*ನಾನೇಕೆ ವಿಧಾನ ಪರಿಷತ್ತಿನ (ಶಿಕ್ಷಕರ ಕ್ಷೇತ್ರ) ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸಿದೆ ?*
*(ಈಶಾನ್ಯ ಶಿಕ್ಷಕರ ವಿಧಾನ ಪರಿಷತ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಬಹಿರಂಗ ಪತ್ರ)*
ನಮ್ಮ ಮನೆಯಲ್ಲಿಯೂ ಹಾಗೂ ನಮ್ಮ ಮನೆಯ ಹೊರಗಡೆಯೂ ಬಹಳ ಜನರಿಗೆ ನನ್ನ ಚುನಾವಣೆ ಸ್ಪರ್ಧೆಯ ಪ್ರಯತ್ನ ಬಹಳ ಆಘಾತವಾಗಿತ್ತು. ಕೆಲವರು ನಾನು ಮಹತ್ವಾಕಾಂಕ್ಷಿ ಎಂದು ಭಾವಿಸಿರಬಹುದು.
ಹೌದು, ನಾನು ಸತ್ಯ ಯುಗ ನಿರ್ಮಾಣದ ಮಹತ್ವಾಕಾಂಕ್ಷಿ. ನನ್ನ ಪಾಲಿಗೆ ಈ ಚುನಾವಣೆ ನನ್ನ ಜೀವನದ ಉದ್ದೇಶದ ವಿಚಾರವನ್ನು ಇನ್ನೂ ವಿಸ್ತಾರವಾಗಿ ಪ್ರಸಾರ ಮಾಡುವುದು ಈ ಸ್ಪರ್ಧೆಯ ಉದ್ದೇಶವಾಗಿತ್ತು.
ಒಂದು ನಿರ್ಜೀವ ಶಿಲೆಯನ್ನು ಜೀವಂತ ಮೂರ್ತಿಯ ಹಾಗೆ ಮಾಡುವವ ಶಿಲ್ಪಿಯಾದರೆ, ಒಬ್ಬ ಜೀವಂತ ವ್ಯಕ್ತಿಯನ್ನು ಸುಶಿಕ್ಷಿತ ನಾಗರಿಕರನ್ನಾಗಿ ಮಾಡುವವನು ಶಿಕ್ಷಕ.
ಒಂದು ಸಮಾಜ ಕತ್ತಲೆಯ ಅಜ್ಞಾನದಲ್ಲಿದೆಯೆಂದರೆ, ಶಿಕ್ಷಣದ ಕೊರತೆ ಅದಕ್ಕೆ ಕಾರಣ. ಒಂದು ಸಮಾಜ ಸುಜ್ಞಾನದ ಬೆಳಕಿನಲ್ಲಿದೆಯೆಂದರೆ ಅದಕ್ಕೆ ಉತ್ತಮ ಶಿಕ್ಷಣ ಕಾರಣ.
ಈ ಜಗತ್ತಿನಲ್ಲಿ ಪುನಃ ಸತ್ಯ ಯುಗ ನಿರ್ಮಾಣದ ಉದ್ದೇಶ ಹೊಂದಿದ ನಾನು
"ಶಿಕ್ಷಕರನ್ನು ಸತ್ಯ ಯುಗದ ನಿರ್ಮಾಪಕರನ್ನಾಗಿ ಕಾಣುತ್ತಿದ್ದೇನೆ"".
" ಶಿಕ್ಷಣವನ್ನು ಸತ್ಯ ಯುಗ ನಿರ್ಮಾಣದ ಅಸ್ತ್ರವನ್ನಾಗಿ ನೋಡುತ್ತಿದ್ದೇನೆ."
ಈ ಕಾರಣದಿಂದ ಶಿಕ್ಷಣ, ಶಿಕ್ಷಕರಿಗೆ ಸಂಬಂಧಿಸಿದ ಚುನಾವಣೆಯಲ್ಲಿ ನಾನು ಸ್ಪರ್ಧಿಸಲು ಯೋಚಿಸಿದೆ.
