*ರಾಜ್ಯ ಹೆದ್ದಾರಿಯಲ್ಲಿ, ಮುಂದಿರುವ ವಾಹನ ಒಮ್ಮೆಗೆ ವೇಗ ಕಡಿಮೆ ಮಾಡಿದರೆ ಹಿಂದಿರುವ ವಾಹನ ಸವಾರನ ಗತಿ ಏನು?*


ನಿನ್ನೆ (ಶನಿವಾರ 19/09/26) ಕೆಲಸ ಮುಗಿಸಿ ರಾತ್ರಿ ಸೇಡಂ ಕಡೆಗೆ ನನ್ನದೆಯಾದ ವೇಗದಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದೆ. ನನ್ನ ಮುಂದಿರುವ ವಾಹನವು ತನ್ನದೆಯಾದ ವೇಗದಲ್ಲಿ ಮುಂದೆ ಹೋಗುತ್ತಿತ್ತು. ನನಗೂ ಆ ವಾಹನಕ್ಕೂ ಬಹುಶಃ 3 ರಿಂದ 4 ಮೀಟರ್ ಅಂತರವಿತ್ತು. ಆದರೆ ಎರಡು ವಾಹನ ಒಂದೇ ದಿಕ್ಕಿನಲ್ಲಿ ನೇರವಾಗಿ ಇದ್ದವು.


ಆದರೆ ಮುಂದಿರುವ ಇಬ್ಬರು ಕುಳಿತುಕೊಂಡಿರುವ ದ್ವಿಚಕ್ರ ವಾಹನ ನಡು ರಸ್ತೆಯಲ್ಲಿ ಒಮ್ಮೆಗೆ ತನ್ನ ಚಲಿಸುವ ವೇಗ ಕಡಿಮೆ ಮಾಡಿತು. ಹಿಂದೆ ನನ್ನ ವಾಹನ ಮೊದಲಿನ ವೇಗದಲ್ಲಿ ಇದೆ. ಅದೇ ದಿಕ್ಕಿನಲ್ಲಿ ಹೋದರೆ ಮುಂದಿನ ಗಾಡಿಗೆ ಡಿಕ್ಕಿ ಹೊಡೆಯುತ್ತದೆ. ಬಲ ಪಕ್ಕಕ್ಕೆ ತಿರುಗಿಸಬೇಕೆಂದು ಯೋಚನೆ ಮಾಡಿದೆ. ಅಷ್ಟರಲ್ಲಿ ಒಂದು ಕಾರ್ ಆ ಕಡೆ ಬರುತ್ತಿದೆ. ಮುಂದೆ ಹೋಗುವ ಹಾಗಿಲ್ಲ. ಬಲ ಪಕ್ಕಕ್ಕೆ ತಿರುಗುವ ಹಾಗಿಲ್ಲ.


ನನಗೆ ಒಂದೇ ಸಮನೆ ಎದುರು ಇರುವ ಸವಾರನ ಮೇಲೆ ಸಿಟ್ಟು ಬರುತ್ತಿದೆ. ಸಮಯ ಪ್ರಜ್ಞೆಯಿಂದ ಎಡಕ್ಕೆ ಸ್ವಲ್ಪ ಜಾಗವಿತ್ತು. ನನ್ನ ಅದೇ ವೇಗದಲ್ಲಿ ಎಡಕ್ಕೆ ವಾಹನ ತೆಗೆದುಕೊಂಡೇ.


ಆಗ ಒಂದೇ ಸಮಯಕ್ಕೆ ಎರಡು ವಿಷಯಗಳ ತಾಕಲಾಟ ಎದುರಿಸಿದೆ..


 1.. ಮುಂದಿನವರು ಏಕೆ ಗಾಡಿ ನಿಧಾನ ಮಾಡಿದರು ಎನ್ನುವ ಕಾರಣ ತಿಳಿಯಿತು.

2. ಈಗ ನಾನು ಹೇಗೆ ಎರಡು ತಪ್ಪಿನಿಂದ ಪಾರಾಗಬೇಕು ? ಎನ್ನುವ ಸವಾಲು ಎದುರಾಯಿತು.


ಮುಂದಿನವರು ಗಾಡಿ ನಿಧಾನ ಮಾಡಿರುವುದಕ್ಕೆ ಕಾರಣ ಎಂದರೆ "ನಡು ರಸ್ತೆಯಲ್ಲಿ ಬಲದಿಂದ ಎಡ ಭಾಗಕ್ಕೆ ಒಂದು ಚಿಕ್ಕ ಹಾವು ವೇಗವಾಗಿ ತೆವಳಿಕೊಂಡು ಬರುತ್ತಿತ್ತು". ಅದನ್ನು ನೋಡಿದಾಗ ಇವರು ತಪ್ಪು ಮಾಡಿಲ್ಲ, ಸುಮ್ಮನೆ ಇವರಿಗೆ ಬೈದುಕೊಂಡೆ ಎನ್ನುವ ಅಪರಾಧಿ ಭಾವ ಒಂದು ಕಡೆ ಬಂತು.


