ಮಹಾಶಿವರಾತ್ರಿಯ (04/03/19) ವಿಸ್ಮಯ ಅನುಭವ:
ಮಹಾಶಿವರಾತ್ರಿಯ ವಿಸ್ಮಯ ಅನುಭವ: ಸ್ನೇಹಿತರೇ ಮೊನ್ನೆ ಶಿವರಾತ್ರಿಯ ಮುನ್ನಾದಿನದ ಭಾಷಣದಲ್ಲಿ, ನಾನು ಶ್ರೀ ಕೃಷ್ಣನ ಶ್ರೇಷ್ಟ ಮಾತನ್ನು ಹೇಳಿದ್ದೆ, ಏನೆಂದರೆ "ನಮ್ಮ ಕೆಲಸಗಳಿಗೆ ಫಲ ಸಿಗುವುದು ಖಚಿತ. ಆದರೆ ಫಲ ಸಿಗುವ ಸಮಯದಲ್ಲಿ ಹೆಚ್ಚು ಕಡಿಮೆ ಆಗಬಹುದು. ಹಾಗಾಗಿ, ಒಂದು ವೇಳೆ ಫಲದ ನೀರೀಕ್ಷೆಯಿಂದ ಕೆಲಸ ಮಾಡಿ, ನಾವು ಅಂದುಕೊಂಡ ಫಲ ಸಿಗದಿದ್ದರೆ, ನಾವು ಕೆಲಸ ಮಾಡುವುದನ್ನೇ ಬಿಟ್ಟುಬಿಡುತ್ತೇವೆ. ಆದ್ದರಿಂದ ಫಲದ ನೀರೀಕ್ಷೆ ಬಿಟ್ಟು ಕೆಲಸ ಮಾಡಬೇಕು" ಎಂದು ಬಹುಶಃ ನನ್ನ ಮೂಲಕ ದೇವರು ಮಾಡಿಸುತ್ತಿರುವ ಕೆಲಸವೆಂದರೆ, ಜ್ಞಾನವನ್ನು ನೆನಪಿಸುವ ಹಾಗೂ ಜ್ಞಾನವನ್ನು ನೀಡುವ ಕೆಲಸ. ನಾನು ಮಾಡುತ್ತಿರುವುದಕ್ಕೆ ಈಗ ನಿರೀಕ್ಷಿಸಿದಂತೆ ಪ್ರತಿಕ್ರಿಯೆಯ ಫಲ ಸಿಕ್ಕಿಲ್ಲ. ಆದರೂ, ನನ್ನ ಕೆಲಸ ಬಿಡಬಾರದು, ಪ್ರತಿಕ್ರಿಯೆಯ ಫಲದ ನೀರೀಕ್ಷೆಯಿಡದೆ ಕೆಲಸವನ್ನು ಕೆಲಸದ ರೀತಿ ಮಾಡಬೇಕು ಎಂದು ಈ ಪೋಸ್ಟನ್ನು ಹಾಕುತ್ತಿದ್ದೇನೆ. ಈ ಬಾರಿಯ ಶಿವರಾತ್ರಿ "ಅಖಂಡ ಶಿವನಾಮ ಜಪ"ವನ್ನು ಮಾಡಿದ ಆರನೇ ಮಹಾಶಿವರಾತ್ರಿ ಯಾಗಿತ್ತು. ಇದಕ್ಕೂ ಮೊದಲು, ಜ್ಞಾನದಿಂದ ದೇವರನ್ನು ನಾನು ದರ್ಶನ ಮಾಡುತ್ತಿದ್ದೆ. ಆದರೆ ಈ ಬಾರಿ ಒಂದು ಘಟನೆ ಮೂಲಕ ದೇವರು ಬೇರೆ ರೀತಿಯಲ್ಲಿ ನನ್ನ ಅನುಭವಕ್ಕೆ ಬಂದರು. ಈ ಘಟನೆಯಿಂದ ಓಂ ನಮಃ ಶಿವಾಯ ಮಂತ್ರದ ಶಕ್ತಿಯೂ ನನ್ನ ಅರಿವಿಗೆ ಬಂತು. ಶಿವನ ಇರುವಿಕೆಯ, ಸಾನಿಧ್ಯದ ಅನುಭವವೂ ಆಯಿತು....