Posts

Showing posts from June, 2024
Image
  ಒಂದು ಚಿತ್ರ, ಎರಡು ವಿಚಾರಗಳು. ನಮ್ಮ ದೇಹ ಜೀವಂತ ಇರಲು ಮುಖ್ಯವಾಗಿ ಬೇಕಾಗಿರುವುದು ಆಹಾರ. ಆಹಾರದಿಂದಲೇ ನಮ್ಮ ದೇಹ ತಯಾರಾಗುತ್ತದೆ. ಹಾಗೂ ನಮ್ಮ ವಿಚಾರಗಳ ಮೇಲೂ ಆಹಾರ ತಯಾರಿಸಿದವರ ಭಾವನೆ ಪ್ರಭಾವ ಬೀರುತ್ತದೆ. ಇದಕ್ಕಾಗಿಯೇ ನಾವು ಶುದ್ಧವಾದ ಸಾತ್ವಿಕ ಆಹಾರ ಸೇವಿಸಬೇಕು ಎಂದು ಹೇಳಲ್ಪಟ್ಟಿದೆ.  ಆಹಾರ ತಯಾರಿಸಿದವರು ಕೆಟ್ಟ ವಿಚಾರಗಳಿಂದ, ದೂಷಿತ ಮನಸ್ಸಿನಿಂದ ಆಹಾರ ತಯಾರಿಸಿದರೆ ಅದನ್ನು ಸೇವಿಸಿದ ಎರಡು ಮೂರು ದಿನಗಳಲ್ಲಿ, ಆಹಾರ ಯಾವ ಭಾವನೆಯಿಂದ ತಯಾರಿಸಿದ್ದಾರೆ, ಆ ಭಾವನೆ ಆಹಾರವನ್ನು ಸೇವಿಸಿದವರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಆಹಾರ ತಯಾರಿಸುವಾಗ ಶುದ್ಧ ಮನಸ್ಸು ಒಳ್ಳೆಯ ಭಾವನೆಯಿಂದ ಆಹಾರ ತಯಾರಿಸಬೇಕು. ಇನ್ನೊಂದು ವಿಷಯ ಆಹಾರವನ್ನು ಸ್ವೀಕರಿಸುವಾಗಲೂ ಆಹಾರವನ್ನು ದೇವರಿಗೆ ಅರ್ಪಿಸಿ ದೇವರ ಪ್ರಸಾದ ಎನ್ನುವ ಭಾವನೆಯಿಂದ ಆಹಾರ ಸೇವಿಸಿದಲ್ಲಿ, ಆ ಆಹಾರ ದೋಷಗಳಿಂದ ಮುಕ್ತವಾಗುತ್ತದೆ. ಹಾಗೂ ಉತ್ತಮ ಆರೋಗ್ಯ ಲಭಿಸುವದರ ಜೊತೆಗೆ, ಉತ್ತಮ ವಿಚಾರಗಳಿಗೆ ಕಾರಣವಾಗಿ ನಮ್ಮ ಜೀವನವನ್ನು ಉನ್ನತಿಯ ಕಡೆಗೆ ಕರೆದುಕೊಂಡು ಹೋಗುತ್ತದೆ, ಎಂದು ದಾರ್ಶನಿಕರು ಹೇಳಿದ್ದಾರೆ. ಇಂದು ಆಹಾರದ ಬಗ್ಗೆ ಬರೆಯುವದಕ್ಕೆ ಕಾರಣ ನಾನು ಇಂದು ಮುಂಜಾನೆ ಊಟ ಮಾಡುವಾಗ ರೊಟ್ಟಿಯಲ್ಲಿ ಕಂಡು ಬಂದ ದೃಶ್ಯ !  ಅದುವೇ, ಸಂಸ್ಕೃತದ ಓಂ ಅಕ್ಷರ.  ದಿನಾಲು ದೇವರ ಸ್ಮರಣೆ ಮಾಡಿ, ದೇವರಿಗೆ ಆಹಾರ ಅರ್ಪಿಸ...