ಇನ್ನೊಂದು ಕಡೆ ಮುಂದೆ ಇದ್ದವರ ಪರಿಸ್ಥಿತಿಯೇ ನನಗೆ ಈಗ ಇದೆ. ಹಾವು ಈಗ ಅವರನ್ನು ದಾಟಿ ನನ್ನ ಮುಂದೆ ಬಂದಿದೆ. ಎರಡು ಸವಾಲುಗಳು, 


* ಒಂದು ಹಾವಿನ ಮೇಲೆ ನನ್ನ ಗಾಡಿ ಹೋಗಬಾರದು. 

* ಇನ್ನೊಂದು ಕಡೆ ಗಾಡಿ ನಿಧಾನವಾದರೆ ಹಿಂದಿನವರು ಸಹ ನನ್ನಂತೆ ತೊಂದರೆಗೊಳಗಾಗುತ್ತಾರೆ.


ಹೀಗೆ ಉಭಯ, ತ್ರಿಭಯ ಸಂಕಟಗಳು ಅಲ್ಪ ಸಮಯದಲ್ಲಿ ಎದುರಾಯಿತು. ಆಗ ಹಾವು ಹೋಗುವುದಕ್ಕೆ ಕಾಯುತ್ತಾ,ನನ್ನ ವೇಗ ಕಡಿಮೆ ಮಾಡದೆ, ಇನ್ನೂ ಎಡಕ್ಕೆ ಅದೇ ವೇಗದಲ್ಲಿ ಗಾಡಿ ಚಲಾಯಿಸಿ ತ್ರಿಭಯ ಸಂಕಟದಿಂದ ಪಾರಾದೆ.


***** ***** ***** *****"


ಇದರಿಂದ ನನಗೆ ತಿಳಿದ ವಿಷಯವೆಂದರೆ, ಕೆಲವೊಮ್ಮೆ ನಮಗೆ ಪರಿಸ್ಥಿತಿಯನ್ನು ದೂರದಿಂದ ಸರಿಯಾಗಿ ಊಹಿಸಲು ಸಾಧ್ಯವಾಗುವುದಿಲ್ಲ. 


 * ಎದುರಿನವರದು ತಪ್ಪು ಮಾಡುತ್ತಿದ್ದಾರೆ, ಎಂದು ನಮಗೆ ಅನಿಸುತ್ತದೆ.


* ಎದುರಿನವರು ಇರುವಂತಹ ಪರಿಸ್ಥಿತಿಯಲ್ಲಿ ನಾವು ಇದ್ದರೆ, ಅವರದು ತಪ್ಪಲ್ಲ. ನಾನು ಅವರ ಜಾಗದಲ್ಲಿ ಇದ್ದರೆ ಹೀಗೆ ಮಾಡುತ್ತಿದ್ದೆ ಅನಿಸುತ್ತದೆ.


ಆದ್ದರಿಂದ ಯಾರಾದು ತಪ್ಪು ಎಂದು ಹೇಳುವ ಮುಂಚೆ, ಅವರ ಸ್ಥಾನದಲ್ಲಿ ನಿಂತು ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳೋಣ. 


ಒಂದು ನಿರ್ಧಾರಕ್ಕೆ ಬರುವ ಮುಂಚೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಮಯ ನೀಡೋಣ. ಸಮಸ್ಯೆ ಅರ್ಥವಾದ ನಂತರ ಅದನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳೋಣ.


ಪರಿಸ್ಥಿತಿ,ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಮಯ ನೀಡದೆ, ಸಿಟ್ಟಿನ ನಡುವಳಿಕೆಗಳಿಗೆ ಅವಕಾಶ ನೀಡಿ ಒಬ್ಬರಿಗೊಬ್ಬರು ಸಂಬಂಧಗಳನ್ನು ಹಾಳು ಮಾಡಿಕೊಳ್ಳದಿರೋಣ. 


ಕೊನೆಯ ಮಾತು : ಒಂದು ಘಟನೆ ನಡೆಯುತ್ತದೆ. ದೂರದಲ್ಲಿ ನಿಂತು ಘಟನೆ ಅರ್ಥವಾಯಿತು ಎಂದು ಸಿಟ್ಟಿನಲ್ಲಿ ಪ್ರತಿಕ್ರಿಯಿಸುವುದು ಬೇಡ.


ಆ ಪರಿಸ್ಥಿತಿಗೆ ಹೋಗಿ, ಘಟನೆ ಸರಿಯಾಗಿ ಅರ್ಥ ಮಾಡಿಕೊಳ್ಳೋಣ, 


ಅರ್ಥ ಮಾಡಿಕೊಂಡು ಸರಿಯಾಗಿ ಪ್ರತಿಕ್ರಿಯಿಸೋಣ.


ಓಂ ನಮಃ ಶಿವಾಯ


ಎಲ್ಲರಿಗೂ ಧನ್ಯವಾದಗಳು



ಇಂತಿ ತಮ್ಮ


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ

Comments

Popular posts from this blog