Posts

Showing posts from January, 2025
 ಇದ್ದರೂ, ನಾನು ಇರುವೆನೆಂಬ ಭಾವ ಕಾಣಲಿಲ್ಲ ಮಾಡಿದರೂ,  ನಾನು ಮಾಡಿದೆನೆಂಬ ಭಾವ ಸುಳಿಯಲೇ ಇಲ್ಲ. ಅನೇಕ ಜೀವಗಳ ಉಧ್ಧಾರವಾದರೂ  ಪ್ರಶಂಸೆಯ  ಆಸೆ ಕಿಂಚಿತ್ತು ಇಲ್ಲ ನಿಮ್ಮ ಒಂದು ದರ್ಶನವಾದರೆ ಸಾಕು ಪಾಪಿಗೆ ಪಾಪವೇ ಇಲ್ಲ ನಿಮ್ಮ ವಯಸ್ಸು 111, ಆದರೂ ನಿಮ್ಮ ವಿರಹ ಸಹಿಸಲೇ ಆಗುತ್ತಿಲ್ಲ ಆದರ್ಶಕ್ಕೆ ನೀವೇ ಎಲ್ಲ,  ಅದರ್ಶನು ನಾನು ಏನು ಇಲ್ಲ URAIN NAMAH U R All I am Not
Image
  ದೇವರು ಎಲ್ಲಿದ್ದಾನೆ? ಈ ಪ್ರಶ್ನೆ ಬಹಳಷ್ಟು ಜನರಲ್ಲಿ ಇರುತ್ತದೆ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ. ಇದನ್ನು ಓದುತ್ತಿರುವ ಎಲ್ಲರಿಗೂ ಐದೇ ಬೆರಳುಗಳಿವೆ. ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲರ ಕೈ ಕಾಲುಗಳಿಗೆ ಐದೇ ಬೆರಳುಗಳು ಇರುತ್ತವೆ. ನಿರ್ದಿಷ್ಟವಾಗಿ ಕೇವಲ ಐದೇ ಬೆರಳುಗಳು ಏಕಿವೆ? 2,3,4, ಇಲ್ಲವೇ 6,7,8 ಹೀಗೆ ಏಕಿಲ್ಲ? ಬಹುತೇಕ ಎಲ್ಲರಿಗೂ ಐದೇ ಬೆರಳುಗಳಿವೆ. ಏಕೆಂದರೆ, ಐದು ಬೆರಳುಗಳಲ್ಲಿ ಈ ಜಗತ್ತಿನ ರಹಸ್ಯ ಇದೆ.  ಅದೇನೆಂದರೆ, ಈ ವಿಶಾಲವಾದ ಅನಂತ ಜಗತ್ತು ಆಗಿರುವುದು. ಐದು ಮೂಲಭೂತ ಅಸ್ತಿತ್ವಗಳಿಂದ. ಅವುಗಳೇ 1.ಘನ (ಗಟ್ಟಿಯಾಗಿರುವ ಭೂ ತತ್ವ),  2.ದ್ರವ (ನೀರಿನಂತೆ),  3.ಅನಿಲ,  4.ಬೆಂಕಿ,  5.ಆಕಾಶ ಅಥವಾ ಖಾಲಿ ಸ್ಥಳ. ಈ ಜಗತ್ತು ಹೇಗೆ ಐದು ಅಸ್ತಿತ್ವಗಳಿಂದ ಆಗಿದೆಯೋ ಅದೇ ರೀತಿ ನಮ್ಮ ದೇಹವೂ ಈ ಐದೇ ಅಸ್ತಿತ್ವಗಳಿಂದ ಆಗಿದೆ.  ನಮ್ಮ ದೇಹದಲ್ಲಿ  1.ಗಟ್ಟಿಯಾಗುವ ಭೂ ತತ್ವ ಎಂದರೆ ಮೂಳೆ ಹಲ್ಲು.  2.ದ್ರವ ಆಗಿರುವುದು ನೀರು ರಕ್ತ.  3.ವಾಯು ಆಗಿರುವುದು ಉಸಿರಾಟದ ಗಾಳಿ.  4.ಬೆಂಕಿ ದೇಹದ ಶಕ್ತಿ.  5.ಗಂಟಲಿನಲ್ಲಿ ಖಾಲಿ ಸ್ಥಳ.  ಹೀಗೆ ಐದು ವಸ್ತುಗಳಿಂದ ದೇಹ ಆಗಿರುವುದರಿಂದ ನಮಗೆ ಐದು ಬೆರಳುಗಳಿವೆ. ಐದು ಬೆರಳುಗಳು ಒಂದೊಂದು ಪಂಚಭೂತದ ಪ್ರತೀಕ.  1.ಉಂಗುರ ಬೆರಳು ಭೂ ತತ್ವದ ಪ್ರತೀಕ. ಇದನ್ನು ನ ಅಕ್ಷರದಿಂದ ಗುರುತಿಸಲಾಗು...
