"*ನವರಾತ್ರಿಯ ಆರನೇ ದೇವಿ ಕ್ಯಾತ್ಯಾಯನಿ ಮಾತೆ ನಮಗೆ ನೀಡುವ ಸಂದೇಶ*"


ನಮ್ಮ ವರ್ತಮಾನವನ್ನು ಶುದ್ಧೀಕರಿಸುವ ಮೂರನೇ ಮಾತೆ ದೇವಿ ಕ್ಯಾತ್ಯಾಯನಿ.


ಮಾತೆ ಬಹುದೊಡ್ಡ ಸಂದೇಶವನ್ನು ನಮಗೆ ನೀಡುತ್ತಿದ್ದಾರೆ. ಈ ಸಂದೇಶ ಸರಿಯಾಗಿ ಪಾಲಿಸದಿದ್ದರಿಂದ ಅನೇಕ ತಪ್ಪುಗಳು ನಮ್ಮ ಜೀವನದಲ್ಲಿ ಘಟಿಸುತ್ತವೆ. 


ಒಂದು ಘಟನೆ ಘಟಿಸಿದಾಗ ಮೂರು ಸಂಗತಿಗಳು ನಡೆಯುತ್ತವೆ. 

1. ಘಟನೆಯ *"ಸೂಚನೆ"* ಲಭಿಸುತ್ತದೆ. 

2. ಆ ಸೂಚನೆಯನ್ನು ನಮ್ಮ ವಿವೇಕದಂತೆ ನಾವು *"ಅರ್ಥ"* ಮಾಡಿಕೊಳ್ಳುತ್ತೇವೆ.

3. ಅದಕ್ಕೆ *"ಪ್ರತಿಕ್ರಿಯೆ"* ನೀಡುತ್ತೇವೆ.


ಕ್ಯಾತ್ಯಾಯನಿ ಮಾತೆ ನಮ್ಮ ಪ್ರತಿಕ್ರಿಯೆಗಳನ್ನು ಶುದ್ಧಿಕರಿಸಿಕೊಳ್ಳುವ ಸಂದೇಶ ನೀಡುತ್ತಿದ್ದಾರೆ. 


ನಾವು ಪಡೆದ ಸೂಚನೆಗೆ ಸಂಬಂಧಿಸಿದಂತೆ ನಮ್ಮ ಪ್ರತಿಕ್ರಿಯೆ ಮೂರು ವಿಧಗಳು ಇರುತ್ತವೆ.


1. ಧನಾತ್ಮಕ ಪ್ರತಿಕ್ರಿಯೆ Positive reaction

2. ಋಣಾತ್ಮಕ ಪ್ರತಿಕ್ರಿಯೆ Nagative reaction

3. ತಟಸ್ಥತೆ Neutral 


ನಾವು ಬಹಳಷ್ಟು ಸಲ ಪ್ರತಿಕ್ರಿಯೆ ನೀಡುವ ಮುಂಚೆ ಯೋಚನೆಯನ್ನೇ ಮಾಡುವುದಿಲ್ಲ. ಈ ಅಭ್ಯಾಸ ದೊಡ್ಡ ತಪ್ಪಿಗೆ ಕಾರಣವಾಗುತ್ತದೆ.


ಒಂದು ಉದಾಹರಣೆ : ಒಬ್ಬ ಮಹಿಳೆ ತನ್ನ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಅಲ್ಲಿಯೇ ತಾನು ಸಾಕಿದ ಮುಂಗುಸಿ ಬಿಟ್ಟು ನೀರು ತರಲು ಹೋಗುತ್ತಾಳೆ. 


ಬರುವಾಗ ಮನೆ ಬಾಗಿಲಲ್ಲಿ ಮುಂಗುಸಿಯ ಮುಖಕ್ಕೆ ರಕ್ತ ಹತ್ತಿರುವುದನ್ನು ನೋಡುತ್ತಾಳೆ. (ಆ ಮುಂಗುಸಿ ತನ್ನ ಯಜಮಾನಿ ಬರುವುದನ್ನು ಅಭಿಮಾನದಿಂದ ಖುಷಿಯಿಂದ ನೋಡುತ್ತಾ ನಿಂತಿರುತ್ತದೆ.)


