ವಿಧ್ಯಾರ್ಥಿ, ಶಿಕ್ಷಕ, ಶಿಕ್ಷಣ, ಸಮಾಜ ಬದಲಾವಣೆ.*"
*"ವಿಧ್ಯಾರ್ಥಿ, ಶಿಕ್ಷಕ, ಶಿಕ್ಷಣ, ಸಮಾಜ ಬದಲಾವಣೆ.*"
ಶಿಕ್ಷಕರ ದಿನಾಚರಣೆ ಹಾಗೂ ಹಿರಿಯ ಮುಖಂಡರಾದ ಶ್ರೀ ಗಣಪತರಾವ ಚಿಮ್ಮನಚೋಡಕರ್ ರವರ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ "ಆದರ್ಶ ಶಿಕ್ಷಕರು ಹೇಗಿರಬೇಕು?" ಎನ್ನುವ ಸ್ಪರ್ಧೆಯಲ್ಲಿ ಬಾಲ ಭಾರತಿ ವಿಧ್ಯಾ ಮಂದಿರ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಜಗದೇವಿ ಮಠಪತಿಯವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
(ಇವರು ತಮ್ಮ ಅನಿಸಿಕೆ ಜಾಲತಾಣದಲ್ಲಿ ಹಂಚಿಕೊಳ್ಳಲು ಪೂರ್ಣ ಅನುಮತಿ ನೀಡಿದ್ದಾರೆ. )
ಅವರು ವ್ಯಕ್ತಪಡಿಸಿರುವ ಅನಿಸಿಕೆಗಳಲ್ಲಿ ಮೂರು ವಿಷಯಗಳ ಕುರಿತು ನಾನು ಚರ್ಚಿಸಲು ಬಯಸುತ್ತೇನೆ.
1. ಶಿಕ್ಷಕರು ತಮ್ಮ ಅನಿಸಿಕೆಗಳ ಆರಂಭದಲ್ಲಿಯೇ, ಹಿಂದಿನ ಕಾಲ ಹಾಗೂ ಇಂದಿನ ಕಾಲದ ಶಿಕ್ಷಕರ ಮತ್ತು ವಿಧ್ಯಾರ್ಥಿಗಳ ನಡುವಿನ ಸಂಬಂಧದಲ್ಲಿ ವ್ಯತ್ಯಾಸವನ್ನು ಪ್ರಸ್ತಾಪ ಮಾಡಿದ್ದಾರೆ.
ಈ ವಿಷಯವನ್ನು ಶಿಕ್ಷಣ ತಜ್ಞರು, ಶಿಕ್ಷಣ ಪ್ರೇಮಿಗಳು, ದೇಶದ ಭವಿಷ್ಯವನ್ನು ಚಿಂತಿಸುವ ಸರ್ವರು ಗಂಭೀರವಾಗಿ ಚಿಂತಿಸುವ ಅವಶ್ಯಕತೆವಿದೆ. ಗಂಭೀರವಾಗಿ ಚಿಂತಿಸಿ ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕಾಗಿದೆ. (ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಘಟನೆ ದೇಶವೇ ಬೆಚ್ಚಿಬೀಳಿಸುವಂತೆ ಮಾಡಿತ್ತು.)
ಸಂಸ್ಕೃತದಲ್ಲಿ ಒಂದು ಹೇಳಿಕೆಯಿದೆ ಅದೇನೆಂದರೆ,*ಶ್ರದ್ಧಾವಾನ ಲಭ್ಯತೆ ಜ್ಞಾನಂ* ಯಾರಲ್ಲಿ ಶ್ರದ್ಧೆ ಇರುತ್ತದೆ, ಅವರಿಗೆ ಜ್ಞಾನ ಲಭಿಸುತ್ತದೆ. ಶಿಕ್ಷಕರು ಪ್ರಸ್ತಾಪ ಮಾಡಿರುವ ವಿಷಯವೆಂದರೆ, ವಿದ್ಯಾರ್ಥಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಪ್ರತಿ ಗೌರವ ಭಾವನೆ ಕಡಿಮೆಯಾಗಿರುವುದು.
