ಶಿಕ್ಷಕರ ಸ್ಪರ್ಧೆ
*"ಆದರ್ಶ ಶಿಕ್ಷಕರು ಸತ್ಯ ಯುಗ ನಿರ್ಮಾಪಕರು"* (ಶೀರ್ಷಿಕೆಯಡಿ)
.... .... ..... .... ... .... ... ...
*ಆದರ್ಶ ಶಿಕ್ಷಕರು ಹೇಗಿರಬೇಕು ?* ಎನ್ನುವ "ಶಿಕ್ಷಕರ ಅನಿಸಿಕೆಗಳ" ಸ್ಪರ್ಧೆ
ಹಿರಿಯ ಮುಖಂಡರಾದ ಶ್ರೀ ಗಣಪತರಾವ ಚಿಮ್ಮನಚೋಡಕರ್ ರವರ *"ಅಮೃತ ಮಹೋತ್ಸವ"* ಹಾಗೂ *"ಶಿಕ್ಷಕ ದಿನಾಚರಣೆ"* ಪ್ರಯುಕ್ತ ಸೇಡಂ ತಾಲೂಕಿನ
* ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು
* ಖಾಸಗಿ ಪ್ರಾಥಮಿಕ ಶಾಲೆ ಶಿಕ್ಷಕರು
* ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರು
* ಖಾಸಗಿ ಪ್ರೌಢ ಶಾಲೆ ಶಿಕ್ಷಕರಿಗೆ ಸತ್ಯ ಯುಗ ಫೌಂಡೇಷನ್ ವತಿಯಿಂದ
*ಆದರ್ಶ ಶಿಕ್ಷಕ ಎಂದರೆ ಹೇಗಿರಬೇಕು ?* ಎನ್ನುವ ಕುರಿತು "ಶಿಕ್ಷಕರ ಅನಿಸಿಕೆ ಸ್ಪರ್ಧೆ" (ಭಾಷಣ ಅಲ್ಲಾ) ಏರ್ಪಡಿಸಲಾಗಿದೆ.
ಇದರಲ್ಲಿ ಭಾಗವಹಿಸುವ ಪ್ರತಿ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಟ್ರಸ್ಟ್ ಪದಾಧಿಕಾರಿಗಳ ಹಸ್ತಾಕ್ಷರ ಇರುವ ಪ್ರಶಸ್ತಿ ಪತ್ರ ನೀಡಲಾಗುವುದು.
ನಿರ್ಣಾಯಕರಿಂದ
1. ಪ್ರಾಥಮಿಕ ಸರ್ಕಾರಿ ಶಾಲೆ ವಿಭಾಗ
2. ಪ್ರಾಥಮಿಕ ಖಾಸಗಿ ಶಾಲೆ ವಿಭಾಗ
3. ಪ್ರೌಢ ಸರ್ಕಾರಿ ಶಾಲೆ ವಿಭಾಗ
4. ಪ್ರೌಢ ಖಾಸಗಿ ಶಾಲೆ ವಿಭಾಗ
ನಾಲ್ಕು ವಿಭಾಗದಲ್ಲಿ ಮೂರು ಅನಿಸಿಕೆಗಳನ್ನು (ಉತ್ತಮ, ಅತ್ಯುತ್ತಮ, ಸರ್ವಶ್ರೇಷ್ಠ ಅನಿಸಿಕೆ) ಆಯ್ಕೆ ಮಾಡಿ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರದೊಂದಿಗೆ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಟ್ರಸ್ಟ್ ಅಥವಾ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಂದ ಸನ್ಮಾನ ಮಾಡಲಾಗುವುದು.
*ಆದರ್ಶ ಶಿಕ್ಷಕರು ಹೇಗಿರಬೇಕು ?* ಎನ್ನುವ ಕುರಿತು ಶಿಕ್ಷಕರು ಗರಿಷ್ಠ ಮೂರು ನಿಮಿಷಗಳ ವಿಡಿಯೋ 9980426900 ಮೊಬೈಲ್ ನಂಬರ್ ಗೆ ಕಳುಹಿಸಬೇಕು.
