Posts

 ಆದರ್ಶ ಶಿಕ್ಷಕರು ಹೇಗಿರಬೇಕು ?- ಸ್ಪರ್ಧೆ ಅನಿಸಿಕೆಗಳಲ್ಲಿ ಕಂಡಂತಹ ಒಬ್ಬ ಶಿಕ್ಷಕರ ಎರಡು ವಿಭಿನ್ನ  ದೃಷ್ಟಿಕೋನದ ಮತ್ತು ಸತ್ಯತೆಯನ್ನು ಹೊಂದಿರುವ ಅನಿಸಿಕೆಗಳು. ಎಲ್ಲರಿಗೂ ನಮಸ್ಕಾರ 🙏  ಶಿಕ್ಷಕರ ದಿನಾಚರಣೆ ಹಾಗೂ ನಮ್ಮ ತಂದೆಯವರ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ ಶಿಕ್ಷಕರ ಅನಿಸಿಕೆ ಸ್ಪರ್ಧೆಯಲ್ಲಿ ಕೆಲವು ಅನಿಸಿಕೆಗಳು, ಎಲ್ಲಾ ಶಿಕ್ಷಕರ ಅನಿಸಿಕೆಯಲ್ಲಿ, ಸಾಮ್ಯತೆಯಿಂದ ಕೂಡಿವೆ. ಆದರೆ, *ಒಬ್ಬ ಶಿಕ್ಷಕರ ಎರಡು ವಿಭಿನ್ನ, ಸತ್ಯ ಅನಿಸಿಕೆಗಳು* ನನ್ನ ಗಮನಕ್ಕೆ ಪದೇ ಪದೇ ಬರುತ್ತಿವೆ ಮತ್ತು ನನಗೆ ಪುನಃ ಪುನಃ ಯೋಚನೆ ಮಾಡುವಂತೆ ಮಾಡುತ್ತಿವೆ. ಆದ್ದರಿಂದ ಈ ಅನಿಸಿಕೆಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.  ಈ ಅನಿಸಿಕೆ ಸತ್ಯವೇ ಆಗಿವೆ. ಆದರೂ ಈ ಅನಿಸಿಕೆಗಳಂತೆ ಎಲ್ಲರೂ ಯೋಚಿಸುವುದು ಮತ್ತು ಅದರಂತೆ ನಡೆಯುವುದು ಬಹಳ ಕಷ್ಟ ಎಂದು ನನಗೆ ಅನಿಸುತ್ತದೆ.  ಆದರೂ ಈ ಅನಿಸಿಕೆಯಂತೆ ಯೋಚಿಸಿ ಎಷ್ಟು ಸಾಧ್ಯವೋ ಅಷ್ಟು, ಈ ಅನಿಸಿಕೆಯಂತೆ ನಡೆಯಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಕೋರುತ್ತೇನೆ.  ಈ ಅನಿಸಿಕೆ ವ್ಯಕ್ತಪಡಿಸಿದವರು *ಸರ್ಕಾರಿ ಪ್ರಾಥಮಿಕ ಶಾಲೆ ವಿಭಾಗದ ಶಿಕ್ಷಕರು*. ಅವರ ಅನಿಸಿಕೆ ವಿಡಿಯೋ ಹಂಚಿಕೊಳ್ಳಲು ಅನುಮತಿಯಿಲ್ಲದ ಕಾರಣ ಇದನ್ನು ಹಂಚಿಕೊಳ್ಳುವದಿಲ್ಲ. ನನಗೆ ಕಂಡ ಎರಡು ವಿಭಿನ್ನ ಅನಿಸಿಕೆಗಳಲ್ಲಿ ಮೊದಲ ಅನಿಸಿಕೆ 1.  ಹಲವು ಶಿಕ್ಷಕರು ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕ...