Image
  ಜೀವನದಲ್ಲಿ ಪದೇ ಬರುವ ಕಷ್ಟಗಳಿಂದ ಪಾರಾಗುವುದು ಹೇಗೆ ? ನನಗೆ ಈ ಮೊದಲು ಬಂದ ಕಷ್ಟಗಳೇ ಪದೇ ಪದೇ ಏಕೆ ಬರುತ್ತವೆ. ನನ್ನ ಜೊತೆಗೆ ಈಗಾಗಲೇ ಘಟಿಸಿದ ಕೆಟ್ಟ ಘಟನೆಗಳು ಪುನಃ ಪುನಃ ಮತ್ತೆ ಘಟಿಸುತ್ತವೆ ಏಕೆ ? ಕೆಟ್ಟ ರೀತಿಯಲ್ಲಿ ನಡೆದುಕೊಂಡ ಸ್ಥಳ ಬದಲಾಗಿದೆ. ಆ ವ್ಯಕ್ತಿಗಳು ಬದಲಾಗಿದ್ದಾರೆ. ಆದರೆ ಅದೇ ರೀತಿಯ ಕೆಟ್ಟ ಘಟನೆ ಮತ್ತೆ ಏಕೆ ಘಟಿಸುತ್ತಿದೆ ? ಈ ರೀತಿ ಯೋಚನೆಗಳು ನಮ್ಮಲ್ಲಿ ಅನೇಕ  ಬಾರಿ ಬರಬಹುದು. ಯಾಕೆ ಹೀಗೆ ಆಗುತ್ತದೆ. ಇದಕ್ಕೆ ಕಾರಣವೇನು ? ನಮ್ಮ ಜೀವನದಲ್ಲಿ ಒಂದು ರೀತಿಯ ಕೆಟ್ಟ ಘಟನೆಗಳು ಪದೇ ಪದೇ ಮರುಕಳಿಸುತ್ತವೆ. ಇದಕ್ಕೆ ನಾವು ವ್ಯಕ್ತಿಗಳನ್ನು ಸಮಾಜವನ್ನು ಪರಿಸ್ಥಿತಿಯನ್ನು ದೂಷಿಸುತ್ತೇವೆ. ಆದರೆ ಆ ರೀತಿಯ ಘಟನೆ ನಿರಂತರ ಘಟಿಸಲು ಬೇರೆಯವರು ಕಾರಣವಲ್ಲ. ದೇವರು ಸಹ ಕಾರಣವಲ್ಲ. ಅದಕ್ಕೆ ಕಾರಣ ನಾವೇ. ಈ ಜಗತ್ತನ್ನು ಬ್ರಹ್ಮ, ವಿಷ್ಣು, ಮಹೇಶ್ವರ, ಅಲ್ಲಾಹ್, ಜೀಸಸ್ ದೇವರು ಭಗವಂತ ನಡೆಸುವದಕ್ಕಿಂತ ಒಂದು ನಿಯಮ ಈ ಜಗತ್ತನ್ನು ನಡೆಸುತ್ತಿದೆ. ಅದುವೇ ಕಾರಣ ಮತ್ತು ಪರಿಣಾಮ ನಿಯಮ. CAUSE AND EFFECT RULE. ನಮ್ಮ ಜೀವನದಲ್ಲಿ ಯಾರಿಂದಲಾದರೂ ಯಾವುದಾದರೂ ಕೆಟ್ಟ ಘಟನೆ ನಡೆದಾಗ ನಮ್ಮ ಮನಸ್ಸಿನ ಮೇಲೆ ಬಹಳ ಆಘಾತ ಆಗುತ್ತದೆ. ಈ ಕಾರಣದಿಂದ ಆ ಘಟನೆ ನಮಗೆ ಪದೇ ಪದೇ ನೆನಪಿಗೆ ಬರುತ್ತದೆ. ನೆನಪಿಗೆ ಬಂದಾಗ ಆ ನೋವುಗಳು, ಆ ದುಃಖ, ಆ ಭಯ, ಅವರ ಬಗ್ಗೆ ಆ ದ್ವೇಷದ ಭಾವನೆಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ. ಆ...
