*"ತಾನು ಅನುಭವಿಸಿದ ಕಷ್ಟಗಳಿಗೆ ಯಾರನ್ನು ದೂರದೆ, ಸಹಿಸಿಕೊಂಡ ಸೀತಾ ಮಾತೆಯ ತಿಳುವಳಿಕೆ ಯಾವುದು ?"*
ಸೀತಾ ಮಾತೆ ಕಷ್ಟಗಳನ್ನು ಅನುಭವಿಸುವಾಗ ತನಗೆ ತಾನು ಹೇಳಿಕೊಂಡ ತಿಳುವಳಿಕೆ ಮಾತನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. .
ಕಷ್ಟಗಳನ್ನು ಸಹಿಸುವಾಗ ಸೀತಾ ಮಾತೆಯಲ್ಲಿಂದ್ದಂತಹ ತಿಳುವಳಿಕೆಯ ಬಗ್ಗೆ ಈಗ ಗಮನಹರಿಸೋಣ.
* ತನ್ನ (ಸೀತಾ ಮಾತೆಯ) ಅತ್ತೆ, ತನ್ನ ಗಂಡನಿಗೆ ಮಾತ್ರ ವನವಾಸ ಕೇಳಿದಳು. ಆದರೆ ಪತ್ನಿ ಧರ್ಮದ ಯೋಚನೆಯಿಂದ ಸ್ವ ಇಚ್ಛೆಯಿಂದ ಸೀತಾ ಮಾತೆ ವನವಾಸ ಸ್ವೀಕರಿಸಿದರು.
* ವನವಾಸದ ಕಷ್ಟಗಳನ್ನು ಅನುಭವಿಸುವಾಗಲೇ, ರಾವಣನಿಂದ ಪತಿ ವಿರಹದ ನೋವು ಅನುಭವಿಸಿದಳು.
* ರಾವಣ ರಾಜ್ಯದಲ್ಲಿ ಅನೇಕ ರಾಕ್ಷಸಿಯರ ಕಷ್ಟ ಸಹಿಸಿದಳು.
* ಮತ್ತೆ ಅಯೋಧ್ಯೆಗೆ ಬಂದಾಗ, ನಿಷಾದ ಜನರ ದೂಷಣೆಯ ಮಾತುಗಳ ನೋವನ್ನು ಅನುಭವಿಸಿದಳು.
* ಕಡೆಗೆ ರಾಜಧರ್ಮದ ಹೆಸರಿನಲ್ಲಿ, ತುಂಬು ಗರ್ಭಿಣಿಯಿರುವಾಗ ಸ್ವಂತ ಗಂಡನಿಂದ, ವನವಾಸಕ್ಕೆ ಕಳುಹಿಸಲ್ಪಟ್ಟಳು.
ಇಷ್ಟೆಲ್ಲಾ ಕಡುಕಷ್ಟ ಅನುಭವಿಸಿದರು ಸಹ ಎಷ್ಟು ಜನರಿಗೆ ಎಷ್ಟು ರೀತಿಯಲ್ಲಿ ಸೀತಾ ಮಾತೆ ದೂಷಣೆ ಮಾಡಿದರು ? ಎನ್ನುವುದನ್ನು ನಾವು ಕೇಳಿಲ್ಲ, ಓದಿಲ್ಲ.
ಇಷ್ಟೊಂದು ಕಷ್ಟಗಳನ್ನು ಸಹಿಸಿದರ ಹಿಂದೆ ಅವರಲ್ಲಿ ಇದ್ದಂತಹ ಯೋಚನೆಯೇನು ? ಎನ್ನುವುದನ್ನು ನಾವು ತಿಳಿದುಕೊಳ್ಳುವುದು ಅವಶ್ಯವಾಗಿದೆ.
