ಚಂದ್ರಲೋಕಕ್ಕೆ ಕಳುಹಿಸಿದ ಚಂದ್ರಯಾನ -3 ನೌಕೆ ಕೇವಲ 14 ದಿನಗಳವರೆಗೆ ಕೆಲಸ ಮಾಡಿ ತನ್ನ ಚಟುವಟಿಕೆ ನಿಲ್ಲಿಸಿತು.
ಕಾರಣವೇನು ?
ನಮ್ಮ ಭೂಮಿಯ ಮೇಲೆ 24 ಗಂಟೆಗೆ ಒಂದು ದಿನ, (12 ಗಂಟೆಗೆ ಒಂದು ಹಗಲು) ಆದರೆ, ಚಂದ್ರನಲ್ಲಿ ಸರಿಸುಮಾರು 30 ದಿನಕ್ಕೆ ಒಂದು ದಿನ. ಸರಿಸುಮಾರು 15 ದಿನಕ್ಕೆ ಒಂದು ಹಗಲು, 15 ದಿನಕ್ಕೆ ಒಂದು ರಾತ್ರಿ.
ಚಂದ್ರನ ನೌಕೆಗೆ ಕತ್ತಲಲ್ಲಿ ಶಕ್ತಿ ಸಿಗದ ಕಾರಣ ಕೇವಲ 14 ದಿನ ಕೆಲಸ ಮಾಡಿತು.
ವಿಜ್ಞಾನಿಗಳಿಗೆ ಈ ವಿಷಯ ಇತ್ತಿತ್ತಲಾಗಿ ತಿಳಿದಿದೆ. ಆದರೆ ಭಾರತದ ಋಷಿ, ಮುನಿಗಳು ಈ ವಿಷಯವನ್ನು ಮೊದಲೇ ತಿಳಿದಿದ್ದರು. ಹೀಗಾಗಿ 15 ದಿನಕ್ಕೊಂದು ಪಕ್ಷ ಮಾಡಿದ್ದಾರೆ (ಕೃಷ್ಣ ಪಕ್ಷ, ಶುಕ್ಲ ಪಕ್ಷ).
ಈ ವಿಷಯ ಈಗ ತಿಳಿಸುವುದಕ್ಕೆ ಕಾರಣ, ಈಗ ಹದಿನೈದು ದಿನಗಳ ಕಾಲ, ಅಗಲಿ ಹೋದ ನಮ್ಮ ಪೂರ್ವಜರು ಪಿತೃಗಳಿಗೆ ಗೌರವಾದರ, ಶ್ರಧ್ಧೆ ತರ್ಪಣ ಅರ್ಪಿಸುವ ಪಿತೃ ಪಕ್ಷ ನಡೆಯುತ್ತಿದೆ. ಇಂದು ಕೊನೆಯ ದಿನ.
ಅದರ ನಂತರ ಪಿತೃ ಪಕ್ಷ ಇಲ್ಲ. ಏಕೆಂದರೆ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಪಿತೃ ಲೋಕದಲ್ಲಿಯೂ ಸಹ 15 ದಿನಗಳವರೆಗೆ ಹಗಲು ನಂತರ ರಾತ್ರಿ ಆಗುತ್ತದೆ.
ಹೀಗಾಗಿ ಪಿತೃ ಲೋಕದ ಸಮಯದ ಪ್ರಕಾರ ಮುಂಜಾನೆಯಿಂದ ಸಂಜೆವರೆಗೆ (ಅಂದರೆ ಭೂ ಲೋಕದ 15 ದಿನ) ಪಿತೃಗಳು ತಮ್ಮ ವಂಶಜರಿಂದ ಏನಾದರೂ ಸಿಗುವುದೋ ಎಂದು ಕಾಯುತ್ತಾರೆ. ಅವರಿಗೆ ನಾವು ಏನಾದರೂ ಅರ್ಪಿಸಿದರೆ ಸಂತೋಷದಿಂದ ನಮ್ಮನ್ನು ಹರಷಿ ಹೋಗುತ್ತಾರೆ.
ಇಲ್ಲದಿದ್ದರೆ ನಿರಾಶೆಯಿಂದ ನಿಟ್ಟುಸಿರು ಬಿಟ್ಟು ಹೋಗುತ್ತಾರೆ.
ಅವರ ಹರಕೆಯಿಂದ ನಮಗೆ ಒಳ್ಳೆಯದೇ ಆಗುವುದು ಹಾಗೂ ನಿಟ್ಟುಸಿರಿನಿಂದ ನಮಗೆ ಕೆಟ್ಟದ್ದು ಆಗುವುದು ಎನ್ನುವುದು ಪ್ರತೀತಿ.
ಆದಕಾರಣ ಎಲ್ಲರೂ ಸಾಧ್ಯವಾದಷ್ಟು ತಮ್ಮ ಶ್ರದ್ಧೆಯನ್ನು ಇಂದು ಸಂಜೆವರೆಗೆ ಪಿತೃಗಳಿಗೆ ಅರ್ಪಿಸಿ, ಪಿತೃಗಳಿಂದ ಆಶಿರ್ವಾದ ಪಡೆಯಿರಿ.
ಇಂತಿ ತಮ್ಮ
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ

Comments
Post a Comment