"*ನವರಾತ್ರಿಯ ಮೂರನೇ ದೇವಿ ಚಂದ್ರ ಘಂಟಾ ದೇವಿಯ ಆರಾಧನೆ*"
ನಮ್ಮ ಭೂತಕಾಲವನ್ನು ಶುದ್ಧೀಕರಿಸುವ ಮೂರನೇ ದೇವಿ ಚಂದ್ರಘಂಟಾ ದೇವಿ.
ನಮ್ಮ ಭೂತಕಾಲದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಮೂಲಕ, ನಮ್ಮ ಭೂತಕಾಲದ ತಪ್ಪುಗಳು ನಮಗೆ ದುರಾದೃಷ್ಟ ತರದಂತೆ ಶುದ್ಧಿಕರಿಸಿಕೊಳ್ಳಬಹುದು.
( ಪ್ರಾಯಶ್ಚಿತ್ತ : ನಮ್ಮ ತಪ್ಪುಗಳಿಗೆ ಇಂದ್ರಿಯಗಳ ಸುಖ ಸಂತೋಷ, ಅಹಂಕಾರದ ಮತ್ತು ಸಂಪತ್ತಿನ ತ್ಯಾಗ ಮಾಡುವುದು.)
ನಾವು ಪ್ರಾಯಶ್ಚಿತ್ತ ಯಾವಾಗ ಮಾಡಿಕೊಳ್ಳುತ್ತೇವೆ ಎಂದರೆ, ನಮ್ಮ ಜೀವನದ ಘಟನೆಗಳನ್ನು ಹಾಗೂ ಜಗತ್ತಿನ ಘಟನೆಗಳನ್ನು ಸರಿಯಾದ ದೃಷ್ಟಿಕೋನದಿಂದ ನೋಡಿದಾಗ.
ಆದರೆ ಚಂದ್ರನನ್ನು ಕವಿ, ವಿಜ್ಞಾನಿ, ಮಕ್ಕಳು, ತಾಯಂದಿರು ವಿಭಿನ್ನ ಜನರು ವಿಭಿನ್ನವಾಗಿ ನೋಡುವಂತೆ, ಒಂದು ಘಟನೆಯನ್ನು ವಿಭಿನ್ನ ಜನರು ವಿಭಿನ್ನವಾಗಿ ನೋಡುತ್ತಾರೆ.
ಉದಾಹರಣೆಗೆ :
* ಯಾವುದೇ ತಪ್ಪು, ನಮ್ಮಿಂದ ಅಥವಾ ನಮ್ಮವರಿಂದ ಆದಾಗ ಅದು ತಪ್ಪೆಂದು ಅನಿಸುವುದಿಲ್ಲ.
ಆದರೆ ಅದೇ ತಪ್ಪನ್ನು ಬೇರೆಯವರು ಮಾಡಿದರೆ, ಅದನ್ನು ತಪ್ಪು ಎಂದು ಹೇಳುತ್ತೇವೆ.
* ನಮಗೆ ಸಂಬಂಧಿಸಿದವರಿಗೆ ನೋವಾದಾಗ, ನಮ್ಮ ಸಂಬಂಧಿಗಳ ಜೀವ ಹತ್ಯೆ ಆದಾಗ ಅದನ್ನು ತಪ್ಪು ಎನ್ನುತ್ತೇವೆ.
ನಮಗೆ ಸಂಬಂಧವಿಲ್ಲದ ಮುಗ್ಧರ, ಮುಗ್ಧ ಪ್ರಾಣಿಗಳ ಜೀವ ಹತ್ಯೆ ಆದಾಗ ಅದು ತಪ್ಪು ಅನಿಸುವುದಿಲ್ಲ.
ಈ ರೀತಿ ಪಕ್ಷಪಾತದ ಸ್ವಭಾವದಿಂದ ನಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಿಲ್ಲ. ಆಗ ನಾವು ದುರಾದೃಷ್ಟವನ್ನು ಆಹ್ವಾನಿಸುತ್ತೇವೆ.
*ಚಂದ್ರ ಅನೇಕರಿಗೆ ಅನೇಕ ರೀತಿ ಕಂಡರೂ, ಘಂಟೆಯ ನಾದ ಎಲ್ಲರಿಗೂ ಬಹುತೇಕ ಒಂದೇ ರೀತಿ ಕೇಳುತ್ತದೆ.*
ಚಂದ್ರಘಂಟಾ ದೇವಿ, ಚಂದ್ರನಂತೆ ಜೀವನದ ಘಟನೆಗಳನ್ನು ಪಕ್ಷಪಾತದಿಂದ ನೋಡದೆ, ಘಂಟೆಯ ನಾದದಂತೆ ನಿಷ್ಪಕ್ಷಪಾತದಿಂದ ಒಂದೇ ರೀತಿಯಲ್ಲಿ ಘಟನೆಗಳನ್ನು ನೋಡುವ ಸಂದೇಶವನ್ನು ನೀಡುತ್ತಿದ್ದಾರೆ..
ಹೀಗೆ ಚಂದ್ರಘಂಟಾ ದೇವಿ ತನ್ನ ಸ್ವರೂಪದ ಮೂಲಕ ನಮ್ಮ ಸ್ವಭಾವದಲ್ಲಿ ಪಕ್ಷಪಾತವಿಲ್ಲದೆ ನಿಷ್ಪಕ್ಷಪಾತದ ಸ್ವಭಾವವನ್ನು ನಾವು ಹೊಂದಬೇಕು ಎನ್ನುವುದನ್ನು ತಿಳಿಸುತ್ತಿದ್ದಾರೆ.
ಹೀಗೆ ದೇವಿ ನಮ್ಮ ಸ್ವಭಾವವನ್ನು ಶುದ್ಧೀಕರಿಸುತ್ತಾರೆ.
*ನಾವು ನಮ್ಮ ಜೀವನದ ಘಟನೆಗಳನ್ನು, ಜಗತ್ತಿನ ಘಟನೆಗಳನ್ನು ಪಕ್ಷಪಾತದಿಂದ ನೋಡದೆ, ನಿಷ್ಪಕ್ಷಪಾತದಿಂದ ನೋಡುವ ಮೂಲಕ ನಮ್ಮ ತಪ್ಪುಗಳನ್ನು ಪ್ರಾಯಶ್ಚಿತದ ಮೂಲಕ ಶುದ್ಧಿಕರಿಸಿಕೊಳ್ಳೋಣ*.
ಎಲ್ಲರಿಗೂ, ನಮ್ಮ ಸ್ವಭಾವವನ್ನು ಶುದ್ಧೀಕರಿಸುವ ಸಂದೇಶ ನೀಡಿದ ಚಂದ್ರಘಂಟಾ ದೇವಿಯ ಆರಾಧನಾ ದಿನದ ಶುಭಾಶಯಗಳು.
ಇಂತಿ ತಮ್ಮ
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ

Comments
Post a Comment