"ಆಧುನಿಕತೆ ಎಂದರೇನು ? ಮನುಷ್ಯನನ್ನು ಮೇಲ್ಮಟ್ಟಕ್ಕೆ ಒಯ್ಯುವಂತಹದೇ ? ಅಥವಾ ಕೆಳ ಮಟ್ಟಕ್ಕೆ ಕರೆದೊಯ್ಯುವಂತಹದೇ ?" .
ಜಗತ್ತಿನಲ್ಲಿ ಅನೇಕಾನೇಕ ಜೀವಿಗಳಿವೆ ಪ್ರತಿ ಜೀವಿಗಳಿಗೆ ಆಹಾರ, ನಿದ್ರೆ, ಸುರಕ್ಷೆ, ಸಂತಾನೋತ್ಪತ್ತಿಯ ಮೂಲಭೂತ ಅವಶ್ಯಕತೆಗಳಿವೆ.
ಈ ಅವಶ್ಯಕತೆಗಳನ್ನು ಪಶು, ಪಕ್ಷಿ, ಪ್ರಾಣಿ, ಕೀಟಗಳು ತನ್ನ ಶಕ್ತಿ, ಸಾಮರ್ಥ್ಯದ ಅನುಸಾರ ಮಾಡಿಕೊಳ್ಳುತ್ತವೆ.
ಆದರೆ ಪ್ರಾಣಿಗಳಿಗೆ ಬುದ್ದಿಯಿರುವುದಿಲ್ಲ. ಬುದ್ಧಿ ಇದ್ದರೂ ನೀತಿ, ನಿಯಮಗಳನುಸಾರ ತಮ್ಮ ಅವಶ್ಯಕತೆಗಳನ್ನು ಪೂರ್ಣ ಮಾಡಿಕೊಳ್ಳಲು, ಅವುಗಳ ಬುದ್ದಿಯನ್ನು ಉಪಯೋಗಿಸುವುದಿಲ್ಲ.
ಇಂದು ಆಧುನಿಕ ಜಗತ್ತಿನಲ್ಲಿ ಯುವ ಜನತೆ, ಮನುಷ್ಯ ಶರೀರ ಹೊಂದಿಯೂ ತನ್ನ ಅವಶ್ಯಕತೆಗಳನ್ನು ಪ್ರಾಣಿಗಳಂತೆ ನೀತಿ ನಿಯಮಗಳಿಲ್ಲದೆ ಪೂರ್ಣ ಮಾಡಿಕೊಳ್ಳುವ ಬೆಳವಣಿಗೆ (ದೊಡ್ಡ ದೊಡ್ಡ ನಗರಗಳಲ್ಲಿ) ನಡೆಯುತ್ತಿದೆ.
ಈ ಮೊದಲು ನಗರಗಳಲ್ಲಿ ಒಂಟಿ ವಿಧ್ಯಾರ್ಥಿಗಳಿಗೆ, ಒಂಟಿ ಉದ್ಯೋಗಸ್ಥ ಯುವಕ, ಯುವತಿಯರಿಗೆ ಅನುಕೂಲವಾಗಲಿ ಎಂದು "ಪಾವತಿ ಅತಿಥಿ" Paying guest ಪಿ.ಜಿ ಎನ್ನುವ ಪದ್ಧತಿ ಬೆಳೆದಿತ್ತು. ಆಗ ಯುವಕ, ಯುವತಿಯರಿಗೆ ಪ್ರತ್ಯೇಕ ವಾಸಿಸುವ ಪಿ. ಜಿ ಗಳು ಇರುತ್ತಿದ್ದವು.
ಆದರೆ ಇಂದು ಅವಕ್ಕಾಗುವಂತಹ ವಿಷಯ ಕೇಳಿ ಬರುತ್ತಿದೆ. ಅದುವೇ ಸಹ ಜೀವನದ ಪಿ. ಜಿ. Co living PG (You can search, co living PG Whitefield). ಅಂದರೆ ಯುವಕ ಯುವತಿಯರು ಇಷ್ಟ ಬಂದವರ ಜೊತೆ, ಇಷ್ಟ ಇರುವವರೆಗೆ ಇರುವಂತಹ ಸಹ ಜೀವನದ ಪಿ. ಜಿ ಗಳು.
ಆಧುನಿಕತೆ ಎನ್ನುವುದು ಹಿಂದೆ ಇರುವಂತಹ ಸ್ಥಿತಿಗಿಂತ, ಇನ್ನೂ ಸುಧಾರಿಸಿದ ಸ್ಥಿತಿಯಾಗಿರಬೇಕು. ಹೊರತು, ಪುನಃ ಕೇಳಕ್ಕೆ ತಳ್ಳುವಂತಹ ಸ್ಥಿತಿಯಾಗಿರಬಾರದು.