* ಪರಸ್ಪರ ಗೌರವ ಇಲ್ಲದಿರುವುದು, ಒಳ್ಳೆಯ ಸಂಬಂಧ ಇಲ್ಲದಿರುವುದಕ್ಕೆ ಕಾರಣವಾಗುತ್ತದೆ.
* ಒಳ್ಳೆಯ ಸಂಬಂಧವಿಲ್ಲದಿರುವುದು, ಜ್ಞಾನದ ವಿನಿಮಯಕ್ಕೆ ಸಮಸ್ಯೆಯಾಗುತ್ತದೆ.
* ಶಿಕ್ಷಕರ ಪ್ರತಿ, ವಿಧ್ಯಾರ್ಥಿಗಳಿಗೆ ಶ್ರದ್ಧೆ ಇಲ್ಲದಿದ್ದರೆ ಜ್ಞಾನವೂ ಲಭಿಸುವುದಿಲ್ಲ.
ಇಂದು ನಾವೆಲ್ಲರೂ ಈ ಸಮಸ್ಯೆಗೆ ಕಾರಣವೇನು ಎನ್ನುವುದನ್ನು ಚಿಂತಿಸಬೇಕಾಗಿದೆ.
* ಇದಕ್ಕೆ ಶಿಕ್ಷಕರ ವರ್ತನೆ ಕಾರಣವೇ?
* ಪಾಲಕರಲ್ಲಿ ಶಿಕ್ಷಕರ ಬಗ್ಗೆ ಗೌರವ ಇಲ್ಲದಿರುವುದು ಕಾರಣವೇ ?
* ಸಮಾಜದ, ಸರ್ಕಾರದ, ಸಮೂಹ ಮಾಧ್ಯಮದ ಯಾವುದಾದರೂ ತಪ್ಪು ನಡೆ ಈ ಬದಲಾವಣೆಗೆ ಕಾರಣವೇ ? ಎನ್ನುವುದನ್ನು ಯೋಚಿಸಬೇಕಾಗಿದೆ.
ಈಗಾಗಲೇ ಈ ಶಿಕ್ಷಕರು, ಸೇರಿದಂತೆ, ಅನೇಕ ಶಿಕ್ಷಕರು, ವಿದ್ಯಾರ್ಥಿಗಳಿಂದ ತಪ್ಪುಗಳು ಆದಾಗ ಅವುಗಳನ್ನು ಮಾತೃ ಹೃದಯದಿಂದ ಕ್ಷಮಿಸಿ, ಅವರ ತಪ್ಪುಗಳನ್ನು ತಿದ್ದಿ ಮುನ್ನಡೆಸಬೇಕು ಎನ್ನುವ *ಒಳ್ಳೆಯ ಸಲಹೆಗಳನ್ನು 👍* ನೀಡಿದ್ದಾರೆ. ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲಾ ಶಿಕ್ಷಕರಿಗೂ ಸಮಾಜದ ವತಿಯಿಂದ ಹೃದಯಪೂರ್ವಕವಾಗಿ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
"ಮಕ್ಕಳ ತಪ್ಪುಗಳನ್ನು ಕ್ಷಮಿಸಿ ಮುನ್ನಡೆಸುತ್ತಿರುವ ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು 🙏🙏🙏"
ಇದರ ಜೊತೆಗೆ ಈ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಶಿಕ್ಷಕರು, ಪಾಲಕರು, ಸಮಾಜ, ಸರ್ಕಾರ ಎಲ್ಲರೂ ಚಿಂತಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಎಲ್ಲರಲ್ಲಿಯೂ ನಾನು ವಿನಂತಿಸುತ್ತೇನೆ.
