Posts

ಸ್ವಾತಂತ್ರ್ಯ, ಬಂಧನಗಳಲ್ಲಿ ಉತ್ತಮ ಯಾವುದು?

Image
ಸ್ವಾತಂತ್ರ್ಯ, ಬಂಧನಗಳಲ್ಲಿ ಉತ್ತಮ ಯಾವುದು?  ಎನ್ನುವ ಪ್ರಶ್ನೆ ಮಾಡಿದಾಗ ಬಹುತೇಕ ಎಲ್ಲರೂ ಸ್ವಾತಂತ್ರ್ಯವೇ ಉತ್ತಮ ಎಂದು ಹೇಳುತ್ತಾರೆ. ಬಹಳಷ್ಟು ಜನರಿಗೆ  ತಮ್ಮ ಮನಸ್ಸಿಗೆ ಬಂದ ಹಾಗೆ ಯೋಚಿಸಲು, ತಮ್ಮ ಮನಸ್ಸಿಗೆ ಬಂದ ಕೆಲಸವನ್ನು ಮಾಡಲು ಬಹಳ ಇಷ್ಟ‌. ಬೇರೆಯವರು ಕೊಟ್ಟಿದ್ದು ತಿನ್ನುವುದಕ್ಕಿಂತ ತಮಗೆ ಇಷ್ಟಬಂದಂಥ ತಿನಿಸನ್ನು ತಿನ್ನುವುದು ಎಲ್ಲರಿಗೂ ಇಷ್ಟ. ಬೇರೆಯವರು ಹೇಳಿದಂತಹ ಟಿವಿ, ಮೊಬೈಲ್ ಕಾರ್ಯಕ್ರಮವನ್ನು ನೋಡುವದಕ್ಕಿಂತ ತಮಗೆ ಇಷ್ಟ ಬಂದಂತಹ ಕಾರ್ಯಕ್ರಮವನ್ನು ನೋಡುವುದು ಎಲ್ಲರಿಗೂ ಇಷ್ಟ. ಬೇರೆಯವರು ಹೇಳಿದಂತೆ ಕೆಲಸ ಮಾಡುವುದಕ್ಕಿಂತ ತಮಗೆ ಇಷ್ಟಬಂದ ಕೆಲಸ ಮಾಡುವುದು ಎಲ್ಲರಿಗೂ ಇಷ್ಟ.  ಈ ರೀತಿಯಾಗಿ ನೋಡಿದಾಗ ಸ್ವಾತಂತ್ರ್ಯ ಎಲ್ಲರಿಗೂ ಇಷ್ಟವಾಗುತ್ತದೆ. ಬೇರೆಯವರು ಆಜ್ಞೆಯಂತೆ ಮಾಡುವುದು  ಒಂದು ರೀತಿಯ ಪರತಂತ್ರ, ಅಥವಾ ಬಂಧನ ಎಂದು ಭಾವಿಸುತ್ತೇವೆ.  ಹೀಗಾಗಿ ಎಲ್ಲರೂ ಸ್ವಾತಂತ್ರ್ಯವನ್ನು ಉತ್ತಮ ಎಂದು ಭಾವಿಸುತ್ತಾರೆ. ಆದರೆ ಸ್ವಾತಂತ್ರ್ಯ, ಬಂಧನಗಳು ಎರಡು ಬೇರೆ ಬೇರೆ ಪ್ರತ್ಯೇಕ ವಿಷಯಗಳಲ್ಲ. ಇವೆರಡು ಒಂದು ದಾರಕ್ಕೆ ಇರುವ ಎರಡು ತುದಿಗಳಂತೆ ಒಂದಕ್ಕೊಂದು ಅಂಟಿಕೊಂಡಿವೆ. ಒಂದನ್ನು ಬಿಟ್ಟು ಇನ್ನೊಂದು ಇಲ್ಲ. ಉದಾಹರಣೆಗೆ  ಭೂಲೋಕದ ಸ್ವರ್ಗದಂತಿರುವ ಸ್ವಿಟ್ಜರ್ಲೆಂಡ್ (ಅಥವಾ ತಮಗೆ ಇಷ್ಟವಾದ ಇನ್ನಾವುದೋ ಸ್ಥಳವನ್ನು) ಪ್ರವಾಸ ಮಾಡುವುದು  ಮನಸ್ಸಿಗೆ ಖುಷಿ ನೀಡುತ್ತದೆ, ಎಂದು...

