*ಎಲ್ಲಾ ಆತ್ಮೀಯರಲ್ಲಿ ಒಂದು ವಿನಂತಿ : ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಗಳಂತಹ ಪ್ರಾಮಾಣಿಕರನ್ನು ನಿರ್ಮಾಣ ಮಾಡಲು ನಮ್ಮಿಂದ ಮಾಡುತ್ತಿರುವ ಒಂದು ಪ್ರಯತ್ನಕ್ಕೆ ಬೆಂಬಲಿಸಿ*


ಚಿತ್ರದಲ್ಲಿ ಕಾಣುವ ಈ ಸರ್ಕಾರಿ ನೌಕರಿಯಲ್ಲಿರುವ ಈ ಅಧಿಕಾರಿ, ತಮ್ಮ ಹಿಂದೆ, ಒಂದು ಬ್ಯಾನರನ್ನೆ ಹಚ್ಚಿದ್ದಾರೆ, *ನನಗೆ ಲಂಚ ಕೊಡಬೇಡಿ ನಾನು ಭ್ರಷ್ಟ ಅಧಿಕಾರಿ ಆಗಲಾರೆ*.


ಈ ರೀತಿ ಭ್ರಷ್ಟಾಚಾರ ರಹಿತ ಸತ್ಯ ಪ್ರಾಮಾಣಿಕತೆ ಹೊಂದಿರುವ ಅಧಿಕಾರಿಗಳ ಅವಶ್ಯಕತೆ ಇಂದು ಬಹಳ ಇದೆ. ಇಂತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಾದಾಗಲೇ ಸಮಾಜದಿಂದ ಭ್ರಷ್ಟಾಚಾರ ಹೋಗಲಿದೆ. 


 ನಮ್ಮ ಟ್ರಸ್ಟ ವತಿಯಿಂದ ವಿದ್ಯಾರ್ಥಿಗಳಿರುವಾಗಲೇ ಮಕ್ಕಳಿಗೆ ಈ ವಿಚಾರ ಮೂಡಲಿ ಎನ್ನುವ ಉದ್ದೇಶದಿಂದ ಭ್ರಷ್ಟಾಚಾರ ಹಾಗೂ ಅನೈತಿಕತೆ ಕುರಿತು ಸೇಡಂ ತಾಲೂಕಿನ ಎಲ್ಲಾ ಪ್ರೌಢ ಶಾಲೆಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಭ್ರಷ್ಟಾಚಾರದಿಂದ ಉಂಟಾಗುವ ಸಮಸ್ಯೆಗಳು ಹಾಗೂ ಪರಿಹಾರ ಉಪಾಯಗಳು ಬಗ್ಗೆ ಅಧ್ಯಯನ ಚಿಂತನೆ ಮನನವನ್ನು ಮಾಡಿದ್ದಾರೆ. ಇದು ಅವರು ನಾಗರಿಕರಾಗಿ ಪರಿವರ್ತನೆ ಆದಾಗ ಸ್ವಲ್ಪವಾದರೂ ಭ್ರಷ್ಟಾಚಾರ ವಿರುದ್ಧ ನಿಲ್ಲುವಂತೆ ಸತ್ಯ, ಪ್ರಾಮಾಣಿಕತೆ ಪರವಹಿಸುವಂತೆ ಮಾಡಲಿದೆ ಎನ್ನುವುದು ನಮ್ಮ ಆಶಾವಾದ.


 ನಮ್ಮ ಪ್ರಯತ್ನ ಒಂದು ಗಾಢವಾದ ಪ್ರಭಾವ ಅವರ ಮೇಲೆ ಬೀರಲಿ ಎನ್ನುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ 26 ಶಾಲೆಯ 74 ವಿಧ್ಯಾರ್ಥಿಗಳಿಗೆ ಪುನಃ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ನಾನಾ ಶಾಲೆಯ 33 ವಿದ್ಯಾರ್ಥಿಗಳು ಭಾಷಣದ ವಿಡಿಯೋ ಕಳುಹಿಸಿದ್ದಾರೆ. ಇವುಗಳಲ್ಲಿ 26 ಸ್ಪರ್ಧೆಗೆ ಯೋಗ್ಯವಾಗಿವೆ.


