Posts

Showing posts from June, 2026
Image
 ಅಧಿಕ ಮಾಸ.  ಅಧಿಕ ಮಾಸ, ಅಧಿಕ ಮಾಸ ಈಗ ಎಲ್ಲಾ ಕಡೆ ಬಹಳಷ್ಟು ಕೇಳಿ ಬರುತ್ತಿರುವ ಶಬ್ದ. ಅಧಿಕ ಮಾಸ ಹಾಗೆ ಎಂದರೇನು ? ಎನ್ನುವ ಪ್ರಶ್ನೆ ಎಲ್ಲರ ಮನಸಿನಲ್ಲಿರುತ್ತದೆ. ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಈ ವಿಷಯದ ಬಗ್ಗೆ ಗಮನಹರಿಸೋಣ. ಹಿಂದೂ ಧರ್ಮದ ಹಬ್ಬಗಳು ಹೆಚ್ಚು ಕಡಿಮೆ ಒಂದೇ ರೀತಿಯ ಕಾಲದಲ್ಲಿ ಬರುತ್ತವೆ. ಉದಾಹರಣೆಗೆ, ಯುಗಾದಿ ಬೇಸಿಗೆ ಆರಂಭದಲ್ಲಿಯೇ ಬರುತ್ತದೆ. ಗಣೇಶ ಹಬ್ಬ, ಮಳೆಗಾಲದಲ್ಲಿಯೇ ಬರುತ್ತದೆ. ದಸರಾ ದೀಪಾವಳಿ ಚಳಿಗಾಲ ಸಂದರ್ಭದಲ್ಲಿಯೇ ಬರುತ್ತದೆ.  ಆದರೆ ಮುಸ್ಲಿಂ ಧರ್ಮದ ರಂಜಾನ್ ಹಬ್ಬ, ಒಂದು ಸಲ ಮಳೆಗಾಲದಲ್ಲಿ ಬಂದರೆ, ಒಂದು ಸಲ ಚಳಿಗಾಲ, ಇನ್ನೊಂದು ಸಲ ಬೇಸಿಗೆಯಲ್ಲಿ ಬರುತ್ತದೆ.  ಇದಕ್ಕೆ ಕಾರಣ ಮುಸ್ಲಿಂ ಧರ್ಮ ಪೂರ್ಣವಾಗಿ ಚಂದ್ರ ವರ್ಷದ ಕ್ಯಾಲೆಂಡರ್ ಮೇಲೆ ಅವಲಂಬಿತವಾಗಿದೆ.  ಸೂರ್ಯ ಆಧಾರಿತ ಕ್ಯಾಲೆಂಡರ್ ಗೆ ಒಂದು ವರ್ಷಕ್ಕೆ 365 ದಿನಗಳು ಬೇಕಾದರೆ, ಒಂದು ಚಂದ್ರ ವರ್ಷಕ್ಕೆ 354 ದಿನಗಳನ್ನು ತೆಗೆದುಕೊಳ್ಳುತ್ತದೆ.  *ಸೂರ್ಯ ವರ್ಷ ಎಂದರೇನು ?* ಭೂಮಿ ಸೂರ್ಯನಿಗೆ ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಸಮಯ 365 ದಿನ. ಇದನ್ನು ಸೌರಮಾನ ಕಾಲ ಗಣನೆ ಎಂದು ಕರೆಯುತ್ತಾರೆ. *ಚಂದ್ರ ವರ್ಷ ಎಂದರೇನು ?* ಚಂದ್ರ ಭೂಮಿಯ ಸುತ್ತಲೂ ಹನ್ನೆರಡು ಸುತ್ತು ಹಾಕಲು ತೆಗೆದುಕೊಳ್ಳುವ ಸಮಯ 354 ದಿನ. ಇದನ್ನು ಚಾಂದ್ರಮಾನ ಕಾಲ ಗಣನೆ ಎಂದು ಕರೆಯುತ್ತಾರೆ. ಹಿಂದೂ ಧರ್ಮದ ಕಾಲಗಣನೆ ಸೌ...
