*"ನಾವು ಪಡೆದಿದ್ದನು, ಪುನಃ ನೀಡುವ ವಿಧಾನಗಳು"*


ಒಂದು ಪ್ರಶ್ನೆ : ಒಂದು ಸ್ಥಳದಲ್ಲಿ ಒಬ್ಬರು ಹೇಳುವವರಿದ್ದಾರೆ. ಅದನ್ನು ಇಬ್ಬರು ಕೇಳುತ್ತಿದ್ದಾರೆ.

ಪ್ರಶ್ನೆ ಏನೆಂದರೆ,


1. ಆ ಸ್ಥಳದಲ್ಲಿ ಎಷ್ಟು ಜನ ಹೇಳುತ್ತಿದ್ದಾರೆ ? ಮತ್ತು


2. ಅದನ್ನು ಎಷ್ಟು ಜನ ಕೇಳುತ್ತಿದ್ದಾರೆ ?


ಬಹುತೇಕರು ಒಬ್ಬರು ಹೇಳುತ್ತಿದ್ದಾರೆ. ಇಬ್ಬರು ಕೇಳುತ್ತಿದ್ದಾರೆ ಎಂದು ಹೇಳಬಹುದು.


ಆದರೆ, ಅಲ್ಲಿ ನಿಜವಾಗಿಯೂ ಒಬ್ಬರು ಹೇಳುತ್ತಿದ್ದಾರೆ. ಅದನ್ನು ಕೇಳುವವರು ಮೂವರಿದ್ದಾರೆ.


ಇದು ಹೇಗೆ !!! ? ಎನ್ನಬಹುದು.


 ಹೌದು ಇಬ್ಬರು ಕೇಳುಗರು ಇದ್ದಾರೆ, ಆದರೆ ಅದನ್ನು ಕೇಳುವವರು ಈಗ ಮೂವರಾಗಿದ್ದಾರೆ.


ಯಾರು ಹೇಳುತ್ತಾರೆ, ಅವರು ಹೇಳುವ ಕೆಲಸ ಮಾತ್ರ ಮಾಡುವುದಿಲ್ಲ. ಹೇಳುವದರೊಂದಿಗೆ ಕೇಳುವ ಕೆಲಸ ಸಹ ಅವರು ಮಾಡುತ್ತಾರೆ.


ಇದರಿಂದಲೇ ನಾವು ಏನಾದರೂ ಹೇಳುವಾಗ ತಪ್ಪಾಯಿತು, ಎಂದರೆ ಪುನಃ ಸರಿಪಡಿಸಿಕೊಳ್ಳುತ್ತೇವೆ. ಏಕೆಂದರೆ ನಾವು ಹೇಳುವಾಗ, ಹೇಳುವದರೊಂದಿಗೆ, ಕೇಳುವ ಕೆಲಸ ಸಹ ಮಾಡುತ್ತೇವೆ.


ಇದರಿಂದ ತಿಳಿಯುವುದೇನೆಂದರೆ, ನಾವು ಪಡೆದ ಜ್ಞಾನವನ್ನು ಬೇರೆಯವರೊಂದಿಗೆ ಹಂಚಿಕೊಂಡರೆ, ನಾವು ಪಡೆದ ಜ್ಞಾನ ಇನ್ನೂ ಸ್ಪಷ್ಟವಾಗಿ ನಮಗೆ ಅರ್ಥವಾಗುತ್ತದೆ.


ಆದ್ದರಿಂದ ಸುದರ್ಶನ ಪೂರ್ಣ ಚಕ್ರ ಸಿದ್ಧಾಂತದಂತೆ, ನಾವು ಪಡೆದ ಜ್ಞಾನವನ್ನು ಇನ್ನೊಬ್ಬರಿಗೆ ನೀಡುವುದರಿಂದಲೂ, ನಾವು ಪಡೆದ ಜ್ಞಾನದ ಋಣ ಕಡಿಮೆ ಮಾಡಿಕೊಳ್ಳಬಹುದು.


