್ರಲೋಕಕ್ಕೆ ಕಳುಹಿಸಿದ ಚಂದ್ರಯಾನ -3 ನೌಕೆ ಕೇವಲ 14 ದಿನಗಳವರೆಗೆ ಕೆಲಸ ಮಾಡಿ ತನ್ನ ಚಟುವಟಿಕೆ ನಿಲ್ಲಿಸಿತು. ಕಾರಣವೇನು ? ನಮ್ಮ ಭೂಮಿಯ ಮೇಲೆ 24 ಗಂಟೆಗೆ ಒಂದು ದಿನ, (12 ಗಂಟೆಗೆ ಒಂದು ಹಗಲು) ಆದರೆ, ಚಂದ್ರನಲ್ಲಿ ಸರಿಸುಮಾರು 30 ದಿನಕ್ಕೆ ಒಂದು ದಿನ. ಸರಿಸುಮಾರು 15 ದಿನಕ್ಕೆ ಒಂದು ಹಗಲು, 15 ದಿನಕ್ಕೆ ಒಂದು ರಾತ್ರಿ. ಚಂದ್ರನ ನೌಕೆಗೆ ಕತ್ತಲಲ್ಲಿ ಶಕ್ತಿ ಸಿಗದ ಕಾರಣ ಕೇವಲ 14 ದಿನ ಕೆಲಸ ಮಾಡಿತು. ವಿಜ್ಞಾನಿಗಳಿಗೆ ಈ ವಿಷಯ ಇತ್ತಿತ್ತಲಾಗಿ ತಿಳಿದಿದೆ. ಆದರೆ ಭಾರತದ ಋಷಿ, ಮುನಿಗಳು ಈ ವಿಷಯವನ್ನು ಮೊದಲೇ ತಿಳಿದಿದ್ದರು. ಹೀಗಾಗಿ 15 ದಿನಕ್ಕೊಂದು ಪಕ್ಷ ಮಾಡಿದ್ದಾರೆ (ಕೃಷ್ಣ ಪಕ್ಷ, ಶುಕ್ಲ ಪಕ್ಷ). ಈ ವಿಷಯ ಈಗ ತಿಳಿಸುವುದಕ್ಕೆ ಕಾರಣ, ಈಗ ಹದಿನೈದು ದಿನಗಳ ಕಾಲ, ಅಗಲಿ ಹೋದ ನಮ್ಮ ಪೂರ್ವಜರು ಪಿತೃಗಳಿಗೆ ಗೌರವಾದರ, ಶ್ರಧ್ಧೆ ತರ್ಪಣ ಅರ್ಪಿಸುವ ಪಿತೃ ಪಕ್ಷ ನಡೆಯುತ್ತಿದೆ. ಇಂದು ಕೊನೆಯ ದಿನ. ಅದರ ನಂತರ ಪಿತೃ ಪಕ್ಷ ಇಲ್ಲ. ಏಕೆಂದರೆ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಪಿತೃ ಲೋಕದಲ್ಲಿಯೂ ಸಹ 15 ದಿನಗಳವರೆಗೆ ಹಗಲು ನಂತರ ರಾತ್ರಿ ಆಗುತ್ತದೆ. ಹೀಗಾಗಿ ಪಿತೃ ಲೋಕದ ಸಮಯದ ಪ್ರಕಾರ ಮುಂಜಾನೆಯಿಂದ ಸಂಜೆವರೆಗೆ (ಅಂದರೆ ಭೂ ಲೋಕದ 15 ದಿನ) ಪಿತೃಗಳು ತಮ್ಮ ವಂಶಜರಿಂದ ಏನಾದರೂ ಸಿಗುವುದೋ ಎಂದು ಕಾಯುತ್ತಾರೆ. ಅವರಿಗೆ ನಾವು ಏನಾದರೂ ಅರ್ಪಿಸಿದರೆ ಸಂತೋಷದಿಂದ ನಮ್ಮನ್ನು ಹರಷಿ ಹೋಗುತ್ತಾರೆ. ಇಲ್ಲದಿದ್ದರೆ ನಿರಾಶೆಯಿಂದ ನಿಟ್...