 ಚಿತ್ತ ವೃತ್ತಿ ನೀರೋಧ ಚಿತ್ತದ ವೃತ್ತಿಗಳ ಬಗ್ಗೆ ನಿನ್ನೆ ಹೇಳಿದ್ದೆ. ಚಿತ್ತ, ಅಂದರೆ ನಮ್ಮ ಅಂತರಂಗ ಐದು ಕೆಲಸಗಳನ್ನು ಮಾಡುತ್ತದೆ.  1.  ಸರಿ, ತಪ್ಪುಗಳ ಕುರಿತು ವಿಚಾರ 2. ಸುಳ್ಳು ವಿಚಾರ (ಅಜ್ಞಾನ) 3. ಕಲ್ಪನೆಗಳನ್ನು ಮಾಡುತ್ತದೆ 4. ನೆನಪುಗಳನ್ನು ಮಾಡುತ್ತದೆ 5. ನಿದ್ರೆ ಮಾಡುತ್ತದೆ ಇವುಗಳನ್ನು ಚಿತ್ತ ವೃತ್ತಿಗಳು ಎಂದು ಕರೆಯಲಾಗಿದೆ. ಗಾಢ ನಿದ್ರೆ ಹೊರತುಪಡಿಸಿ ಇವುಗಳಿಂದಲೇ ನಮ್ಮ ಮನಸ್ಸು ಅಶಾಂತವಾಗುತ್ತದೆ. ಇವುಗಳ ಕೆಲಸ ನಿಲ್ಲುವಂತೆ ಮಾಡಿ ಮನಸ್ಸನ್ನು ಶಾಂತಗೊಳಿಸುವುದೇ ಯೋಗದ ಮುಖ್ಯ ಉದ್ದೇಶ. ಅದುವೇ, ಯೋಗ: ಚಿತ್ತ ವೃತ್ತಿ ನಿರೋಧ: . ಇದರಿಂದ ಮಾತ್ರ ಮನುಷ್ಯ ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯಲು ಸಾಧ್ಯ. ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ಅಧಿಕಾರವಿರಲಿ, ಯಶಸ್ಸು, ಕೀರ್ತಿ ಏನೇ ಇದ್ದರೂ ಮನಸ್ಸು ಶಾಂತವಿಲ್ಲದಿದ್ದರೆ ಆತನಿಗೆ ಸುಖವಿಲ್ಲ. ಮನಸ್ಸನ್ನು ಶಾಂತಗೊಳಿಸುವುದು, ಚಿತ್ತ ವೃತ್ತಿ ನಿಲ್ಲುಸುವುದೇ ಯೋಗದ ಉದ್ದೇಶ. ಇದರಿಂದ ವ್ಯಕ್ತಿ ದುಃಖ ಭಯ ರಹಿತನಾಗುತ್ತಾನೆ..
Image
  ಮನುಜ_ಮಾಡು_ನೀ_ಯೋಗ   ಅಮೂಲ್ಯ ಮಾನವ ದೇಹ  ದೇವರು ಕೊಡುಗೆಯಾಗಿ ಕೊಟ್ಟ ಅಮೂಲ್ಯತೆಯ ಹೆಚ್ಚಿಸುವದು ಬಿಡುವದು,  ಮನುಷ್ಯನ ವಿವೇಚನೆಗೆ ಬಿಟ್ಟ.  ಇದನ್ನರಿಯದೆ ಇಂದ್ರಿಯಗಳ ತೃಪ್ತಿಗಾಗಿ    ದುಶ್ಚಟಗಳಿಗೆ ಬಲಿಯಾಗಿ  ಭೋಗಿ ಕೆಟ್ಟ ಪುರುಷಾರ್ಥ ಮಾಡದೆ ಸೋಮಾರಿಯಾಗಿ  ತಯ್ಯಾರಿಸುತಿಹನು ಯಾತನೆಯ ಚಟ್ಟ ಅರಿತು ಮಾಡಿದರೆ ಯೋಗ ಮುಂದೆ ಇರುವುದು ಲಾಭಗಳ ಬೆಟ್ಟ. ಸ್ವಲ್ಪ ನೋವನ್ನುಂಡು ಅಭ್ಯಸಿಸಿದರೆ  ಮುಂದೆ ಕಾಯುತಿಹುದು ಯಶಸ್ಸಿನ ಅಟ್ಟ. ಮನುಜ ಮಾಡು ನೀ ಯೋಗ ಕಳೆಯಬೇಡ ಕಾಲ ಕೇವಲ ಭೋಗ   ಹೊಡೆದೋಡಿಸುವೆ ಎಲ್ಲ ರೋಗ ಸಮೀಪಿಸುವದು ನಿನಗೆ ದೇವರ ಯೋಗ. 19/06/2018 . 🙏  ಎಲ್ಲರಿಗು  ಅಂತಾರಾಷ್ಟ್ರೀಯ ಯೋಗ ದಿವಸದ "ಹಾರ್ದಿಕ ಶುಭ ಆಶಯಗಳು". WISH YOU HAPPY "INTERNATIONAL YOGA DAY" .
