Posts

Showing posts from November, 2026

ಶಂಕರಾಚಾರ್ಯರು ಸರಿಯೇ ?ಕನಕದಾಸರು ಸರಿಯೇ?*

Image
 
Image
 "ಆಧುನಿಕತೆ ಎಂದರೇನು ? ಮನುಷ್ಯನನ್ನು ಮೇಲ್ಮಟ್ಟಕ್ಕೆ ಒಯ್ಯುವಂತಹದೇ ? ಅಥವಾ ಕೆಳ ಮಟ್ಟಕ್ಕೆ ಕರೆದೊಯ್ಯುವಂತಹದೇ ?" . ಜಗತ್ತಿನಲ್ಲಿ ಅನೇಕಾನೇಕ ಜೀವಿಗಳಿವೆ ಪ್ರತಿ ಜೀವಿಗಳಿಗೆ ಆಹಾರ, ನಿದ್ರೆ, ಸುರಕ್ಷೆ, ಸಂತಾನೋತ್ಪತ್ತಿಯ ಮೂಲಭೂತ ಅವಶ್ಯಕತೆಗಳಿವೆ. ಈ ಅವಶ್ಯಕತೆಗಳನ್ನು ಪಶು, ಪಕ್ಷಿ, ಪ್ರಾಣಿ, ಕೀಟಗಳು ತನ್ನ ಶಕ್ತಿ, ಸಾಮರ್ಥ್ಯದ ಅನುಸಾರ ಮಾಡಿಕೊಳ್ಳುತ್ತವೆ. ಆದರೆ ಪ್ರಾಣಿಗಳಿಗೆ ಬುದ್ದಿಯಿರುವುದಿಲ್ಲ. ಬುದ್ಧಿ ಇದ್ದರೂ ನೀತಿ, ನಿಯಮಗಳನುಸಾರ ತಮ್ಮ ಅವಶ್ಯಕತೆಗಳನ್ನು ಪೂರ್ಣ ಮಾಡಿಕೊಳ್ಳಲು, ಅವುಗಳ ಬುದ್ದಿಯನ್ನು ಉಪಯೋಗಿಸುವುದಿಲ್ಲ. ಇಂದು ಆಧುನಿಕ ಜಗತ್ತಿನಲ್ಲಿ ಯುವ ಜನತೆ, ಮನುಷ್ಯ ಶರೀರ ಹೊಂದಿಯೂ ತನ್ನ ಅವಶ್ಯಕತೆಗಳನ್ನು ಪ್ರಾಣಿಗಳಂತೆ ನೀತಿ ನಿಯಮಗಳಿಲ್ಲದೆ ಪೂರ್ಣ ಮಾಡಿಕೊಳ್ಳುವ ಬೆಳವಣಿಗೆ (ದೊಡ್ಡ ದೊಡ್ಡ ನಗರಗಳಲ್ಲಿ) ನಡೆಯುತ್ತಿದೆ. ಈ ಮೊದಲು ನಗರಗಳಲ್ಲಿ ಒಂಟಿ ವಿಧ್ಯಾರ್ಥಿಗಳಿಗೆ, ಒಂಟಿ ಉದ್ಯೋಗಸ್ಥ ಯುವಕ, ಯುವತಿಯರಿಗೆ ಅನುಕೂಲವಾಗಲಿ ಎಂದು "ಪಾವತಿ ಅತಿಥಿ" Paying guest ಪಿ.ಜಿ ಎನ್ನುವ ಪದ್ಧತಿ ಬೆಳೆದಿತ್ತು. ಆಗ ಯುವಕ, ಯುವತಿಯರಿಗೆ ಪ್ರತ್ಯೇಕ ವಾಸಿಸುವ ಪಿ. ಜಿ ಗಳು ಇರುತ್ತಿದ್ದವು. ಆದರೆ ಇಂದು ಅವಕ್ಕಾಗುವಂತಹ ವಿಷಯ ಕೇಳಿ ಬರುತ್ತಿದೆ. ಅದುವೇ ಸಹ ಜೀವನದ ಪಿ. ಜಿ. Co living PG (You can search, co living PG Whitefield). ಅಂದರೆ ಯುವಕ ಯುವತಿಯರು ಇಷ್ಟ ಬಂದವರ ಜೊತೆ, ಇಷ್ಟ...