ಮಹಾಶಿವರಾತ್ರಿಯ (04/03/19) ವಿಸ್ಮಯ ಅನುಭವ:

ಮಹಾಶಿವರಾತ್ರಿಯ ವಿಸ್ಮಯ ಅನುಭವ: ಸ್ನೇಹಿತರೇ ಮೊನ್ನೆ ಶಿವರಾತ್ರಿಯ ಮುನ್ನಾದಿನದ ಭಾಷಣದಲ್ಲಿ, ನಾನು ಶ್ರೀ ಕೃಷ್ಣನ ಶ್ರೇಷ್ಟ ಮಾತನ್ನು ಹೇಳಿದ್ದೆ, ಏನೆಂದರೆ "ನಮ್ಮ ಕೆಲಸಗಳಿಗೆ ಫಲ ಸಿಗುವುದು ಖಚಿತ. ಆದರೆ ಫಲ ಸಿಗುವ ಸಮಯದಲ್ಲಿ ಹೆಚ್ಚು ಕಡಿಮೆ ಆಗಬಹುದು.  ಹಾಗಾಗಿ, ಒಂದು ವೇಳೆ ಫಲದ ನೀರೀಕ್ಷೆಯಿಂದ ಕೆಲಸ ಮಾಡಿ, ನಾವು ಅಂದುಕೊಂಡ ಫಲ ಸಿಗದಿದ್ದರೆ, ನಾವು ಕೆಲಸ ಮಾಡುವುದನ್ನೇ ಬಿಟ್ಟುಬಿಡುತ್ತೇವೆ. ಆದ್ದರಿಂದ ಫಲದ ನೀರೀಕ್ಷೆ ಬಿಟ್ಟು ಕೆಲಸ ಮಾಡಬೇಕು" ಎಂದು ಬಹುಶಃ ನನ್ನ ಮೂಲಕ ದೇವರು ಮಾಡಿಸುತ್ತಿರುವ ಕೆಲಸವೆಂದರೆ, ಜ್ಞಾನವನ್ನು ನೆನಪಿಸುವ ಹಾಗೂ ಜ್ಞಾನವನ್ನು ನೀಡುವ ಕೆಲಸ.  ನಾನು ಮಾಡುತ್ತಿರುವುದಕ್ಕೆ ಈಗ ನಿರೀಕ್ಷಿಸಿದಂತೆ ಪ್ರತಿಕ್ರಿಯೆಯ ಫಲ ಸಿಕ್ಕಿಲ್ಲ. ಆದರೂ, ನನ್ನ ಕೆಲಸ ಬಿಡಬಾರದು, ಪ್ರತಿಕ್ರಿಯೆಯ ಫಲದ ನೀರೀಕ್ಷೆಯಿಡದೆ ಕೆಲಸವನ್ನು ಕೆಲಸದ ರೀತಿ ಮಾಡಬೇಕು ಎಂದು ಈ ಪೋಸ್ಟನ್ನು ಹಾಕುತ್ತಿದ್ದೇನೆ. ಈ ಬಾರಿಯ ಶಿವರಾತ್ರಿ "ಅಖಂಡ ಶಿವನಾಮ ಜಪ"ವನ್ನು ಮಾಡಿದ ಆರನೇ ಮಹಾಶಿವರಾತ್ರಿ ಯಾಗಿತ್ತು. ಇದಕ್ಕೂ ಮೊದಲು, ಜ್ಞಾನದಿಂದ ದೇವರನ್ನು ನಾನು ದರ್ಶನ ಮಾಡುತ್ತಿದ್ದೆ. ಆದರೆ ಈ ಬಾರಿ ಒಂದು ಘಟನೆ ಮೂಲಕ ದೇವರು ಬೇರೆ ರೀತಿಯಲ್ಲಿ ನನ್ನ ಅನುಭವಕ್ಕೆ ಬಂದರು. ಈ ಘಟನೆಯಿಂದ ಓಂ ನಮಃ ಶಿವಾಯ ಮಂತ್ರದ ಶಕ್ತಿಯೂ ನನ್ನ ಅರಿವಿಗೆ ಬಂತು. ಶಿವನ ಇರುವಿಕೆಯ, ಸಾನಿಧ್ಯದ ಅನುಭವವೂ ಆಯಿತು....

