ಇಂದು ಸೂರ್ಯ ಯಾವ ದಿಕ್ಕಿಗೆ ಉದಯಿಸಿದ್ದಾರೆ ?
ಪ್ರಶ್ನೆ : ಇಂದು ಹುಣ್ಣಿಮೆ. ಸೂರ್ಯ ದೇವರು ಇಂದು ಯಾವ ದಿಕ್ಕಿಗೆ ಉದಯಿಸಿದ್ದಾರೆ ? ಯಾವ ದಿಕ್ಕಿಗೆ ಅಸ್ತಂಗತರಾಗುತ್ತಾರೆ (ಮುಳುಗುತ್ತಾರೆ)? . . . . . . . ಈ ಪ್ರಶ್ನೆಗೆ ಸರಿಯಾದ ಉತ್ತರಕ್ಕಾಗಿ ಗುರುವಿನ ಅವಶ್ಯಕತೆ ಇದೆ. ಹಲವರು ಯೋಚಿಸಬಹುದು ಇದಕ್ಕೆ ಯಾಕೆ ಗುರು ಬೇಕು ? ಚಿಕ್ಕ ಮಕ್ಕಳು ಸಹ ಸೂರ್ಯ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುತ್ತಾನೆ, ಎಂದು ಈ ಪ್ರಶ್ನೆಗೆ ಉತ್ತರಿಸುತ್ತಾರೆ. ಆದರೆ ಇಲ್ಲಿಯೇ ಅಜ್ಞಾನ ಇದೆ. ಈ ಅಜ್ಞಾನದ ನಿವಾರಣೆಗಾಗಿಯೇ ಗುರುವಿನ ಅವಶ್ಯಕತೆ ಇದೆ. ಒಂದು ಉದಾಹರಣೆ ನೋಡೋಣ. ನಾಲ್ಕೈದು ಕುರುಡರು ಆನೆ ಹೇಗಿದೆ ? ಎಂದು ಕಂಡುಕೊಳ್ಳಲು ಹೋದರು. * ಬಾಲವನ್ನು ಹಿಡಿದಂತಹ ಕುರುಡ ವ್ಯಕ್ತಿ, ಆನೆಯೆಂದರೆ ಉದ್ದಕ್ಕೆ ತೆಳ್ಳಗೆ ಇದೆ, ಎನ್ನುತ್ತಾನೆ. * ಸೊಂಡಿಲು ಹಿಡಿದಂತಹ ಕುರುಡ ವ್ಯಕ್ತಿ ಆನೆಯೆಂದರೆ ಉದ್ದಕ್ಕೆ ಕೊಳಾಯಿಯಂತೆ ಇದೆ ಎನ್ನುತ್ತಾನೆ. * ಕಾಲುಗಳನ್ನು ಹಿಡಿದ ಕುರುಡ ವ್ಯಕ್ತಿ ಆನೆಯೆಂದರೆ ಕಂಬದಂತೆ ಇದೆ, ಎನ್ನುತ್ತಾನೆ. * ಹೊಟ್ಟೆಯನ್ನು ಹಿಡಿದ ಕುರುಡ ವ್ಯಕ್ತಿ ಆನೆಯೆಂದರೆ ಸಣ್ಣ ಪರ್ವತದಂತೆ ಇದೆ, ಎನ್ನುತ್ತಾನೆ. ಇವೆಲ್ಲಾ ಕುರುಡು ವ್ಯಕ್ತಿಗಳ ಪಾಲಿಗೆ ಸತ್ಯವೇ. ಆದರೆ ಕಣ್ಣಿರುವವರಿಗೆ ಇವು ಪೂರ್ಣ ಸತ್ಯವಲ್ಲ. ಕೇವಲ ಭಾಗಶಃ ಸತ್ಯ. ಈ ಜಗತ್ತಿನಲ್ಲಿ ಭಾಗಶಃ ಸತ್ಯ ಅರಿತಿರುವ ನಾವ...