Image
 *"ಜೀವನದಲ್ಲಿ ಕಷ್ಟಗಳು ಬಂದಾಗ ಹೇಳಿಕೊಳ್ಳಬೇಕಾದಂತಹ ತಿಳುವಳಿಕೆಯ ಮಾತು"* ವೈಕುಂಠದ ಮಹಾರಾಣಿಯಾದಂತಹ ಲಕ್ಷ್ಮಿ ಮಾತೆ ಭೂಲೋಕದ ಜನರ ಕುಕರ್ಮಗಳನ್ನು ನಾಶ ಮಾಡಲು ಭೂಮಿಯನ್ನೇ ತನ್ನ ತಾಯಿಯನ್ನಾಗಿ ಮಾಡಿಕೊಂಡು ಭೂಲೋಕದ ಎಲ್ಲಾ ಜನರ ಕರ್ಮ ಸಂಬಂಧಿಯಾದರು. ಭೂಲೋಕದ ಎಲ್ಲ ಜನರ ಕರ್ಮ ಸಂಬಂಧಿಯಾಗಿ ಅವರ ಪಾಪಕರ್ಮಗಳನ್ನು, ಸೀತೆ ರೂಪದಲ್ಲಿ, ಲಕ್ಷ್ಮಿ ಮಾತೆ ಹೇಗೆ ಅನುಭವಿಸಿ ನಾಶ ಮಾಡಿದರು ? ಎನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ತಿಳಿದಿದ್ದೇವೆ.  ಸೀತಾ ಮಾತೆ ಮದುವೆಯ ನಂತರ ಹಾಗೂ ಕೊನೆಗೆ ಭೂಮಿಯನ್ನು ಸೇರುವವರೆಗೂ ನಿರಂತರವಾಗಿ ಕಷ್ಟಗಳನ್ನೆ ಅನುಭವಿಸಿದರು. ಆ ಕಷ್ಟಗಳನ್ನು ಅನುಭವಿಸುವಾಗ ಜೀವನದ ಒಂದು ಸತ್ಯವನ್ನು ಅವರು ಪದೇ ಪದೇ ಸ್ಮರಿಸಿಕೊಳ್ಳುತ್ತಿದ್ದರು. ಈ ಸತ್ಯ, ಕಷ್ಟಗಳನ್ನು ಎದುರಿಸಲು ಅವರಿಗೆ ಸಹಾಯ ಮಾಡಿತು.  ಈ ಸತ್ಯವನ್ನು ನಾವೆಲ್ಲರೂ ತಿಳಿಯುವುದು ಮತ್ತು ಸದಾ ಕಾಲ ನಮ್ಮ ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಅವಶ್ಯಕವಾಗಿದೆ.  * ಈ ಸತ್ಯವನ್ನು ಸದಾ ಸ್ಮರಣೆ ಮಾಡುವುದರಿಂದ, ಬಹಳಷ್ಟು ತಪ್ಪುಗಳನ್ನು ಮಾಡುವುದರಿಂದ ನಾವು ಪಾರಾಗುತ್ತೇವೆ.  * ಜೀವನದ ಕಷ್ಟಗಳನ್ನು ಕಳೆಯಲು ಸಹ ಈ ಸತ್ಯ ಸಹಾಯ ಮಾಡುತ್ತದೆ. ಆ ಸತ್ಯ ಯಾವುದೆಂದರೆ, ಜಗತ್ತಿನ ಪ್ರಮುಖವಾದ ನಿಯಮವಾಗಿದೆ. ಆ ನಿಯಮವೇ "ಬದಲಾವಣೆ". * ಒಂದು ಮಗು ಹುಟ್ಟುತ್ತದೆ. ಅದು ಮಗುವಾಗಿಯೇ ಇರುವುದಿಲ್ಲ. ಮಗು ಬಾಲಕನಾಗುತ್ತಾನೆ. * ಬಾಲಕ ಯುವಕನ...