2. ಈ ಶಿಕ್ಷಕರು ಪ್ರಸ್ತಾಪ ಮಾಡಿರುವ ಇನ್ನೊಂದು ವಿಷಯ *"ಶಿಕ್ಷಣ ಎನ್ನುವುದು, ವಿಧ್ಯಾರ್ಥಿಗಳಿಗೆ ಜ್ಞಾನವನ್ನು ನೀಡಿ, ಮಾನವೀಯತೆ ಕಡೆಗೆ ಕರೆದುಕೊಂಡು ಹೋಗುತ್ತದೆ*".
ಇಂಗ್ಲಿಷಿನಲ್ಲಿ ಒಂದು ಮಾತಿದೆ.
Education is human making, Character making,
Creating ability in everyone to face problem and find solution to it.
ಆದರೆ *ಇಂದು ಸರ್ಕಾರ, ಸಮಾಜ, ಶಾಲೆಗಳು ಆಡಳಿತ ಮಂಡಳಿ, ಶಿಕ್ಷಕರ ದೃಷ್ಟಿಯಲ್ಲಿ ಇಂದಿನ ಶಿಕ್ಷಣದ ವಾಸ್ತವಿಕ ಉದ್ದೇಶ ಏನಾಗಿದೆ ?* ಎನ್ನುವುದನ್ನು ಮತ್ತೊಮ್ಮೆ ನಾವು ಅವಲೋಕನ ಮಾಡಬೇಕಾಗಿದೆ.. .
ತಮ್ಮ ಅನಿಸಿಕೆಯಲ್ಲಿ, ಈ ಶಿಕ್ಷಕರು ಶಿಕ್ಷಣವು ವಿದ್ಯಾರ್ಥಿಗಳನ್ನು ಮಾನವೀಯತೆ ಕಡೆಗೆ ಕರೆದುಕೊಂಡು ಹೋಗುವ ಮಾರ್ಗ ಎಂದು ಹೇಳಿದ್ದಾರೆ.
ಇದು ನಿಜಕ್ಕೂ ಸತ್ಯವಾದ ವಿಚಾರ. ನಾನು ಸಹ ಶಿಕ್ಷಕರಿಗೆ ಮಹತ್ವ ಕೊಟ್ಟು ಈ ಸ್ಪರ್ಧೆ ಏರ್ಪಡಿಸಿರುವುದು ಈ ಕಾರಣದಿಂದಲೇ. ಆದ್ದರಿಂದಲೇ ಈ ಸ್ಪರ್ಧೆಯ ಶೀರ್ಷಿಕೆಯನ್ನು "ಶಿಕ್ಷಕರು ಸತ್ಯ ಯುಗ ನಿರ್ಮಾಪಕರು" ಎಂದು ನೀಡಿದ್ದೇನೆ.
ಆದರೆ ಇಂದಿನ ದೇಶದ ವಾಸ್ತವ ಪರಿಸ್ಥಿತಿಯೆಂದರೆ 100ಕ್ಕೆ 70 ರಿಂದ 80 ರಷ್ಟು ಶಿಕ್ಷಣದ ಉದ್ದೇಶ ಮನುಷ್ಯತ್ವದ ಕಡೆಗೆ ಕರೆದುಕೊಂಡು ಹೋಗುವುದು ಆಗಿಲ್ಲ.
* ಇಂದಿನ ಮನುಷ್ಯ ಯಾವುದು ಸುಖ ಎಂದು ತಿಳಿದಿದ್ದಾನೆ ಆ ಸುಖದ ಕಡೆಗೆ ಕರೆದುಕೊಂಡು ಹೋಗುವುದು ಇಂದಿನ ಶಿಕ್ಷಣದ ಉದ್ದೇಶವಾಗಿದೆ.