 ಮನಸ್ಸು ಸಣ್ಣ ಕಥೆ ಒಬ್ಬ ಕಡು ಬಡತನದಲ್ಲಿರುವ ವ್ಯಕ್ತಿಗೆ ಹಳೆಯ ದೀಪ ಸಿಕ್ಕಿತ್ತು. ಕುತೂಹಲದಿಂದ ಅದನ್ನು ಉಜ್ಜಿದಾಗ ಅದರಿಂದ ಒಂದು ದೊಡ್ಡ ಭೂತ ಹೊರಬಂದು, ಯಜಮಾನನೇ ನಿನಗೆ ಏನು ಬೇಕು? ಎಂದು ಕೇಳಿಕೊ, ನಿನ್ನ ಎಲ್ಲಾ ಕೆಲಸಗಳನ್ನು ನಾನು ಮಾಡಿಕೊಡುತ್ತೇನೆ. ಆದರೆ ಒಂದು ಶರತ್ತು, ಏನೆಂದರೆ "ನೀನು ನನಗೆ ನಿರಂತರ ಏನಾದರೂ ಕೆಲಸ ಕೋಡುತ್ತೀರಬೇಕು,  ಇಲ್ಲದಿದ್ದರೆ ನಾನು ನಿನ್ನನ್ನೇ ತಿನ್ನುತ್ತೇನೆ" ಎಂದು ಹೇಳುತ್ತದೆ. ಆಗ ಬಡವ ತನಗೆ ಬೇಕಾದ ಎಲ್ಲಾ ಕೆಲಸ ಮಾಡಿಕೊಂಡು ಮಹಾರಾಜನಂತೆ ಆದ. ಅವನ ಎಲ್ಲಾ ಅವಶ್ಯಕತೆ ಪೂರ್ಣ ಆದಕಾರಣ ಆ ಭೂತಕ್ಕೆ ಹೇಳಲು ಆತನಲ್ಲಿ ಯಾವುದೇ ಕೆಲಸ ಇರಲಿಲ್ಲ. ಆಗ ಆ ಭೂತ ಆತನನ್ನೆ ತಿನ್ನಲು ಮುಂದಾಯಿತು.  ಆಗ ಆತ ಭೂತದಿಂದ ಹೇಗೋ ತಪ್ಪಿಸಿಕೊಂಡು ಋಷಿಯ ಹತ್ತಿರ ಹೋಗಿ, ಭೂತಕ್ಕೆ ಯಾವ ಕೆಲಸ ಹೇಳಲಿ ? ನನ್ನ ಎಲ್ಲಾ ಕೆಲಸ ಮುಗಿದಿವೆ, ಎಂದು ಹೇಳಿದ.  ಆಗ ಋಷಿ ಬಹಳ ಎತ್ತರವಾದ‌ ಒಂದು ಕಂಬವನ್ನು ತಂದು ನಿನ್ನ ಅರಮನೆ ಮುಂದೆ ಹೂಳಲು ಹೇಳು. ನಂತರ ಆ ಭೂತಕ್ಕೆ ಕಂಬವನ್ನು ಏರುವ, ಮತ್ತೆ ಕಂಬದಿಂದ ಇಳಿಯುವ ಕೆಲಸ ಮಾಡಲು ಹೇಳು. ಆಗ ನೀನು ಅಪಾಯದಿಂದ ಪಾರಾಗುವೆ ಎಂದು ಹೇಳುತ್ತಾನೆ. ಅದರಂತೆ ಆ ವ್ಯಕ್ತಿ ಭೂತಕ್ಕೆ ಕಂಬವನ್ನು ಏರುವ ಇಳಿಯುವ ಕೆಲಸವನ್ನು ಕೊಟ್ಟು, ಭೂತದ ಅಪಾಯದಿಂದ ಪಾರಾಗುತ್ತಾನೆ. ಆ ಭೂತ ಕೇವಲ ಆ ಬಡವನ ಹತ್ತಿರ ಮಾತ್ರ ಇಲ್ಲ. ನಮ್ಮ ಹತ್ತಿರವು ಇದೆ. ಆ ಭೂತವನ್ನು ನಾವು ಮನಸ್ಸು ಎಂದು ಕರೆಯ...