Image
  *"ಬಲಿ ಕೊಡಬೇಕೆ ? ಹೌದು _____ ಬಲಿ ಕೊಡಬೇಕು"* ಸಮಾಜದಲ್ಲಿ, ಜಗತ್ತಿನಲ್ಲಿ ದೇವರಿಗೆ ಸಂಬಂಧಿಸಿದಂತೆ ಬಲಿ ಕೊಡುವ ಬಗ್ಗೆ ಜನರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಬಲಿ ಕೊಡಬೇಕು ಎಂದು ಹೇಳುತ್ತಾರೆ. ಕೆಲವರು ಯಾರಿಗೂ ಕೆಟ್ಟದ್ದು ಮಾಡದ, ಮುಗ್ಧ ಪ್ರಾಣಿಗಳ ಬಲಿ ಕೊಡಬಾರದು, ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ, ಎಂದು ಹೇಳುತ್ತಾರೆ. *ಪ್ರಶ್ನೆ*: ಹಾಗಾದರೆ ಬಲಿ ಎಂದರೇನು ? ಈ ಪ್ರಶ್ನೆಗೆ ಸಿಗುವ ಸರಿಯಾದ ಉತ್ತರವೆಂದರೆ "ತ್ಯಾಗ"  ಮಾಡುವುದು. *ಪ್ರಶ್ನೆ*: ತ್ಯಾಗ ಎಂದರೇನು ? ಈ ಪ್ರಶ್ನೆಗೆ ಉತ್ತರ, ನನಗೆ ಸಂಬಂಧಿಸಿದುದು, ನನ್ನ ಸ್ವಂತದ್ದು ಏನಿದೆ ? ಅದನ್ನು ಕಳೆದುಕೊಳ್ಳುವುದೇ‌ ತ್ಯಾಗ. *ಪ್ರಶ್ನೆ*: ದೇವರು ಬಲಿ ಅಥವಾ ತ್ಯಾಗ ಬಯಸುತ್ತಾನೆಯೇ ? ಈ ಪ್ರಶ್ನೆಗೆ ಉತ್ತರ, ದೇವರನ್ನು ಕರುಣಾಮಯಿ, ದಯಾಮಯಿ ಎಂದು ಹೇಳುತ್ತೇವೆ.  *ಪ್ರಶ್ನೆ: ದೇವರು ಕೇವಲ ಮನುಷ್ಯನಿಗೆ ಮಾತ್ರ ಕರುಣಾಮಯಿ, ದಯಾಮಯಿ ಆಗಿದ್ದಾನೆಯೇ ?....* *ಉತ್ತರ*:: ಎಲ್ಲಾ ಪ್ರಾಣಿಗಳು ದೇವರ ಸೃಷ್ಠಿ. ಹೀಗಾಗಿ ಎಲ್ಲಾ ಪ್ರಾಣಿಗಳಿಗೂ ದೇವರು ಕರುಣಾಮಯಿ, ದಯಾಮಯಿ ಆಗಿದ್ದಾನೆ. ಈ ಕಾರಣದಿಂದ ದೇವರು ಪ್ರಾಣಿ ಬಲಿ ಬಯಸುತ್ತಾನೆ ಎನ್ನುವುದು ತಪ್ಪಾಗುತ್ತದೆ. ದೇವರು ನಮ್ಮ ಸ್ವಂತದ್ದು ಏನಿದೆ ? "ಆ ನಮ್ಮ ಸ್ವಂತದ್ದನ್ನು ತನಗೆ ಬಲಿ ನೀಡು"  ಎಂದು ಬಯಸುತ್ತಾನೆ. *ಪ್ರಶ್ನೆ* : ಈ ಜಗತ್ತಿನಲ್ಲಿ ನಮ್ಮ ಸ್ವಂತದ್ದು ಏನಿದೆ ? *ಉತ್ತರ*:  ...