ಇದರಲ್ಲಿ ಆದರ್ಶ ಶಿಕ್ಷಕರ
* ವಿಧ್ಯಾರ್ಥಿಗಳ ಜೊತೆ ಸಂಬಂಧ
* ವಿದ್ಯಾರ್ಥಿಗಳ ಜೊತೆ ವ್ಯವಹಾರ
* ಆದರ್ಶ ಶಿಕ್ಷಕರ ಚಿಂತನೆ, ವಿಚಾರಗಳು
* ಆದರ್ಶ ಶಿಕ್ಷಕರ ದೂರದೃಷ್ಟಿ
* ಆದರ್ಶ ಶಿಕ್ಷಕರ ಕರ್ತವ್ಯದ ರೀತಿ
* ಆದರ್ಶ ಶಿಕ್ಷಕರು ನಡೆಸುವ ಜೀವನ
* ಆದರ್ಶ ಶಿಕ್ಷಕರಿಂದ ನಿರ್ಮಾಣವಾದ ಮಹಾನ್ ನಾಯಕರ ಉದಾಹರಣೆ
* ದೇಶದ, ರಾಜ್ಯದ ಆದರ್ಶ ಶಿಕ್ಷಕರ ಉದಾಹರಣೆ
* ತಮ್ಮ ದೃಷ್ಟಿಯಲ್ಲಿರುವ ತಾಲೂಕಿನ ಆದರ್ಶ ಶಿಕ್ಷಕರ ಉದಾಹರಣೆ...
ಮತ್ತು
* ಭ್ರಷ್ಟ ಆಚಾರ ರಹಿತ, ಚಾರಿತ್ರ್ಯವಂತ ಸತ್ಯ ಸಮಾಜ ನಿರ್ಮಾಣದಲ್ಲಿ ಆದರ್ಶ ಶಿಕ್ಷಕರ ಪಾತ್ರ
* ಇನ್ನಿತರ...
ಈ ವಿಷಯ ಶಿಕ್ಷಕರ ಅನಿಸಿಕೆ ಒಳಗೊಂಡಿರಬೇಕು.
ಸೇಡಂ ತಾಲೂಕಿನ ಪ್ರತಿ ಶಾಲೆಯಿಂದ ಗರಿಷ್ಠ ಮೂವರು ಶಿಕ್ಷಕರು *ಆದರ್ಶ ಶಿಕ್ಷಕ ಹೇಗಿರಬೇಕು?* ಎನ್ನುವ ತಮ್ಮ ಅನಿಸಿಕೆ ವಿಡಿಯೋ ಕಳುಹಿಸಬಹುದು.
(ಹೆಚ್ಚು ಜನರು ಕಳುಹಿಸುವರಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಕಳುಹಿಸಬೇಕಾಗಿ ವಿನಂತಿ)
ವಿಡಿಯೋ ಕಳುಹಿಸಲು
ಆರಂಭ ದಿನಾಂಕ 24/08/2026
ಕೊನೆಯ ದಿನಾಂಕ 27/08/2026
ವಿಡಿಯೋ ಪ್ರಕಟಣೆ 29/08/2026
(ವಿಡಿಯೋಗಳನ್ನು YouTube ನ Sathya yuga foundation by URAIN NAMAH trust, ಚಾನೆಲ್ ನಲ್ಲಿ ಪ್ರಕಟಿಸಲಾಗುವುದು. ನಿರ್ಣಯ ಮುಖ್ಯವಾಗಿ ತೀರ್ಪುಗಾರನ್ನು ಅವಲಂಬಿಸಿರುತ್ತದೆ.)
ನಾಲ್ಕು ವಿಭಾಗಗಳಿಂದ, ಮೂರು ಉತ್ತಮ ಅನಿಸಿಕೆಗಳ ತೀರ್ಪು ಪ್ರಕಟಣೆ
02/09/2026 ರಂದು.
ಆದ್ದರಿಂದ ಈ ಮಾಹಿತಿಯನ್ನು *ಎಲ್ಲಾ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ತಾಲೂಕಿನ ಎಲ್ಲಾ ಶಿಕ್ಷಕರಿಗೆ ತಲುಪಿಸಬೇಕೆಂದು ಕಳಕಳಿಯ ಪ್ರಾರ್ಥನೆ*.
ವಿ.ಸೂ : *ಕೊನೆಯ ದಿನಾಂಕದ ವರೆಗೆ ಯೋಚಿಸದೆ ಕೂಡಲೇ ತಮ್ಮ ಅನಿಸಿಕೆಗಳನ್ನು ಕಳುಹಿಸಬೇಕಾಗಿ ವಿನಂತಿ*.
ಧನ್ಯವಾದಗಳೊಂದಿಗೆ
ಇಂತಿ ತಮ್ಮ
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ
ಕಾರ್ಯದರ್ಶಿಗಳು
ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಸೇಡಂ.

Comments
Post a Comment