*"ಸೀತಾ ಮಾತೆ ಭೂಮಿಯಿಂದ ಜನ್ಮ ಪಡೆಯಲು ಕಾರಣ - ಭಾಗ - 3"*
*"ಸಂಚಿಕೆ ಪ್ರಶ್ನೆ : ಸೀತಾ ಮಾತೆ, ಭೂಲೋಕದ ಜನರ ಕುಕರ್ಮಗಳ ಫಲವನ್ನು ಹೇಗೆ ಅನುಭವಿಸಿ ನಾಶ ಮಾಡಿದರು ?"*
ಇದನ್ನು ತಿಳಿದುಕೋಳ್ಳಲು ಒಂದು ಉದಾಹರಣೆ ನೋಡೋಣ. ಇಬ್ಬರು ಒಂದೇ ವಯಸ್ಸಿನ ವ್ಯಕ್ತಿಗಳು ಮೇಲಿನಿಂದ ಕೆಳಗಡೆ ಬಿದ್ದಿದ್ದಾರೆ. ಇಬ್ಬರಿಗೂ ಆಗುವ ನೋವಿನ ಅನುಭವ ಒಂದೇ ಆಗಿರುತ್ತದೆಯೇ ? ಅಥವಾ ಬೇರೆ ಬೇರೆ ಆಗಿರುತ್ತದೆ ?
ಇದನ್ನು ತಿಳಿದುಕೊಳ್ಳಬೇಕಾದರೆ, ಇಬ್ಬರು ಒಂದೇ ಎತ್ತರದಿಂದ ಕೆಳಗಡೆ ಬಿದ್ದಿದ್ದಾರೆಯೇ ? ಅಥವಾ ಬೇರೆ ಬೇರೆ ಎತ್ತರದಿಂದ ಕೆಳಗಡೆ ಬಿದ್ದಿದ್ದಾರೆಯೇ? ಎನ್ನುವುದು ನಮಗೆ ಗೊತ್ತಾಗಬೇಕಾಗುತ್ತದೆ.
ಏಕೆಂದರೆ, ಒಬ್ಬರು ಒಂದು ಕಟ್ಟೆಯ ಮೇಲಿನಿಂದ ಬಿದ್ದರೆ, ಇನ್ನೊಬ್ಬರು ಒಂದು ಅಂತಸ್ತಿನ ಎತ್ತರದಿಂದ ಕೆಳಗೆ ಬಿದ್ದರೆ ನೋವಿನ ಅನುಭವದಲ್ಲಿ ವ್ಯತ್ಯಾಸವಾಗುತ್ತದೆ. ಕಟ್ಟೆಯಿಂದ ಬಿದ್ದವರಿಗೆ ನೋವು ಕಡಿಮೆಯಾಗುತ್ತದೆ. ಒಂದು ಅಂತಸ್ತು ಎತ್ತರದಿಂದ ಬಿದ್ದವರಿಗೆ ಹೆಚ್ಚು ನೋವಾಗುತ್ತದೆ.
ಇನ್ನೊಂದು ಉದಾಹರಣೆ ನೋಡೋಣ.
ಈಗಿನ ಸಮಯದಲ್ಲಿ ನಾವೆಲ್ಲರು ಸಾಮಾನ್ಯವಾಗಿ ನಡೆಯಲು ಚಪ್ಪಲಿಯನ್ನು ಹಾಕಿಕೊಳ್ಳುತ್ತೇವೆ.
* ಆದರೂ ಒಂದು ವೇಳೆ ನಮಗೆ ಕಾಲಿಗೆ ಮುಳ್ಳು ಚುಚ್ಚಿದಾಗ ಎಷ್ಟೊಂದು ನೋವಾಗಬಹುದು ?
* ಅದೇ ರೀತಿಯ ಮುಳ್ಳು ದಿನನಿತ್ಯ ಕಾಡಿನಲ್ಲಿ ತಿರುಗುವ ಜನರಿಗೆ ಚುಚ್ಚಿದಾಗ ನಮ್ಮಷ್ಟೇ ನೋವಾಗುತ್ತದೆಯೇ ?