** ಸಾಕ್ಷಿ, ಮನಸ್ಸಾಕ್ಷಿಯೇ **

ಸಾಕ್ಷಿ, ಮನಸ್ಸಾಕ್ಷಿಯೇ ನೀನು ಆಗ, ಕಾರ್ಯವನ್ನು ಹೇಗೆ ಗುರುತಿಸುವೆ?, ನಾನು, ನನ್ನವರು ಮಾಡಿದ ಕಾರ್ಯ ಸರಿಯೆಂದಾಗ ಅದೇ ಕಾರ್ಯ ವಿರೋಧಿ ಮಾಡಿದರೆ ತಪ್ಪೆಂದಾಗ ಸಾಕ್ಷಿ, ಮನಸ್ಸಾಕ್ಷಿಯೇ ನೀನು ಆಗ ಹೇಗೆ ಅನುಭವಿಸುವೆ ? ನಾನು, ನನ್ನವರು ಮಾಡಿದ ಕೆಲಸ ಹೊಗಳಿದಾಗ ಅದೇ ಕೆಲಸ ವಿರೋಧಿ ಮಾಡಿದರೆ ತೆಗಳಿದಾಗ ಸಾಕ್ಷಿ, ಮನಸ್ಸಾಕ್ಷಿಯೇ ನಿನ್ನ ಈ ಗೊಂದಲ ಹೇಗೆ ಪರಿಹರಿಸಿಕೊಳ್ಳುವೆ ? ಸಾಕ್ಷಿಯೇ ಮನಸ್ಸಾಕ್ಷಿಯೇ ನಿನ್ನ ಈ ತಳಮಳ ಹೇಗೆ ಕೊನೆಗಾಣಿಸುವೆ ? ನಿನ್ನ ಸರಿ ತಪ್ಪು ಗೊಂದಲಕ್ಕೆ ಕಾರಣ, ನಿನ್ನ ಸತ್ಯ ಮಿಥ್ಯ ತಳಮಳಕ್ಕೆ ಕಾರಣ ಸತ್ಯವನ್ನು ಗುರುತಿಸುವ ನೀನು ಇಲ್ಲ, ದರ್ಪದ ನಾನೇ ಎಲ್ಲ ಎನ್ನುವ, ನನ್ನ ನಿರ್ಧಾರ ಸಾಕ್ಷಿ, ಮನಸ್ಸಾಕ್ಷಿಯೇ ನಿಜಕ್ಕೂ ದೈವಿ ಪ್ರತಿನಿಧಿಯಾದ ನೀನೇ ಎಲ್ಲ ಸಾಕ್ಷಿ, ಮನಸ್ಸಾಕ್ಷಿಯೇ ದರ್ಪದ ಪ್ರತಿನಿಧಿಯಾದ ನಾನು ಏನು ಇಲ್ಲ ಸಾಕ್ಷಿ, ಮನಸ್ಸಾಕ್ಷಿಯೇ ಇದು ಅರಿಯದವರಿಗೆ ನಿನ್ನಿಂದ ಸಿಗದು ಎಂದು ನಿಶ್ಚಿಂತ ನಿದ್ರೆ ನಿನಗೆ ಗೌರವಿಸದವರ ಕಾರ್ಯಕ್ಕೆ ಸಿಗದು ನಿನ್ನಿಂದ ಎಂದು ಸಹಕಾರ ಸಾಕ್ಷಿ, ಮನಸ್ಸಾಕ್ಷಿಯೇ ನಿಜಕ್ಕೂ ದೈವಿ ಪ್ರತಿನಿಧಿಯಾದ ನೀನೇ ಎಲ್ಲ ಸಾಕ್ಷಿ, ಮನಸ್ಸಾಕ್ಷಿಯೇ ದರ್ಪದ ಪ್ರತಿನಿಧಿಯಾದ ನಾನು ಏನು ಇಲ್ಲ ©  Urain Namah  08/07/2018

ಬೇರಿಲ್ಲದೆ ವೃಕ್ಷ ಹೇಗಾಯಿತಣ್ಣ?