ಈ ಮೂಲಕ ನನ್ನ ವಿಚಾರಗಳನ್ನು ಇನ್ನೂ ದೂರಕ್ಕೆ ಹಾಗೂ ಇನ್ನೂ ಹೆಚ್ಚು ಜನರಿಗೆ ತಲುಪಿಸುವ ಅವಕಾಶ ಈ ಚುನಾವಣೆ ಎಂದು ಭಾವಿಸಿದೆ.
ಆದರೆ ಚುನಾವಣಾ ಕಚೇರಿಗೆ ತಲುಪಲು 2 ನಿಮಿಷ ವಿಳಂಬವಾದ ಕಾರಣ ನಾಮಪತ್ರ ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿದರು. ಇದರಿಂದ ನಾನು ವಿಧಾನ ಪರಿಷತ್ ಚುನಾವಣೆ ಕಣದಲ್ಲಿ ಈಗ ಇಲ್ಲಾ .
ಈಗ ಕಣದಲ್ಲಿರುವ ಅಭ್ಯರ್ಥಿಗಳನ್ನು ಕೇಳಿಕೊಳ್ಳುವುದೇನೆಂದರೆ,
ಶಿಕ್ಷಕರು ತಮ್ಮ ಪೂರ್ಣ ಗಮನವನ್ನು ವಿಧ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ನೀಡುವುದಕ್ಕಾಗಿ ಅವರ ಮೇಲೆ ಸಧ್ಯ ಇರುವಂತಹ ಅನ್ಯ ಹೊರೆಗಳನ್ನು ನಿವಾರಿಸುವ ಪ್ರಯತ್ನ ಮಾಡಲಿ. ಇದರಿಂದ ಶಿಕ್ಷಕರು ಒಂದೇ ಕಡೆ ಮನಸ್ಸನ್ನು ಕೇಂದ್ರೀಕರಿಸಿ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ . (Correct the spelling )
ಶಿಕ್ಷಕರಿಗೆ ವರ್ಗಾವಣೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಿ ತಮ್ಮ ಕುಟುಂಬದೊಂದಿಗಿರುವ ಖುಷಿಯಲ್ಲಿ ಉತ್ಸಾಹದಿಂದ ಮಕ್ಕಳಿಗೆ ಪಾಠ ಮಾಡುವಂತಹ ಅವಕಾಶ ನಿರ್ಮಿಸಲಿ.
ನಿವೃತ್ತಿ ವೇತನ ಕುರಿತಿರುವ ತೊಂದರೆಗಳನ್ನು ಪರಿಹರಿಸಿ ವೃದ್ಧಾಪ್ಯದಲ್ಲಿ ಭದ್ರತೆಯನ್ನು ಒದಗಿಸಲಿ.
ಖಾಸಗಿ ಶಿಕ್ಷಕರಿಗಿರುವ ವೇತನ ತಾರತಮ್ಯವನ್ನು ನಿವಾರಿಸಲು ಸರ್ಕಾರದಿಂದ ಸಾಧ್ಯವಿರುವ ಸೂಕ್ತ ಕ್ರಮ ತೆಗೆದುಕೊಳ್ಳಲಿ, ಎಂದು ನಾನು ಪ್ರಾರ್ಥಿಸುತ್ತೇನೆ.
ಇದರ ಜೊತೆಗೆ ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣದ ವಿಷಯಗಳನ್ನು ಸೇರಿಸಿ, ಮಕ್ಕಳು ಚಾರಿತ್ರ್ಯವಂತರಾಗುವಂತಹ ಪಠ್ಯ ರೂಪಿಸಲಿ.
ಇದರ ಜೊತೆಗೆ ಮುಖ್ಯವಾಗಿ ಅಭ್ಯರ್ಥಿಗಳು ತಾವು ಚುನಾಯಿತರಾದರೆ, ಸರ್ಕಾರಿ ಕ್ಷೇತ್ರದಲ್ಲಿರುವ ಭ್ರಷ್ಟಾಚಾರ ಹೊಡೆದೋಡಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಶಿಕ್ಷಕರಲ್ಲಿ, ಸಮಾಜದವರ ಮುಂದೆ ಪ್ರಮಾಣ ಮಾಡಬೇಕೆಂದು ಒತ್ತಾಯಿಸುತ್ತೇನೆ. ಈ ಮೂಲಕ ಸತ್ಯಕ್ಕೆ ಪುನಃ ಗೌರವ ಬರುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸುತ್ತೇನೆ.