****" ***" "" ***** *******

*"ಒಂದು ಪ್ರಸಂಗ : ಪುಟ್ಟ ಬಾಲಕನ ದಿಟ್ಟ ದೊಡ್ಡ ತಿಳುವಳಿಕೆ"* : 


ಒಂದು ಶಾಲೆಗೆ ಕಾರ್ಯಕ್ರಮಕ್ಕಾಗಿ ಹೋಗಿದ್ದೆ, ಕಾರ್ಯಕ್ರಮ ಮುಗಿಸಿ ಬರುವಾಗ ಎಲ್ಲಾ ವಿಧ್ಯಾರ್ಥಿಗಳು ಖುಷಿಯಿಂದ, ಅಭಿಮಾನದಿಂದ ಕೈ ಮಾಡುತ್ತಿದ್ದರು. ನಾನು ಸಹ ಖುಷಿಯಿಂದ ಕೈ ಬೀಸಿದೆ.


ಅಷ್ಟು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಬಹುಶಃ 4 ಅಥವಾ 5 ನೇ ತರಗತಿ ಇರಬಹುದು. ಮಾಸಿದ ಚಡ್ಡಿ ತೊಟ್ಟಿದ್ದ. ಆತ ತನ್ನ ಕೈ ಮುಂದಕ್ಕೆ ನನ್ನ ಕಡೆ ಚಾಚಿದ. ಆತನ ಮುಖದಲ್ಲಿ ಮಂದಹಾಸದ ನಗು ಇತ್ತು. ನಾನು ಆ ಕೈ ಕಡೆ ನೋಡಿದಾಗ, ಆತ ಇನ್ನೂ ಮುಂದೆ ಬಂದು, ಕೈ ನನ್ನ ಹತ್ತಿರ ತಂದ. ಆತನ ಎರಡು ಬೆರಳುಗಳ ನಡುವೆ ಏನೋ ಇತ್ತು. ಸಮೀಪ ಹೋದಾಗ ನನಗೆ ಕಂಡಿದ್ದು, ಆ ಎರಡು ಬೆರಳುಗಳಲ್ಲಿ ಹತ್ತು ರೂಪಾಯಿಯ ಮಡಚಿದ ನೋಟು. "ಅದನ್ನು ನೋಡಿ ನಾನು ದಿಕ್ಕು ತೋಚಿದಂತಾದೆ" .


*ಏಕೆಂದರೆ,ಮೊದಲೇ ಸರ್ಕಾರಿ ಶಾಲೆ, ಅಲ್ಲಿನ ಮಕ್ಕಳೆಂದರೆ ಬಡ ಮಕ್ಕಳು. ತಂದೆ ತಾಯಿಯಲ್ಲಿ ಜಿದ್ದು ಮಾಡಿ, ಏನೋ ತಿಂಡಿ ತಿನ್ನಲು ತಂದಂತಹ ಆ ದಿನದ "ತನ್ನ ಸರ್ವಸ್ವ" ಆಗಿದ್ದಂತಹ ಹತ್ತು ರೂಪಾಯಿಗಳನ್ನು, ತಾನು ಪಡೆದ ಜ್ಞಾನಕ್ಕೆ ಪ್ರತಿಯಾಗಿ ನನಗೆ ನೀಡಲು ಬಂದಿದ್ದ.*


ಆ ಪುಟ್ಟ ಬಾಲಕನ ಆ ದೊಡ್ಡ ತಿಳುವಳಿಕೆಯನ್ನು , ಬಹುಶಃ ನನ್ನಿಂದ ಮರೆಯಲು ಆಗುವುದಿಲ್ಲ. (ಆಗ ಆತನಿಗೆ ಖುಷಿಯಿಂದ ಒಂದು ಪೆನ್ನು ಕಾಣಿಕೆ ನೀಡಿ. ದುಡ್ಡು ಆತನಿಗೆ ಕೊಟ್ಟು ಬಂದೆ.)


ಆ ಪುಟ್ಟ ಹುಡುಗನ ನಡೆ ಆಘಾತವಾಗಲು ಕಾರಣ, ಈಗ ಸುದರ್ಶನ ಪೂರ್ಣ ಚಕ್ರ ಸಿದ್ದಾಂತವನ್ನು ನಾನು ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದೇನೆ.


ಆದರೆ *ಆ ಪುಟ್ಟ ಬಾಲಕನಿಗೆ, ಅಂದು ಆ ಸಿದ್ದಾಂತ ಯಾರು ಹೇಳಿರಬಹುದು ? ಯಾರೇ ಹೇಳಿದರು ಸಹ, ನಾನು ಪಡೆದಿರುವುದಕ್ಕೆ ಪ್ರತಿಯಾಗಿ ಏನಾದರೂ ಪುನಃ ನೀಡಬೇಕು, ಎನ್ನುವ ವಿಚಾರ ಇಷ್ಟು ಚಿಕ್ಕ ವಯಸ್ಸಿನಲ್ಲಿ ಆತನ ಮನಸ್ಸಿಗೆ ಹೇಗೆ ಮುಟ್ಟಿತು ?*


ಆದರೂ ಅಷ್ಟು ಚಿಕ್ಕ ವಯಸ್ಸಿನ ಮಗು ದೊಡ್ಡ ಕೆಲಸ ಮಾಡಲು ಪ್ರಯತ್ನಿಸಿತು.


