(ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಲೇಖನ)
*ಇಷ್ಟು ದೊಡ್ಡ ಜಗತ್ತಿನಲ್ಲಿ ನಾನು ಒಂದು ಸಣ್ಣ ಕಣ. ಈ ಜಗತ್ತಿಗೆ ನಾನೇನು ಒಳಿತು ಮಾಡಲು ಸಾಧ್ಯ ?*
ವರ್ಷದಿಂದ ವರ್ಷಕ್ಕೆ ಬೇಸಿಗೆಯ ಬಿಸಿಲು ಹೆಚ್ಚುತ್ತಿದೆ.
ಮಳೆಗಾಲದಲ್ಲಿ ಮಳೆ ಕಡಿಮೆಯಾಗುತ್ತಿದೆ.
ಭೂಮಿಯಲ್ಲಿ ಫಲವತ್ತತೆ ಮತ್ತು ನೀರು ಇಂಗುವ ಸಾಮರ್ಥ್ಯ ಕಡಿಮೆಯಾಗುತ್ತಿದೆ.
ಗಾಳಿ ವರ್ಷದಿಂದ ವರ್ಷಕ್ಕೆ ಹೆಚ್ಚು ಕಲುಷಿತಗೊಳ್ಳುತ್ತಿದೆ.
ಇದು ಹೀಗೆ ಮುಂದುವರೆದರೆ, ಮುಂಬರುವ ದಿನಗಳಲ್ಲಿ ಭೂಮಿಯಲ್ಲಿ ಜೀವಿಗಳು ಬದುಕಲು ಸಾಧ್ಯವೇ ?
ಇವೆಲ್ಲಾ ಪ್ರಶ್ನೆಗಳನ್ನು ಕೇಳಿದಾಗ ಬಹುತೇಕ ಜನ ಈ ಜಗತ್ತಿಗೆ ಹೋಲಿಸಿದರೆ ನಾನು, ಒಂದು ಸಣ್ಣ ಕಣ. ನನ್ನಿಂದ ಈ ಜಗತ್ತಿಗೆ ಏನು ಒಳ್ಳೆಯದು ಮಾಡಲು ಸಾಧ್ಯ? ಎಂದೆ ಬಹುತೇಕ ಹೇಳುತ್ತಾರೆ.
ಆದರೆ ಹೀಗೆ ಹೇಳಿ ನುಣುಚಿಕೊಳ್ಳುವುದು ಮನುಷ್ಯನ ರೂಪದಲ್ಲಿ ಶ್ರೇಷ್ಠ ಜೀವಿಯಾದ ನಮ್ಮೆಲ್ಲರ ಬೇಜವಾಬ್ದಾರಿಯ ಲಕ್ಷಣ.
ಒಂದು ಹನಿ ನೀರಿಗೆ, ಒಂದು ರೂಪಾಯಿ ನಾಣ್ಯಕ್ಕೆ, ಒಂದು ಕಾಳು ಧಾನ್ನಕ್ಕೆ ಬಹಳ ದೊಡ್ಡ ಮಹತ್ವ ಇಲ್ಲದೆ ಇರಬಹುದು.
ಆದರೆ ಅದೇ ಹನಿ ಹನಿ ನೀರು ಕೂಡಿದಾಗ ಸಾಗರ ಆಗುತ್ತದೆ. ಕಾಳು ಕಾಳು ಧಾನ್ಯ ಕೂಡಿದಾಗ ಅದುವೇ ದೊಡ್ಡ ರಾಶಿ ಆಗುತ್ತದೆ. ಒಂದೊಂದು ರೂಪಾಯಿ ಕೂಡಿಯೇ ಕೋಟ್ಯಂತರ ಸಂಪತ್ತು ಆಗುತ್ತದೆ.
ಹೀಗಾಗಿ ನನ್ನ ಒಬ್ಬನಿಂದ ಏನು ಸಾಧ್ಯ ? ಎನ್ನುವ ಮನಸ್ಥಿತಿಯನ್ನು ನಾವು ಬಿಟ್ಟುಬಿಡಬೇಕು.
ಈ ಜಗತ್ತಿನಿಂದ... ಈ ಜಗತ್ತಿನ ಗಾಳಿ, ನೀರು, ಭೂಮಿ, ಬೆಳಕು ಇವುಗಳಿಂದ ನಾವು ದಿನ ನಿತ್ಯ , ಪ್ರತಿ ಕ್ಷಣ ಸಹಾಯ ತೆಗೆದುಕೊಳ್ಳುತ್ತಿದ್ದೇವೆ, ಎಂದರೆ ನಾವು ಇವುಗಳ ಋಣದಲ್ಲಿ ಇದ್ದೇವೆ, ಎಂದರ್ಥ.