ಹಣೆಬರಹ ? ಪ್ರಯತ್ನ ? ಮನುಷ್ಯನ ಹಣೆಬರಹದಂತೆ ನಡೆಯುವುದು "ಸಂಪೂರ್ಣ ಸುಳ್ಳು" ಎಂದು ಹೇಳಲು ಬರುವುದಿಲ್ಲ.  ಹಾಗೂ ಮನುಷ್ಯನ ಹಣೆಬರಹದಂತೆ ನಡೆಯುವುದು "ಸಂಪೂರ್ಣ ಸತ್ಯ" ಎಂದು ಹೇಳಲು ಬರುವುದಿಲ್ಲ. ಉದಾಹರಣೆಗೆ: ಗಿಡ ಮರಗಳಿಗೆ ಜೀವನ ಇದೆ. ಆದರೆ ಅವುಗಳು ನಮ್ಮಂತೆ ಇಚ್ಛಿಸಿದಾಗ ಕೂಡಲು ಬರುವುದಿಲ್ಲ. ನಡೆದಾಡಲು ಬರುವುದಿಲ್ಲ.  ಆದ್ದರಿಂದ ಗಿಡ ಮರಗಳು, ಪ್ರಾಣಿಗಳು, ಅನ್ಯ ಕೆಳ ಮಟ್ಟದ ಜೀವಿಗಳಲ್ಲಿ 100 ಕ್ಕೆ 99% ಹಣೆಬರಹ ಕೆಲಸ ಮಾಡುತ್ತದೆ.  ಕಾರಣ ಇವುಗಳಿಗೆ ತಮ್ಮ ಇಚ್ಛೆಯಂತ ಕೆಲಸ ಮಾಡುವ, "ಇಚ್ಛೆಯ ಸ್ವಾತಂತ್ರ್ಯ ಇಲ್ಲ". ಪ್ರಾಣಿಗಳಲ್ಲಿ ಒಂದು ಉದಾಹರಣೆ ತೆಗೆದುಕೊಳ್ಳುವುದಾದರೆ, ಒಂದು ಹುಲಿಗೆ ಬೇಟೆ ಸಿಗದೆ ಇದ್ದರೆ ಹಸಿವಿನಿಂದ ಸಾಯುತ್ತದೆ ಹೊರತು ಹುಲ್ಲನ್ನು ತಿನ್ನುವುದಿಲ್ಲ. ಅದೇ ರೀತಿ ಒಂದು ಆಕಳಿಗೆ ಹುಲ್ಲು ಸಸ್ಯಾಹಾರ ಸಿಗದೆ ಇದ್ದರೆ ಜೀವ ಬಿಡುತ್ತದೆ ಹೊರತು ಬೇರೆ ಪ್ರಾಣಿ ಕೊಂದು ಮಾಂಸ ತಿನ್ನುವುದಿಲ್ಲ. ಕಾರಣ ಇವುಗಳಿಗೆ ಇಚ್ಛಾ ಸ್ವಾತಂತ್ರ್ಯ ಇಲ್ಲ. ಆದರೆ ಮನುಷ್ಯ ಜನ್ಮದ ಶ್ರೇಷ್ಠತೆ ಇರುವುದೇ ಇಲ್ಲಿ. ಮನುಷ್ಯನಿಗೆ ಕೆಲವು ಸಮಯದಲ್ಲಿ ಇಚ್ಛಾ ಸ್ವಾತಂತ್ರ್ಯ ಇರುವುದಿಲ್ಲ. ಆದರೆ ಕೆಲವು ಸಮಯದಲ್ಲಿ ಇಚ್ಛೆ ಸ್ವಾತಂತ್ರ್ಯ ಇರುತ್ತದೆ. ಎಲ್ಲಿ ಇಚ್ಛೆ ಸ್ವಾತಂತ್ರ್ಯ ಇಲ್ಲವೋ ಅದು 100ಕ್ಕೆ 100 ಸಂಪೂರ್ಣ ನಮ್ಮ ಹಣೆಬರಹ.  ಉದಾಹರಣೆಗೆ, ಬಡತನದಲ್ಲಿರುವವರು ಕೆಲಸ ಮಾಡುವುದು. ಆತ ಇಚ್ಛೆ ಇ...
