*"ನವರಾತ್ರಿಯ ಏಳನೇ ದಿನದ ದೇವಿ, ಮಾ ಕಾಳರಾತ್ರಿ ಸಂದೇಶ"*"
ನಮ್ಮ ಭವಿಷ್ಯವನ್ನು ಶುದ್ಧಿಕರಿಸುವ ಮೊದಲನೇ ದೇವಿ. ಮಾ ಕಾಳರಾತ್ರಿ.
ಬಹುತೇಕ ಎಲ್ಲರಿಗೂ ಕತ್ತಲೆ ಎಂದರೆ ಭಯ. ಏಕೆಂದರೆ ಸ್ವಲ್ಪ ಬೆಳಕು ಸಹ ಇಲ್ಲದ ಕತ್ತಲೆಯಲ್ಲಿ ನಮಗೆ ಏನೇನು ಕಾಣುವುದಿಲ್ಲ.
* ಆಗ ಮುಂದೆ ಏನಿದೆ ? ಹಿಂದೆ ಏನಿದೆ ? ಗೊತ್ತಾಗುವುದಿಲ್ಲ.
* ಮುಂದೆ, ಹಿಂದೆ ಯಾರಿದ್ದಾರೆ ? ಯಾವ ಶಕ್ತಿಯಿದೆ ? ಎನ್ನುವುದು ಗೊತ್ತಾಗುವುದಿಲ್ಲ.
* ಮುಂದೆ ಏನಾಗಬಹುದು? ಎನ್ನುವ ಅರಿವು ಇರುವುದಿಲ್ಲ.
ಸಾಮಾನ್ಯ ರಾತ್ರಿಗಳೇ ಈ ರೀತಿಯಾದರೆ, ನಾವು ಕಾಳ ರಾತ್ರಿ ಬಗ್ಗೆ ಯೋಚಿಸುತ್ತಿದ್ದೇವೆ. ಕತ್ತಲೆಯಲ್ಲಿ ಕತ್ತಲೆಯ ರಾತ್ರಿ, ಕಾಳರಾತ್ರಿ. ಸಾಮಾನ್ಯವಾಗಿ ಇಂತಹ ಕತ್ತಲು ಭಯವನ್ನು ಹುಟ್ಟಿಸುತ್ತದೆ.
ನಮ್ಮ ಜೀವನದಲ್ಲಿರುವ ಇಂತಹ ಕಾಳರಾತ್ರಿಯೇ ನಮ್ಮ ಜೀವನದ ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆ.
ಬಹಳಷ್ಟು ಜನರಿಗೆ ಭವಿಷ್ಯ ಎನ್ನುವುದು ಕತ್ತಲೆಯ ಭಯ ನೀಡುತ್ತದೆ.
* ಮುಂದೆ ಏನಾಗುತ್ತದೆ ? ಎನ್ನುವುದು ತಿಳಿದಿಲ್ಲ.
* ನಮಗೆ ಬೇಕಾದವರು, ಸಂಬಂಧಿಕರು ನಮ್ಮ ಜೊತೆಗೆ ಇರುತ್ತಾರಾ?
* ನಾವು ನಾಳೆ ಇರುತ್ತೇವೆಯೇ ? ಎನ್ನುವ ಖಚಿತತೆ ಇಲ್ಲಾ.
* ನನ್ನನ್ನು ನಾಳೆ ಯಾರು ನೋಡಿಕೊಳ್ಳುತ್ತಾರೆ ?
* ನಮ್ಮ ಭವಿಷ್ಯ ಹೇಗಿರುತ್ತದೆ ? ಎನ್ನುವ ಖಚಿತತೆ ಇಲ್ಲಾ.
ಈ ರೀತಿಯಿಂದ ಬಹಳಷ್ಟು ಜನರಿಗೆ ಭವಿಷ್ಯದ ಕುರಿತು ಭಯ ಇರುತ್ತದೆ. ಇಂತಹ ಭಯ. ನಮ್ಮ ಜೀವನದಲ್ಲಿ ದುರಾದೃಷ್ಟವನ್ನು ತರುತ್ತದೆ.
ಕಾಳರಾತ್ರಿ ದೇವಿ ಇಂತಹ ಭಯ ನಿವಾರಿಸಿಕೊಳ್ಳುವ ಸಂದೇಶ ನೀಡುತ್ತಾರೆ.