ಗುರುವಿನ ವಾಕ್ಯ

  ಗುರುವಿನ ವಾಕ್ಯ : ನೀನು ರಾತ್ರಿ ಕಾಣುವ ಕನಸಿನಲ್ಲಿ ಒಂದು ಲೋಕವೇ ಇರುತ್ತದೆ. ಆ ಕನಸಿನ ಲೋಕದಲ್ಲಿ ನೀನೇ ನಿನ್ನ ಸ್ನೇಹಿತನಾಗಿರುತ್ತೀಯ. ನೀನೇ ನಿನ್ನ ಶತ್ರು ಆಗಿರುತ್ತಿಯಾ. ನೀನೇ ತಂದೆ, ತಾಯಿ, ಬಂಧು ಬಳಗ ಎಲ್ಲವೂ ನೀನೇ ಆಗಿರುತ್ತಿಯಾ. ನಿನ್ನ ಕನಸಿನ ಲೋಕದಲ್ಲಿ ನಿನ್ನ ಬಿಟ್ಟು ಬೇರೆ ಯಾರು ಇಲ್ಲ. ಹಾಗೆಯೇ ಎಚ್ಚರದ ಲೋಕದಲ್ಲಿ ಆ ಒಬ್ಬ ದೇವರೇ ಎಲ್ಲವೂ ಆಗಿ ನಿನ್ನ ಜೊತೆ ವ್ಯವಹರಿಸುತ್ತಿದ್ದಾನೆ. ಕನಸಿನ ಲೋಕದಲ್ಲಿ ಇದ್ದದ್ದು ನಾನೊಬ್ಬನೇ. ನನ್ನನ್ನು ಬಿಟ್ಟು ಅಲ್ಲಿ ಯಾರು ಇರಲಿಲ್ಲ ಎನ್ನುವುದು ನಾವು ಕನಸಿನಲ್ಲಿ ಇರುವಾಗ ಗೊತ್ತಾಗುವುದಿಲ್ಲ. ನಾವು ಕನಸಿನ ಲೋಕದಿಂದ ಹೊರಗಡೆ ಬಂದಾಗ ಮಾತ್ರ ಗೊತ್ತಾಗುತ್ತದೆ. ಅಂದರೆ ಕನಸಿನಿಂದ ಎಚ್ಚರವಾದಾಗ ಮಾತ್ರ ಕನಸಿನಲ್ಲಿ ನಾನು ಮಾತ್ರ ಇದ್ದೆ ಎನ್ನುವುದು, ಗೊತ್ತಾಗುತ್ತದೆ. . ಇದೇ ರೀತಿ ಎಲ್ಲಿಯವರೆಗೆ ನಾವು ಜಗತ್ತಿನಲ್ಲಿ ಮುಳುಗಿ ಹೋಗಿರುತ್ತೇವೆ, ಅಲ್ಲಿಯವರೆಗೆ ಜಗತ್ತಿನಲ್ಲಿ ದೇವರು ಮಾತ್ರ ಇದ್ದಾನೆ ಎನ್ನುವುದು ತಿಳಿಯುವುದಿಲ್ಲ. ನಾವು ಅಜ್ಞಾನದ ನಿದ್ರೆಯಿಂದ ಎಚ್ಚರವಾದಾಗ ಮಾತ್ರ ಜಗತ್ತಿನಲ್ಲಿ ಇದ್ದದ್ದು ದೇವರು ಮಾತ್ರ ಎನ್ನುವುದು ಗೊತ್ತಾಗುತ್ತದೆ. ಇದನ್ನೇ ಜಾಗೃತಿ ENLIGHTENMENT ಎಂದು ಕರೆಯುತ್ತಾರೆ. ಮನುಷ್ಯರಾಗಿ ನಾವು, ನಮ್ಮ ಜೀವ ವಿಕಾಸದ, ಜ್ಞಾನ ವಿಕಾಸದ ಹಾದಿಯಲ್ಲಿ ತಲುಪಬೇಕಾಗಿರುವ ಕಟ್ಟಕಡೆಯ ಹಂತವೇ... ನೀನೇ ಎಲ್ಲಾ, ನಾನು ಏನು ಇಲ್ಲಾ, ಎನ್ನುವ ಸ್ಥಿತಿ.  U...
