Posts

Image
 "*ಸಂತರ, ಜೀವನದ ಶೂನ್ಯ (ಸೊನ್ನೆ) ದೃಷ್ಟಿಕೋನ ಸತ್ಯವೇ ? ಮತ್ತು ಭ್ರಷ್ಟಾಚಾರಿಗಳ ಜೀವನ-ಅಶೂನ್ಯ ದೃಷ್ಟಿಕೋನ ಸತ್ಯವೇ ?*" ಎಲ್ಲರಿಗೂ ನಮಸ್ಕಾರ 🙏  ಆತ್ಮೀಯರೇ,  ಜಗತ್ತಿನ ನಿಜವಾದ ವಿರಾಗಿ ಸಂತರು ಜಗತ್ತಿನಿಂದ ದೂರವಾಗಿ ಅಥವಾ ಜಗತ್ತಿನಲ್ಲಿದ್ದು ಜಗತ್ತಿನ ಆಸೆ ಆಕಾಂಕ್ಷೆಗಳಿಗೆ ಬಲಿಯಾಗದೆ ಬದುಕುತ್ತಿರುವುದಕ್ಕೆ ಕಾರಣ. ಜಗತ್ತು ಅಥವಾ ಜೀವನವನ್ನು ಶೂನ್ಯ ಎಂದು ತಿಳಿದುಕೊಂಡಿದ್ದು. ಇದಕ್ಕೆ ವಿರುದ್ಧವಾಗಿ ಈ ಜಗತ್ತಿನಲ್ಲಿರುವ ಅನೇಕ ಭ್ರಷ್ಟಾಚಾರಿಗಳು, ಭ್ರಷ್ಟಾಚಾರ ಮಾಡುತ್ತಿರುವುದಕ್ಕೆ ಕಾರಣ ಜಗತ್ತು ಅಶೂನ್ಯ, ಜಗತ್ತು ಸತ್ಯ ಎಂದು ತಿಳಿದುಕೊಂಡಿರುವುದು.  ಇಲ್ಲಿ ಪ್ರಶ್ನೆ ಎಂದರೆ ಯಾರ ದೃಷ್ಟಿಕೋನ ಸತ್ಯ ?  * ಸಂತರ ದೃಷ್ಟಿಕೋನವೇ ?  * ಭ್ರಷ್ಟಾಚಾರಿಗಳ ದೃಷ್ಟಿಕೋನವೇ ? ನಾವು ಭ್ರಷ್ಟಾಚಾರ ಮಾಡುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಗುರುತಿಸಬಹುದು.  1. ಅನಿವಾರ್ಯ ಕಾರಣ.  2. ಅವಕಾಶದ ಕಾರಣ.  *"ಅನಿವಾರ್ಯ ಕಾರಣ"* : ಸತ್ಯ ಮಾರ್ಗದಲ್ಲಿ "ಗಟ್ಟಿ ನಿಷ್ಠೆ" ಉಳ್ಳವರು ಎರಡು ಕಾರಣದಿಂದಲೂ ಭ್ರಷ್ಟಾಚಾರಕ್ಕೆ ಇಳಿಯುವುದಿಲ್ಲ. ಆದರೆ ಸತ್ಯ ಮಾರ್ಗದಲ್ಲಿರುವವರು ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಭ್ರಷ್ಟ ಆಚರಣೆಗಳನ್ನು ಮಾಡುತ್ತಾರೆ.  ಭ್ರಷ್ಟಾಚಾರ ಮಾಡಿದ ನಂತರ ಪಶ್ಚಾತ್ತಾಪ ಪಟ್ಟು ಮುಂದಿನ ದಿನಗಳಲ್ಲಿ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಾರೆ. *"ಅವಕಾ...
