*"ನವರಾತ್ರಿಯ ಮೊದಲನೇ ದೇವಿ ಶೈಲ ಪುತ್ರಿಯ ಆರಾಧನೆ"*


ಶ್ರೀಕೃಷ್ಣನು ಅಷ್ಟೊಂದು ಶಕ್ತಿವಂತನಾದರೂ ತನ್ನ ಪ್ರಿಯ ಪಾಂಡವರನ್ನು ವನವಾಸದಿಂದ, ಕಷ್ಟಗಳಿಂದ ಏಕೆ ರಕ್ಷಿಸಲಿಲ್ಲ ? ಎನ್ನುವ ಪ್ರಶ್ನೆ ತಮಗೆ ಕೇಳಲಾಗಿತ್ತು.


ಕುರುಕ್ಷೇತ್ರದ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಹನುಮಾನ ದೇವರಿಗೆ ದುರ್ಗಾ ದೇವಿಯ ಆರಾಧನೆ ಮಾಡಿಸಲು ಹೇಳುತ್ತಾರೆ.


ಈ ಸಂಧರ್ಭದಲ್ಲಿ ಶ್ರೀಕೃಷ್ಣ ಪಾಂಡವರ ಕಷ್ಟಗಳಿಗೆ ಕಾರಣ ಹೇಳುವಾಗ, ದುರ್ಯೋಧನ ಹಾಗೂ ಕೌರವರು ಬಹಳ ಕೆಟ್ಟವರು, ಅವರ ಅನ್ಯಾಯ ಅನೀತಿ ಅಧರ್ಮದಿಂದ ಪಾಂಡವರಿಗೆ ಕೆಟ್ಟದ್ದು ಆಗುತ್ತಿದೆ, ಎಂದು ಹೇಳುವುದಿಲ್ಲ.


ಶ್ರೀಕೃಷ್ಣ ಹೇಳುವುದೇನೆಂದರೆ, ಪಾಂಡವರ ಪೂರ್ವ ಜನ್ಮದ ಕರ್ಮಗಳಿಂದ ಅವರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅವರ ಆ ಕರ್ಮಗಳಿಂದಲೇ ವನವಾಸ ಮತ್ತು ಈಗ ಯುದ್ದದಲ್ಲಿ ಸೋಲುವ ಲಕ್ಷಣ ನನಗೆ ಕಾಡುತ್ತಿದೆ. ಆದರೆ ಈಗ ಇದು ಪಾಂಡವರ ಪ್ರಶ್ನೆಯಾಗಿ ಉಳಿದಿಲ್ಲ. ಮಾನವೀಯತೆ ಪ್ರಶ್ನೆಯಾಗಿದೆ. ಆದ್ದರಿಂದ ಅವರು ಯುದ್ದದಲ್ಲಿ ಗೆಲ್ಲಲೇ ಬೇಕು ಆಗ ಧರ್ಮಕ್ಕೆ ಜಯ ಎನ್ನುವ ಸಂದೇಶ ಹೋಗುತ್ತದೆ. ಹೀಗಾಗಿ ಅವರ ಕರ್ಮ ಕಳೆಯಲು ನವ ದುರ್ಗಾ ದೇವಿಯ ಆರಾಧನೆ ಮಾಡಲು ಹೇಳುತ್ತಾರೆ.


ಇಲ್ಲಿ ಹೇಳುತ್ತಿರುವ ದುರ್ಗಾ ದೇವಿಯ ಆರಾಧನೆ ಬಹುಶಃ ಯಾರು ಕೇಳಿಲ್ಲ, ಯಾರು ಹೇಳಿಲ್ಲ. ಹಾಗೂ ಇದು ಕೇವಲ ನವರಾತ್ರಿಗೆ ಸೀಮಿತವಾದ ಆರಾಧನೆಯಲ್ಲ. ವರ್ಷಪೂರ್ತಿ ಮಾಡುವ ಆರಾಧನೆಯಾಗಿದೆ. ಈ ಆರಾಧನೆಗೆ ಯಾವುದೇ ಧರ್ಮ, ಪಂಥ ಅಡ್ಡ ಬರುವುದಿಲ್ಲ. ಅಂತಹ ಆರಾಧನೆ ಇದು ಆಗಿದೆ.