Image
  ದುಃಖ ಮತ್ತು ಭಯ ದುಃಖ ಮತ್ತು ಭಯ ಇವುಗಳನ್ನು ನಾವು ಏನೆಂದು ತಿಳಿದಿದ್ದೇವೆ ?  ದುಃಖ ಎಂದರೆ ಈಗ ಘಟಿಸುತ್ತಿರುವ ತೊಂದರೆ. ಭಯ ಎಂದರೆ ಮುಂದೆ ಘಟಿಸುವ ದುಃಖ. ಇವು ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ. ಇವುಗಳಿಂದ ನಾವು ಪಾರಾಗುವುದು ಹೇಗೆ ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುತ್ತದೆ. ಇದಕ್ಕೆ ಅನೇಕ ಉಪಾಯಗಳು ಇದ್ದರೂ ಅದರಲ್ಲಿಯೇ ಉತ್ತಮ ಉಪಾಯ ಯೋಗ. ಯೋಗವು ನಮ್ಮ ಭೂತ ಕರ್ಮಗಳನ್ನು ನಾಶ ಮಾಡುತ್ತದೆ. ಇದರಿಂದ ನಮ್ಮ ದುಃಖಗಳು ನಾಶ ಆಗುತ್ತವೆ. ಹಾಗೂ ನಾವು ಭವಿಷ್ಯದ ಭಯದಿಂದಲೂ ಪಾರಾಗುವ ಅವಕಾಶವಿದೆ. ಯೋಗ: ಚಿತ್ತ ವೃತ್ತಿ ನಿರೋಧ : ಈಗ ದುಃಖ ನೀಡುವುದು ಮನಸೇ. ಭವಿಷ್ಯದ ಭಯ ಉತ್ಪತ್ತಿ ಮಾಡುವುದು ಮನಸೇ.  ಚಿತ್ತದ ವೃತ್ತಿಗಳಿಂದಲೇ ದುಃಖ ಮತ್ತು ಭಯ ಉಂಟಾಗುತ್ತದೆ.  ನಾವು ಚಿತ್ತ ವೃತ್ತಿಗಳ ನಿರೋಧದಿಂದ ನಾವು ದುಃಖ ಮತ್ತು ಭಯಗಳಿಂದ ಪಾರಾಗಬಹುದು. ಅಷ್ಟಾಂಗ ಯೋಗದ ಅಭ್ಯಾಸದಿಂದ ನಾವು ಸಧೃಡ ಆರೋಗ್ಯವಂತ ದೇಹವನ್ನು ಪಡೆಯುತ್ತೇವೆ ಹಾಗೂ ಆರೋಗ್ಯವಂತ ಮನಸ್ಸನ್ನು ಪಡೆಯುತ್ತೇವೆ. ನಮ್ಮ ಅಮೂಲ್ಯವಾದ ಸ್ವಲ್ಪ ಸಮಯವನ್ನು ಯೋಗಕ್ಕಾಗಿ ನೀಡಿದಲ್ಲಿ ಯಾವ ರೀತಿ ಬೆಂಕಿ ಎಲ್ಲವನ್ನು ಸುಟ್ಟು ಹಾಕುವುದು ಹಾಗೆ ಯೋಗವು ನಮ್ಮ ದುಃಖ ಭಯಗಳನ್ನು ಸಹ ನಾಶ ಮಾಡುತ್ತದೆ. ಕಟ್ಟ ಕಡೆಯದಾಗಿ ಆತ್ಮ ಆಗಿರುವ ನಾವು ಪರಮಾತ್ಮನೊಂದಿಗೆ ಒಂದಾಗುವ ಅವಕಾಶವೂ ಯೋಗದ ಅಭ್ಯಾಸದಿಂದ ಸಾಧ್ಯ.  ಆದ್ದರಿಂದ ದಿನದಲ್ಲಿ ಸ್ವಲ್ಪ ಸಮಯವಾ...