Image
 ಅಧಿಕ ಮಾಸ.  ಅಧಿಕ ಮಾಸ, ಅಧಿಕ ಮಾಸ ಈಗ ಎಲ್ಲಾ ಕಡೆ ಬಹಳಷ್ಟು ಕೇಳಿ ಬರುತ್ತಿರುವ ಶಬ್ದ. ಅಧಿಕ ಮಾಸ ಹಾಗೆ ಎಂದರೇನು ? ಎನ್ನುವ ಪ್ರಶ್ನೆ ಎಲ್ಲರ ಮನಸಿನಲ್ಲಿರುತ್ತದೆ. ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಈ ವಿಷಯದ ಬಗ್ಗೆ ಗಮನಹರಿಸೋಣ. ಹಿಂದೂ ಧರ್ಮದ ಹಬ್ಬಗಳು ಹೆಚ್ಚು ಕಡಿಮೆ ಒಂದೇ ರೀತಿಯ ಕಾಲದಲ್ಲಿ ಬರುತ್ತವೆ. ಉದಾಹರಣೆಗೆ, ಯುಗಾದಿ ಬೇಸಿಗೆ ಆರಂಭದಲ್ಲಿಯೇ ಬರುತ್ತದೆ. ಗಣೇಶ ಹಬ್ಬ, ಮಳೆಗಾಲದಲ್ಲಿಯೇ ಬರುತ್ತದೆ. ದಸರಾ ದೀಪಾವಳಿ ಚಳಿಗಾಲ ಸಂದರ್ಭದಲ್ಲಿಯೇ ಬರುತ್ತದೆ.  ಆದರೆ ಮುಸ್ಲಿಂ ಧರ್ಮದ ರಂಜಾನ್ ಹಬ್ಬ, ಒಂದು ಸಲ ಮಳೆಗಾಲದಲ್ಲಿ ಬಂದರೆ, ಒಂದು ಸಲ ಚಳಿಗಾಲ, ಇನ್ನೊಂದು ಸಲ ಬೇಸಿಗೆಯಲ್ಲಿ ಬರುತ್ತದೆ.  ಇದಕ್ಕೆ ಕಾರಣ ಮುಸ್ಲಿಂ ಧರ್ಮ ಪೂರ್ಣವಾಗಿ ಚಂದ್ರ ವರ್ಷದ ಕ್ಯಾಲೆಂಡರ್ ಮೇಲೆ ಅವಲಂಬಿತವಾಗಿದೆ.  ಸೂರ್ಯ ಆಧಾರಿತ ಕ್ಯಾಲೆಂಡರ್ ಗೆ ಒಂದು ವರ್ಷಕ್ಕೆ 365 ದಿನಗಳು ಬೇಕಾದರೆ, ಒಂದು ಚಂದ್ರ ವರ್ಷಕ್ಕೆ 354 ದಿನಗಳನ್ನು ತೆಗೆದುಕೊಳ್ಳುತ್ತದೆ.  *ಸೂರ್ಯ ವರ್ಷ ಎಂದರೇನು ?* ಭೂಮಿ ಸೂರ್ಯನಿಗೆ ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಸಮಯ 365 ದಿನ. ಇದನ್ನು ಸೌರಮಾನ ಕಾಲ ಗಣನೆ ಎಂದು ಕರೆಯುತ್ತಾರೆ. *ಚಂದ್ರ ವರ್ಷ ಎಂದರೇನು ?* ಚಂದ್ರ ಭೂಮಿಯ ಸುತ್ತಲೂ ಹನ್ನೆರಡು ಸುತ್ತು ಹಾಕಲು ತೆಗೆದುಕೊಳ್ಳುವ ಸಮಯ 354 ದಿನ. ಇದನ್ನು ಚಾಂದ್ರಮಾನ ಕಾಲ ಗಣನೆ ಎಂದು ಕರೆಯುತ್ತಾರೆ. ಹಿಂದೂ ಧರ್ಮದ ಕಾಲಗಣನೆ ಸೌ...