* ಇಂದಿನ ಶಿಕ್ಷಣದ ಮುಖ್ಯ ಉದ್ದೇಶ ಹೆಚ್ಚು ಅಂಕ ಗಳಿಸುವುದು, ಪ್ರಮಾಣ ಪತ್ರ ಪಡೆಯುವುದು ಆಗಿದೆ
* ಇಂದು ಯಾವುದನ್ನು ಸಫಲತೆ ಎಂದು ಗುರುತಿಸಲಾಗುತ್ತದೆ, ಆ ಸಫಲತೆ ಕಡೆಗೆ ಕರೆದುಕೊಂಡು ಹೋಗುವುದು ಇಂದಿನ ಶಿಕ್ಷಣವಾಗಿದೆ.
* ಇಂದು ಹೆಚ್ಚಾಗಿ ಹಣವನ್ನು ಸಪಲತೆಯೋಂದಿಗೆ ಗುರುತಿಸಲಾಗುತ್ತಿದೆ. * ಹೆಚ್ಚು ಹಣ ಗಳಿಸುವುದು, ಹೆಚ್ಚು ಸಪಲತಗೆ ಒಂದು ಮಾನದಂಡ.
* ಸಪಲತೆಗೆ ನಾವು ಕ್ರಮಿಸುವ ಮಾರ್ಗ ಸರಿಯೇ , ತಪ್ಪೇ ಇದು ಪ್ರಮುಖವಾಗಿಲ್ಲ.
(ಮನುಷ್ಯ ಬದುಕಲು ಹಣ ಮುಖ್ಯವಾಗಿದೆ. ಆದರೆ ಮಾನವ ಜೀವನದಲ್ಲಿ ಹಣಕ್ಕಿಂತಲೂ ಮನುಷ್ಯತ್ವ ಮುಖ್ಯವಾಗಿದೆ. ಈ ಮನುಷ್ಯತ್ವದ ಕಾರಣದಿಂದಲೇ ಮನುಷ್ಯ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ. ಇಲ್ಲದಿದ್ದರೆ ಮನುಷ್ಯನಿಗೂ ಪ್ರಾಣಿಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಪ್ರಾಣಿ ಎಂದು ಕರೆಯುವ ಚಿಂಪಾಂಜಿಗೂ ನಮ್ಮೆಲ್ಲರಂತೆ ಎರಡು ಕಾಲು, ಎರಡು ಕೈ ಒಂದು ತಲೆ ಇದೆ.)
ತಮ್ಮ ಅನಿಸಿಕೆಯಲ್ಲಿ ಶಿಕ್ಷಕರು ಹೇಳಿದಂತೆ ಶಿಕ್ಷಣವು ವಿದ್ಯಾರ್ಥಿಗಳನ್ನು ಮನುಷ್ಯತ್ವದ ಕಡೆಗೆ ಕರೆದುಕೊಂಡು ಹೋಗುವ ಮಾರ್ಗ ಆಗುವುದಕ್ಕೆ ಸಮಾಜ, ಸರ್ಕಾರ, ಶಿಕ್ಷಣ ಸಂಸ್ಥೆಗಳು ಪಾಲಕರು ತೆಗೆದುಕೊಳ್ಳಬಹುದಾದ ಕ್ರಮಗಳ ಏನಿವೆ ? ಯಾವುದರಿಂದ ಶಿಕ್ಷಣವೂ
Human making
Character making
Ability to solve life problem by human values ಆಗಬಹುದು ?
ಇದರ ಕುರಿತು ಸರ್ವರೂ ಚಿಂತನೆ ನಡೆಸಿ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಹೀಗಾದಾಗ ಮಾತ್ರ ಶಿಕ್ಷಣದ ನಿಜವಾದ ಉದ್ದೇಶ ಈಡೇರುತ್ತದೆ. ಮತ್ತು ಆಗ ಮಾತ್ರ ಮನುಷ್ಯ ಪಶು ಗುಣಗಳಿಂದ ಮನುಷ್ಯ ಗುಣಗಳ ಕಡೆಗೆ ಹೊರಳುತ್ತಾನೆ.