Image
 *ಹನುಮಾನ ದೇವರು, ಒಂದು ಸೇಬು ತೋರಿಸುತ್ತಾ, ಈ ಹಣ್ಣನ್ನು ನೀವು ಇಲ್ಲವಾಗಿ ಹೇಗೆ ಮಾಡುತ್ತೀರಿ ? ಎಂದು ಕೇಳಿದ ಪ್ರಶ್ನೆಗೆ ಉತ್ತರ.* ಈ ಪ್ರಶ್ನೆಗೆ ಉರ್ವಾ ಎನ್ನುವ ಮಾತಂಗ ಯುವಕ ಹನುಮಾನ ದೇವರಿಗೆ ನಮಿಸಿ ಕೊಟ್ಟ ಉತ್ತರವೆಂದರೆ, "ಪ್ರಭು, ನಾನು ಕಣ್ಣು ಮುಚ್ಚಿಕೊಂಡಾಗ, ನನ್ನ ಪಾಲಿಗೆ ಈ ಸೇಬು ಹಣ್ಣು ಇಲ್ಲವಾಗುತ್ತದೆ" ಎಂದು ಹೇಳಿದ. ಇದನ್ನು ಕೇಳಿದ ಹನುಮಾನ ದೇವರು ಹೌದು ನೀನು ಹೇಳಿದ್ದು ಸತ್ಯ.. ಆದರೆ ನೀನು ಕಣ್ಣು ತೆರೆದಿದ್ದರೂ ಇದನ್ನು ಇಲ್ಲವಾಗಿ ಮಾಡಲು ಸಾಧ್ಯವೇ ? ಎಂದು ಕೇಳಿದರು. ಆಗ ಊರ್ವಾ, ಪುನಃ ಯೋಚಿಸಿ ನನ್ನ ಮೆದುಳಿನಲ್ಲಿ ಇದರ ಹೆಸರು, ಬಣ್ಣ ರುಚಿ ಇನ್ನಿತರ ಅನೇಕ ಮಾಹಿತಿಗಳ ಸಂಗ್ರಹ ಇದೆ. ನನ್ನ ಮೆದುಳಿನ ಆ ಮಾಹಿತಿಗಳ ಸಂಗ್ರಹ ನಾಶ ಮಾಡಿದರೆ, ನಾನು ಕಣ್ಣು ತೆರೆದಿದ್ದರೂ ಸೇಬು ಹಣ್ಣು ನನಗೆ ಇಲ್ಲವಾಗುತ್ತದೆ, ಎಂದು ಹೇಳಿದ. ಆದರೆ ಸೇಬಿನ ಹೊರತು ಯಾವುದೋ ಬೇರೆ ಒಂದು ವಸ್ತು ಅಂತು ಅಲ್ಲಿಯೇ ಇದೆ. ಅದನ್ನು ಇಲ್ಲವಾಗಿ ಮಾಡಲು ಸಾಧ್ಯವೇ ? ಎಂದು ಹನುಮಾನ ದೇವರು ಕೇಳಿದರು. .. ಆಗ ಊರ್ವಾ ನಮ್ಮ ಮೆದುಳಿನಲ್ಲಿ ಯಾವುದು ಗಟ್ಟಿ ? ಯಾವುದು ದ್ರವ ? ಯಾವುದು ಅನಿಲ ? ಯಾವುದು ಖಾಲಿ ? ಎಂದು ತಿಳಿಯುವ ನರ ತಂತುಗಳು ಇವೆ. ಇವುಗಳ ಸಹಾಯದಿಂದ ನಾನು ಗಟ್ಟಿಯಾದದ್ದನ್ನು ಖಾಲಿಯಾಗಿರುವದರ ವ್ಯತ್ಯಾಸ ಕಂಡುಕೊಂಡು ಅವುಗಳನ್ನು ಬೇರೆ ಬೇರೆಯಾಗಿ ಗುರುತಿಸುತ್ತೇವೆ.  ಒಂದು ವೇಳೆ ಮೆದುಳಿನ ಈ ಜ್ಞಾನ ತಂತುಗಳು ಸಾಮರ್ಥ್ಯ ತೆಗೆ...