ಇವುಗಳಿಂದ ಎಷ್ಟೊಂದು ಸಹಾಯ ನಾವು ಪಡೆಯುತ್ತೇವೆಯೋ ? ಅಷ್ಟೂ, ನಮ್ಮಿಂದ ಪುನಃ ವಾಪಸ್ಸು ತೀರಿಸಲು ನಮಗೆ ಸಾಧ್ಯವಾಗದೆ ಇರಬಹುದು. ಆದರೆ ನಮ್ಮಿಂದ ಎಷ್ಟು ಸಾಧ್ಯವೋ? ಅಷ್ಟು ಋಣವನ್ನು ಪುನಃ ವಾಪಸ್ಸು ಪ್ರಕೃತಿಗೆ ತೀರಿಸಲು ನಾವು ಪ್ರಯತ್ನಿಸಬೇಕು. ಇದು ಒಬ್ಬ ಜವಾಬ್ದಾರಿಯಳ್ಳ ಮನುಷ್ಯನ ಲಕ್ಷಣ.
ನಾವು ಒಂದು ದಿನ ನೀರು ಕುಡಿಯದೆ ಬದುಕಲು ಆಗುವುದಿಲ್ಲ. ಒಂದು ಐದು ನಿಮಿಷ (ಆಮ್ಲಜನಕ) ಗಾಳಿಯನ್ನು ಉಸಿರಾಡದೆ ಬದುಕಲು ಸಾಧ್ಯವಿಲ್ಲ.
ಇಂದು, ಎಷ್ಟೊಂದು ಬೆಳಕು ನಮಗೆ ಸಿಗುತ್ತಿದೆ ? ಎಷ್ಟೊಂದು ನೀರು ನಮಗೆ ಸಿಗುತ್ತಿದೆ ? ಎಷ್ಟೊಂದು ಗಾಳಿ ನಮಗೆ ಸಿಗುತ್ತಿದೆ ?
ಇವುಗಳ ಮರುಪಾವತಿಗೆ ನಾವೇನಾದರೂ ಮಾಡುತ್ತಿದ್ದೇವೆಯೇ ? ಇದರ ಬಗ್ಗೆ ಕಿಂಚಿತ್ತಾದರೂ ಯೋಚಿಸುತ್ತಿದ್ದೇವೆಯೇ ?
ಹೀಗೆ ಕೇಳಿದಾಗ ನಮ್ಮ ಮನಸ್ಸಿನಲ್ಲಿ ಬರುವ ಯೋಚನೆಯೇ ಭೂಮಿ, ನೀರು, ಗಾಳಿ ಎಲ್ಲವೂ ನಿರ್ಜೀವ. ಇದಕ್ಕಾಗಿ ನಾನು ಏನಾದರೂ ಮಾಡಿದರೆ ನನಗೇನು ಸಿಗುತ್ತದೆ ? ಎನ್ನುವ ವಿಚಾರ
ಸರ್ವಜ್ಞ ತಮ್ಮ ವಚನದಲ್ಲಿ ಹೇಳುತ್ತಾರೆ
ಕೊಟ್ಟಿದ್ದು ತನಗೆ
ಬಚ್ಚಿಟ್ಟಿದ್ದುದು ಪರರಿಗೆ
ಕೊಟ್ಟು ತಾನುಕೆಟ್ಟೆ, ಎನಬೇಡ
ಮುಂದೆ ಕಾದಿಹುದು ಬುತ್ತಿ ಸರ್ವಜ್ಞ.
ಸರ್ವಜ್ಞ ವಚನದ ಮೇಲಿನ ಸಾಲಿನಂತೆ, ನಮ್ಮ ನೆಲ, ಜಲ, ಗಾಳಿ, ನೀರು ಇವುಗಳ ಒಳಿತಿಗೆ ನಾವು ಏನೇನೋ ಕೊಟ್ಟಾಗ ನಮಗೆ ಏನು ಸಿಗುತ್ತದೆ ? ಎನ್ನುವ ಭಾವನೆ ಬಹಳಷ್ಟು ಜನರಲ್ಲಿದೆ.
ನಾವು ಇವುಗಳಿಗಾಗಿ ನಮ್ಮ ಸಮಯ, ಶಕ್ತಿ, ಹಣವನ್ನು ವ್ಯಯಿಸಿದಾಗ ಆ ಕೂಡಲೇ ನಮಗೆ ಏನು ಸಿಗದೆ ಇರಬಹುದು.
ಆದರೆ ಈ ಜಗತ್ತು ಮೂಲತಃ ಕರ್ಮ ಭೂಮಿ. ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿರುವುದು ನಾವು ಮಾಡುವ ಕರ್ಮ.
ನಾವು ಇಂದು, ಒಂದು ಕೆಲಸ ಮಾಡುತ್ತಿದ್ದೇವೆ, ಅದರಿಂದ
* ಎಷ್ಟೋ ಜನರಿಗೆ ಲಾಭವಾಗುತ್ತದೆ.