Image
 (ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಲೇಖನ) *ಇಷ್ಟು ದೊಡ್ಡ ಜಗತ್ತಿನಲ್ಲಿ ನಾನು ಒಂದು ಸಣ್ಣ ಕಣ.  ಈ ಜಗತ್ತಿಗೆ ನಾನೇನು ಒಳಿತು ಮಾಡಲು ಸಾಧ್ಯ ?* ವರ್ಷದಿಂದ ವರ್ಷಕ್ಕೆ ಬೇಸಿಗೆಯ ಬಿಸಿಲು ಹೆಚ್ಚುತ್ತಿದೆ.  ಮಳೆಗಾಲದಲ್ಲಿ ಮಳೆ ಕಡಿಮೆಯಾಗುತ್ತಿದೆ.  ಭೂಮಿಯಲ್ಲಿ ಫಲವತ್ತತೆ ಮತ್ತು ನೀರು ಇಂಗುವ ಸಾಮರ್ಥ್ಯ ಕಡಿಮೆಯಾಗುತ್ತಿದೆ.  ಗಾಳಿ ವರ್ಷದಿಂದ ವರ್ಷಕ್ಕೆ ಹೆಚ್ಚು ಕಲುಷಿತಗೊಳ್ಳುತ್ತಿದೆ. ಇದು ಹೀಗೆ ಮುಂದುವರೆದರೆ, ಮುಂಬರುವ ದಿನಗಳಲ್ಲಿ ಭೂಮಿಯಲ್ಲಿ ಜೀವಿಗಳು ಬದುಕಲು ಸಾಧ್ಯವೇ  ? ಇವೆಲ್ಲಾ ಪ್ರಶ್ನೆಗಳನ್ನು ಕೇಳಿದಾಗ ಬಹುತೇಕ ಜನ ಈ ಜಗತ್ತಿಗೆ ಹೋಲಿಸಿದರೆ ನಾನು, ಒಂದು ಸಣ್ಣ ಕಣ. ನನ್ನಿಂದ ಈ ಜಗತ್ತಿಗೆ ಏನು ಒಳ್ಳೆಯದು ಮಾಡಲು ಸಾಧ್ಯ? ಎಂದೆ ಬಹುತೇಕ  ಹೇಳುತ್ತಾರೆ.  ಆದರೆ  ಹೀಗೆ ಹೇಳಿ ನುಣುಚಿಕೊಳ್ಳುವುದು ಮನುಷ್ಯನ ರೂಪದಲ್ಲಿ ಶ್ರೇಷ್ಠ ಜೀವಿಯಾದ ನಮ್ಮೆಲ್ಲರ ಬೇಜವಾಬ್ದಾರಿಯ ಲಕ್ಷಣ.  ಒಂದು ಹನಿ ನೀರಿಗೆ, ಒಂದು ರೂಪಾಯಿ ನಾಣ್ಯಕ್ಕೆ, ಒಂದು ಕಾಳು ಧಾನ್ನಕ್ಕೆ ಬಹಳ ದೊಡ್ಡ ಮಹತ್ವ ಇಲ್ಲದೆ ಇರಬಹುದು.  ಆದರೆ ಅದೇ ಹನಿ ಹನಿ ನೀರು ಕೂಡಿದಾಗ  ಸಾಗರ ಆಗುತ್ತದೆ. ಕಾಳು ಕಾಳು ಧಾನ್ಯ ಕೂಡಿದಾಗ ಅದುವೇ ದೊಡ್ಡ ರಾಶಿ ಆಗುತ್ತದೆ. ಒಂದೊಂದು ರೂಪಾಯಿ ಕೂಡಿಯೇ ಕೋಟ್ಯಂತರ ಸಂಪತ್ತು ಆಗುತ್ತದೆ.  ಹೀಗಾಗಿ ನನ್ನ ಒಬ್ಬನಿಂದ ಏನು ಸಾಧ್ಯ ? ಎನ್ನುವ ಮನಸ್ಥಿತಿಯನ್ನು ನ...