3. ಈ ಶಿಕ್ಷಕರು ಹೇಳಿರುವ ಮತ್ತೊಂದು ಸಂಗತಿ, ಭ್ರಷ್ಟಾಚಾರವನ್ನು ತಡೆಯುವುದು ಕೇವಲ ಕೋರ್ಟು ಕಾನೂನು, ಪೋಲಿಸರಿಂದ ಮಾತ್ರ ಸಾಧ್ಯವಿಲ್ಲ. ಸರ್ಕಾರ ಕಾನೂನು ರೂಪಿಸಬಹುದು, ಆದರೆ ಅದನ್ನು ಗೌರವಿಸುವಂತಹ ನಾಗರಿಕರನ್ನು ಸೃಷ್ಟಿ ಮಾಡುವುದು ಶಿಕ್ಷಕರು ಮಾತ್ರ. ಶಿಕ್ಷಕರು ಮಾತ್ರ ವಿದ್ಯಾರ್ಥಿಗಳನ್ನು ಸತ್ಯ ಮಾರ್ಗದ ಕಡೆಗೆ ಕೊಂಡೊಯ್ಯುವುದು ಸಾಧ್ಯ, ಎನ್ನುವುದನ್ನು ಖಚಿತವಾಗಿ ಹೇಳಿದ್ದಾರೆ.
ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದವರು ಈ ರೀತಿ ಹೇಳಬಹುದು. ಆದರೆ ಎಷ್ಟು ಶಿಕ್ಷಕರು ಅನೌಪಚಾರಿಕವಾಗಿ ಮಾತನಾಡುವಾಗ ಈ ರೀತಿ ಮಾತನಾಡುತ್ತಾರೆ ?
ಇಂದು ಅನೇಕ ಶಿಕ್ಷಕರನ್ನು ಅನೌಪಚಾರಿಕವಾಗಿ ಮಾತನಾಡಿದಾಗ ಅನೇಕ ರೀತಿಯ ಶಿಕ್ಷಕರ ಸಮಸ್ಯೆಗಳು ಕಂಡು ಬಂದಿವೆ. ಅದು
* ಶಿಕ್ಷಕರಿಗೆ ಸ್ವಾತಂತ್ರ್ಯ ಕಡಿಮೆ ಆಗಿರುವ ವಿಚಾರ ಆಗಿರಬಹುದು.
* ಶಿಕ್ಷಣದ ಕಲಿಕೆಯನ್ನು ಹೊರತುಪಡಿಸಿ ಇನ್ನಿತರ ಜವಾಬ್ದಾರಿ ಹೆಚ್ಚಿಸಿರುವುದು ಆಗಿರಬಹುದು.
* ಶಿಕ್ಷಕರಿಗೆ ಸಿಗಬಹುದಾದ ಗೌರವಕ್ಕೆ ಧಕ್ಕೆ ಬಂದಿರುವ ವಿಚಾರ ಇರಬಹುದು.
* ಖಾಸಗಿ ಶಾಲೆ ಶಿಕ್ಷಕರಿಗೆ ವೇತನ ಕಡಿಮೆ ಇರುವ ವಿಚಾರ ಆಗಿರಬಹುದು.
* ಇನ್ನಿತರ ಬೇರೆ ಯಾವುದೇ ವಿಚಾರ ಇರಬಹುದು... (ಮತ್ತೆ ಬೇರೆ ಸಮಸ್ಯೆಗಳು ಇದ್ದರೂ ಹಂಚಿಕೊಳ್ಳಿ.)
ಮುಂದಿನ ದಿನಗಳಲ್ಲಿ ಅನೇಕ ವಿಚಾರಗಳನ್ನು ಸಮಾಜ, ಸರ್ಕಾರದ ಮುಂದಿಡುವ ಹಾಗೂ ಇವುಗಳನ್ನು ಪರಿಹರಿಸುವ ಪ್ರಯತ್ನ ನಾವೆಲ್ಲರೂ ಮಾಡೋಣ.
