*"ದೀಪಾವಳಿ ಹಬ್ಬದ ಮಹತ್ವವೇನು ?"*


* ದೀಪ ಎಂದರೆ ಬೆಳಕು, ದೀಪಗಳ ಸಾಲಿನ ಬೆಳಕಿನ ಹಬ್ಬವೇ ದೀಪಾವಳಿ. 


* ಈ ರಾತ್ರಿ ಲಕ್ಷ್ಮಿ ಮಾತೆ ಭೂಲೋಕದಲ್ಲಿ ಸಂಚರಿಸಿ ತನ್ನ ಭಕ್ತರನ್ನು ಹರಸುತ್ತಾರೆ, ಎಂದು ನಂಬಲಾಗಿದೆ. ಈ ಕಾರಣದಿಂದ ಲಕ್ಷ್ಮಿ ಪೂಜೆಯನ್ನು ಈ ಸಂದರ್ಭದಲ್ಲಿ ಮಾಡುತ್ತಾರೆ. 


* ಕೆಲವು ಗ್ರಂಥಗಳ ಪ್ರಕಾರ ಸಮುದ್ರ ಮಥನದ ಸಮಯದಲ್ಲಿ ಈ ರಾತ್ರಿಯೇ ಲಕ್ಷ್ಮಿಯ ಪ್ರಕಟವಾಯಿತು. ಈ ಕಾರಣದಿಂದಲೂ ಈ ರಾತ್ರಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. 


* ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬರುವಾಗ ಆತನನ್ನು ಸ್ವಾಗತಿಸಲು ಈ ಸಮಯದಲ್ಲಿ ದೀಪಗಳ ಸಾಲನ್ನು ಹಚ್ಚಲಾಯಿತು, ಎಂದು ಹೇಳಲಾಗಿದೆ.


* ಇಡೀ ವರ್ಷದಲ್ಲಿ ಅತ್ಯಂತ ಕತ್ತಲೆಯ ರಾತ್ರಿ ದೀಪಾವಳಿ ಅಮಾವಾಸ್ಯೆಯ ರಾತ್ರಿ ಎನ್ನಲಾಗಿದ್ದು, ಈ ಕಾರಣದಿಂದ, ಕತ್ತಲಿನಿಂದ ಬೆಳಕಿನ ಕಡೆಗೆ ನಾವು ಚಲಿಸಬೇಕು ಎನ್ನುವ ಸೂಚಕವಾಗಿ ದೀಪಗಳನ್ನು ಹಚ್ಚಲಾಗುತ್ತದೆ.


* ಹೊರಗಡೆ ಜಗತ್ತಿನಲ್ಲಿ ಕತ್ತಲನ್ನು ಹೋಗಲಾಡಿಸಲು ದೀಪ ಹಚ್ಚುವುದು, ಸಾಮಾನ್ಯ ಮಟ್ಟದ ಜನರ ಪ್ರಕ್ರಿಯೆ. 


* ಮೇಲ್ಮಟ್ಟದ ವ್ಯಕ್ತಿಗಳಿಗೆ ದೀಪಗಳ ಹಣತೆ ಹಚ್ಚುವುದು ಮಹತ್ವದ ಕೆಲಸವಲ್ಲ. ಅವರು ತಮ್ಮ ಅಂತರಂಗದಲ್ಲಿ ಕತ್ತಲೆಯೆನ್ನುವ  ಅಜ್ಞಾನ ಹೋಗಲಾಡಿಸಿ, ಬೆಳಕು ಎನ್ನುವ ಜ್ಞಾನವನ್ನು ಹೊಂದುವುದಕ್ಕೆ ಮಹತ್ವ ಕೊಡುತ್ತಾರೆ. 


ಉದಾಹರಣೆಗೆ : ಒಂದು ಮನೆಯಲ್ಲಿ ನಾವು ಇರುತ್ತೇವೆ. ಹೀಗಾಗಿ ಆ ಮನೆಯನ್ನೇ ನಾನು ಎನ್ನುವುದು ತಪ್ಪಾಗುತ್ತದೆ. ನಮ್ಮ ಮನೆಗೆ ಯಾರಾದರೂ ಬೆಂಕಿ ಹಚ್ಚಿದಾಗ, ನಾವು ಹೊರಗಡೆ ಬಂದು ರಕ್ಷಿಸಿಕೊಳ್ಳುತ್ತೇವೆ. ಮನೆ ಬೆಂಕಿಯಿಂದ ಸುಡಬಹುದು. ಆದರೆ ನಾವು ಸುಡುವುದಿಲ್ಲ. 


ಇದೇ ರೀತಿ "ದೇಹ ಎನ್ನುವ ಮನೆಯಲ್ಲಿ"  "ಆತ್ಮ ಎನ್ನುವ ನಾವು"  ಇದ್ದೇವೆ. ದೇಹಕ್ಕೆ ಸಾವು ಬರಬಹುದು. ದೇಹದಲ್ಲಿರುವ ನನಗೆ ಅಥವಾ ಆತ್ಮಕ್ಕೆ ಸಾವಿಲ್ಲ. ಹಾಗೆಯೇ ಹುಟ್ಟು ಸಹ ಇಲ್ಲಾ.


ಆದರೆ ನಾವೆಲ್ಲರೂ, ನಮ್ಮನ್ನು ದೇಹ ಎಂದು ಭಾವಿಸುವ ಅಜ್ಞಾನದಲ್ಲಿ ಇದ್ದೇವೆ.