Image
 *ಸತ್ಯ ಜ್ಞಾನ ಮತ್ತು ಸಂಬಂಧಗಳ ದ್ವಂದ್ವಗಳು "ಸತ್ಯ ಜ್ಞಾನ ಮತ್ತು ಸಂಬಂಧಗಳ ಳ ದ್ವಂದ್ವಗಳು* ಸತ್ಯಜ್ಞಾನ ಹೇಳುತ್ತದೆ, ನಾವೆಲ್ಲರೂ ನಿಜವಾಗಿಯೂ ದೇಹಗಳಲ್ಲ. ನಾವು ರೂಪ, ಆಕಾರ ಗಾತ್ರ ಇಲ್ಲದ ಆತ್ಮಗಳು ಎಂದು.  ಇದನ್ನು ತಿಳಿಯಲು ವಿಸ್ತಾರವಾಗಿ ಹೇಳುವುದಾದರೆ, ನಮಗೆ ಹುಟ್ಟಿದಾಗ ಯಾವ ದೇಹ ಇತ್ತು (ಮಗುವಿನ ದೇಹ) ಅದು ಈಗ ಇಲ್ಲಾ. ಈಗ ದೇಹ ಯಾವ ರೀತಿಯಿದೆ ? ಅದು ಮುಂದೆ ಇರುವುದಿಲ್ಲ. ಇದರಿಂದ ನಮಗೆ ತಿಳಿಯುತ್ತದೆ, ದೇಹ ಅಂದರೆ ನಿರಂತರ ಬದಲಾಗುತ್ತಿದೆ.  ಆದರೆ ಈ ಹಿಂದಿನ ಸ್ಥಿತಿಯ ದೇಹದೊಳಗೆ ಇದ್ದ ನಾವು (ಆತ್ಮಗಳು) ಅದೇ ಆಗಿದ್ದೇವೆ, ಈಗಲೂ ಅದೇ ಇದ್ದೇವೆ. ನಾಳೆ ದೇಹ ಇಲ್ಲವಾದಾಗಲೂ ಅದೇ ಆಗಿರುತ್ತೇವೆ.  ಈ ಸತ್ಯ ಜ್ಞಾನವನ್ನು ನಾವು ಎಂದಿಗೂ ಮರೆಯಬಾರದು. ಏಕೆಂದರೆ  1. ಈ ಸತ್ಯ ಜ್ಞಾನ ಇದ್ದಾಗ ಮಾತ್ರ ನಾನು ಹುಟ್ಟಿಲ್ಲದ, ಸಾವಿಲ್ಲದ ಈ ಜಗತ್ತಿನ ಶಾಶ್ವತ ಅಸ್ತಿತ್ವ ಎನ್ನುವ ಸಾವಿಗೆ ಅಂಜದ ಸ್ಥಿತಿ ನಮಗೆ ಬರುತ್ತದೆ.  2. ನಾವು ಸಾಧ್ಯವಾದಷ್ಟು ದೇಹಕ್ಕೆ ಅಂಟಿಕೊಳ್ಳದೇ ಇರಲು ಸಾಧ್ಯವಾಗುತ್ತದೆ. 3. ನಾವು ದೇಹವಲ್ಲ, ಎಂದು ತಿಳಿದಾಗ ಈ ದೇಹ ಜಗತ್ತಿನ ಅನುಭವ ನೀಡಲು ನಮಗೆ ಎಷ್ಟೊಂದು ಸಹಾಯ ಮಾಡುತ್ತಿದೆ ? ಎನ್ನುವುದು ತಿಳಿಯುತ್ತದೆ. 4. ಕಣ್ಣುಗಳು, ಕಿವಿಗಳು, ನಾಲಿಗೆ, ಎಲ್ಲಾ ಇಂದ್ರಿಯಗಳು ಜಗತ್ತಿನ ಸೌಂದರ್ಯವನ್ನು ಹಾಗೂ ಜಗತ್ತನ್ನು ಅರಿಯಲು ನಮಗೆ ಎಷ್ಟೊಂದು ಉಪಕಾರ ಮಾಡುತ್ತಿವೆ ? ಎನ್ನುವ ಅರಿ...