ನಮ್ಮ ಉದ್ದೇಶ, ಸ್ಪರ್ಧೆಯಲ್ಲಿ ಭಾಗವಹಿಸಿದವರು ಮಾತ್ರ ಆದರ್ಶ ಶಿಕ್ಷಕರ ಮಾತುಗಳನ್ನಾಡದೆ, ಎಲ್ಲಾ ಶಿಕ್ಷಕರು ಸಹ ಅನೌಪಚಾರಿಕವಾಗಿ ಮಾತನಾಡುವಾಗಲೂ *ಒಬ್ಬ ಶಿಕ್ಷಕನ ಶ್ರೇಷ್ಠ ಸಾಮರ್ಥ್ಯದ ಬಗ್ಗೆ* ಮಾತನಾಡಬೇಕು ಎನ್ನುವುದಾಗಿದೆ.
ಏಕೆಂದರೆ ಈ ಅನಿಸಿಕೆ ವ್ಯಕ್ತಪಡಿಸಿದ ಶಿಕ್ಷಕರು ಹೇಳಿದಂತೆ ಶಿಕ್ಷಕನಿಗೆ ಸಮಾಜ ದೇಶ ಜಗತ್ತನ್ನು ಪರಿವರ್ತಿಸುವ ದೊಡ್ಡ ಶಕ್ತಿಯಿದೆ. ಅದನ್ನು ಅರಿತು ಕಾರ್ಯ ನಿರ್ವಹಿಸಬೇಕಷ್ಟೇ.
ಈ ಕಾರಣದಿಂದ ದೇಶ, ಸರ್ಕಾರ ಸಮಾಜದ ಹಾಗೂ ನಮ್ಮ ನಿರೀಕ್ಷೆಗಳು ಶಿಕ್ಷಕರ ಮೇಲೆ ಅಪಾರವಾಗಿವೆ.
ಒಂದು ದೇಶದಲ್ಲಿ ಎಷ್ಟೇ ದೊಡ್ಡ ದೊಡ್ಡ ಕೈಗಾರಿಕೆಗಳಿರಬಹುದು. ಅವುಗಳಿಂದ ಎಷ್ಟೇ ದೊಡ್ಡ ಆದಾಯ ಸರ್ಕಾರಕ್ಕೆ ಬರಬಹುದು. ಆದರೆ ಎಲ್ಲಾ ಕೈಗಾರಿಕೆಗಳು ಉತ್ಪತ್ತಿ ಮಾಡುವುದು ನಿರ್ಜೀವ ವಸ್ತುಗಳನ್ನು ಮಾತ್ರ. ಆದರೆ ಒಬ್ಬ ಶಿಕ್ಷಕ ನಿರ್ಮಿಸುವುದು ಕುಟುಂಬ, ಸಮಾಜ, ದೇಶ ಕಟ್ಟುವ ಜೀವಂತ ಅನೇಕ ನಾಗರಿಕರನ್ನು.
ಆದ್ದರಿಂದ ಈ ಶಿಕ್ಷಕರು, ಹೇಳಿದಂತೆ *"ಶಿಕ್ಷಕರಿಂದ ಮಾತ್ರ ಸತ್ಯ ಮಾರ್ಗದಲ್ಲಿ ನಡೆಯುವ ನಾಗರಿಕರನ್ನು ನಿರ್ಮಿಸುವುದು ಸಾಧ್ಯ"* ಎನ್ನುವ ಯೋಚನೆಯನ್ನು ಎಲ್ಲಾ ಶಿಕ್ಷಕರು ಸಹ ಹೊಂದಬೇಕಾಗಿದೆ.