ಪ್ರಜಾಪ್ರಭುತ್ವ ಎಂದರೇನು ?
ಈ ಹಿಂದೆ ಪ್ರಜಾಪ್ರಭುತ್ವ ಎಂದರೆ,
*ಪ್ರಜೆಗಳಿಂದ*
*ಪ್ರಜೆಗಳಿಗಾಗಿ*
*ಪ್ರಜೆಗಳಿಗೋಸ್ಕರ ಇರುವ ಸರ್ಕಾರ ಎಂದಾಗಿತ್ತು*. ಆದರೆ ಈಗ ಒಬ್ಬರು ಹೇಳಿದ ಮಾತು ನೆನಪಿಗೆ ಬರುತ್ತಿದೆ. ಅದೇನೆಂದರೆ,
ಪ್ರಜಾಪ್ರಭುತ್ವ ಎಂದರೆ,
*ಭ್ರಷ್ಟಾಚಾರದಿಂದ*
*ಭ್ರಷ್ಟಾಚಾರಕ್ಕಾಗಿ*
*ಭ್ರಷ್ಟಾಚಾರಿಗಳಿಗೋಸ್ಕರ ಇರುವ ಸರ್ಕಾರ* ಎನ್ನುವಂತಾಗಿದೆ.
ಭ್ರಷ್ಟಾಚಾರದ ಕುರಿತು ರಾಜಕಾರಣಿಗಳು, *"ಪ್ರಜೆಗಳು ಕೆಟ್ಟಿದ್ದಾರೆ, ದುಡ್ಡು ತೆಗೆದುಕೊಳ್ಳದೆ ಮತ ಹಾಕುವುದಿಲ್ಲ"* ಎಂದು ಹೇಳಿದರೆ,
ಪ್ರಜೆಗಳು,
*"ರಾಜಕಾರಣಿಗಳು ಕೆಟ್ಟಿದ್ದಾರೆ, ಮತಗೋಸ್ಕರ ಹಣ, ಹೆಂಡದ ಲಂಚ ನೀಡಿ ರಾಜ್ಯವನ್ನು, ದೇಶವನ್ನು ಲೂಟಿ ಹೊಡೆಯುತ್ತಾರೆ"* ಎಂದು ಹೇಳುತ್ತಾರೆ.
ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ? ಒಬ್ಬರಿಗೊಬ್ಬರು ಹೀಗೆ ಆರೋಪ, ಪ್ರತ್ಯಾರೋಪ ಮಾಡಿದರೆ, ಭ್ರಷ್ಟಾಚಾರ ನಿರ್ಮೂಲನೆ ಆಗುವುದು ಯಾವಾಗ ?
ರಾಜಕೀಯ ಎಂದರೆ ಒಂದು ವರ್ಗ, ಒಂದು ಜಾತಿ, ಒಂದು ಸಮಾಜವನ್ನು ಒಲಿಸಿಕೊಳ್ಳುವ ಪ್ರಯತ್ನವಾಗಿದೆ.
ಆದರೆ ಭ್ರಷ್ಟಾಚಾರ ಬಡತನದಲ್ಲಿರುವ ಎಲ್ಲಾ ವರ್ಗ, ಎಲ್ಲಾ ಜಾತಿ, ಎಲ್ಲಾ ಸಮಾಜದ ಜನರನ್ನು ಸಮಸ್ಯೆಗೆ ಸಿಲುಕಿಸಿವುದಾಗಿದೆ.
ಈಗ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ.( ಹಾಗೂ ಈಗ ತಾನೇ ಸ್ಥಳೀಯ ಸಂಸ್ಥೆ ಚುನಾವಣೆಗಳು ಘೋಷಣೆಯಾಗಿದೆ.)