ಜೀವಿಗಳ ಅವಶ್ಯಕತೆಗಳನ್ನು ನೀತಿ ನಿಯಮಗಳಿಲ್ಲದೆ, ಕೇವಲ ಶಕ್ತಿ, ಸಾಮರ್ಥ್ಯದ ಅನುಸಾರ ಪೂರ್ಣ ಮಾಡಿಕೊಳ್ಳುವುದು ಕೆಳಮಟ್ಟದ ಪ್ರಾಣಿಗಳ ಸ್ಥಿತಿ. ನಮ್ಮ ಅವಶ್ಯಕತೆಗಳನ್ನು ನೀತಿ ನಿಯಮಗಳನುಸಾರ ಪೂರ್ಣ ಮಾಡಿಕೊಳ್ಳುವುದು "ಮಾನ ಮರ್ಯಾದೆ ಇರುವ ಮಾನವನ ಸ್ಥಿತಿ".
ಆದರೆ ಆಧುನಿಕತೆಯ ಹೆಸರಿನಲ್ಲಿ ಯುವ ಜನತೆ ಪುನಃ ಹಿಂದಕ್ಕೆ ಅಂದರೆ ಕೆಳಮಟ್ಟಕ್ಕೆ ಹೋಗುತ್ತಿದೆ. ಇದು ಮಾನವೀಯತೆ ಕಳವಳಪಡುವ ಸ್ಥಿತಿಯಾಗಿದೆ.
ಇದರ ಕುರಿತು ಸಮಾಜದ ನೀತಿವಂತರು ಗಂಭೀರವಾಗಿ ಚಿಂತಿಸಿ, ಯುವ ಜನರಲ್ಲಿ ಮಾನವ ಮತ್ತು ಪಶು ಗುಣಗಳ ವ್ಯತ್ಯಾಸದ ಕುರಿತು ಜಾಗೃತಿ ಮೂಡಿಸಬೇಕಿದೆ.
ತನ್ಮೂಲಕ ಮನುಷ್ಯ ಶರೀರ ಹೊಂದಿದ ಮಾನವ, ಮಾನವೀಯ ಗುಣಗಳಿಂದ ದೈವೀಯ ಗುಣಗಳತ್ತ ಕರೆದೊಯ್ಯುವ ಕೆಲಸ ಮಾಡಬೇಕಿದೆ.
ಎಲ್ಲಾ ಜೀವಿಗಳು ಕೆಲಸ ಮಾಡುತ್ತವೆ. ಆದರೆ ಶುದ್ದ ಭಾವನೆ, ಒಳ್ಳೆಯ ಉದ್ದೇಶದಿಂದ ಎಲ್ಲಾ ಜೀವಿಗಳು ಕೆಲಸ ಮಾಡುವುದಿಲ್ಲ.
ಕೆಲಸಗಳಲ್ಲಿ ಶುದ್ಧ ಭಾವನೆ, ಒಳ್ಳೆಯ ಉದ್ದೇಶ ತರುವುದಕ್ಕಾಗಿಯೇ ಒಂದು ಕೆಲಸದ ಆರಂಭದಲ್ಲಿ ಸಂಸ್ಕಾರಗಳನ್ನು ನಮ್ಮ ಪೂರ್ವಜರು ಮಾಡಿದ್ದಾರೆ. Example Third photo ಆದರೆ ಇವುಗಳನ್ನು ಹಳೆಯ ಪದ್ಧತಿ ಹೆಸರಿನಲ್ಲಿ ಸಂಸ್ಕಾರಗಳನ್ನು ನಿರ್ಲಕ್ಷಿಸಲಾಗುತ್ತಿದೆ.
ಭಾವ ಶುದ್ಧಿ ಇಲ್ಲದ, ಒಳ್ಳೆಯ ಉದ್ದೇಶವಿಲ್ಲದ ಆಧುನಿಕತೆಯ ಪಶು ಸಮಾನ ಅನಾಚಾರ ಮತ್ತು ಮಾನವೀಯ ಸುಸಂಸ್ಕಾರದ ವ್ಯತ್ಯಾಸದ ಕುರಿತು ಇಂದಿನ ಪೀಳಿಗೆಗೆ ತಿಳುವಳಿಕೆ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.
ಭಾವನೆಗಳಲ್ಲಿ ಶುದ್ಧತೆ ಹಾಗೂ ಕೆಲಸಗಳಲ್ಲಿ ಒಳ್ಳೆಯ ಉದ್ದೇಶ ಇದ್ದಾಗ ಮಾತ್ರ ಸತ್ಯ ಯುಗ ನಿರ್ಮಾಣ ಮಾಡುವುದು ಸಾಧ್ಯ. ಭಾವನೆಗಳಲ್ಲಿ ಶುದ್ಧತೆ ಹಾಗೂ ಕೆಲಸಗಳಲ್ಲಿ ಒಳ್ಳೆಯ ಉದ್ದೇಶಕ್ಕಾಗಿ, ಉತ್ತಮ ಸಂಸ್ಕಾರ ನೀಡುವ ಕೆಲಸವನ್ನು ನಾವೆಲ್ಲರೂ ಮಾಡೋಣ.
ಎಲ್ಲರಿಗೆ ವಂದನೆಗಳು.
ಇಂತಿ ತಮ್ಮ
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ


Comments
Post a Comment