ಪ್ರಶ್ನೆ ಎಂದರೇನು

Image
 
Image
 *ರಾಜ್ಯ ಹೆದ್ದಾರಿಯಲ್ಲಿ, ಮುಂದಿರುವ ವಾಹನ ಒಮ್ಮೆಗೆ ವೇಗ ಕಡಿಮೆ ಮಾಡಿದರೆ ಹಿಂದಿರುವ ವಾಹನ ಸವಾರನ ಗತಿ ಏನು?* ನಿನ್ನೆ (ಶನಿವಾರ 19/09/26) ಕೆಲಸ ಮುಗಿಸಿ ರಾತ್ರಿ ಸೇಡಂ ಕಡೆಗೆ ನನ್ನದೆಯಾದ ವೇಗದಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದೆ. ನನ್ನ ಮುಂದಿರುವ ವಾಹನವು ತನ್ನದೆಯಾದ ವೇಗದಲ್ಲಿ ಮುಂದೆ ಹೋಗುತ್ತಿತ್ತು. ನನಗೂ ಆ ವಾಹನಕ್ಕೂ ಬಹುಶಃ 3 ರಿಂದ 4 ಮೀಟರ್ ಅಂತರವಿತ್ತು. ಆದರೆ ಎರಡು ವಾಹನ ಒಂದೇ ದಿಕ್ಕಿನಲ್ಲಿ ನೇರವಾಗಿ ಇದ್ದವು. ಆದರೆ ಮುಂದಿರುವ ಇಬ್ಬರು ಕುಳಿತುಕೊಂಡಿರುವ ದ್ವಿಚಕ್ರ ವಾಹನ ನಡು ರಸ್ತೆಯಲ್ಲಿ ಒಮ್ಮೆಗೆ ತನ್ನ ಚಲಿಸುವ ವೇಗ ಕಡಿಮೆ ಮಾಡಿತು. ಹಿಂದೆ ನನ್ನ ವಾಹನ ಮೊದಲಿನ ವೇಗದಲ್ಲಿ ಇದೆ. ಅದೇ ದಿಕ್ಕಿನಲ್ಲಿ ಹೋದರೆ ಮುಂದಿನ ಗಾಡಿಗೆ ಡಿಕ್ಕಿ ಹೊಡೆಯುತ್ತದೆ. ಬಲ ಪಕ್ಕಕ್ಕೆ ತಿರುಗಿಸಬೇಕೆಂದು ಯೋಚನೆ ಮಾಡಿದೆ. ಅಷ್ಟರಲ್ಲಿ ಒಂದು ಕಾರ್ ಆ ಕಡೆ ಬರುತ್ತಿದೆ. ಮುಂದೆ ಹೋಗುವ ಹಾಗಿಲ್ಲ. ಬಲ ಪಕ್ಕಕ್ಕೆ ತಿರುಗುವ ಹಾಗಿಲ್ಲ. ನನಗೆ ಒಂದೇ ಸಮನೆ ಎದುರು ಇರುವ ಸವಾರನ ಮೇಲೆ ಸಿಟ್ಟು ಬರುತ್ತಿದೆ. ಸಮಯ ಪ್ರಜ್ಞೆಯಿಂದ ಎಡಕ್ಕೆ ಸ್ವಲ್ಪ ಜಾಗವಿತ್ತು. ನನ್ನ ಅದೇ ವೇಗದಲ್ಲಿ ಎಡಕ್ಕೆ ವಾಹನ ತೆಗೆದುಕೊಂಡೇ. ಆಗ ಒಂದೇ ಸಮಯಕ್ಕೆ ಎರಡು ವಿಷಯಗಳ ತಾಕಲಾಟ ಎದುರಿಸಿದೆ..  1.. ಮುಂದಿನವರು ಏಕೆ ಗಾಡಿ ನಿಧಾನ ಮಾಡಿದರು ಎನ್ನುವ ಕಾರಣ ತಿಳಿಯಿತು. 2. ಈಗ ನಾನು ಹೇಗೆ ಎರಡು ತಪ್ಪಿನಿಂದ ಪಾರಾಗಬೇಕು ? ಎನ್ನುವ ಸವಾಲು ಎದುರಾಯಿತು...
