*"ದೇವರ ಮಕ್ಕಳು ಸಹ ಅಧರ್ಮದ ದಾರಿ ಹಿಡಿದರೆ, ಅವರ ಅವನತಿ ಖಂಡಿತ"*


ಪುರಾಣಗಳ ಪ್ರಕಾರ ವರಾಹ ರೂಪ ಧರಿಸಿ ಭೂದೇವಿಯನ್ನು ಉದ್ದಾರ ಮಾಡುವಾಗ, ವಿಷ್ಣುವಿನ ಅಂಶ ಭೂದೇವಿಯ ಗರ್ಭದಲ್ಲಿ ಅಂಕುರಿಸಿತು. ಇದು ಮುಂದೆ ನರಕಾಸುರ ಎನ್ನುವ ಬಾಲಕನ ಜನ್ಮಕ್ಕೆ ಕಾರಣವಾಯಿತು. 


ಈತ ಈಗಿನ ಅಸ್ಸಾಂ ಆಗಿನ ಪ್ರಾಜ್ಜೋತಿಷಪುರದ ರಾಜ್ಯವನ್ನು ಆಳುತ್ತಿದ್ದ. ನರಕಾಸುರ ಬ್ರಹ್ಮನ ಕುರಿತು ತಪಸ್ಸು ಮಾಡಿ ವರಗಳನ್ನು ಪಡೆದ. 


ತನ್ನ ಶಕ್ತಿಯ ಅಹಂಕಾರದಿಂದ ಅಧರ್ಮದ ಕೆಲಸಗಳಲ್ಲಿ ತೊಡಗಿದ. ಈತ ಹದಿನಾರು ಸಾವಿರ ಸ್ತ್ರೀಯರನ್ನು ಅಪಹರಿಸಿ ತನ್ನ ಬಂಧನದಲ್ಲಿಟ್ಟಿದ್ದ. 


ಈತನ ಅಧರ್ಮ ಹೆಚ್ಚಿದ ಕಾರಣ ಶ್ರೀಕೃಷ್ಣ ಈತನನ್ನು ಸಂಹಾರ ಮಾಡಿ, ಈತನ ಮಗ ಭಗದತ್ತನನ್ನು ಪ್ರಾಜ್ಜೋತಿಷಪುರದ ರಾಜನನ್ನಾಗಿ ಪಟ್ಟಾಭಿಷೇಕ ಮಾಡಿದ. ಆತನ ಬಂಧನದಲ್ಲಿಟ್ಟಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಂಧನದಿಂದ ಮುಕ್ತಗೋಳಿಸಿದ. ಇದು ನರಕ ಚತುರ್ದಶಿಯಂದು ನಡೆಯಿತು ಎಂದು ಹೇಳಲಾಗುತ್ತದೆ. ಆದ್ದರಿಂದ ಇಂದು ನರಕ ಚತುರ್ದಶಿ ಆಚರಿಸಲಾಗುತ್ತಿದೆ.


("ಮುಂದೆ ಹದಿನಾರು ಸಾವಿರ ಸ್ತ್ರೀಯರು ತಮ್ಮ ರಾಜ್ಯಗಳಿಗೆ ಹೋಗದೆ, ತಮ್ಮನ್ನು ಬಂಧನದಿಂದ ಮುಕ್ತಗೋಳಿಸಿದ ಶ್ರೀಕೃಷ್ಣನನ್ನು ಮದುವೆಯಾಗುತ್ತಾರೆ." )


"ನರಕಾಸುರ ಹಾಗೆ ನೋಡಿದರೆ, ವಿಷ್ಣುವಿನ (ಅಥವಾ ಶ್ರೀಕೃಷ್ಣನ) ಮಗನೇ. ಆದರೆ ಆತನ ಅಹಂಕಾರ ಹೆಚ್ಚಿ ಅಧರ್ಮದ ಕೆಲಸಗಳಲ್ಲಿ ತೊಡಗಿದ ಕಾರಣ ಸ್ವಂತ ಮಗನನ್ನು ಸಹ ವಿಷ್ಣು ಅವತಾರಿ ಶ್ರೀಕೃಷ್ಣ ಸಂಹಾರ ಮಾಡುತ್ತಾನೆ." 


*"ಆದ್ದರಿಂದ ನಾವೆಲ್ಲರೂ ಅಹಂಕಾರವನ್ನು ಹೊಂದದೆ, ಧರ್ಮದ ಮಾರ್ಗದಲ್ಲಿ ನಡೆಯಬೇಕು ಎನ್ನುವ ಶಿಕ್ಷಣ ಈ ಕಥೆ ನೀಡುತ್ತದೆ"*. 


ಅಂತಹ ನೀತಿ ನೆನಪಿಸುವ ಸಲುವಾಗಿ ನರಕಾಸುರನ ಸಂಹಾರದ ನೆನಪಿನಲ್ಲಿ ಇಂದು ನರಕ ಚತುರ್ದಶಿ ಆಚರಿಸಲಾಗುತ್ತಿದೆ. 


ಇಂದು ಎಣ್ಣೆಯಿಂದ ಅಭ್ಯಂಗ ಸ್ನಾನ ಮಾಡಿ, ದೀಪ ಹಚ್ಚುವುದರಿಂದ ನರಕಯಾತನೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗಿದೆ. 


ನಾವು ದೇವರ ಮಕ್ಕಳು ಆಗಿದ್ದರೂ, ಒಂದು ವೇಳೆ ಅಹಂಕಾರ ಅಧರ್ಮದ ದಾರಿಯಲ್ಲಿ ನಡೆದರೆ ನರಕಾಸುರನಿಗಾದ ಗತಿ ನಮಗೂ ಆಗುತ್ತದೆ ಎನ್ನುವ ಕಥೆಯ ನೀತಿಯನ್ನು ನೆನಪಿಸಿಕೊಂಡು, ನಮ್ಮ ಜೀವನವನ್ನು ಮುನ್ನಡೆಸೋಣ. 


ಎಲ್ಲರಿಗೂ ನರಕ ಚತುರ್ದಶಿಯ ಹಾರ್ದಿಕ ಶುಭಾಶಯಗಳು 🌷 


ಇಂತಿ ತಮ್ಮ


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ 

Comments

Popular posts from this blog