ಹನುಮಾನ ದೇವರು ಹೇಳುವ ಆರಾಧನೆಯಲ್ಲಿ ಯಾವ ರೀತಿ ಸೂರ್ಯ ದೇವರು ಹೋಲಸಾದ ನೀರನ್ನು ಬಾಷ್ಪಿಕರಿಸಿ ಶುದ್ಧ ಮಳೆಯ ನೀರು ನೀಡುತ್ತಾರೆಯೋ, ಅದೇ ರೀತಿ ದುರ್ಗಾ ದೇವಿ ನಮ್ಮ ಅಸ್ತಿತ್ವವನ್ನು ಸೆಳೆದುಕೊಂಡು ನಮಗೆ ಶುದ್ಧವಾದ ಅಸ್ತಿತ್ವವನ್ನು ನೀಡುತ್ತಾಳೆ.


*ನವ ದುರ್ಗೆಯರಲ್ಲಿ ಮೊದಲ ಮೂರು ದಿನದ ದೇವಿಯರು ನಮ್ಮ ಭೂತಕಾಲ ಶುದ್ಧ ಮಾಡುತ್ತಾರೆ*.


ನಂತರದ *ಮೂರು ದೇವಿಯರು ನಮ್ಮ ವರ್ತಮಾನ ಕಾಲ ಶುದ್ಧ ಮಾಡುತ್ತಾರೆ*.


*ಕೊನೆಯ ಮೂರು ದೇವಿಯರು ನಮ್ಮ ಭವಿಷ್ಯ ಕಾಲ ಶುದ್ಧ ಮಾಡುತ್ತಾರೆ.*


ಮೊದಲ ದೇವತೆ ಕುರಿತು ಹೇಳುವ ಮೊದಲು ಎಲ್ಲರಲ್ಲಿ ಒಂದು ಪ್ರಾರ್ಥನೆ ದಯವಿಟ್ಟು ತಾವು ಈ ಜ್ಞಾನಕ್ಕೆ ಎಷ್ಟು ಮಹತ್ವ ನೀಡುತ್ತೀರಿ ಅಷ್ಟು ನಿಮಗೆ ಅರ್ಥವಾಗುತ್ತದೆ. ಹಾಗೂ ತಮ್ಮ ನೆನಪಿನಲ್ಲಿ ಉಳಿಯುತ್ತದೆ, ಮತ್ತು ತಾವು ಇದರಂತೆ ತಮ್ಮ ಜೀವನದಲ್ಲಿ ಅನುಸರಿಸಲು ಸಹಾಯವಾಗುತ್ತದೆ. ಏಕೆಂದರೆ ಶ್ರದ್ಧಾವಾನ ಲಭ್ಯತೆ ಜ್ಞಾನಂ. ಆದ್ದರಿಂದ ಇದರ ಪ್ರತಿ ಶ್ರದ್ಧೆಯಿರಲಿ, ಎಂದು ಪ್ರಾರ್ಥಿಸುತ್ತೇನೆ 🙏🙏🙏.


ಇಂದು ಮೊದಲ ದಿನ ಈಗ ಶೈಲ ಪುತ್ರಿ ಆರಾಧನೆ. ಮೊದಲೇ ಹೇಳಿದಂತೆ ಇದು ಒಂದು ದಿನದ ಆರಾಧನೆಯಲ್ಲ ನಿರಂತರ ನೆನಪಿಟ್ಟು ಮಾಡುವಂತಹ ಆರಾಧನೆ.