ಆದರೆ ಆಕೆ ತನ್ನ ಮಗುವಿಗೆ ಈ ಮುಂಗುಸಿ ಏನೋ ಮಾಡಿದೆ, ಎಂದು ತನ್ನ ತುಂಬಿದ ಕೋಡವನ್ನು ಅದರ ಮೇಲೆ ಹಾಕಿ ಮನೆಯ ಒಳಗಡೆ ಹೋಗಿ ನೋಡುತ್ತಾಳೆ. 


ತೊಟ್ಟಿಲಿನ ಒಳಗಡೆ ಮಗು ಖುಷಿಯಿಂದ ಆಟ ಆಡುತಿರುತ್ತದೆ. ಪಕ್ಕದಲ್ಲಿಯೇ ಹಾವು ಸತ್ತು ಬಿದ್ದಿರುತ್ತದೆ. ಆಗ ಆಕೆಗೆ ದೊಡ್ಡ ಪಶ್ಚಾತ್ತಾಪ ಆಗುತ್ತದೆ. ಆಕೆ ಹೊರಗೆ ಬಂದು ನೋಡುತ್ತಾಳೆ, ಆಕೆಯ ಮಗುವನ್ನು ಹಾವಿನಿಂದ ರಕ್ಷಿಸಿದ ಮುಂಗುಸಿ ಸತ್ತು ಬಿದ್ದಿರುತ್ತದೆ. 


ಆಗ ಆಕೆ ಎಷ್ಟೊಂದು ದುಃಖಿಸಿದರು, ಎಷ್ಟು ಪಶ್ಚಾತ್ತಾಪ ಪಟ್ಟರೂ ಮುಂಗುಸಿಯ ಪ್ರಾಣ ಮರಳಿ ಬರುವುದಿಲ್ಲ. ಆಕೆಯ ತಪ್ಪು ಪ್ರತಿಕ್ರಿಯೆಯ ಫಲ, ಪಶ್ಚಾತ್ತಾಪದ ರೂಪದಲ್ಲಿ ಜೀವನಪೂರ್ತಿ ಅನುಭವಿಸುತ್ತಾಳೆ.


ಒಬ್ಬ ಬಿಲ್ಲುಗಾರ ಬಾಣ ಬಿಡುವವರೆಗೂ, ಬಾಣ, ಆತನ ನಿಯಂತ್ರಣದಲ್ಲಿರುತ್ತದೆ‌ ಬಾಣ ಬಿಟ್ಟ ನಂತರ ಆ ಬಾಣದ ನಿಯಂತ್ರಣದಲ್ಲಿ ಆತ ಬರುತ್ತಾನೆ. ಅಂದರೆ, ಆ ಕರ್ಮದ ನಿಯಂತ್ರಣಕ್ಕೆ ಆತ ಒಳಪಡುತ್ತಾನೆ.


ಇದಕ್ಕೆ ಇನ್ನೊಂದು ಉದಾಹರಣೆ.

ದ್ರೌಪದಿ, ತನ್ನ ಹೊಸ ಅರಮನೆಯ ಮಹಡಿ ಮೇಲೆ ನಿಂತಿರುವಾಗ, ದುರ್ಯೋಧನ ಅರಮನೆ ಒಳಗೆ ಬರುತ್ತಿರುತ್ತಾನೆ. ಹಿಂದಿನ ಮನೆಯಲ್ಲಿ ನೀರು ಆತನಿಗೆ ಕಂಡಿರುತ್ತದೆ, ಆದರೆ ಅದು ನೆಲವಾಗಿರುತ್ತದೆ. ಮುಂದೆ ಬಂದಾಗ ಅಲ್ಲಿ ನೆಲ ಕಾಣುತ್ತದೆ. ನೆಲ ಎಂದು ತಿಳಿದು ಕಾಲಿಡುತ್ತಾನೆ. ಆದರೆ ನೀರಿನಲ್ಲಿ ಬಿದ್ದುಬಿಡುತ್ತಾನೆ. 