ಇಂತಹ ಯೋಚನೆಗಳು, ವಿಚಾರಗಳು, ಸಂಕಲ್ಪದಿಂದ ಸಮಾಜ, ದೇಶವನ್ನು ಜಗತ್ತನ್ನು ಕಾಡುತ್ತಿರುವ ಅನೇಕ ರೀತಿಯ ಭ್ರಷ್ಟ ಆಚರಣೆಗಳು ಪತನ ಹೊಂದಿ, ಪುನಃ ಸತ್ಯ ಯುಗ ನಿರ್ಮಿಸುವುದು ಸಾಧ್ಯವಾಗುತ್ತದೆ.
ಈ ಶಿಕ್ಷಕಿಯರು ತಮ್ಮ ಅನಿಸಿಕೆಯ ಕೊನೆಯಲ್ಲಿ , "ಒಬ್ಬ ಆದರ್ಶ ಶಿಕ್ಷಕ ಒಂದು ತರಗತಿ ಸುಧಾರಿಸುತ್ತಾನೆ. ಒಂದು ತರಗತಿ ಒಂದು ಸಮಾಜವನ್ನು ಸುಧಾರಿಸುತ್ತದೆ". ಎಂದು ಹೇಳಿದ್ದಾರೆ.
ನಾನು, ಇದನ್ನೇ ಮುಂದುವರಿಸಿ ಹೇಳುವುದಾದರೆ, *"ಒಂದು ವೇಳೆ ಎಲ್ಲರೂ ಆದರ್ಶ ಶಿಕ್ಷಕರಾದರೆ, ಇಡೀ ಜಗತ್ತೇ ಸುಧಾರಿಸುತ್ತದೆ ಮತ್ತೇ ಜಗತ್ತಿನಲ್ಲಿ ಪುನಃ ಸತ್ಯ ಯುಗ ಮರಳುತ್ತದೆ."* ಎಂದು ಹೇಳಬಹುದು.
ಅನೇಕ ಶಿಕ್ಷಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಆದರ್ಶ ಶಿಕ್ಷಕರ ವಿಚಾರ, ಚಿಂತನೆ ನಡವಳಿಕೆ, ಆದರ್ಶ ಶಿಕ್ಷಕರ ದೂರದೃಷ್ಟಿ, ಜೀವನ, ಅವರ ವಿಧ್ಯಾರ್ಥಿಗಳ ಜೊತೆ ಸಂಬಂಧ, ವ್ಯವಹಾರ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದೀರಿ.
ಇಲ್ಲಿ ಹಂಚಿಕೊಂಡಿರುವ ಆದರ್ಶ ಶಿಕ್ಷಕರ ಯೋಚನೆಗಳು ವಿಚಾರಗಳು ಎಲ್ಲರೂ ಪದೇ ಪದೇ ಯೋಚಿಸುವಂತಾಗಲಿ. ಆಗ ಪ್ರತಿ ಶಿಕ್ಷಕ ಆದರ್ಶ ಶಿಕ್ಷಕನಾಗುತ್ತಾನೆ. ಆ ಆದರ್ಶ ಶಿಕ್ಷಕರಿಂದ ಇಡೀ ಜಗತ್ತು ಬದಲಾಗುತ್ತದೆ.
ಇದನ್ನು ತಿಳಿಸುತ್ತಾ, ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ, ಸ್ಪರ್ಧೆಗೆ ಸಹಕರಿಸಿದ ಹಿತ ಚಿಂತಕರಿಗೂ, ನಿರ್ಣಾಯಕರಿಗೂ ನಮ್ಮ ವತಿಯಿಂದ ತುಂಬು ಹೃದಯದಿಂದ ಕೃತಜ್ಞತೆಗಳನ್ನು
ಅರ್ಪಿಸುತ್ತೇನೆ.
ಧನ್ಯವಾದಗಳೊಂದಿಗೆ
ಇಂತಿ ತಮ್ಮ
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ
Comments
Post a Comment