*ಒಂದು ಚಿಕ್ಕ ಜೀವ, ಅದೆಷ್ಟು ಉನ್ನತ ಕಾರ್ಯ ?* ಮಹಾಭಾರತದಲ್ಲಿ ಶ್ರೀಕೃಷ್ಣನ ನಂತರ ಶಕ್ತಿಶಾಲಿ ಯಾರಾಗಿದ್ದರೂ ? ಎಂದು ಕೇಳಿದರೆ ಆಗ ಬರುವ ಉತ್ತರವೇನು ? ಆ ಉತ್ತರವೇ ಬ್ರಹ್ಮಚಾರಿ ಭೀಷ್ಮ. ಅರ್ಜುನ, ಕರ್ಣ ಮಹಾಭಾರತದ ಇನ್ನಿತರ ಯಾರು ಸಹ ಭೀಷ್ಮನ ಶಕ್ತಿಗೆ ಸಮನಾಗಿ ಇರಲಿಲ್ಲ. ಅಷ್ಟೊಂದು ಸಾಮರ್ಥ್ಯ, ಶಕ್ತಿ ಭೀಷ್ಮಾಚಾರ್ಯರಲ್ಲಿತ್ತು. ಯಾರಲ್ಲಿ ಶಕ್ತಿ, ಶ್ರೀಮಂತಿಕೆ, ಅಧಿಕಾರ, ಜ್ಞಾನ ಇರುತ್ತದೆ, ಅವರಲ್ಲಿ ಸುರಕ್ಷತೆಯ ಭಾವ ಇರುತ್ತದೆ. ನಿರ್ಭಯ ಇರುತ್ತದೆ. ಅಂತಹವರು ಯಾರ ಮೇಲೆ ಬೇಕಾದರೂ ಪ್ರಭಾವ ಬೀರಬಹುದು. ತಮಗೆ ಬೇಕಾದ ಕೆಲಸ ಮಾಡಿಕೊಳ್ಳಬಹುದು. ಅಂತಹವರು ಪೂರ್ಣ ಅಲ್ಲದಿದ್ದರೂ ಬಹಳಷ್ಟು ಸ್ವಾತಂತ್ರ್ಯ ಅನುಭವಿಸುತ್ತಿರುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ *ನಮ್ಮಲ್ಲಿ ಬಹಳಷ್ಟು ಜನರಿಗೆ ನಾವು ಸಹ ಶಕ್ತಿಶಾಲಿಯಾಗಬೇಕು, ಶ್ರೀಮಂತರಾಗಬೇಕು, ಅಧಿಕಾರವನ್ನು ಹೊಂದಬೇಕು, ಜ್ಞಾನಿಗಳಾಗಬೇಕು ಎನ್ನುವ ಆಸೆ, ವಿಚಾರ. ಇದಕ್ಕೆ ಸಂಬಂಧಿಸಿದ ಪ್ರಯತ್ನ ಸಹ ನಮ್ಮಲ್ಲಿ ಇರುತ್ತದೆ*. ಆದರೆ *ಶಕ್ತಿ ಹೊಂದುವುದು, ಶ್ರೀಮಂತಿಕೆ ಹೊಂದುವುದು, ಅಧಿಕಾರ ಹೊಂದುವುದು, ಜ್ಞಾನ ಹೊಂದುವುದು ಕೇವಲ ನಮ್ಮ ಸಲುವಾಗಿ ಮಾತ್ರವೇ ?* ನಮ್ಮ ಸಲುವಾಗಿ ಇವುಗಳನ್ನು ಪಡೆಯಬೇಕು ಎಂದು ನಾವು *ಇವುಗಳನ್ನು ಪಡೆದರೂ, ನಮಗೆ ಗೊತ್ತಿಲ್ಲದೆ ಇವುಗಳಿಗೆ ಸಂಬಂಧಿಸಿದ ಒಂದು ಜವಾಬ್ದಾರಿ ತನ್ನಿಂದ ತಾನೇ ನಮಗೆ ಬರುತ್ತದೆ*. ಈ ವಿಷಯವನ್ನು ಯಾರು ತಿಳಿದುಕ...