ಭವಿಷ್ಯದ ಕುರಿತು ಯೋಚಿಸುವುದು ಅವಶ್ಯವಾದರೂ, ನಿರಂತರ ಭವಿಷ್ಯದ ಯೋಚನೆಯಲ್ಲಿಯೇ ನಮ್ಮ ಸಮಯವನ್ನು ನಿರಂತರವಾಗಿ ಕಳೆದರೆ,
1. *ಭವಿಷ್ಯದಲ್ಲಿ ಕೆಟ್ಟದ್ದು ಆಗುತ್ತದೆ ಎನ್ನುವ ಭಯ, ವರ್ತಮಾನದಲ್ಲಿಯೇ ಕೆಟ್ಟ ಘಟನೆಗಳ ಅನುಭವವನ್ನು, ದುಃಖ, ಕಷ್ಟವನ್ನು ನೀಡುತ್ತದೆ.*
2. ಮನಸ್ಸು ನೆಮ್ಮದಿ ಕಳೆದುಕೊಳ್ಳುತ್ತದೆ. 3. ಮನಸ್ಸು ಅಶಾಂತವಾಗುತ್ತದೆ.
4. ಕಾರಣ ಪರಿಣಾಮ ಸಿದ್ದಾಂತದಂತೆ ಈಗ ನಾವು ಅನುಭವಿಸುವ ದುಃಖ, ಕಷ್ಟಗಳು, ಪುನಃ ಇನ್ನೊಂದು ದುಃಖ, ಕಷ್ಟಗಳಿಗೆ ಜನ್ಮ ನೀಡುತ್ತವೆ.
ಹೀಗೆ ಭವಿಷ್ಯದ ಭಯ ನಮಗೆ ದುರಾದೃಷ್ಟವನ್ನು ತರುತ್ತದೆ.
ಅದಕ್ಕಾಗಿ,
1. ಭವಿಷ್ಯದ ಕುರಿತು ಭಯವನ್ನು ಹೋಗಲಾಡಿಸಲು, ಆದಷ್ಟು ನಮ್ಮ ಗಮನವನ್ನು ವರ್ತಮಾನದ ಕೆಲಸಗಳಿಗೆ ನೀಡಬೇಕು.
2. ನಮ್ಮ ಜೀವನದ ಭವಿಷ್ಯದ ಭಯ ಹೋಗಲಾಡಿಸಲು ನಮ್ಮಿಂದ ಸಾಧ್ಯವಿರುವ ಕೆಲಸಗಳನ್ನು ಮಾಡಬೇಕು.
3. ವರ್ತಮಾನದ ಕೆಲಸಗಳನ್ನು ಪರಿಶ್ರಮ, ಪ್ರಾಮಾಣಿಕತೆ, ಶ್ರದ್ಧೆಯಿಂದ ಮಾಡುತ್ತಾ, ನಮ್ಮಿಂದ ಸುಧಾರಿಸಲು ಸಾಧ್ಯವಿಲ್ಲದ *ಭವಿಷ್ಯದ ಚಿಂತೆಗಳನ್ನು*, ಜೀವನದ ಕುರಿತು ತಿಳಿದಿರುವ ನಮ್ಮ ಗುರುವಿನ ಮೇಲೆ ಅಥವಾ ನಾವು ಆರಾಧಿಸುವ ದೇವರ ಮೇಲೆ ಬಿಡಬೇಕು.
4. ನಮ್ಮ ಜೀವನದ ಭವಿಷ್ಯಕ್ಕೆ ಸಂಬಂಧಿಸಿದಂತೆ ಸಾಧ್ಯವಿರುವ *ಎಲ್ಲಾ ಒಳಿತು, ಕೆಡುಕುಗಳನ್ನು ಸ್ವೀಕರಿಸುವ ಮನಸ್ಥಿತಿ* ಹೊಂದಿ, ವರ್ತಮಾನದಲ್ಲಿ ನೆಮ್ಮದಿಯಿಂದ ಇರಬೇಕು.
ಈ ಮೂಲಕ ಭವಿಷ್ಯದ ಕುರಿತು ಚಿಂತಿಸದೆ, ನಮ್ಮ ಜೀವನದಲ್ಲಿ ದುರಾದೃಷ್ಟ ತರುವುದನ್ನು ತಡೆಯುವುದು ಸಾಧ್ಯವಿದೆ.
ಈ ಮೂಲಕ ನಮ್ಮ ಭವಿಷ್ಯದ ಕುರಿತು, ನಮ್ಮ ಭಯವನ್ನು ಹೋಗಲಾಡಿಸುವ ಪ್ರಯತ್ನ ನಾವೆಲ್ಲರೂ ಮಾಡೋಣ.
ಎಲ್ಲರಿಗೂ ಮಾ ಕಾಳರಾತ್ರಿ ದೇವಿಯ ಆರಾಧನಾ ರಾತ್ರಿಯ ಶುಭಾಶಯಗಳು.
ಜೈ ಮಹಾ ಕಾಳರಾತ್ರಿ.
ಇಂತಿ ತಮ್ಮ
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ.

Comments
Post a Comment