ಸೀತಾ ಮಾತೆಯಲ್ಲಿದ್ದಂತಹ ಯೋಚನೆಯೆಂದರೆ,
"*ನಾವು ಜಗತ್ತಿನಿಂದ, ಜಗತ್ತಿನ ಜನರಿಂದ ಅನುಭವಿಸುವ ಕಷ್ಟ, ದುಃಖ ನೋವುಗಳ ಮೂಲಕ ನಮ್ಮ ಪಾಪ ಕರ್ಮಗಳು ನಾಶವಾಗುತ್ತವೆ.*"
(ಅದೇ ರೀತಿ ಇದಕ್ಕೆ ವಿರುದ್ಧವಾಗಿ "*ನಾವು ಜಗತ್ತಿನಿಂದ ಜಗತ್ತಿನ ಜನರಿಂದ ಅನುಭವಿಸುವ ಸುಖ ಸಂತೋಷಗಳಿಗೆ ನಮ್ಮ ಪುಣ್ಯ ಕರ್ಮಗಳು ನಾಶವಾಗುತ್ತವೆ.*" )
ಸೀತಾ ಮಾತೆ ಈ ತಿಳುವಳಿಕೆಯನ್ನೆ ಹೊಂದಿದ್ದರು. ಇದರಿಂದಲೇ ಭೂಮಿಯ ಮೂಲಕ ಜನ್ಮ ಪಡೆದು, ಭೂಮಿಯ ಜನರ ಕರ್ಮ ಸಂಬಂಧಿಯಾಗಿ ಎಲ್ಲರ ಕುಕರ್ಮ ನಾಶ ಮಾಡಿದರು.
******"" "" "" "********
ನಮ್ಮ ಜೀವನದಲ್ಲಿ ಸಹ ನಾವು ಅಸಹಾಯಕರಾಗಿ ಬಹಳ ಸಲ ಬೇರೆಯವರಿಂದ ದುಃಖ, ನೋವು ಅನುಭವಿಸುವ ಪರಿಸ್ಥಿತಿಗಳು ಬರುತ್ತವೆ.
ಈ ಕಾರಣದಿಂದ ವರ್ತಮಾನದಲ್ಲಿ ಕೆಆ ರೀತಿಯ ಟ್ಟ ಘಟನೆ ಘಟಿಸದಿದ್ದರೂ ಹಿಂದೆ ಘಟಿಸಿದ ಸಂದರ್ಭಗಳನ್ನೆ ಪದೇ ಪದೇ ನೆನೆದು,ಮಾನಸಿಕವಾಗಿ ದುಃಖವನ್ನು, ನೋವನ್ನು ಹಲವು ಸಲ ಹೊರಹಾಕುತ್ತೇವೆ.
ಆದರೆ ಇದು ಬೀಜ, ವೃಕ್ಷ ಸಿದ್ದಾಂತದಂತೆ ಅಥವಾ ಕಾರಣ ಪರಿಣಾಮ ಸಿದ್ದಾಂತದಂತೆ ಜೀವನದಲ್ಲಿ ಮತ್ತೆ ಮತ್ತೆ ಅದೇ ರೀತಿಯ ಕೆಟ್ಟ ಘಟನೆಗಳು ಜೀವನದಲ್ಲಿ ಪುನಾರಾವರ್ತನೆಯಾಗುವದಕ್ಕೆ ಕಾರಣವಾಗುತ್ತದೆ.
ಹೀಗಾಗಿ ನಮ್ಮ ಜೀವನದಲ್ಲಿ ಪದೇ ಪದೆ ಒಂದೇ ರೀತಿಯ ಕೆಟ್ಟ ಘಟನೆಗಳು ಘಟಿಸದೆಯಿರಲು, ಸೀತಾ ಮಾತೆಯ ಈ ತಿಳುವಳಿಕೆಯನ್ನು, ನಾವು ಸಹ ನಮ್ಮ ಜೀವನದಲ್ಲಿ ಹೊಂದುವುದು ಅವಶ್ಯವಾಗಿದೆ.
ಆ ತಿಳುವಳಿಕೆಯೇ
"*ನಾವು ಅನುಭವಿಸುವ ಕಷ್ಟ ದುಃಖಗಳು, ನಮ್ಮ ಪಾಪ ಕರ್ಮಗಳನ್ನು ನಾಶ ಮಾಡುತ್ತವೆ*"
ಎಲ್ಲರಿಗೂ ವಂದನೆಗಳು
ಇಂತಿ ತಮ್ಮ
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ
(ಲೇಖನ ಇಷ್ಟವಾದರೆ ಲೈಕ್ ಶೇರ್ ಮಾಡಿ.)

Comments
Post a Comment