Image
  ಮಕರ ಸಂಕ್ರಾಂತಿ ಹಿಂದಿಯಲ್ಲಿ ಹೇಳುತ್ತಾರೆ, ಏನೆಂದರೆ  "ದಾನೆ ದಾನೆ ಪೆ ಲಿಖಾ ಹೇ ಖಾನೆವಾಲೇ ಕಾ ನಾಮ" ಅಂದರೆ ಒಂದು ಕಾಳು, ಕಾಳಿನ ಮೇಲೆ ಅದನ್ನು ತಿನ್ನುವವರ ಹೆಸರು ಬರೆಯಲಾಗಿದೆ. ನನ್ನ ದೇಹದ ಹೆಸರು ಸೂರ್ಯ ನಾರಾಯಣ ಇರುವುದು ಹಾಗೂ ನಾನು ಸೂರ್ಯ ನಾರಾಯಣ ದೇವರ ಆರಾಧನೆ ಮಾಡುವುದು, ಕಾಕತಾಳೀಯ. ಈ ಆರಾಧನೆಗೆ ನನ್ನ ಪೂಜ್ಯ ಗುರುದೇವರ ಮಾರ್ಗದರ್ಶನ ಕಾರಣ. ಶರೀರ ಬಹಳಷ್ಟು ಅನಾರೋಗ್ಯದಿಂದ ಕೂಡಿರುವ ಸಮಯಕ್ಕೆ ಪೂಜ್ಯ ಗುರುದೇವರ ಮಾರ್ಗದರ್ಶನ ನನಗೆ ದೊರೆಯಿತು. ಅದೇನೆಂದರೆ ಸೂರ್ಯ ದೇವರು ಆರೋಗ್ಯದ ದೇವರು, ಅವರ ಆರಾಧನೆಯಿಂದ ಬುದ್ದಿ ತೀಕ್ಷ್ಣವಾಗುತ್ತದೆ ಹಾಗೂ ಅವರ ಆರಾಧನೆ ಮಾಡುವವರು ಎಂದಿಗೂ ಬಡತನದಿಂದ ಉಪವಾಸ ಇರುವುದಿಲ್ಲ" ಎನ್ನುವ ಮಾರ್ಗದರ್ಶನ ಪಡೆದುಕೊಂಡೆ. ಒಂದೇ ಸಮನೆ ಆರೋಗ್ಯದ ಇಚ್ಛೆ ಹಾಗೂ ಆಳವಾದ ನಂಬಿಕೆಯಿಂದ ನಾನು ಸೂರ್ಯ ದೇವರ ಆರಾಧನೆ ಮಾಡಲು ಆರಂಭಿಸಿದೆ (ಇದಕ್ಕು ಮೊದಲು ಸೂರ್ಯ ದೇವರನ್ನು ಕೇವಲ ನಮಸ್ಕಾರ ಮಾಡುತ್ತಿದ್ದೆ). ಜಗತ್ತಿನಲ್ಲಿ ಅದೆಷ್ಟೋ ಜನ ತಮಗೆ ಬಂದ ರೋಗದ ಕಷ್ಟವನ್ನು ಸಹಿಸಲಾಗದೆ, ಸಾವು ಬರದೇ ಇದ್ದರೂ,  ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.. ಆದರೆ ಮಹಾಭಾರತದ ಯುದ್ಧದಲ್ಲಿ ಭೀಷ್ಮರ ದೇಹದ ತುಂಬೆಲ್ಲಾ, ಬಾಣಗಳು ಚುಚ್ಚಿರುತ್ತವೆ. ಹಾಗೂ ಭೀಷ್ಮರಿಗೆ ಬಯಸಿದಾಗ ಸಾಯುವ "ಇಚ್ಛಾ ಮೃತ್ಯು"ವಿನ ವರದಾನ ಇರುತ್ತದೆ.  ಆದರೂ ಸಹ ವರವನ್ನು ಉಪಯೋಗಿಸಿ ಕಷ್ಟದಿಂದ ಪಾರಾಗಲು ಬಾಣಗಳು ಚುಚ್ಚಿ...