* ಅದೇ ರೀತಿಯ ಮುಳ್ಳು ಕೋಟ್ಯಾಧಿಪತಿಯ ಮಗಳಿಗೆ ( ಉದಾಹರಣೆಗೆ: ಇಶಾ ಅಂಬಾನಿ) ಚುಚ್ಚಿದರೆ ಎಷ್ಟು ನೋವಾಗಬಹುದು ?
ಜೀವನದಲ್ಲಿ ಕಷ್ಟಗಳು ಎಲ್ಲರಿಗೂ ಬರುತ್ತವೆ. ಆದರೆ ಒಂದೇ ರೀತಿಯ ಕಷ್ಟಗಳು ಜಗತ್ತಿನ ವಿವಿಧ ಮಟ್ಟದ ವ್ಯಕ್ತಿಗಳಿಗಾದಾಗ ಆ ನೋವಿನ ಅನುಭವವೂ ಒಬ್ಬರಿಂದ ಇನ್ನೊಬ್ಬರಿಗೆ ಬೇರೆಯ ಮಟ್ಟದ್ದೆ ಆಗಿರುತ್ತದೆ.
* ಕಾಡಿನಲ್ಲಿ ಪ್ರತಿದಿನ ಚಲಿಸುವ ಕಾಡುವಾಸಿ ಮಹಿಳೆಗೆ ಮುಳ್ಳು ಚುಚ್ಚುವುದು ಸಾಮಾನ್ಯ ನೋವಿನ ಅನುಭವ.
* ಅದೇ ಮುಳ್ಳು ನಮಗೆ ಚುಚ್ಚಿದರೆ ಬಹಳ ನೋವಿನ ಅನುಭವ.
* ಅದೇ ಮುಳ್ಳು ಅರಮನೆಯಲ್ಲಿರುವ ಕೋಟ್ಯಾಧಿಪತಿ ಮಗಳು ಇಶಾ ಅಂಬಾನಿಗೆ ಚುಚ್ಚಿದರೆ ಅಕಲ್ಪನೀಯ ನೋವಿನ ಅನುಭವ.
ನಾವು ಈಗ ತಿಳಿದುಕೊಳ್ಳುತ್ತಿರುವುದು, ದೇಶದ ಕೋಟ್ಯಾಧಿಪತಿಗಳು ಸಹ ಪೂಜಿಸುವ, ವೈಕುಂಠ ನಿವಾಸಿ ಲಕ್ಷ್ಮಿ ದೇವಿ ಅನುಭವಿಸಿದ ನೋವಿನ ಅನುಭವಗಳನ್ನು.
ಹನುಮಾನ ದೇವರು, ದೇವಿ ಮಹಾ ಲಕ್ಷ್ಮಿ ಒಬ್ಬ ಸಾಮಾನ್ಯ ಮನುಷ್ಯರಂತೆ ಅನುಭವಿಸಿದ
ಭೂಲೋಕದ ಕಷ್ಟಗಳನ್ನು ವಿವರಿಸುವಾಗ ಪುನಃ ದುಃಖದಿಂದ ಭಾವುಕರಾಗುತ್ತಾರೆ. ಆದರೂ ಮನಸ್ಸಿನ ಮೇಲೆ ಸಮತೋಲನವನ್ನು ಕಾಪಾಡಿಕೊಳ್ಳುತ್ತಾ, ಯಾವ ರೀತಿ ಲಕ್ಷ್ಮಿ ಮಾತೆ ಭೂಲೋಕದ ಜನರ ಕುಕರ್ಮಗಳನ್ನು ತಾವು ಅನುಭವಿಸಿ ನಾಶಮಾಡಿದರು ? ಎನ್ನುವುದನ್ನು ವಿವರಿಸುತ್ತಾರೆ.