Image
 *"ಶಿಕ್ಷಕರು ಹೇಳಿರುವ ಹೊಸ ಸ್ವಾತಂತ್ರ್ಯ ಹೋರಾಟ.*"  ಎಲ್ಲರಿಗೂ ನಮಸ್ಕಾರ ಆತ್ಮೀಯರೇ, ಇತ್ತೀಚೆಗೆ ಮುಕ್ತಾಯವಾದ ಆದರ್ಶ ಶಿಕ್ಷಕರು ಹೇಗಿರಬೇಕು ? ಎನ್ನುವ ಶಿಕ್ಷಕರ ಅನಿಸಿಕೆಗಳ ಸ್ಪರ್ಧೆಯಲ್ಲಿ, ತಮ್ಮ ಮೂರು ನಿಮಿಷಗಳ ಸಮಯದಲ್ಲಿ ಬಹುತೇಕ ಸಮಯವನ್ನು ಎಲ್ಲಾ ಶಿಕ್ಷಕರು ಸಮಾನ ಅಂಶಗಳನ್ನು ಹೇಳಿದರೆ, ಸ್ವಲ್ಪ ಸಮಯ ಬೇರೆಯವರಿಗಿಂತ ವಿಭಿನ್ನ ಅಂಶಗಳನ್ನು ಹೇಳಿದ್ದಾರೆ. ನಾವು ಸಹ ಶಿಕ್ಷಕರಿಗೆ ಭ್ರಷ್ಟಾಚಾರ ನಿವಾರಣೆಯಲ್ಲಿ ಶಿಕ್ಷಕರ ಪಾತ್ರ ಎನ್ನುವ ಅಂಶವನ್ನು ಸಹ ನೀಡಿದ್ದೇವು. ಈ ವಿಷಯಕ್ಕೆ ಸಂಬಂಧಿಸಿದಂತೆ ಒಬ್ಬ ಶಿಕ್ಷಕರು ಒಂದು ಹೊಸ ಕಲ್ಪನೆ, ಒಂದು ಹೊಸ ದೃಷ್ಟಿಕೋನವನ್ನು ನಮ್ಮೆಲ್ಲರಿಗೆ ನೀಡಿದ್ದಾರೆ.  ಈ ಶಿಕ್ಷಕರು ತಮ್ಮ ವಿಡಿಯೋ ಜಾಲತಾಣದಲ್ಲಿ ಹಾಕಲು ಅನುಮತಿ ನೀಡಿಲ್ಲ. ಹೀಗಾಗಿ ಅವರ ಹೆಸರು ಮತ್ತು ಶಾಲೆ ಹೇಳುವುದಿಲ್ಲ. ಈ ವಿಡಿಯೋದಲ್ಲಿ ಕೇವಲ ಅವರ ಧ್ವನಿ ತಮಗೆ ಕೇಳಲಿದೆ. ಈ ಶಿಕ್ಷಕರು ಸಮಾಜದ ಭ್ರಷ್ಟಾಚಾರ ಸಮಸ್ಯೆಯನ್ನು ಈ ಹಿಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಿದ್ದಾರೆ. ಆಗ ಹೇಗೆ ಭಾರತೀಯರು ಬ್ರಿಟಿಷರ ವಿರುದ್ದ ಹೋರಾಡಿದ್ದರು? ಹಾಗೆಯೇ ಇಂದು ಪ್ರತಿಯೊಬ್ಬರೂ ಸಮಾಜದ ಭ್ರಷ್ಟ ಆಚರಣೆಗಳ ವಿರುದ್ಧ ಹೋರಾಡಬೇಕಾಗಿದೆ, ಅದಕ್ಕಾಗಿ ಶಿಕ್ಷಕರು ಸಹ ಶಾಲೆಗಳಲ್ಲಿ ಈ ವಿಷಯ ಕುರಿತು ಮಕ್ಕಳಿಗೆ ಪ್ರೇರಣೆ ನೀಡಬೇಕಾಗಿದೆ ಎಂದು ಹೇಳಿದ್ದಾರೆ.  ಈ ಒಂದು ಕಲ್ಪನೆ, ಈ ಒಂದು ದೃಷ್ಟಿಕೋನ ಎಲ್ಲಾ ಶಿಕ್ಷಕರಿಗೆ ಹಾಗೂ ಎಲ...