Image
  *"ದೀಪಾವಳಿ ಹಬ್ಬದ ಮಹತ್ವವೇನು ?"* * ದೀಪ ಎಂದರೆ ಬೆಳಕು, ದೀಪಗಳ ಸಾಲಿನ ಬೆಳಕಿನ ಹಬ್ಬವೇ ದೀಪಾವಳಿ.  * ಈ ರಾತ್ರಿ ಲಕ್ಷ್ಮಿ ಮಾತೆ ಭೂಲೋಕದಲ್ಲಿ ಸಂಚರಿಸಿ ತನ್ನ ಭಕ್ತರನ್ನು ಹರಸುತ್ತಾರೆ, ಎಂದು ನಂಬಲಾಗಿದೆ. ಈ ಕಾರಣದಿಂದ ಲಕ್ಷ್ಮಿ ಪೂಜೆಯನ್ನು ಈ ಸಂದರ್ಭದಲ್ಲಿ ಮಾಡುತ್ತಾರೆ.  * ಕೆಲವು ಗ್ರಂಥಗಳ ಪ್ರಕಾರ ಸಮುದ್ರ ಮಥನದ ಸಮಯದಲ್ಲಿ ಈ ರಾತ್ರಿಯೇ ಲಕ್ಷ್ಮಿಯ ಪ್ರಕಟವಾಯಿತು. ಈ ಕಾರಣದಿಂದಲೂ ಈ ರಾತ್ರಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ.  * ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬರುವಾಗ ಆತನನ್ನು ಸ್ವಾಗತಿಸಲು ಈ ಸಮಯದಲ್ಲಿ ದೀಪಗಳ ಸಾಲನ್ನು ಹಚ್ಚಲಾಯಿತು, ಎಂದು ಹೇಳಲಾಗಿದೆ. * ಇಡೀ ವರ್ಷದಲ್ಲಿ ಅತ್ಯಂತ ಕತ್ತಲೆಯ ರಾತ್ರಿ ದೀಪಾವಳಿ ಅಮಾವಾಸ್ಯೆಯ ರಾತ್ರಿ ಎನ್ನಲಾಗಿದ್ದು, ಈ ಕಾರಣದಿಂದ, ಕತ್ತಲಿನಿಂದ ಬೆಳಕಿನ ಕಡೆಗೆ ನಾವು ಚಲಿಸಬೇಕು ಎನ್ನುವ ಸೂಚಕವಾಗಿ ದೀಪಗಳನ್ನು ಹಚ್ಚಲಾಗುತ್ತದೆ. * ಹೊರಗಡೆ ಜಗತ್ತಿನಲ್ಲಿ ಕತ್ತಲನ್ನು ಹೋಗಲಾಡಿಸಲು ದೀಪ ಹಚ್ಚುವುದು, ಸಾಮಾನ್ಯ ಮಟ್ಟದ ಜನರ ಪ್ರಕ್ರಿಯೆ.  * ಮೇಲ್ಮಟ್ಟದ ವ್ಯಕ್ತಿಗಳಿಗೆ ದೀಪಗಳ ಹಣತೆ ಹಚ್ಚುವುದು ಮಹತ್ವದ ಕೆಲಸವಲ್ಲ. ಅವರು ತಮ್ಮ ಅಂತರಂಗದಲ್ಲಿ ಕತ್ತಲೆಯೆನ್ನುವ  ಅಜ್ಞಾನ ಹೋಗಲಾಡಿಸಿ, ಬೆಳಕು ಎನ್ನುವ ಜ್ಞಾನವನ್ನು ಹೊಂದುವುದಕ್ಕೆ ಮಹತ್ವ ಕೊಡುತ್ತಾರೆ.  ಉದಾಹರಣೆಗೆ : ಒಂದು ಮನೆಯಲ್ಲಿ ನಾವು ಇರುತ್ತೇವೆ. ಹೀಗಾಗಿ ಆ ಮನೆಯನ್ನ...