ಆದರೆ ಭ್ರಷ್ಟಾಚಾರ
ನಿರ್ಮೂಲನೆಗೊಳಿಸುವ ಕುರಿತು ಈ ಹಿಂದೆಯೂ ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಮಾತನಾಡಿಲ್ಲ. ಈಗಲೂ ಮಾತನಾಡುತ್ತಿಲ್ಲ. ಇನ್ನೂ ಮುಂದೆಯಾದರೂ ಭ್ರಷ್ಟಾಚಾರವನ್ನು ಒಂದು ದೊಡ್ಡ ಸಮಸ್ಯೆಯೆಂದು ಪರಿಗಣಿಸಿ ಇದನ್ನು ನಿರ್ಮೂಲನೆ ಮಾಡುವ ಮಾತುಗಳನ್ನು, ಚುನಾವಣೆ ನಿಲ್ಲುವ ಅಭ್ಯರ್ಥಿಗಳು, ಅವರ ಹಿಂದೆ ಇರುವ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮಾಡಲಿ.
ನಮಗೆ ಯಾವ ವ್ಯಕ್ತಿಯೂ, ಯಾವ ಪಕ್ಷವು ವಿರೋಧಿಯಲ್ಲ. ಆದರೆ ನಾವೆಲ್ಲರೂ ಕೂಡಿ ಭ್ರಷ್ಟಾಚಾರವನ್ನು ವಿರೋಧಿಸಬೇಕಾಗಿದೆ.
Hate the sin, not the sinner ಪಾಪವನ್ನು ದ್ವೇಷಿಸಿ, ಪಾಪಿಗಳನ್ನು ಅಲ್ಲಾ, ಎನ್ನುವ ಉಕ್ತಿಯಂತೆ ವ್ಯಕ್ತಿಯಲ್ಲಿರುವ ದೋಷಗಳು ದೂರವಾಗಬೇಕಾಗಿದೆ. ಹೊರತು ವ್ಯಕ್ತಿಯನ್ನು ದ್ವೇಷಿಸುವುದು ನಮ್ಮ ಉದ್ದೇಶವಲ್ಲ.
ಈಗ ನನಗೆ ಹಲವು ಮೂಲಗಳಿಂದ ಬಂದ ಸಂದೇಶವೆಂದರೆ, *ಈಗ ನಡೆಯುತ್ತಿರುವ ಕಾಲ, ಕಲಿಯುಗ ಮತ್ತು ಸತ್ಯ ಯುಗದ ನಡುವಿನ ಸಂಧಿಕಾಲ*.
ಮುಂದೆ ಸತ್ಯ ಯುಗ ಬರುವುದು ಸತ್ಯ. ಅದಕ್ಕಾಗಿ ನಾವು ಈಗಲೇ ಪರಿವರ್ತನೆಗಳನ್ನು ಮಾಡಿಕೊಳ್ಳಬೇಕಾಗಿದೆ.
ನಾನು ಒಬ್ಬ ವ್ಯಕ್ತಿಯಾಗಿ, ನನ್ನ ಉಪಜೀವನ ಕೆಲಸವನ್ನು ಮಾಡುತ್ತಾ, ವಿಧ್ಯಾರ್ಥಿಗಳಿಗೆ ಒಂದು ಸ್ಪರ್ಧೆ ಆಯೋಜಿಸುವ ನೆಪದಲ್ಲಿ (ವಿಧ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ)
ಭ್ರಷ್ಟಾಚಾರ ತಪ್ಪು, ಇದನ್ನು ಮಾಡಬಾರದು ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದೆ. ಇದರಿಂದ ಕನಿಷ್ಠ ಭ್ರಷ್ಟಾಚಾರ ತಪ್ಪು ಎನ್ನುವ ಸಂದೇಶ ಮಕ್ಕಳಲ್ಲಿ ಸಮಾಜದಲ್ಲಿ ಸ್ವಲ್ಪ ಸಮಯದವರೆಗಾದರೂ ಮೂಡಿತು.