* ಎಷ್ಟೋ ಜನರ ಜೀವನ ಉತ್ತಮವಾಗುತ್ತದೆ.
* ಇದರಿಂದ ಭೂಮಿಯಲ್ಲಿ ಜೀವಿಗಳು ಸಂತೋಷದಿಂದ ಬದುಕಲು ಅನುಕೂಲವಾಗುತ್ತದೆ,
ಎಂದರೆ ನಾವು ಶ್ರೇಷ್ಠ ಕೆಲಸ ಮಾಡುತ್ತಿದ್ದೇವೆ., ಎಂದರ್ಥ. ಕೆಟ್ಟ ಕೆಲಸಕ್ಕೆ ಕೆಟ್ಟ ಫಲ, ಇರುವ ಹಾಗೆ, ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ತಪ್ಪಿದ್ದಲ. ನಮ್ಮ ಜೀವನದಲ್ಲಿ ನಮ್ಮ ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ ನಾವು ಪಡೆದೆ ಪಡೆಯುತ್ತೇವೆ. ಹೀಗಾಗಿ ನಮ್ಮ ಪರಿಸರಕ್ಕೆ ನಮ್ಮಿಂದ ಏನಾದರೂ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸೋಣ.
ಇಂದು
* ನಮ್ಮ ಜೀವನದಲ್ಲಿ ನೂರಾರು ಕೊರತೆಗಳನ್ನು ನಾವು ಕಾಣುತ್ತಿರಬಹುದು.
* ನಮ್ಮ ಜೀವನದಲ್ಲಿ ಅನೇಕ ಅಸಮಾಧಾನಗಳು ಇರಬಹುದು.
* ನಾವು ಬದುಕಿನ ಅನೇಕ ಜಂಜಾಟದಲ್ಲಿ ಸಿಲುಕಿರಬಹುದು.
* ನಮಗೆ ಅನೇಕ ದುಃಖಗಳು ಇರಬಹುದು.
ಆದರೆ ನಾವು ಯಾವುದರಿಂದ ಇಂದು ಬದುಕುತ್ತಿದ್ದೇವೆ ?
ಅವುಗಳಿಂದ ಎಷ್ಟು ಸಹಾಯ ಪಡೆಯುತ್ತಿದ್ದೇವೆ ?
ಎನ್ನುವುದನ್ನು ಮರೆಯದಿರೋಣ.
ಇಷ್ಟು ದೊಡ್ಡ ಜಗತ್ತಿನಲ್ಲಿ ನಾನೊಂದು ಸಣ್ಣ ಕಣ. ನ್ನನ್ನಿಂದ ಜಗತ್ತಿಗೆ ಏನು ಒಳಿತು ಮಾಡಲು ಸಾಧ್ಯ ? ಎಂದು ಹೇಳದೆ, ಈ ಜಗತ್ತಿನ (ಗಾಳಿ, ನೀರು, ಜಲ, ಭೂಮಿ, ಜೀವನ ಜಗತ್ತು,) ಸಹಾಯಕ್ಕೆ ಪ್ರತಿಯಾಗಿ ಒಂದು ಚೂರು ಪ್ರತಿ ಸಹಾಯ ನಮ್ಮಿಂದ ಸಾಧ್ಯ ಆದಲ್ಲಿ, ಅದನ್ನು ಮಾಡಲು ಪ್ರಯತ್ನಿಸೋಣ.
ನಾವು ಪಡೆದಿರುವುದರಲ್ಲಿ, ಸ್ವಲ್ಪವಾದರೂ ಋಣ ತೀರಿಸಲು ಪ್ರಯತ್ನಿಸೋಣ. ನಮ್ಮ ಋಣದ ಭಾರವನ್ನು ಇಳಿಸಿಕೊಳ್ಳಲು (ಭಾರವಾದ ಮನಸ್ಸಿನಿಂದ ಹಗುರ ಮನಸ್ಸಿನವರಾಗಲು) ಕಾರ್ಯೋನ್ಮುಖರಾಗೋಣ.
ಎಲ್ಲರಿಗೂ ಒಳ್ಳೆಯದಾಗಲಿ
ಜಗತ್ತಿಗೂ... ಜಗತ್ತಿನ ಪರಿಸರಕ್ಕೂ ಒಳ್ಳೆಯದಾಗಲಿ.
ಓಂ ನಮಃ ಶಿವಾಯ
✍️ URAIN NAMAH
ಈ ಪದ ಸತ್ಯ ಯುಗಕ್ಕೆ ಮುನ್ನುಡಿ
ಈ ಪದ ಯುಗ ಪರಿವರ್ತನೆಗೆ ನಾಂದಿ
ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ



Comments
Post a Comment