Image
 *"ದೇವರ ಮಕ್ಕಳು ಸಹ ಅಧರ್ಮದ ದಾರಿ ಹಿಡಿದರೆ, ಅವರ ಅವನತಿ ಖಂಡಿತ"* ಪುರಾಣಗಳ ಪ್ರಕಾರ ವರಾಹ ರೂಪ ಧರಿಸಿ ಭೂದೇವಿಯನ್ನು ಉದ್ದಾರ ಮಾಡುವಾಗ, ವಿಷ್ಣುವಿನ ಅಂಶ ಭೂದೇವಿಯ ಗರ್ಭದಲ್ಲಿ ಅಂಕುರಿಸಿತು. ಇದು ಮುಂದೆ ನರಕಾಸುರ ಎನ್ನುವ ಬಾಲಕನ ಜನ್ಮಕ್ಕೆ ಕಾರಣವಾಯಿತು.  ಈತ ಈಗಿನ ಅಸ್ಸಾಂ ಆಗಿನ ಪ್ರಾಜ್ಜೋತಿಷಪುರದ ರಾಜ್ಯವನ್ನು ಆಳುತ್ತಿದ್ದ. ನರಕಾಸುರ ಬ್ರಹ್ಮನ ಕುರಿತು ತಪಸ್ಸು ಮಾಡಿ ವರಗಳನ್ನು ಪಡೆದ.  ತನ್ನ ಶಕ್ತಿಯ ಅಹಂಕಾರದಿಂದ ಅಧರ್ಮದ ಕೆಲಸಗಳಲ್ಲಿ ತೊಡಗಿದ. ಈತ ಹದಿನಾರು ಸಾವಿರ ಸ್ತ್ರೀಯರನ್ನು ಅಪಹರಿಸಿ ತನ್ನ ಬಂಧನದಲ್ಲಿಟ್ಟಿದ್ದ.  ಈತನ ಅಧರ್ಮ ಹೆಚ್ಚಿದ ಕಾರಣ ಶ್ರೀಕೃಷ್ಣ ಈತನನ್ನು ಸಂಹಾರ ಮಾಡಿ, ಈತನ ಮಗ ಭಗದತ್ತನನ್ನು ಪ್ರಾಜ್ಜೋತಿಷಪುರದ ರಾಜನನ್ನಾಗಿ ಪಟ್ಟಾಭಿಷೇಕ ಮಾಡಿದ. ಆತನ ಬಂಧನದಲ್ಲಿಟ್ಟಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಂಧನದಿಂದ ಮುಕ್ತಗೋಳಿಸಿದ. ಇದು ನರಕ ಚತುರ್ದಶಿಯಂದು ನಡೆಯಿತು ಎಂದು ಹೇಳಲಾಗುತ್ತದೆ. ಆದ್ದರಿಂದ ಇಂದು ನರಕ ಚತುರ್ದಶಿ ಆಚರಿಸಲಾಗುತ್ತಿದೆ. ("ಮುಂದೆ ಹದಿನಾರು ಸಾವಿರ ಸ್ತ್ರೀಯರು ತಮ್ಮ ರಾಜ್ಯಗಳಿಗೆ ಹೋಗದೆ, ತಮ್ಮನ್ನು ಬಂಧನದಿಂದ ಮುಕ್ತಗೋಳಿಸಿದ ಶ್ರೀಕೃಷ್ಣನನ್ನು ಮದುವೆಯಾಗುತ್ತಾರೆ." ) "ನರಕಾಸುರ ಹಾಗೆ ನೋಡಿದರೆ, ವಿಷ್ಣುವಿನ (ಅಥವಾ ಶ್ರೀಕೃಷ್ಣನ) ಮಗನೇ. ಆದರೆ ಆತನ ಅಹಂಕಾರ ಹೆಚ್ಚಿ ಅಧರ್ಮದ ಕೆಲಸಗಳಲ್ಲಿ ತೊಡಗಿದ ಕಾರಣ ಸ್ವಂತ ಮಗನನ್ನು ಸಹ ವಿಷ್ಣು ಅವತಾರಿ ...