ಆದರೆ ಇದೇ ಕೆಲಸವನ್ನು ಸರ್ಕಾರ, ಜನ ಪ್ರತಿನಿಧಿಗಳು ನಿಜವಾದ ಮನಸ್ಸಿನ ಕಾಳಜಿಯಿಂದ ಮಾಡಿದಲ್ಲಿ ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡುವುದಿಲ್ಲವೇ ?
ಇದಕ್ಕೆ ಸಂಬಂಧಿಸಿದಂತೆ ಶಾಲಾ ಪಠ್ಯ ಪುಸ್ತಕದಲ್ಲಿ
* ಭ್ರಷ್ಟಾಚಾರ ಎಂದರೇನು ?
* ಭ್ರಷ್ಟಾಚಾರದ ರೂಪಗಳೇನು ?
* ಭ್ರಷ್ಟಾಚಾರದಿಂದ ಆಗುವ ಸಮಸ್ಯೆಗಳೇನು ?
* ಭ್ರಷ್ಟಾಚಾರ ತಡೆಯಲು ಇರುವ ಮಾರ್ಗಗಳು ಏನು ?
* ಭ್ರಷ್ಟಾಚಾರವನ್ನು ಹೇಗೆ ವಿರೋಧಿಸಬೇಕು ?
* ಸದಾಚಾರ ಹೇಗೆ ಅಳವಡಿಸಿಕೊಳ್ಳಬೇಕು ?
* ಸದಾಚಾರದಿಂದ ಆಗುವ ಪ್ರಯೋಜನಗಳೇನು ?
ಎನ್ನುವ ವಿಷಯಗಳನ್ನು ಪ್ರತಿಯೊಂದು ತರಗತಿಯ ಪಠ್ಯದಲ್ಲಿ ಸೇರಿಸಿ ಪಾಠ ಮಾಡುವಂತಾಗಲಿ.
ಹಾಗೂ ಸಮಾಜದಲ್ಲಿ ಭ್ರಷ್ಟಾಚಾರದ ವಿರುದ್ಧ ಹಾಗೂ ಸದಾಚಾರದ ಪರವಾಗಿ ಹೆಜ್ಜೆ ಹೆಜ್ಜೆಗೂ, ಗೋಡೆ ಗೋಡೆಗೂ ಟಿವಿ ಮೊಬೈಲ್ ಚಲನಚಿತ್ರ ಪರದೆಗೂ ಸಾಧ್ಯವಿರುವ ಎಲ್ಲಾ ಕಡೆ ಜಾಹಿರಾತುಗಳು ಕಾಣಿಸುವಂತೆ ಮಾಡಲಿ.
ಸರ್ಕಾರ ಭ್ರಷ್ಟಾಚಾರ ವಿರೋಧಿಸುವವರಿಗೆ ,ಸದಾಚಾರ ಪಾಲಿಸುವವರಿಗೆ ಪ್ರೋತ್ಸಾಹ ಪ್ರೇರಣೆಯ ಯೋಜನೆಗಳನ್ನು ರೂಪಿಸಲಿ. ಇನ್ನೂ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡುವಂತಾಗಲಿ.
ಏಕೆಂದರೆ, ಭ್ರಷ್ಟಾಚಾರ ತಡೆಯುವ ಕುರಿತು ನಮ್ಮ ಸ್ಪರ್ಧೆಯ ಒಬ್ಬ ವಿದ್ಯಾರ್ಥಿನಿ (ಮೋನಮ್ಮಾ) ಹೇಳಿದಂತೆ *ಭ್ರಷ್ಟಾಚಾರ ಎಂದರೆ ಪ್ರಾಕೃತಿಕ ವಿಕೋಪವು ಅಲ್ಲಾ, ಅತಿ ಮಾನುಷ ಶಕ್ತಿಯೂ ಅಲ್ಲಾ. ಭ್ರಷ್ಟಾಚಾರ ನಮ್ಮ ನಿಮ್ಮೆಲ್ಲರ ಸಂಪರ್ಕ*.