Image
 *"ನಮ್ಮ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಬಹುಮಾನವಾಗಿ ಕೊಡಬೇಕೆಂದಿರುವ ಪುಸ್ತಕದ  ( Immortal talk -1) ಪರಿಚಯ"* ಎಲ್ಲರಿಗೂ ನಮಸ್ಕಾರ,  ಆತ್ಮೀಯರೇ, ಪ್ರೌಢ ಶಾಲಾ ವಿಧ್ಯಾರ್ಥಿಗಳ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕನ್ನಡ ಇಂಗ್ಲೀಷ್ ನಿಘಂಟು ನೀಡಲಾಗಿತ್ತು. ಶಿಕ್ಷಕರ ದಿನಾಚರಣೆ ಹಾಗೂ ಹಿರಿಯ ಮುಖಂಡರು, ಸಮಾಜ ಸೇವಕರಾದ ಶ್ರೀ ಗಣಪತರಾವ ಚಿಮ್ಮನಚೋಡಕರ್ ರವರ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಶಿಕ್ಷಕರ ಅನಿಸಿಕೆ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, ಗೌರವ ಸನ್ಮಾನದೊಂದಿಗೆ  ಒಂದು ವಿಶೇಷ ಪುಸ್ತಕ ನೀಡಲು ಬಯಸಿದ್ದೇವೆ. ಈ ಪುಸ್ತಕ ನಮ್ಮ ಯೋಚನೆ ವಿಚಾರ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಪುಸ್ತಕವಾಗಿದೆ. ಈ ಪುಸ್ತಕದ ಹಿನ್ನೆಲೆ ಹೇಳಬೇಕಾದರೆ, ಇದು ಒಂದು ಮಹಾನ ಉಪನ್ಯಾಸದ ಸಂಕಲನ ಆಗಿದೆ. ಇದು ಯಾರ ಉಪನ್ಯಾಸ ಎಂದು ಹೇಳುವ ಮುಂಚೆ ಇನ್ನೊಂದು ವಿಷಯ ತಿಳಿದುಕೊಳ್ಳುವುದು ಅವಶ್ಯವಾಗಿದೆ. ತೆತ್ರಾಯುಗದಲ್ಲಿ ಪ್ರಕಟವಾದವರು ಶ್ರೀ ಹನುಮಾನ ದೇವರು. ಅವರು ಇಂದಿಗೂ ಈ ಭೂಮಿಯ ಮೇಲೆ ಚಿರಂಜೀವಿಯಾಗಿದ್ದಾರೆಯೆಂದು ನಂಬಲಾಗಿದೆ.  ಚಿರಂಜೀವಿಯಾದರೂ ಅವರು ಸಾಮಾನ್ಯವಾಗಿ ಯಾರಿಗೂ ಭೇಟಿ ಆಗುವುದಿಲ್ಲ. ಹಾಗೂ ಯಾರಿಗೂ ಕಾಣುವುದಿಲ್ಲ. ಆದರೆ "ಶ್ರೀಲಂಕಾದಲ್ಲಿ ಒಂದು ಪುಣ್ಯವಂತ ಮಾತಂಗ ಎನ್ನುವ ಬುಡಕಟ್ಟು ಜನಾಂಗ ಇದೆ".  ಅಲ್ಲಿಗೆ ಹನುಮಾನ ದೇವರ...