Image
 *"ತಾನು ಅನುಭವಿಸಿದ ಕಷ್ಟಗಳಿಗೆ ಯಾರನ್ನು ದೂರದೆ, ಸಹಿಸಿಕೊಂಡ ಸೀತಾ ಮಾತೆಯ ತಿಳುವಳಿಕೆ ಯಾವುದು ?"* ಸೀತಾ ಮಾತೆ ಕಷ್ಟಗಳನ್ನು ಅನುಭವಿಸುವಾಗ ತನಗೆ ತಾನು ಹೇಳಿಕೊಂಡ ತಿಳುವಳಿಕೆ ಮಾತನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. .  ಕಷ್ಟಗಳನ್ನು ಸಹಿಸುವಾಗ ಸೀತಾ ಮಾತೆಯಲ್ಲಿಂದ್ದಂತಹ ತಿಳುವಳಿಕೆಯ ಬಗ್ಗೆ ಈಗ ಗಮನಹರಿಸೋಣ.  * ತನ್ನ (ಸೀತಾ ಮಾತೆಯ) ಅತ್ತೆ, ತನ್ನ ಗಂಡನಿಗೆ ಮಾತ್ರ ವನವಾಸ ಕೇಳಿದಳು. ಆದರೆ ಪತ್ನಿ ಧರ್ಮದ ಯೋಚನೆಯಿಂದ ಸ್ವ ಇಚ್ಛೆಯಿಂದ ಸೀತಾ ಮಾತೆ ವನವಾಸ ಸ್ವೀಕರಿಸಿದರು.  * ವನವಾಸದ ಕಷ್ಟಗಳನ್ನು ಅನುಭವಿಸುವಾಗಲೇ, ರಾವಣನಿಂದ ಪತಿ ವಿರಹದ ನೋವು ಅನುಭವಿಸಿದಳು.  * ರಾವಣ ರಾಜ್ಯದಲ್ಲಿ ಅನೇಕ ರಾಕ್ಷಸಿಯರ ಕಷ್ಟ ಸಹಿಸಿದಳು. * ಮತ್ತೆ ಅಯೋಧ್ಯೆಗೆ ಬಂದಾಗ, ನಿಷಾದ ಜನರ ದೂಷಣೆಯ ಮಾತುಗಳ ನೋವನ್ನು ಅನುಭವಿಸಿದಳು.  * ಕಡೆಗೆ ರಾಜಧರ್ಮದ ಹೆಸರಿನಲ್ಲಿ, ತುಂಬು ಗರ್ಭಿಣಿಯಿರುವಾಗ ಸ್ವಂತ ಗಂಡನಿಂದ, ವನವಾಸಕ್ಕೆ ಕಳುಹಿಸಲ್ಪಟ್ಟಳು. ಇಷ್ಟೆಲ್ಲಾ ಕಡುಕಷ್ಟ ಅನುಭವಿಸಿದರು ಸಹ ಎಷ್ಟು ಜನರಿಗೆ ಎಷ್ಟು ರೀತಿಯಲ್ಲಿ ಸೀತಾ ಮಾತೆ ದೂಷಣೆ ಮಾಡಿದರು ? ಎನ್ನುವುದನ್ನು ನಾವು ಕೇಳಿಲ್ಲ, ಓದಿಲ್ಲ. ಇಷ್ಟೊಂದು ಕಷ್ಟಗಳನ್ನು ಸಹಿಸಿದರ ಹಿಂದೆ ಅವರಲ್ಲಿ ಇದ್ದಂತಹ ಯೋಚನೆಯೇನು ? ಎನ್ನುವುದನ್ನು ನಾವು ತಿಳಿದುಕೊಳ್ಳುವುದು ಅವಶ್ಯವಾಗಿದೆ.  ಸೀತಾ ಮಾತೆಯಲ್ಲಿದ್ದಂತಹ ಯೋಚನೆಯೆಂದರೆ,  "*ನಾವು ಜಗತ್ತಿನಿಂದ...