*ಭ್ರಷ್ಟಾಚಾರ ನಮ್ಮದೇ ಸೃಷ್ಠಿ.*
ಹೀಗಾಗಿ, *ನಮ್ಮಿಂದ ಭ್ರಷ್ಟಾಚಾರ ನಿವಾರಣೆ ಮಾಡುವುದು ನಮ್ಮಿಂದ ಏಕೆ ಸಾಧ್ಯವಿಲ್ಲ ?* ಎನ್ನುವುದನ್ನು ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ದಯವಿಟ್ಟು ಉತ್ತರಿಸಬೇಕು.
ಭ್ರಷ್ಟಾಚಾರ ನಿವಾರಣೆ ಏಕೆ ಸಾಧ್ಯವಿಲ್ಲವೆಂದರೆ, *"ಅಧಿಕಾರ ನಡೆಸುತ್ತಿರುವ ಜನರಲ್ಲಿ ದೃಢವಾದ ಇಚ್ಛಾ ಶಕ್ತಿಯ ಕೊರತೆ"*.
ನಾನು ವಿಧಾನ ಸೌಧದಲ್ಲಿ ಪ್ರಾಮಾಣಿಕವಾಗಿ ಭ್ರಷ್ಟಾಚಾರದ ವಿರುದ್ಧ ಸತ್ಯದ ಪರ ಧ್ವನಿ ಎತ್ತುತ್ತಿದ್ದೆ. ಹಾಗೂ ಅದಕ್ಕೆ ತಕ್ಕಂತಹ ಕೆಲಸ ಮಾಡುತ್ತಿದ್ದೆ.
ಈಗ ಆ ಅವಕಾಶ ಇಲ್ಲಾ. ಆದರೆ ಈಗ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ,
ಸಮಾಜದ ಮುಂದೆ
ಶಿಕ್ಷಕರ ಮುಂದೆ
ನಾಡಿನ ಮುಂದೆ
ನಾನು ವಿಧಾನ ಸೌಧದಲ್ಲಿ ಭ್ರಷ್ಟಾಚಾರದ ವಿರುದ್ಧವಾಗಿ, ಸತ್ಯದ ಪರವಾಗಿ ಧ್ವನಿ ಎತ್ತುತ್ತೇನೆ.
ಹಾಗೂ ಜನರಲ್ಲಿ ಭ್ರಷ್ಟಾಚಾರದ ಕುರಿತು ನಿರಂತರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳಲು ಸರ್ಕಾರವನ್ನು ಒಪ್ಪಿಸುತ್ತೇನೆ. ಈ ಮೂಲಕ ಭ್ರಷ್ಟಾಚಾರ ತಪ್ಪು ಎನ್ನುವ ಮನೋಭಾವನೆ ಸಮಾಜದಲ್ಲಿ ಹುಟ್ಟುಹಾಕಲು ಪ್ರಯತ್ನಿಸುತ್ತೇನೆ, ಎನ್ನುವ ಪ್ರಮಾಣ ಮಾಡಲಿ, ಎಂದು ಕೋರುತ್ತೇನೆ.
ಇದನ್ನು ತಮ್ಮ ಪ್ರಣಾಳಿಕೆ ಹಾಗೂ ಆಶ್ವಾಸನೆಯಲ್ಲಿ ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ.
(ದಯವಿಟ್ಟು ಈ ಕೋರಿಕೆಯನ್ನು ಅಭ್ಯರ್ಥಿಗಳ ಹಿತ ಚಿಂತಕರು, ಅಭ್ಯರ್ಥಿಗಳ ಪಕ್ಷದ ಕಾರ್ಯಕರ್ತರು, ಅಭ್ಯರ್ಥಿಗಳಿಗೆ ತಲುಪಿಸಬೇಕೆಂದು ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ.)
ಧನ್ಯವಾದಗಳೊಂದಿಗೆ,
ಇಂತಿ ತಮ್ಮ
*ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ.*
ಕಾರ್ಯದರ್ಶಿಗಳು
ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಸೇಡಂ.

Comments
Post a Comment