"*ನವರಾತ್ರಿಯ ಎಂಟನೇ ದೇವಿ ಮಾ ಮಹಾ ಗೌರಿ ಸಂದೇಶ*"


ನಮ್ಮ ಭವಿಷ್ಯವನ್ನು ಶುದ್ಧಿಕರಿಸುವ ಎರಡನೇ ಮಾತೆ ಮಹಾ ಗೌರಿ. 


ಮಹಾ ಗೌರಿ ಮಾತೆ ಪೂರ್ಣ ಬೆಳ್ಳಗೆ ಇರುತ್ತಾರೆ. ಇದೇ ರೀತಿ ಏನು ಬರೆಯದ ಖಾಲಿ ಕಾಗದವು ಸಹ ಬೆಳ್ಳಗೆ ಕಾಣುತ್ತದೆ.


ನಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡುವಾಗ, ನಾವು ಅನೇಕ ಸಲ ಖಾಲಿ ಕಾಗದದಂತಹ, ಖಾಲಿ  ಕನಸುಗಳನ್ನು, ಖಾಲಿ ಕಲ್ಪನೆಗಳನ್ನು ಮಾಡುತ್ತೇವೆ. 


* ನಮ್ಮ ಗಮನಕ್ಕೆ ಯಾರಾದರೂ ಈಗತಾನೇ ಯಶಸ್ಸು ಪಡೆದ ಚಿತ್ರ ನಟಿ/ನಟರ ವಿಷಯ ಬಂತೆಂದರೆ, ನಾನು ಸಹ ಆ ರೀತಿಯ ನಟಿ, ನಟ ಆದರೆ ಹೇಗಿರುತ್ತದೆ? ಎನ್ನುವ ಕಲ್ಪನೆ ಮಾಡಲು ಆರಂಭಿಸುತ್ತೇವೆ. 


* ನಮ್ಮ ಗಮನಕ್ಕೆ ಯಾವುದೋ ಕ್ರಿಕೆಟ್ ಆಟಗಾರರ ದೊಡ್ಡ  ಹೋಗಳುವಿಕೆ ವಿಷಯ ಬಂತೆಂದರೆ, ನಾನು ಆ ರೀತಿಯ ಕ್ರಿಕೆಟ್ ಪಟು ಆದರೆ ಹೇಗಿರುತ್ತದೆ ? ಎಂದು ಕನಸು ಕಾಣುತ್ತೇವೆ. 


* ಹೀಗೆ ಯಶಸ್ವಿ ರಾಜಕಾರಣಿ ವಿಷಯ ಕೇಳಿದಾಗ, ನಾನು ಆ ರೀತಿಯ ರಾಜಕಾರಣಿಯಾದರೆ ಹೇಗಿರುತ್ತದೆ ? ಎಂದು ಯೋಚಿಸುತ್ತೇವೆ.


* ಪ್ರಸಿದ್ಧ ಅಧಿಕಾರಿಗಳ ಬಗ್ಗೆ ಕೇಳಿದಾಗ, ನಾನು ಆ ರೀತಿಯಾದರೆ ಹೇಗೆ ? ಎಂದು ಕನಸು ಕಾಣುತ್ತೇವೆ.


ಆದರೆ, ನಮ್ಮ ಜೀವನದ ಬಗ್ಗೆ 

* ಯಾವುದೇ ಕನಸು ಕಂಡಾಗ,

* ಯಾವುದೇ ಕಲ್ಪನೆ ಮಾಡಿಕೊಂಡಾಗ 


ನಾವು ಆ ಕನಸು ನನಸು ಮಾಡುವ *ಪುರುಷಾರ್ಥ* ಮಾಡಬೇಕು. ಕಲ್ಪನೆ ಸತ್ಯವಾಗುವಂತಹ *ಪ್ರಯತ್ನ* ಮಾಡಬೇಕು. 


ಪುರುಷಾರ್ಥವು ಮಾಡದೆ, ಪ್ರಯತ್ನವೂ ಮಾಡದೆ ಕೇವಲ ಕನಸು ಕಲ್ಪನೆ ಮಾಡುವುದರಿಂದ 


1. ಸಧ್ಯ ನಮ್ಮ ಕೈಯಲ್ಲಿರುವ *"ಅಮೂಲ್ಯವಾದ ಸಮಯ"* ಹಾಳಾಗುತ್ತದೆ. 

2. ನಮ್ಮ"*ಮನಸ್ಸಿನ ಶಕ್ತಿಯೂ*"  ಹಾಳಾಗುತ್ತದೆ. 

3. ಸಾಧನೆಗೆ ಅವಶ್ಯಕವಾಗಿ ಬೇಕಾದಂತಹ "*ಮನಸ್ಸಿನ ಏಕಾಗ್ರತೆಯನ್ನು*"  ಸಾಧಿಸಲು ಸಹ ನಮ್ಮಿಂದ ಆಗುವುದಿಲ್ಲ. 


ಏನಾದರೂ ಸಾಧಿಸಲು 

1.. ಸಮಯ

2. ಶಕ್ತಿ

3.  ಮನಸ್ಸಿನ ಏಕಾಗ್ರತೆ

ಬೇಕು .

 

* ಸಮಯ ಶಕ್ತಿಯ, ವ್ಯರ್ಥ ಹಾಗೂ

* ಮನಸ್ಸಿನ ಚಂಚಲತೆಯಿಂದಾಗ, ನಾವು ಮಾಡುವ ಖಾಲಿ ಕಲ್ಪನೆ, ಖಾಲಿ ಕನಸಿನ ಅಭ್ಯಾಸವು ನಮಗೆ *ದುರಾದೃಷ್ಟವನ್ನು* ತರುತ್ತದೆ.


ಈ ಕಾರಣದಿಂದ ನಮ್ಮ ಜೀವನದ ಕುರಿತು ಖಾಲಿ ಕಲ್ಪನೆ ಮತ್ತು ಖಾಲಿ ಕನಸುಗಳನ್ನು ಕಾಣದಂತೆ ಮಹಾ ಗೌರಿ ಮಾತೆ ಸಂದೇಶ ನೀಡುತ್ತಿದ್ದಾರೆ. 


ನಾವು ಖಾಲಿ ಕಲ್ಪನೆ, ಖಾಲಿ ಕನಸುಗಳಲ್ಲಿ ನಮ್ಮ ಮನಸ್ಸನ್ನು ತೊಡಗಿಸದೆ, *"ಕಲ್ಪನೆ ಸತ್ಯ ಮಾಡುವ ಪ್ರಯತ್ನಗಳನ್ನು, ಕನಸು ನನಸು ಮಾಡುವ ಪುರುಷಾರ್ಥಗಳನ್ನು ಮಾಡೋಣ."* 


"*ನಮ್ಮ ಜೀವನವನ್ನು ಸಫಲಗೋಳಿಸೋಣ.*"


ಎಲ್ಲರಿಗೂ ಮಹಾ ಗೌರಿ, ಆರಾಧನೆ ರಾತ್ರಿಯ ಶುಭಾಶಯಗಳು. 


ಇಂತಿ ತಮ್ಮ


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ. 

Comments

Popular posts from this blog