ಇಂತಹ ನಡೆಯೇ


* ನಮ್ಮ ಜೀವನದ ಒಟ್ಟು ಮೊತ್ತ ಶೂನ್ಯ ಮಾಡುವುದಕ್ಕೆ ಸಹಾಯವಾಗುತ್ತದೆ.


* ನಾವು ನಮ್ಮ ಜೀವನದಲ್ಲಿ ಯಾವುದೇ ಋಣಗಳಿಲ್ದದೆ ಸ್ವತಂತ್ರರಾಗಲು ಸಹಾಯವಾಗುತ್ತದೆ.


* ನಮ್ಮ ಮನಸ್ಸಿನ ಮೇಲೆ ಯಾರದೇ ಭಾರ ಇಲ್ಲದೆ, ನಾವು ಹಗುರವಾಗಲೂ ಸಹಾಯವಾಗುತ್ತದೆ.


ನಮ್ಮ ಜೀವನದ ಒಟ್ಟು ಮೊತ್ತ ಸೊನ್ನೆಯಾಗಲು *"ನಾವು ಪಡೆದ ಜ್ಞಾನಕ್ಕೆ ಪ್ರತಿಯಾಗಿ ಏನಾದರೂ ಕೊಡುವುದು ಅನಿವಾರ್ಯವಲ್ಲ"*.


ನಾವು ಪಡೆದ ಜ್ಞಾನವನ್ನು ಜಿಜ್ಞಾಸುಗಳಿಗೆ ಹಂಚಿದಾಗಲೂ


1. ನಾವು ಪಡೆದ ಜ್ಞಾನದ ಋಣವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು.


2. ಇದರ ಜೊತೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ನಾವು ಪಡೆದ ಜ್ಞಾನ ನಮಗೆ ಅರ್ಥವಾಗುತ್ತದೆ .


ಆದ್ದರಿಂದ, ಮತ್ತೊಮ್ಮೆ, ತಮಗೆ ಸಿಗುವ ಜ್ಞಾನವನ್ನು ಇನ್ನೊಬ್ಬರಿಗೆ ಹಂಚಿಕೊಳ್ಳಿ ಎಂದು ಹೇಳುತ್ತಾ....


(ಈ ಸಂದರ್ಭದಲ್ಲಿ, ಜ್ಞಾನ ಹಂಚಿಕೆಯ ವಿಷಯ ಅವರಿಗೆ ಹೇಳದಿದ್ದರೂ, ಈ ಜ್ಞಾನವನ್ನು ಇನ್ನೊಬ್ಬರಿಗೆ ಹಂಚಿಕೊಂಡಿರುವ (reshare) "ಶಾರದಕ್ಕ" ನವರಿಗೆ ಹನುಮಾನ ದೇವರು ಖಂಡಿತ ಆಶಿರ್ವಾದ ಮಾಡುತ್ತಾರೆ.

* ಅವರಿಗೆ ಜ್ಞಾನ ಇನ್ನೂ ಹೆಚ್ಚು ತಿಳಿಯಲು ಹಾಗೂ

* ಶಾಶ್ವತವಾಗಿ ಅವರಲ್ಲಿ ಈ ತಿಳುವಳಿಕೆ ನೆಲೆಸಲು

* ಜೀವನವನ್ನು ಸರಿಯಾಗಿ ನಿಭಾಯಿಸಲು ಹಾಗೂ

* ಜೀವನದ ಸಮಸ್ಯೆಗಳಿಂದ ಹೊರಬರಲು

 ಈ ಜ್ಞಾನ ಖಂಡಿತ ಅವರಿಗೆ ಸಹಾಯಕ್ಕೆ ಬರುತ್ತದೆ.)


ಎಲ್ಲರಿಗೂ ವಂದನೆಗಳು


ಇಂತಿ ತಮ್ಮ


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ

Comments

Popular posts from this blog