ಲಕ್ಷ್ಮಿ ಮಾತೆ ಜಗತ್ತಿನ ಅತಿ ಶ್ರೇಷ್ಠ ಸುಂದರತೆ, ಜಗತ್ತಿನ ಪೂರ್ಣ ಸಂಪತ್ತು, ಸೌಭಾಗ್ಯ, ಸುಖ, ಸಂಪೂರ್ಣತೆ ಮೊದಲಾದ ಸಕಾರಾತ್ಮಕತೆಯ ಪ್ರತಿರೂಪ. ಅಂತಹವರು ತಮ್ಮ ಜೀವನದ ಬಹುತೇಕ ಸಮಯವನ್ನು ಕಾಡಿನಲ್ಲಿ ಕಳೆದರು. *ಲಕ್ಷ್ಮಿ ದೇವಿ ಕಾಡಿನಲ್ಲಿ ಕಳೆದಂತಹ ಒಂದೊಂದು ಕ್ಷಣವೂ, ಸಾಮಾನ್ಯ ಆತ್ಮ ನರಕದಲ್ಲಿ ಸಾವಿರ ವರ್ಷಗಳವರೆಗೆ ಅಗ್ನಿಯಲ್ಲಿ ಸುಡುವದಕ್ಕೆ ಸಮನಾಗಿತ್ತು*. ಇದರಿಂದ ನಾವು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗದಷ್ಟು ಜನರ ಕುಕರ್ಮಗಳನ್ನು ಲಕ್ಷ್ಮಿ ದೇವಿ ನಾಶ ಮಾಡಿದರು.
*ಅವರ ಕಾಲಿಗೆ ಅರಣ್ಯದಲ್ಲಿ ಯಾವಾಗ, ಯಾವಾಗ ಮುಳ್ಳು ಚುಚ್ಚಿತ್ತೊ ಆ ನೋವು, ಯಾವುದೇ ಸಾಮಾನ್ಯ ವ್ಯಕ್ತಿಯ ದೇಹದ ಅಂಗಗಳನ್ನು ಜೀವಂತವಾಗಿ ಕಡಿದಾಗ ಯಾವ ನೋವು ಆಗುತ್ತಿತ್ತೋ ? ಆ ನೋವು ಲಕ್ಷ್ಮೀ ಮಾತೆ ಅನುಭವಿಸಿದರು*.
ಯಾವಾಗ, ಯಾವಾಗ ನಿಷಾದ ವ್ಯಕ್ತಿ *ಸೀತಾ ಮಾತೆಯ ಚರಿತ್ರೆಯ ಕುರಿತು ಆಡಿದಂತಹ ಹೀನಾತಿಹೀನ ಮಾತುಗಳು ಅವರಿಗೆ ಎಷ್ಟೊಂದು ನೋವು ನೀಡಿದವೆಂದರೆ, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಜೀವಂತ ಸುಟ್ಟಾಗ ಆಗುವಂತಹ ನೋವಿಗೆ* ಸಮನಾಗಿತ್ತು.
ಸೀತಾ ಮಾತೆ, ಶ್ರೀ ರಾಮನಿಂದ ಬೇರೆಯಾಗಿ ಕಳೆದಂತಹ ಒಂದೊಂದು ಕ್ಷಣವೂ....
ಇದನ್ನು ಹೇಳುವಾಗ ಹನುಮಾನ ದೇವರ ಕಣ್ಣಿನಿಂದ ಒಂದು ಹನಿ ಕಣ್ಣೀರು ಕೆಳಗೆ ಬಿತ್ತು. ಹಾಗೆ ಮುಂದುವರಿದು.. *ಸೀತಾ ಮಾತೆ, ಶ್ರೀ ರಾಮನಿಂದ ಬೇರೆಯಾಗಿ ಕಳೆದಂತಹ ಒಂದೊಂದು ಕ್ಷಣವೂ....ಒಬ್ಬ ರಾಕ್ಷಸ, ಸಾಮಾನ್ಯ ವ್ಯಕ್ತಿಯನ್ನು ಜೀವಂತ ತಿಂದಾಗ ಆಗುವ ನೋವಿಗೆ ಸಮನಾಗಿತ್ತು...*
ಎಂದು ಹೇಳಿ ಹನುಮಾನ ದೇವರು ಅಂತರ್ಧಾನರಾದರು.