Image
 *ಎಲ್ಲಾ ಆತ್ಮೀಯರಲ್ಲಿ ಒಂದು ವಿನಂತಿ : ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಗಳಂತಹ ಪ್ರಾಮಾಣಿಕರನ್ನು ನಿರ್ಮಾಣ ಮಾಡಲು ನಮ್ಮಿಂದ ಮಾಡುತ್ತಿರುವ ಒಂದು ಪ್ರಯತ್ನಕ್ಕೆ ಬೆಂಬಲಿಸಿ* ಚಿತ್ರದಲ್ಲಿ ಕಾಣುವ ಈ ಸರ್ಕಾರಿ ನೌಕರಿಯಲ್ಲಿರುವ ಈ ಅಧಿಕಾರಿ, ತಮ್ಮ ಹಿಂದೆ, ಒಂದು ಬ್ಯಾನರನ್ನೆ ಹಚ್ಚಿದ್ದಾರೆ, *ನನಗೆ ಲಂಚ ಕೊಡಬೇಡಿ ನಾನು ಭ್ರಷ್ಟ ಅಧಿಕಾರಿ ಆಗಲಾರೆ*. ಈ ರೀತಿ ಭ್ರಷ್ಟಾಚಾರ ರಹಿತ ಸತ್ಯ ಪ್ರಾಮಾಣಿಕತೆ ಹೊಂದಿರುವ ಅಧಿಕಾರಿಗಳ ಅವಶ್ಯಕತೆ ಇಂದು ಬಹಳ ಇದೆ. ಇಂತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಾದಾಗಲೇ ಸಮಾಜದಿಂದ ಭ್ರಷ್ಟಾಚಾರ ಹೋಗಲಿದೆ.   ನಮ್ಮ ಟ್ರಸ್ಟ ವತಿಯಿಂದ ವಿದ್ಯಾರ್ಥಿಗಳಿರುವಾಗಲೇ ಮಕ್ಕಳಿಗೆ ಈ ವಿಚಾರ ಮೂಡಲಿ ಎನ್ನುವ ಉದ್ದೇಶದಿಂದ ಭ್ರಷ್ಟಾಚಾರ ಹಾಗೂ ಅನೈತಿಕತೆ ಕುರಿತು ಸೇಡಂ ತಾಲೂಕಿನ ಎಲ್ಲಾ ಪ್ರೌಢ ಶಾಲೆಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಭ್ರಷ್ಟಾಚಾರದಿಂದ ಉಂಟಾಗುವ ಸಮಸ್ಯೆಗಳು ಹಾಗೂ ಪರಿಹಾರ ಉಪಾಯಗಳು ಬಗ್ಗೆ ಅಧ್ಯಯನ ಚಿಂತನೆ ಮನನವನ್ನು ಮಾಡಿದ್ದಾರೆ. ಇದು ಅವರು ನಾಗರಿಕರಾಗಿ ಪರಿವರ್ತನೆ ಆದಾಗ ಸ್ವಲ್ಪವಾದರೂ ಭ್ರಷ್ಟಾಚಾರ ವಿರುದ್ಧ ನಿಲ್ಲುವಂತೆ ಸತ್ಯ, ಪ್ರಾಮಾಣಿಕತೆ ಪರವಹಿಸುವಂತೆ ಮಾಡಲಿದೆ ಎನ್ನುವುದು ನಮ್ಮ ಆಶಾವಾದ.  ನಮ್ಮ ಪ್ರಯತ್ನ ಒಂದು ಗಾಢವಾದ ಪ್ರಭಾವ ಅವರ ಮೇಲೆ ಬೀರಲಿ ಎನ್ನುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ 26 ಶಾಲೆಯ 74 ವಿಧ್ಯ...