ಇದನ್ನು ಮಹಡಿ ಮೇಲಿನಿಂದ, ತನ್ನ ಸಖಿಯರ ಜೊತೆ ನೋಡಿದ ದ್ರೌಪದಿ, ಜೋರಾಗಿ ನಗುತ್ತಾ, *"ಕುರುಡನ ಮಗ ಕುರುಡ"* ಎಂದು ಅಪಹಾಸ್ಯ ಮಾಡುತ್ತಾಳೆ. ಇದರಿಂದ ದುರ್ಯೋಧನನಿಗೆ ಬಹಳ ಅಪಮಾನ ವಾಗುತ್ತದೆ. ಈ ಘಟನೆಯ ಸೇಡನ್ನು ತುಂಬಿದ ಸಭೆಯಲ್ಲಿ ದ್ರೌಪದಿಗೆ ಅಪಮಾನ ಮಾಡುವ ಮೂಲಕ ತೀರಿಸಿಕೊಳ್ಳುತ್ತಾನೆ. ಇದು ಮುಂದೆ ಕುರುಕ್ಷೇತ್ರ ಯುದ್ಧಕ್ಕೂ ಕಾರಣವಾಗುತ್ತದೆ. 


ಆದ್ದರಿಂದ ನಮಗೆ ಬರುವ ಸೂಚನೆಗಳಿಗೆ ಯೋಚನೆ ಮಾಡಿ ಸರಿಯಾದ ಪ್ರತಿಕ್ರಿಯೆ ಕೊಡಬೇಕು. 


*"ನಮಗೆ ಹಂಗಿಸುವ ಕೆಟ್ಟ ಸೂಚನೆಗಳು ಬಂದರೂ ಧನಾತ್ಮಕ ಪ್ರತಿಕ್ರಿಯೆಗೆ ನೀಡಲು ಪ್ರಯತ್ನಿಸಬೇಕು. ಇದಕ್ಕೆ ಒಂದು ಉದಾಹರಣೆ"* :


ನರೇಂದ್ರ ಮೋದಿಯವರು ಮೊದಲು ಪ್ರಧಾನಿಯಾಗುವ ಮುಂಚೆ, ವಿರೋಧ ಪಕ್ಷದ ವ್ಯಕ್ತಿ, ಮೋದಿಯವರನ್ನು ಚಹಾ ಮಾರುವ ಕೆಳ ಮಟ್ಟದ ವ್ಯಕ್ತಿ ಎಂದು ಹಂಗಿಸಿದಾಗ, ಅವರು ಅದಕ್ಕೆ ದುಃಖಿಸುವುದಿಲ್ಲ. ಅದಕ್ಕೆ ಧನಾತ್ಮಕ ಪ್ರತಿಕ್ರಿಯೆ ಕೊಟ್ಟು ಕೆಳವರ್ಗದ ಜನರ ಸ್ವಾಭಿಮಾನ ಜಾಗೃತಿ ಆಗುವಂತೆ, "*"ಚಾಯ್ ಪೇ ಚರ್ಚಾ*" ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ. ಇದರಿಂದ ಹಂಗಿಸಿದವನೆ ಮುಖಭಂಗಪಡುತ್ತಾನೆ.


ಈ ರೀತಿಯಾಗಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಧನಾತ್ಮಕ ಪ್ರತಿಕ್ರಿಯೆ ನೀಡಲು ಪ್ರಯತ್ನಿಸೋಣ. ತನ್ಮೂಲಕ ನಮ್ಮ ಬಾಳನ್ನು ಸುಂದರಗೋಳಿಸೋಣ.


ಎಲ್ಲರಿಗೂ ನಮ್ಮ ಪ್ರತಿಕ್ರಿಯೆ ಶುದ್ಧಿಕರಿಸಿಕೊಳ್ಳುವ ಸಂದೇಶ ನೀಡಿದ ಕ್ಯಾತ್ಯಾಯನಿ ದೇವಿಯ ಆರಾಧನೆಯ ಶುಭಾಶಯಗಳು. 


ಇಂತಿ ತಮ್ಮ 

ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ.

Comments

Popular posts from this blog