ಈ ಕಥನದ ಮೂಲಕ ಸುಖ, ಸಂಪತ್ತು, ಸುಂದರತೆ, ಸಂಪೂರ್ಣತೆ ಸಕಾರಾತ್ಮಕತೆಯ ಪ್ರತಿರೂಪ ಲಕ್ಷ್ಮಿ ಮಾತೆ, ಕಾಡಿನಲ್ಲಿಯೇ ತಮ್ಮ ಜೀವನದ ಹೆಚ್ಚು ಸಮಯ ಕಳೆದು, ಎಷ್ಟೊಂದು ಜನರ ಕುಕರ್ಮಗಳನ್ನು ನಾಶ ಮಾಡಿದರು ? ಎನ್ನುವುದನ್ನು ನಮಗೆ ಕಲ್ಪಿಸಿಕೊಳ್ಳುವುದು ಸಹ ಸಾಧ್ಯವಿಲ್ಲ.
*"ಸೀತಾ ಮಾತೆ ಈ ಜಗತ್ತಿನಲ್ಲಿ ಒಂದು ಕುಟುಂಬದ ಒಬ್ಬ ಸೊಸೆಯಾಗಿ ಅನುಭವಿಸಿದಂತಹ ಕಷ್ಟಗಳನ್ನು, ಬಹುಶಃ ಹಿಂದೆಯೂ ಯಾರು ಅನುಭವಿಸಿಲ್ಲ. ಮುಂದೆಯೂ ಯಾರು ಅನುಭವಿಸಲ್ಲ. ಈಗಲೂ ಯಾರು ಅನುಭವಿಸುತ್ತಿಲ್ಲ."*
ಆದರೆ ಇಂದಿನ ದಿನಗಳಲ್ಲಿ ಕುಟುಂಬಗಳಲ್ಲಿ ಎದುರಾಗುವ ಸಣ್ಣ ಪುಟ್ಟ ಕಷ್ಟಗಳಿಗೆ, ಇಂದಿನ ಪೀಳಿಗೆ ಜೀವನವನ್ನೇ ತೊರೆಯುವಂತಹ ಯೋಚನೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸೀತಾ ಮಾತೆಯ ಕಷ್ಟಗಳ ಸಹಿಷ್ಣುತೆಯ ಗುಣ ನಮ್ಮೆಲ್ಲರಿಗೂ ಒಂದು ಮಾದರಿ.
ಸೀತಾ ಮಾತೆ, ಕಷ್ಟಗಳನ್ನು ಅನುಭವಿಸುವಾಗ ಒಂದು ತಿಳುವಳಿಕೆಯ ಮಾತನ್ನು ಪದೇ ಪದೇ ತಮಗೆ ತಾವೇ, ಒಂದು ಮಂತ್ರದಂತೆ ಹೇಳಿಕೊಳ್ಳುತ್ತಾ, ತನ್ನ ಜೀವನದ ಎಲ್ಲಾ ಕಷ್ಟಗಳನ್ನು ಯಾರಿಗೂ ದೂಷಿಸದೆ ಸಹಿಸಿದರು.
ಆ ತಿಳುವಳಿಕೆಯ ಮಾತು ಯಾವುದು ? ಎನ್ನುವುದನ್ನು ಮುಂದಿನ ಭಾಗದಲ್ಲಿ ನೋಡೋಣ.
ಎಲ್ಲರಿಗೂ ವಂದನೆಗಳು 🙏
ಇಂತಿ ತಮ್ಮ
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ

Comments
Post a Comment