Image
 (ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಲೇಖನ) *ಇಷ್ಟು ದೊಡ್ಡ ಜಗತ್ತಿನಲ್ಲಿ ನಾನು ಒಂದು ಸಣ್ಣ ಕಣ.  ಈ ಜಗತ್ತಿಗೆ ನಾನೇನು ಒಳಿತು ಮಾಡಲು ಸಾಧ್ಯ ?* ವರ್ಷದಿಂದ ವರ್ಷಕ್ಕೆ ಬೇಸಿಗೆಯ ಬಿಸಿಲು ಹೆಚ್ಚುತ್ತಿದೆ.  ಮಳೆಗಾಲದಲ್ಲಿ ಮಳೆ ಕಡಿಮೆಯಾಗುತ್ತಿದೆ.  ಭೂಮಿಯಲ್ಲಿ ಫಲವತ್ತತೆ ಮತ್ತು ನೀರು ಇಂಗುವ ಸಾಮರ್ಥ್ಯ ಕಡಿಮೆಯಾಗುತ್ತಿದೆ.  ಗಾಳಿ ವರ್ಷದಿಂದ ವರ್ಷಕ್ಕೆ ಹೆಚ್ಚು ಕಲುಷಿತಗೊಳ್ಳುತ್ತಿದೆ. ಇದು ಹೀಗೆ ಮುಂದುವರೆದರೆ, ಮುಂಬರುವ ದಿನಗಳಲ್ಲಿ ಭೂಮಿಯಲ್ಲಿ ಜೀವಿಗಳು ಬದುಕಲು ಸಾಧ್ಯವೇ  ? ಇವೆಲ್ಲಾ ಪ್ರಶ್ನೆಗಳನ್ನು ಕೇಳಿದಾಗ ಬಹುತೇಕ ಜನ ಈ ಜಗತ್ತಿಗೆ ಹೋಲಿಸಿದರೆ ನಾನು, ಒಂದು ಸಣ್ಣ ಕಣ. ನನ್ನಿಂದ ಈ ಜಗತ್ತಿಗೆ ಏನು ಒಳ್ಳೆಯದು ಮಾಡಲು ಸಾಧ್ಯ? ಎಂದೆ ಬಹುತೇಕ  ಹೇಳುತ್ತಾರೆ.  ಆದರೆ  ಹೀಗೆ ಹೇಳಿ ನುಣುಚಿಕೊಳ್ಳುವುದು ಮನುಷ್ಯನ ರೂಪದಲ್ಲಿ ಶ್ರೇಷ್ಠ ಜೀವಿಯಾದ ನಮ್ಮೆಲ್ಲರ ಬೇಜವಾಬ್ದಾರಿಯ ಲಕ್ಷಣ.  ಒಂದು ಹನಿ ನೀರಿಗೆ, ಒಂದು ರೂಪಾಯಿ ನಾಣ್ಯಕ್ಕೆ, ಒಂದು ಕಾಳು ಧಾನ್ನಕ್ಕೆ ಬಹಳ ದೊಡ್ಡ ಮಹತ್ವ ಇಲ್ಲದೆ ಇರಬಹುದು.  ಆದರೆ ಅದೇ ಹನಿ ಹನಿ ನೀರು ಕೂಡಿದಾಗ  ಸಾಗರ ಆಗುತ್ತದೆ. ಕಾಳು ಕಾಳು ಧಾನ್ಯ ಕೂಡಿದಾಗ ಅದುವೇ ದೊಡ್ಡ ರಾಶಿ ಆಗುತ್ತದೆ. ಒಂದೊಂದು ರೂಪಾಯಿ ಕೂಡಿಯೇ ಕೋಟ್ಯಂತರ ಸಂಪತ್ತು ಆಗುತ್ತದೆ.  ಹೀಗಾಗಿ ನನ್ನ ಒಬ್ಬನಿಂದ ಏನು ಸಾಧ್ಯ ? ಎನ್ನುವ ಮನಸ್ಥಿತಿಯನ್ನು ನ...