ಇಲ್ಲಿ ನಾವು ಗಮನಿಸಬೇಕು ಏನೆಂದರೆ, ದೇವಿಗೆ ಅನೇಕ ಹೆಸರುಗಳು ಇದ್ದರೂ *ಆಕೆಯನ್ನು ಶೈಲ ಎಂದೇ ಏಕೆ ಕರೆದರು ?*


ಈ ಆರಾಧನೆಗೆ ಕುರಿತು ಹನುಮಾನ ದೇವರು ಹೇಳುವುದೇನೆಂದರೆ,


*ನಮ್ಮಿಂದ ಜಗತ್ತಿನ ಬೇರೆ ಜನರು ಮತ್ತು ಅಸ್ತಿತ್ವಗಳಿಗೆ ಆದಂತಹ ಕೆಟ್ಟ ಕೆಲಸಗಳಿಗೆ ನಮ್ಮ ಮನಸ್ಸನ್ನು ಕಲ್ಲಾಗಿ ಮಾಡಿಕೊಳ್ಳಬೇಕು*. ಹಾಗೂ


*ಬೇರೆಯವರಿಂದ ನಮ್ಮ ಮೇಲೆ ಆದಂತಹ ಕೆಟ್ಟ ಕೆಲಸಗಳಿಗೆ ನಮ್ಮ ಮನಸ್ಸನ್ನು ಕಲ್ಲಿನಂತೆ ಮಾಡಿಕೊಳ್ಳಬೇಕು.*



ಇದರರ್ಥ ಕಲ್ಲಿಗೆ ಯಾವುದೇ ಜೀವ ಇಲ್ಲಾ. ಆದ್ದರಿಂದ ಯಾವುದೇ ನೆನಪು, ಕಲ್ಪನೆಗಳು ಸಹ ಕಲ್ಲಿಗೆ ಇಲ್ಲಾ.


ಇದೇ ರೀತಿ ನಮ್ಮಿಂದ ಬೇರೆಯವರಿಗೆ ಆದಂತಹ ಕೆಟ್ಟ ಕೆಲಸಗಳು ಹಾಗೂ ಬೇರೆಯವರಿಂದ ನಮಗೆ ಆದಂತಹ ಕೆಟ್ಟ ಅನುಭವಗಳಿಗೆ ನಮ್ಮ ಮನಸ್ಸನ್ನು ಕಲ್ಲಾಗಿ ಮಾಡಿಕೊಳ್ಳಬೇಕು.


ಅರ್ಥಾತ್ ಪದೇ ಪದೇ,


ನನ್ನಿಂದ ತಪ್ಪಾಯ್ತು ಎಂದು ನೆನಪು ಮಾಡಿಕೊಳ್ಳಬಾರದು. ಹಾಗೂ


ಬೇರೆಯವರು ನನಗೆ ಈ ರೀತಿ ಅನ್ಯಾಯ ಅನೀತಿ ಅಧರ್ಮ ಮಾಡಿದರು ಎಂದು ಪದೇ ಪದೇ ಆ ಅನ್ಯಾಯ ಅನೀತಿ ಅಧರ್ಮದ ಕೆಲಸಗಳನ್ನು ನೆನಪಿಸಿಕೊಳ್ಳಬಾರದು.



ಏಕೆಂದರೆ ಜಗತ್ತು ದೇವರು ನಡೆಸುತ್ತಿದ್ದಾನೆ ಎಂದು ನಾವೆಲ್ಲರೂ ತಿಳಿದಿದ್ದೇವೆ.


*"ಆದರೆ ಈ ಜಗತ್ತನ್ನು ಒಂದು ಸಿದ್ದಾಂತ ನಡೆಸುತ್ತಿದೆ. ಅದುವೇ ಬೀಜ ವೃಕ್ಷದ ಸಿದ್ದಾಂತ. ಇದನ್ನೇ ಇಂಗ್ಲಿಷಿನಲ್ಲಿ cause and effect ಮತ್ತು ಕನ್ನಡದಲ್ಲಿ ಕಾರಣ ಪರಿಣಾಮ ಎಂದು ಕರೆಯುತ್ತಾರೆ."*