Image
*"ಸೀತಾ ಮಾತೆ ಭೂಮಿಯಿಂದ ಜನ್ಮ ಪಡೆಯಲು ಕಾರಣ - ಭಾಗ - 3"* *"ಸಂಚಿಕೆ ಪ್ರಶ್ನೆ : ಸೀತಾ ಮಾತೆ, ಭೂಲೋಕದ ಜನರ ಕುಕರ್ಮಗಳ‌ ಫಲವನ್ನು ಹೇಗೆ ಅನುಭವಿಸಿ ನಾಶ ಮಾಡಿದರು ?"* ಇದನ್ನು ತಿಳಿದುಕೋಳ್ಳಲು ಒಂದು ಉದಾಹರಣೆ ನೋಡೋಣ. ಇಬ್ಬರು ಒಂದೇ ವಯಸ್ಸಿನ ವ್ಯಕ್ತಿಗಳು ಮೇಲಿನಿಂದ ಕೆಳಗಡೆ ಬಿದ್ದಿದ್ದಾರೆ. ಇಬ್ಬರಿಗೂ ಆಗುವ ನೋವಿನ ಅನುಭವ ಒಂದೇ ಆಗಿರುತ್ತದೆಯೇ ? ಅಥವಾ ಬೇರೆ ಬೇರೆ ಆಗಿರುತ್ತದೆ ?  ಇದನ್ನು ತಿಳಿದುಕೊಳ್ಳಬೇಕಾದರೆ, ಇಬ್ಬರು ಒಂದೇ ಎತ್ತರದಿಂದ ಕೆಳಗಡೆ ಬಿದ್ದಿದ್ದಾರೆಯೇ ? ಅಥವಾ ಬೇರೆ ಬೇರೆ ಎತ್ತರದಿಂದ ಕೆಳಗಡೆ ಬಿದ್ದಿದ್ದಾರೆಯೇ? ಎನ್ನುವುದು ನಮಗೆ ಗೊತ್ತಾಗಬೇಕಾಗುತ್ತದೆ.  ಏಕೆಂದರೆ, ಒಬ್ಬರು ಒಂದು ಕಟ್ಟೆಯ ಮೇಲಿನಿಂದ ಬಿದ್ದರೆ, ಇನ್ನೊಬ್ಬರು ಒಂದು ಅಂತಸ್ತಿನ ಎತ್ತರದಿಂದ ಕೆಳಗೆ ಬಿದ್ದರೆ ನೋವಿನ ಅನುಭವದಲ್ಲಿ ವ್ಯತ್ಯಾಸವಾಗುತ್ತದೆ. ಕಟ್ಟೆಯಿಂದ ಬಿದ್ದವರಿಗೆ ನೋವು ಕಡಿಮೆಯಾಗುತ್ತದೆ. ಒಂದು ಅಂತಸ್ತು ಎತ್ತರದಿಂದ ಬಿದ್ದವರಿಗೆ ಹೆಚ್ಚು ನೋವಾಗುತ್ತದೆ. ಇನ್ನೊಂದು ಉದಾಹರಣೆ ನೋಡೋಣ.  ಈಗಿನ ಸಮಯದಲ್ಲಿ ನಾವೆಲ್ಲರು ಸಾಮಾನ್ಯವಾಗಿ ನಡೆಯಲು ಚಪ್ಪಲಿಯನ್ನು ಹಾಕಿಕೊಳ್ಳುತ್ತೇವೆ.  * ಆದರೂ ಒಂದು ವೇಳೆ ನಮಗೆ ಕಾಲಿಗೆ ಮುಳ್ಳು ಚುಚ್ಚಿದಾಗ ಎಷ್ಟೊಂದು ನೋವಾಗಬಹುದು ? * ಅದೇ ರೀತಿಯ ಮುಳ್ಳು ದಿನನಿತ್ಯ ಕಾಡಿನಲ್ಲಿ ತಿರುಗುವ ಜನರಿಗೆ ಚುಚ್ಚಿದಾಗ ನಮ್ಮಷ್ಟೇ ನೋವಾಗುತ್ತದೆಯೇ ? * ಅದೇ ರೀತಿಯ ಮುಳ್ಳು ಕೋಟ್ಯಾ...