* ದೇಹವೇ ನಾನು, ಎನ್ನುವ ಅಜ್ಞಾನದಿಂದ, ನಾನು ಆತ್ಮ, ಎನ್ನುವ ಜ್ಞಾನದ ಕಡೆಗೆ ಚಲಿಸುವುದು ನಿಜವಾದ ದೀಪಾವಳಿ. 


* ನಾನು ದೇಹ ಎನ್ನುವುದು ಅಸತ್ಯ. ನಾನು ಆತ್ಮ ಎನ್ನುವುದೇ ಸತ್ಯ.


ಹೀಗಾಗಿ ..

ನಾನು ದೇಹ ಎನ್ನುವ ಅಸತ್ಯದಿಂದ, ನಾನು ಆತ್ಮ ಎನ್ನುವ ಸತ್ಯದ ಕಡೆಗೆ ಚಲಿಸುವುದು ನಿಜವಾದ ದೀಪಾವಳಿ.


* ನಾನು ದೇಹ, ಎನ್ನುವುದು ಅಜ್ಞಾನದ ಕತ್ತಲು.. ನಾನು ಆತ್ಮ ಎನ್ನುವುದು ಜ್ಞಾನದ ಬೆಳಕು.


ಆದ್ದರಿಂದ

ನಾನು ದೇಹ ಎನ್ನುವ ಕತ್ತಲೆಯೆನ್ನುವ ಅಜ್ಞಾನದಿಂದ, ನಾನು ಆತ್ಮ  ಎನ್ನುವ ಬೆಳಕಿನ ಜ್ಞಾನದ ಕಡೆಗೆ ಚಲಿಸುವುದು ನಿಜವಾದ ದೀಪಾವಳಿ. 


* ದೇಹಕ್ಕೆ ಮೃತ್ಯು ಇದೆ. ಆದರೆ ಆತ್ಮಕ್ಕೆ ಮೃತ್ಯು ಇಲ್ಲಾ..


ಹೀಗಾಗಿ..

ನಾನು ಸಾಯುತ್ತೇನೆ ಎನ್ನುವ ಮೃತ್ಯುವಿನ ಅಜ್ಞಾನದಿಂದ, ನಾನು ಸಾಯುವುದಿಲ್ಲ ಎನ್ನುವ ಜ್ಞಾನದ ಚಿರಂಜೀವಿಯತ್ವದ ಕಡೆಗೆ ಚಲಿಸುವುದೇ.. ನಿಜವಾದ ದೀಪಾವಳಿ. 


ಇದನ್ನೇ ಈ ಶ್ಲೋಕವು ಹೇಳುತ್ತದೆ. 


ಅಸತೋಮ ಸತ್ಗಮಯ ..

ತಮಸೋಮ ಜ್ಯೋತಿರ್ಗಮಯ ..

ಮೃತ್ಯೋರ್ಮಾ ಅಮೃತಂಗಮಯಾ..


ಕೊನೆಯದಾಗಿ ಹಿಂದೂ ಧರ್ಮ ಎಂದರೆ ಕೋಟ್ಯಾನುಕೋಟಿ ದೇವತೆಗಳು ಎನ್ನುವ ಭಾವನೆ ಎಲ್ಲರಲ್ಲಿದೆ. ಆದರೆ ಹಿಂದೂ ಧರ್ಮ ಈ ಜ್ಯೋತಿ, ಬೆಳಕು ದೀಪವನ್ನೆ ದೇವರು ಎಂದು ಹೇಳುತ್ತದೆ.


ಆದ್ದರಿಂದಲೇ, 


ದೀಪಂ ಜ್ಯೋತಿ ಪರಬ್ರಹ್ಮ 

ದೀಪಂ ಜ್ಯೋತಿ ಜನಾರ್ಧನ 

ಎಂದು ಹೇಳಲಾಗಿದೆ. 


ಆ ಪರಬ್ರಹ್ಮ ಪರಮಾತ್ಮನ ಆರಾಧಿಸುವ ಈ ಬೆಳಕಿನ ಹಬ್ಬವೇ ಈ ದೀಪಾವಳಿಯಾಗಿದೆ. 


ನಾವೆಲ್ಲರೂ ಮೇಲ್ಮಟ್ಟದ ದೀಪಾವಳಿಯನ್ನು ಆಚರಿಸೋಣ. ದೇಹವೇ ನಾನು, ಎನ್ನುವ ಕತ್ತಲೆಯ ಅಜ್ಞಾನದಿಂದ 

ಆತ್ಮವೇ ನಾನು, ಎನ್ನುವ ಜ್ಞಾನದ ಬೆಳಕಿನ ಕಡೆಗೆ ಚಲಿಸೋಣ. ಈ ಮೂಲಕ ನಿಜವಾದ ದೀಪಾವಳಿ ಆಚರಿಸುತ್ತ, ಆ ಜ್ಯೋತಿ ಸ್ವರೂಪ ಪರಬ್ರಹ್ಮ ಪರಮಾತ್ಮನನ್ನು ಆರಾಧಿಸೋಣ 


ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು 


ಇಂತಿ ನಿಮ್ಮ 


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ 


(ಈ ಜ್ಞಾನ ಪ್ರಸಾರ ಮಾಡುವ ಕೆಲಸದ ಪುಣ್ಯದ ಸ್ವಲ್ಪ ಭಾಗದ ಪುಣ್ಯ, ಈ ಲೇಖನ ಶೇರ್ ಮಾಡಿದವರಿಗೂ ಸಿಗಲಿ.)

Comments

Popular posts from this blog