ಬೇರಿಲ್ಲದೆ ವೃಕ್ಷ ಹೇಗಾಯಿತಣ್ಣ? ಬೇರಿಲ್ಲದೆ ಹೂ ಹೇಗೆ ಅರಳಿತಣ್ಣ? ಬೇರಿಲ್ಲದೆ ಹಣ್ಣು ಹೇಗೆ ಕಟ್ಟಿಕೊಂಡಿತಣ್ಣ? ಹೂ, ಹಣ್ಣಿನ ಆಸೆಗೆ ಎಲೆ, ಬೇರನ್ನು ಮರೆತು ವೃಕ್ಷದೊಂದಿಗೆ ತನ್ನ ಗುರುತಿಸಿಕೊಂಡರೆ, ಅಣ್ಣ ಎಲೆಗೇನಿದೆ ಸೆಲೆ? ಅಣ್ಣ ಎಲೆಗೇನಿದೆ ನೆಲೆ? ಅಣ್ಣ ಎಲೆಗೇನಿದೆ ಬೆಲೆ? ಬೇರಾದ ಜ್ಯೋತಿಸ್ವರೂಪಳೇ ನೀನೇ ಎಲ್ಲಾ ಎಲೆಯಾದ ನಾನು ಏನು ಇಲ್ಲ. © URAIN  Urain Namah  06/07/18

* ಯಾವುದು ಸತ್ಯ?ಯಾವುದು ಸುಳ್ಳು? *

ನಾನು ಸತ್ಯ, ನಾವು ಸತ್ಯ ಬದಲಾಡದಿರುವದು, ಬದಲಾಗದಿರುವದು ಸತ್ಯ ನನ್ನದು ಸುಳ್ಳು, ನಮ್ಮದು ಸುಳ್ಳು ಬದಲಾಡುವದು, ಬದಲಾಗುವದು ಸುಳ್ಳು ನೋಡುಗ ನಾನು, ನೋಡಲ್ಪಡುವದು ನಾನಲ್ಲ ಸುಂದರ ಕುರೂಪ ಜಗತ್ತು ಬದಲಾದರೂ ಬಾಲ್ಯ ಯೌವ್ವನ ಮುಪ್ಪಿನ ಈ ದೇಹ ಬದಲಾದರೂ ನೋಡುಗ ನಾನು ಬದಲಾಗನು ಬದಲಾಗದ ನಾನು ನಾವು ಸತ್ಯ. ಬದಲಾಗುವ ನನ್ನದು, ನಮ್ಮದು ಸುಳ್ಳು ಕೇಳುಗ ನಾನು, ಕೇಳಲ್ಪಡುವದು ನಾನಲ್ಲ ಇಂಪು ಕರ್ಕಶ ಜಗಧ್ವನಿ ಬದಲಾದರೂ, ಬಾಲ್ಯ ಯೌವ್ವನ ಮುಪ್ಪಿನ ನನ್ನಧ್ವನಿ ಬದಲಾದರು ಕೇಳುಗ ನಾನು ಬದಲಾಗನು ಬದಲಾಗದ ನಾನು ನಾವು ಸತ್ಯ. ಬದಲಾಗುವ ನನ್ನದು, ನಮ್ಮದು ಸುಳ್ಳು ಮೂಸುವನು ನಾನು, ಮೂಸಲ್ಪಡುವದು ನಾನಲ್ಲ ಸುಗಂಧ ದುರ್ಗಂಧದ ಜಗದವಾಸನೆ ಬದಲಾದರೂ ಶುಚಿ ಅಶುಚಿ ಈ ದೇಹದವಾಸನೆ ಬದಲಾದರೂ, ವಾಸನೆ ಆಸ್ವಾದಿಸುವ ನಾನು ಬದಲಾಗನು ಬದಲಾಗದ ನಾನು ನಾವು ಸತ್ಯ. ಬದಲಾಗುವ ನನ್ನದು, ನಮ್ಮದು ಸುಳ್ಳು ರುಚಿಸುವವನು ನಾನು, ರುಚಿಗಳು ನಾನಲ್ಲ ಸೇವಿಸುವ ಆಹಾರದ ಸಿಹಿ ಕಹಿ ರುಚಿ ಬದಲಾದರೂ ರೋಗ ನೀರೋಗದಲ್ಲಿ, ಈ ನಾಲಿಗೆ ರುಚಿ ಬದಲಾದರೂ ರುಚಿ ನೋಡುವವ ನಾನು ಬದಲಾಗನು ಬದಲಾಗದ ನಾನು ನಾವು ಸತ್ಯ. ಬದಲಾಗುವ ನನ್ನದು, ನಮ್ಮದು ಸುಳ್ಳು ಸ್ಪರ್ಶನುಭವಿ ನಾನು, ಸ್ಪರ್ಶಿಸಲ್ಪಡುವದು ನಾನಲ್ಲ ಹಿತ ಅಹಿತ ಜಗದ ಸ್ಪರ್ಶ ಬದಲಾದರೂ ಬಾಲ್ಯ ಯೌವ್ವನ ಮುಪ್ಪಿನ ಈ ದೇಹ ಸ್ಪರ್ಶ ಬದಲಾದರೂ ಸ್ಪರ್ಶನುಭವಿ...