ಈ 26 ವಿಡಿಯೋಗಳನ್ನು ಸಾರ್ವಜನಿಕರು ಮೌಲ್ಯಮಾಪನ ಮಾಡುವ ಉದ್ದೇಶದಿಂದ 01/08/2026 ರಂದು ನಾಳೆ ಫೇಸ್ಬುಕ್ URAIN NAMAH ಅಕೌಂಟ್ನಲ್ಲಿ ಪ್ರಕಟಿಸಲಾಗುತ್ತಿದೆ. ಈ ಭಾಷಣದ ವಿಡಿಯೋಗಳ ಮೌಲ್ಯಮಾಪನ 11/08/2026ರ ವರೆಗೆ ನಡೆಯಲಿದೆ. ರಂದು 13 ರಂದು ಸ್ಪರ್ಧೆಯ ತೀರ್ಪು ನೀಡಲಾಗುವುದು.


ಆದ್ದರಿಂದ ಸಾರ್ವಜನಿಕರು ವಿದ್ಯಾರ್ಥಿಗಳನ್ನು, ಅವರ ಪ್ರತಿಭೆಯನ್ನು, ಹಾಗೂ ಉನ್ನತ ಜೀವನ ಮೌಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗುಣಮಟ್ಟದ ಆಧಾರದ ಮೇಲೆ ಪ್ರಾಮಾಣಿಕವಾಗಿ ಗರಿಷ್ಠ 7 ಅಂಕಗಳನ್ನು ವಿಧ್ಯಾರ್ಥಿಗಳಿಗೆ ಈ ಕೆಳಗಿನಂತೆ ನೀಡಬಹುದು.

 1 ಅಂಕ =👍,

 2 ಅಂಕ = ❤️, 

3 ಅಂಕ =🥰, 

4 ಅಂಕ= ಶೇರ್, 

5 ಅಂಕ = ಶೇರ್+👍, 

 6. ಅಂಕ =ಶೇರ್ +❤️,

 7.ಅಂಕ = ಶೇರ್ +🥰


ಸಾರ್ವಜನಿಕರು ಅಂಕ ನೀಡುವಾಗ 

 ವಿದ್ಯಾರ್ಥಿಯ ಭಾಷಣದಲ್ಲಿ ಈ ಕೆಳಗಿನ ಅಂಶ ಗಮನಿಸಬೇಕು.


* ಪ್ರಸ್ತಾಪಿಸುತ್ತಿರುವ ಭ್ರಷ್ಟಾಚಾರದ ಸಮಸ್ಯೆ, ಪರಿಹಾರ 

* ದೈಹಿಕ ಭಾಷೆ

* ಮಾತನಾಡುವ ಶೈಲಿ

* ಓದಿ ಹೇಳುತ್ತಿದ್ದಾರೆ ಅಥವಾ ನೋಡದೆ ಹೇಳುತ್ತಿದ್ದಾರೆ ಎನ್ನುವುದು

* ಭಾಷಣ ಕೇಳುಗರ ಮೇಲೆ ಬೀರುವ ಪ್ರಭಾವ

* ಸಮಸ್ಯೆ ಮತ್ತು ನಿವಾರಣೆಗೆ ವಿಧ್ಯಾರ್ಥಿ ನೀಡುತ್ತಿರುವ ಸೂಕ್ತ ಸಲಹೆಗಳನ್ನು ಗಮನಿಸಬೇಕು. ಹೀಗೆ ಗಮನಿಸಿ ಸೂಕ್ತ ಅಂಕ ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ. 


ಭಾಷಣಗಳನ್ನು ಮೌಲ್ಯಮಾಪನ ಮಾಡಿ ವಿಧ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಮತ್ತು ಅವರು ತಮ್ಮ ಮುಂದಿನ ಜೀವನದಲ್ಲಿ ಸತ್ಯ ನ್ಯಾಯ, ನೀತಿ, ಪ್ರಾಮಾಣಿಕತೆಯ ಸದ್ಗುಣಗಳನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗಬೇಕು, ಎಂದು ತಮ್ಮಲ್ಲಿ ವಿನಯಪೂರ್ವಕವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ.


ಧನ್ಯವಾದಗಳೊಂದಿಗೆ


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ 


ಕಾರ್ಯದರ್ಶಿಗಳು

ಸತ್ಯ ಯುಗ ಫೌಂ


ಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಸೇಡಂ

Comments

Popular posts from this blog