ಹಿಂದೆಯೂ ಹೇಳಿದ್ದೆ, ನಮ್ಮ ಪ್ರತಿಯೊಂದು ಯೋಚನೆಗಳು ಒಂದು ಬೀಜ ಇದ್ದ ಹಾಗೆ, ನಾವು ಬೀಜ ಬಿತ್ತಿದಾಗ ಸಸಿ, ಗಿಡ, ಮರ ಆಗುವ ಹಾಗೆ, ನಮ್ಮ ಪ್ರತಿಯೊಂದು ಯೋಚನೆಯೂ ನಮ್ಮ ಭವಿಷ್ಯದ ಬೀಜ ಆಗಿರುತ್ತದೆ.


ಇದರಲ್ಲಿ ನಮ್ಮ ಹಿಂದಿನ ಕೆಟ್ಟ ಘಟನೆಗಳ ಅನುಭವಗಳು ಕೇವಲ ನೆನಪುಗಳು ಅಥವಾ ಯೋಚನೆ ಆಗಿರುವುದಿಲ್ಲ. ಯೋಚನೆ thought, ಜೊತೆಗೆ ನಾವು ಚಿತ್ರಗಳನ್ನು imagination ಹಾಗೂ ಅನುಭೂತಿಯನ್ನು feeling ಸಹ ಹಾಕುತ್ತೇವೆ.


ಉದಾಹರಣೆಗೆ, ದ್ರೌಪದಿಗೆ ತುಂಬಿದ ಸಭೆಯಲ್ಲಿ ಅಪಮಾನ ಆಯ್ತು. ಇಂತಹ ಅಪಮಾನ ಬೇರೆ ಬೇರೆ ರೀತಿಯಿಂದ ನಮಗೂ ಆಗಬಹುದು. (ಅಥವಾ ಯಾವುದೇ ಜಗಳ ಇರಬಹುದು, ಯಾವುದೇ ದುರ್ಘಟನೆ ಇರಬಹುದು)


ಈ ಘಟನೆಗಳು ನೆನಪಾದಾಗ


ಆ ಘಟನೆಯ ಯೋಚನೆ ಮಾಡುತ್ತೇವೆ.


ನಾವು ಆಗಿನ ಚಿತ್ರಗಳನ್ನು ಪದೇ ಪದೇ ನಮ್ಮ ಮನಸ್ಸಿನಿಂದ ಹೊರಹಾಕುತ್ತವೆ. Imagination ಮಾಡುತ್ತೇವೆ


ಆ ಘಟನೆಗೆ ಸಂಬಂಧಿಸಿದ ನೋವು ಅಪಮಾನದ ಅನುಭವಗಳನ್ನು ನೆನಪಿನ ರೂಪದಲ್ಲಿ ಮತ್ತೆ ಮತ್ತೆ ನಾವು ಆ ಘಟನೆ ಘಟಿಸದಿದ್ದರೂ ಅನುಭವಿಸುತ್ತೇವೆ. Feel ಮಾಡುತ್ತೇವೆ



ಇಂಗ್ಲಿಷಿನಲ್ಲಿ ಒಂದು ಮಾತಿದೆ, ಅದೇನೆಂದರೆ,


*What you think, you become*


*What you imagine, you create*


*What you feel, you will attract.*


ಅಂದರೆ ಇಲ್ಲಿ ನಮಗೆ ಹನುಮಾನ ದೇವರು ಶೈಲ ಪುತ್ರಿಯ ಆರಾಧನೆಯಲ್ಲಿ ಎಷ್ಟು ದೊಡ್ಡ ಮಾತನ್ನು ಹೇಳುತ್ತಿದ್ದಾರೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.


ನಮ್ಮ ಜೀವನದಲ್ಲಿ ಘಟಿಸುವ ಕೆಟ್ಟ ಘಟನೆಗಳು ಪದೇ ಪದೇ ಪುನಾರಾವರ್ತನೆಯಾಗಲು ಬೀಜ, ವೃಕ್ಷ ಸಿದ್ದಾಂತ ಅಥವಾ ಕಾರಣ ಪರಿಣಾಮ ಸಿದ್ದಾಂತ cause and effect rule ಕಾರಣ.