Image
 *ಸತ್ಯ ಜ್ಞಾನ ಮತ್ತು ಸಂಬಂಧಗಳ ದ್ವಂದ್ವಗಳು "ಸತ್ಯ ಜ್ಞಾನ ಮತ್ತು ಸಂಬಂಧಗಳ ಳ ದ್ವಂದ್ವಗಳು* ಸತ್ಯಜ್ಞಾನ ಹೇಳುತ್ತದೆ, ನಾವೆಲ್ಲರೂ ನಿಜವಾಗಿಯೂ ದೇಹಗಳಲ್ಲ. ನಾವು ರೂಪ, ಆಕಾರ ಗಾತ್ರ ಇಲ್ಲದ ಆತ್ಮಗಳು ಎಂದು.  ಇದನ್ನು ತಿಳಿಯಲು ವಿಸ್ತಾರವಾಗಿ ಹೇಳುವುದಾದರೆ, ನಮಗೆ ಹುಟ್ಟಿದಾಗ ಯಾವ ದೇಹ ಇತ್ತು (ಮಗುವಿನ ದೇಹ) ಅದು ಈಗ ಇಲ್ಲಾ. ಈಗ ದೇಹ ಯಾವ ರೀತಿಯಿದೆ ? ಅದು ಮುಂದೆ ಇರುವುದಿಲ್ಲ. ಇದರಿಂದ ನಮಗೆ ತಿಳಿಯುತ್ತದೆ, ದೇಹ ಅಂದರೆ ನಿರಂತರ ಬದಲಾಗುತ್ತಿದೆ.  ಆದರೆ ಈ ಹಿಂದಿನ ಸ್ಥಿತಿಯ ದೇಹದೊಳಗೆ ಇದ್ದ ನಾವು (ಆತ್ಮಗಳು) ಅದೇ ಆಗಿದ್ದೇವೆ, ಈಗಲೂ ಅದೇ ಇದ್ದೇವೆ. ನಾಳೆ ದೇಹ ಇಲ್ಲವಾದಾಗಲೂ ಅದೇ ಆಗಿರುತ್ತೇವೆ.  ಈ ಸತ್ಯ ಜ್ಞಾನವನ್ನು ನಾವು ಎಂದಿಗೂ ಮರೆಯಬಾರದು. ಏಕೆಂದರೆ  1. ಈ ಸತ್ಯ ಜ್ಞಾನ ಇದ್ದಾಗ ಮಾತ್ರ ನಾನು ಹುಟ್ಟಿಲ್ಲದ, ಸಾವಿಲ್ಲದ ಈ ಜಗತ್ತಿನ ಶಾಶ್ವತ ಅಸ್ತಿತ್ವ ಎನ್ನುವ ಸಾವಿಗೆ ಅಂಜದ ಸ್ಥಿತಿ ನಮಗೆ ಬರುತ್ತದೆ.  2. ನಾವು ಸಾಧ್ಯವಾದಷ್ಟು ದೇಹಕ್ಕೆ ಅಂಟಿಕೊಳ್ಳದೇ ಇರಲು ಸಾಧ್ಯವಾಗುತ್ತದೆ. 3. ನಾವು ದೇಹವಲ್ಲ, ಎಂದು ತಿಳಿದಾಗ ಈ ದೇಹ ಜಗತ್ತಿನ ಅನುಭವ ನೀಡಲು ನಮಗೆ ಎಷ್ಟೊಂದು ಸಹಾಯ ಮಾಡುತ್ತಿದೆ ? ಎನ್ನುವುದು ತಿಳಿಯುತ್ತದೆ. 4. ಕಣ್ಣುಗಳು, ಕಿವಿಗಳು, ನಾಲಿಗೆ, ಎಲ್ಲಾ ಇಂದ್ರಿಯಗಳು ಜಗತ್ತಿನ ಸೌಂದರ್ಯವನ್ನು ಹಾಗೂ ಜಗತ್ತನ್ನು ಅರಿಯಲು ನಮಗೆ ಎಷ್ಟೊಂದು ಉಪಕಾರ ಮಾಡುತ್ತಿವೆ ? ಎನ್ನುವ ಅರಿ...
Image
 *Break the pattern, ನಾಮ ಜಪ, ಮಂತ್ರ ಜಪದ ಮೊದಲನೇಯ ಫಲ*. ನಮ್ಮ ಮನಸ್ಸು ನಿರಂತರವಾಗಿ ಏನನ್ನಾದರೂ ಯೋಚನೆ ಮಾಡುತ್ತಲೇ ಇರುವ ನಮ್ಮ ಒಂದು ಅಂಗ. (ಮನಸ್ಸಿಗೆ ನಿರಂತರವಾಗಿ ಯೋಚನೆ ಮಾಡಲು ಒಂದು ವಿಷಯ ಅಥವಾ ವಿಚಾರ ಬೇಕೇಬೇಕು.) ಬಹಳಷ್ಟು