Image
 "*ನಾವು ಕೇಳಿರುವ ಶ್ರೀಕೃಷ್ಣನ ಸಾಮರ್ಥ್ಯ. ಶ್ರೀಕೃಷ್ಣನ ಆ  ಸಾಮರ್ಥ್ಯಕ್ಕೆ ಕೆಲವು ಸವಾಲುಗಳು (ಪ್ರಶ್ನೆಗಳು)*". ನಾವು ಓದಿದ್ದು, ಕೇಳಿದ್ದು * ಶ್ರೀಕೃಷ್ಣ ಹುಟ್ಟಿದ ಕೂಡಲೇ ತಂದೆ ತಾಯಿಯ ಬಂಧನದ ಬೇಡಿ ಕಳಚಿದವು. ಜೈಲಿನ ಬಾಗಿಲುಗಳು ತೆರೆದವು. * ಶ್ರೀಕೃಷ್ಣ ಹುಟ್ಟಿದ ಕೂಡಲೇ ಎಲ್ಲಾ ಸೈನಿಕರು ಮೂರ್ಛೆ ಹೋದರು.  * ತಂದೆ ಬುಟ್ಟಿಯಲ್ಲಿ ಕುಳ್ಳಿರಿಸಿಕೊಂಡು ಯಮುನಾ ನದಿ ದಾಟುವಾಗ, ಶ್ರೀಕೃಷ್ಣನ ಕಾಲಿನ ಬೆರಳು ನೀರಿಗೆ ತಾಗಿದಾಗ ತುಂಬಿ ಹರಿಯುತ್ತಿದ್ದ ಯಮುನಾ ನದಿ ವಸುದೇವರಿಗೆ ದಾರಿ ಮಾಡಿಕೊಟ್ಟಿತು. * ಶ್ರೀಕೃಷ್ಣ ಬಾಲ್ಯದಲ್ಲಿಯೇ ತನ್ನನ್ನು ಕೊಲ್ಲಲು ಬಂದಂತಹ ಪುತನಿ ಸೇರಿದಂತೆ ಅನೇಕ ರಾಕ್ಷಸರನ್ನು ಸಂಹಾರ ಮಾಡಿದ.  * ದುಶ್ಯಾಸನ ದ್ರೌಪದಿಯ ಸೀರೆ ಎಳೆಯುತ್ತಿದ್ದಾಗ ಅನೇಕ ಸೀರೆಗಳನ್ನು ನೀಡಿ ದ್ರೌಪದಿಯ ಗೌರವ ಕಾಪಾಡಿದ.  ಇವೆಲ್ಲವೂ ನಾವು ಓದಿದ ಕೇಳಿದ ಶ್ರೀಕೃಷ್ಣನ ಕೆಲವು ಸಾಮರ್ಥ್ಯಗಳು... ಈಗ ಕೆಲವು ಪ್ರಶ್ನೆಗಳು.. ಮೊದಲನೇ ಪ್ರಶ್ನೆ ನಾವು ಕೇಳುತ್ತಿರುವುದಲ್ಲ, ಶ್ರೀಕೃಷ್ಣನ ತಾಯಿ ದೇವಕಿಯೇ, ಶ್ರೀಕೃಷ್ಣ ಕಂಸನ ಸಂಹಾರ ಮಾಡಿ ತಂದೆ ತಾಯಿ ಭೇಟಿ ಮಾಡಲು ಬಂದಾಗ ಕೇಳಿದ್ದು.  1. ನೀನು ಅಷ್ಟೊಂದು ಸಾಮರ್ಥ್ಯ ಇರುವವನು ಆದರೂ ನೀನು ನಮ್ಮನ್ನು ಬಂಧನದಿಂದ ಬಿಡಿಸಲು ಹದಿನಾಲ್ಕು ವರ್ಷದಷ್ಟು ದೀರ್ಘ ಸಮಯ ಏಕೆ ತೆಗೆದುಕೊಂಡೆ  ? ಈ ಕಾರಣದಿಂದ  ಹದಿನಾಲ್ಕು ವರ್ಷ ನಿನ್ನಿಂದ ದೂರ ಇರಬೇಕಾಯಿತು...