ಈ ನಿಯಮವನ್ನೆ ಕೆಲಸ ಮಾಡದಂತೆ ಹನುಮಾನ ದೇವರು ನಮಗೆ ಒಂದು ಉಪಾಯ ತಿಳಿಸುತ್ತಿದ್ದಾರೆ. ಅದೇನೆಂದರೆ ನಮ್ಮಿಂದಾದ ಕೆಟ್ಟ ಕೆಲಸ ಹಾಗೂ ಬೇರೆಯವರಿಂದ ನಮ್ಮ ಮೇಲೆ ಆದಂತಹ ಕೆಟ್ಟ ಕೆಲಸಕ್ಕೆ ನಮ್ಮ ಮನಸ್ಸನ್ನು ಕಲ್ಲಾಗಿ ಮಾಡಿಕೊಳ್ಳಬೇಕು.


ಅಂದರೆ


ಆ ಕೆಟ್ಟ ಘಟನೆಗಳನ್ನು ಯೋಚಿಸಬಾರದು.


ಆ ಕೆಟ್ಟ ಘಟನೆಗಳ ಆ ಚಿತ್ರಗಳನ್ನು ತರಬಾರದು.


ಆ ಕೆಟ್ಟ ಘಟನೆಗಳನ್ನು ಮತ್ತೆ ಮತ್ತೆ ಅನುಭವಿಸಬಾರದು.



ಇದೇ ಹನುಮಾನ ದೇವರು ನಮಗೆ ಹೇಳುವಂತಹ ಮೊದಲ ದಿನದ ದೇವಿ ಶೈಲ ಪುತ್ರಿಯ ಆರಾಧನೆ.


ಕೊನೆಯಲ್ಲಿ ಮತ್ತೊಮ್ಮೆ, ಹೇಳುವುದೇನೆಂದರೆ ತಮ್ಮ ಜೀವನದ ಕೆಟ್ಟ ಘಟನೆಗಳಿಗೆ ತಮ್ಮ ಮನಸ್ಸನ್ನು ಶಿಲೆಯಾಗಿ ಮಾಡಿಕೊಳ್ಳಿ.


*ತಮ್ಮ ಜೀವನದ ಕೆಟ್ಟ ಘಟನೆಗಳನ್ನು*

*Don't think*

*Don't imagine*

*Don't feel*


ಈ ಆರಾಧನೆ ತಮಗೆ ಅರ್ಥವಾಯಿತು ಎಂದು ಭಾವಿಸುತ್ತೇನೆ. ಇದನ್ನು ನೆನಪಿನಲ್ಲಿಟ್ಟುಕೊಂಡು ನಿರಂತರ ಈ ಜ್ಞಾನದ ವಿಷಯವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಇದರಿಂದ ತಮ್ಮ ಜೀವನದ ದುರ್ಭಾಗ್ಯ ನಾಶವಾಗಲಿ ಎಂದು ಆಶಿಸುತ್ತಾ.


ತಮಗೆ ನವರಾತ್ರಿಯ ಶೈಲ ಪುತ್ರಿ ದೇವಿಯ ಆರಾಧನೆಯ ಶುಭಾಶಯಗಳು.





ದೇವಿ ತಮ್ಮನ್ನು ಸನ್ಮಾರ್ಗದಲ್ಲಿ ನಡೆಸಲಿ. ಬೇರೆಯವರು ಸಹ ಸನ್ಮಾರ್ಗದಲ್ಲಿ ನಡೆಯಲು ಈ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಿ.


ಎಲ್ಲರಿಗೆ ವಂದನೆಗಳು🙏🙏🙏


ಇಂತಿ ತಮ್ಮ

ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ



Comments

Popular posts from this blog