ಸಹನೆ, ಪ್ರಯತ್ನ

ಏನಾಗಲಿ, ಏನೇನು ಆಗಲಿ ಸಹನೆ, ಸತತ ಪ್ರಯತ್ನ ಹೊರತು ಬೇರೆ ನೇರ ಮಾರ್ಗ ಇಲ್ಲ ಬಾಳಲಿ ಸಹಿಸದಿದ್ದರೆ ಬಾಣಲೆಯಿಂದ ಬೆಂಕಿಗೆ ನಿರಂತರ ಯತ್ನವಿಲ್ಲದಿದ್ದರೆ ಎಂದು ಏಳೊದಿಲ್ಲ ಮೇಲೆ ಸಹನೆ ಸಲೀಸಲ್ಲ, ನಿರಂತರ ಪ್ರಯತ್ನ ಹೇಳಿದ ಹಾಗಲ್ಲ ಸಿಹಿ ಗಿಂತ ಕಹಿ ನೆನೆದರೆ ಸಹಿಸಲಾಗದು ಗೆಲವಿಗಿಂತ ಸೋಲನ್ನು ಚಿಂತಿಸಿದರೆ ಯತ್ನ ಸಾಗದು ಸಹಿಸಲು ಘೋರ ಕಲ್ಲಾಗಬೇಕು ನಿರಂತರ ಪ್ರಯತ್ನಕ್ಕೆ ಗಾಣದ ಎತ್ತಾಗಬೇಕು ದೇವ, ಪ್ರಾರಬ್ಧಕ್ಕೆ ಸಹನೆ ಹೊರತು ಅನ್ಯ ಮದ್ದಿಲ್ಲ ಪುರುಷಾರ್ಥಕ್ಕೆ ಸತತ ಯತ್ನದ ಹೊರತು ಅನ್ಯ ದಾರಿಯಿಲ್ಲ ನಾನು ಯಂತ್ರ, ಯಂತ್ರ ನಡೆಸುವ ಶಕ್ತಿ ನೀನು ಇಂದ್ರಿಯ ಗೋಚರ ನೀನೆ ಎಲ್ಲಾ ಇಂದ್ರಿಯ ಅಗೋಚರ ನಾನು ಏನು ಇಲ್ಲ. ದೇವ, ಏನಾಗಲಿ, ಏನೇನು ಆಗಲಿ ಕಷ್ಟಕ್ಕೆ ಕಲ್ಲಿನಂಥ ಸಹನೆ ನಾನಾಗಲಿ ನಿರಂತರ ಯತ್ನಕ್ಕೆ ಸದಾ ಪ್ರೇರಣೆ ನಿನಾಗಲಿ ನಿಮ್ಮ ಕೃಪೆ ಅರಿಯುವವನು ನಾನಾಗಲಿ ನನ್ನ ಎಲ್ಲ ಯಶಸ್ಸು, ನನ್ನ ಕೈ ಹಿಡಿದು ನಡೆಸುವ ನಿಮ್ಮದಾಗಲಿ U R ALL I AM NOT (© U R A I N ) 24/06/2018
ಅತಿಥಿ. ಅರಿತಿಲ್ಲ, ನಾನು ಅತಿಥಿ. ಅಂಟಿಕೊಂಡಿರುವೆ ಮಾಲೀಕನಾಗಿ. ಮರೆತಿರುವೆ ಎಲ್ಲವು ಇರುವದು ಗುತ್ತಿಗೆಗೆ, ಗುತ್ತಿಗೆ ಮುಗಿದಾಗ ಸ್ವತ್ತು ಮಾಲೀಕನಿಗೆ. ಹೀಗಾಗಿ ಸಿಲಿಕಿರುವೆ ಹೊರ ಬರಲು ಆಗದ ಚಕ್ರವ್ಯೂಹಕ್ಕೆ. U R ALL I AM NOT (© U R A I N )