ಸಲ ನಮ್ಮ ಮನಸ್ಸು ಏನನ್ನು ಯೋಚಿಸುತ್ತಿದೆ ? ಎನ್ನುವುದೇ ನಮಗೆ ಗೊತ್ತಾಗುವುದಿಲ್ಲ. ಆ ರೀತಿ ಮನಸ್ಸು ನಿರಂತರ ಯೋಚನೆ ಮಾಡುತ್ತದೆ. ಮನಸ್ಸು ನಿರಂತರವಾಗಿ ಯಾವುದನ್ನು ಯೋಚನೆ ಮಾಡುತ್ತದೆ ? ಆ ಕೆಲಸಗಳು ನಮಗೆ ಗೊತ್ತಿಲ್ಲದೆ ನಮ್ಮಿಂದ ಆಗುತ್ತವೆ. ನಮಗೆ ಗೊತ್ತಿಲ್ಲದೆ ನಮ್ಮಿಂದ ತಪ್ಪು ಯೋಚನೆಗಳಾದರೆ ತಪ್ಪು ಕೆಲಸಗಳು ಆಗುತ್ತವೆ.  ನಮಗೆ ಯಾರಾದರೂ ಏನನ್ನೋ ಅಂದಾಗ, ಅವರಿಗೆ ನಾನು ಹೀಗೆ ಹೇಳಬೇಕಿತ್ತು, ಹಾಗೇ ಹೇಳಬೇಕಿತ್ತು ಎನ್ನುವ (ಸುಧಾರಣೆಯ) ಯೋಚನೆ ನಮ್ಮಲ್ಲಿ ನಿರಂತರ ಬರುತ್ತಿರುತ್ತವೆ.  ಕೆಲವೊಮ್ಮೆ ನಮ್ಮ ಜೀವನದಲ್ಲಿ ಘಟಿಸಿದ ಕೆಟ್ಟ ಘಟನೆಗಳ ನೆನಪುಗಳು ಬಂದಾಗ, ಆ ಕೆಟ್ಟ ಘಟನೆಗಳು ಈಗ ನಡೆಯುತ್ತಿದೆ ಎನ್ನುವಂತೆ ಆ ಕೆಟ್ಟ ಘಟನೆಗೆ ಮನಸ್ಸಿನಲ್ಲಿ ಕೆಟ್ಟ, ಕೆಟ್ಟ ಪ್ರತಿಕ್ರಿಯೆ ಹಾಕುತ್ತಿರುತ್ತೇವೆ. ಈ ಕೆಟ್ಟ ಯೋಚನೆಗಳಿಂದ ನಮಗೆ ಗೊತ್ತಿಲ್ಲದೆ ಪುನಃ ಕೆಟ್ಟ ಘಟನೆಗಳು ನಮ್ಮ ಜೀವನದಲ್ಲಿ ಪುನಾರಾವರ್ತನೆ ಆಗುತ್ತವೆ.  ಒಂದು ವೇಳೆ ಮನಸ್ಸಿಗೆ ನಾವು ನಾಮ ಜಪ, ಮಂತ್ರ ಜಪ ಎನ್ನುವ  ಒಂದು ಕೆಲಸವನ್ನು ಕೊಟ್ಟಲ್ಲಿ, ಮನಸ್ಸಿಗೆ ಕೆಟ್ಟ ಯೋಚನೆ ಮಾಡಲು ಅವಕಾಶವೇ ಸಿಗುವುದಿಲ...
 ದು:ಖಿಸುವುದು  ಒಳಿತಲ್ಲ ಮನಸ್ಸೆ ಏನಾಯಿತು ಒಳ್ಳೆಯದೇ ಆಯಿತು ಏನಾಗುತ್ತಿದೆ ಒಳ್ಳೆಯದೇ ಆಗುತ್ತಿದೆ ಏನಾಗುವುದು ಒಳ್ಳೆಯದೇ  ಆಗುವುದು. ನಗು ನಗುತಾ ಕರ್ಮ ಮಾಡುವೆವು  ಫಲ ಬಂದಾಗ ಅಳುವುದು ಏತಕೆ ? ಫಲ ಬಂದಾಗ ಕರ್ಮ ಕಳೆಯಿತು ಎಂದು ಖುಷಿ ಪಡು ಎಷ್ಟೇ ಕತ್ತಲ ರಾತ್ರಿ ಇದ್ದರೂ  ಮತ್ತೆ ಹಗಲಾಗುವುದು ಖಚಿತ ಬದಲಾವಣೆಯೇ ಜಗತ್ತಿನ ನಿಯಮ  ಹಳಹಳಿಸದಿರು ದುಃಖಿಸದಿರು ಕಗ್ಗತ್ತಲ ಕಳೆದು ಹಗಲು ಬರುವುದು ನಿಶ್ಚಿತ  ದುಃಖದಿಂದ ಮತ್ತೆ ದುಃಖ ಜನನ ದುಃಖಿಸದಿರು ಹಳಹಳಿಸದಿರು ಮನಸೇ