Posts

Showing posts from March, 2025
 ಈ ವರ್ಷದ (2025ರ) ಶಿವರಾತ್ರಿ ಸಂದೇಶ ನಾವು ದೇವರನ್ನು ಸಂಪರ್ಕ ಮಾಡಲು ಹಾಗೂ ದೇವರಿಂದ ಕೃಪೆ ಪಡೆಯಲು ವ್ರತ ಮಾಡುತ್ತೇವೆ. ನಾವು ಸತ್ಯ ಪ್ರಾಮಾಣಿಕತೆಯಿಂದ ವ್ರತ ಮಾಡಿದಾಗ ಆ ದೇವರು ನಮಗೆ ಪ್ರತಿಸ್ಪಂದಿಸುತ್ತಾನೆ. ಇದು ಆರನೇ ಶಿವರಾತ್ರಿ ಕಾರ್ಯಕ್ರಮದಲ್ಲಿ ನನಗಾದ ಅನುಭವ. ಇದನ್ನು ಈಗಾಗಲೇ ಹಂಚಿಕೊಂಡಿದ್ದೇನೆ.  ಈ ವರ್ಷದ ಶಿವರಾತ್ರಿಯಂದು ನನಗೆ ಲಭಿಸಿದ ಸಂದೇಶ ನನ್ನ ನಂಬಿಕೆ ವಿಶ್ವಾಸವನ್ನು ಗಟ್ಟಿಗೊಳಿಸಿತು. ಈ ಸಂದೇಶ ನನಗೆ ಎಷ್ಟು ಮುಖ್ಯವಾದುದು ಎನ್ನುವುದು ತಿಳಿಯಬೇಕಾದರೆ ಈ ಸಣ್ಣ ಕತೆ ಓದುವುದು ಮುಖ್ಯವಾಗಿದೆ. ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಸುಂದರವಾದ ಕುದುರೆಯನ್ನು ಬಹಳ ದುಡ್ಡು ಕೊಟ್ಟು ಖರೀದಿ ಮಾಡಿದ. ಇದನ್ನು ರಾಜನಿಗೆ ಕೊಟ್ಟು ತಾನು ಖರ್ಚು ಮಾಡಿದಕ್ಕಿಂತಲೂ ಹೆಚ್ಚಿನ ಉಡುಗೊರೆಗಳನ್ನು ರಾಜನಿಂದ ಪಡೆಯಬೇಕೆನ್ನುವುದು ಆತನ ಉದ್ದೇಶವಾಗಿತ್ತು.  ವ್ಯಾಪಾರಿ ಕುದುರೆಯನ್ನು ತನ್ನ ಊರಿಗೆ ತೆಗೆದುಕೊಂಡು ಹೋಗುವಾಗ ಆ ಕುದುರೆಯ ಮೇಲೆ ಮೂರು ಜನ ಕಳ್ಳರ ಕಣ್ಣು ಬೀಳುತ್ತದೆ. ಯಾವುದೇ ರೀತಿಯಿಂದ ಅದನ್ನು ಪಡೆಯಬೇಕು ಎಂದು ಯೋಚಿಸಿ, ಅದಕ್ಕೆ ಒಂದು ಯೋಜನೆ ರೂಪಿಸುತ್ತಾರೆ.  ಆ ಯೋಜನೆಯಂತೆ ಒಬ್ಬ ಕಳ್ಳ ವ್ಯಾಪಾರಿಯ ದಾರಿಯಲ್ಲಿ ಎದುರಾಗಿ, ಏನಪ್ಪಾ ಎಂತಹ ಕತ್ತೆಯನ್ನು ತೆಗೆದುಕೊಂಡು ಹೋಗುತ್ತಿರುವೆ ಸ್ವಲ್ಪವೂ ಸರಿಯಾಗಿಲ್ಲ, ಎಂದು ಬಹಳ ಅಸಮಾಧಾನದಿಂದ ಹೇಳಿದ. ಇದನ್ನು ಕೇಳಿ ಒಮ್ಮೆಲೆ ಸಿಟ್ಟಿಗೆ ಬಂದ ವ್ಯಾಪಾರಿ,...
 ಪವಿತ್ರ ಮನಸ್ಸು ಗಂಗೆಯ ಆಸ್ಥಾನ ಇಂದಿನ ಲೆಕ್ಕದಲ್ಲಿ ಕುಂಭ ಮೇಳದಲ್ಲಿ 45 ಕೋಟಿ ಜನರು ಸ್ನಾನ ಮಾಡಿದ್ದಾರೆ.  ಇನ್ನೂ ಅದೆಷ್ಟೋ ಜನ ನಮ್ಮಿಂದ ಕುಂಭಮೇಳದಲ್ಲಿ ಭಾಗವಹಿಸಲು ಆಗುತ್ತಿಲ್ಲವಲ್ಲ ಎಂದು ಹಳಹಳಿಸುತ್ತಿದ್ದಾರೆ. ದೇಶದ ಅತಿ ದೊಡ್ಡ ದೊಡ್ಡ ಧಾರ್ಮಿಕ ವ್ಯಕ್ತಿಗಳು ಜಗದ್ಗುರುಗಳು, ಮಹಾಂತ, ಮಹಾ ಮಂಡಲೇಶ್ವರರು, ನಾಗಾಗಳು, ಅಘೋರಿಗಳು, ಅನೇಕ ಸಾಧು ಸಂತರು ಪ್ರಯತ್ನಿಸುತ್ತಿರುವುದು ತ್ರಿವೇಣಿ ಸಂಗಮದ ಪುಣ್ಯ ನದಿಗಳ ಕೃಪೆಗೆ ಪಾತ್ರರಾಗಲು. ಮೂರು ನದಿಗಳಲ್ಲಿ ಮುಖ್ಯ ನದಿ ಗಂಗೆ.  ಈಗ ಓದುತ್ತಿರುವ ಕಥೆ ಓದಿದ ನಂತರ ಇದು ಎಷ್ಟು ನಿಜವೋ ಎಷ್ಟು ಕಟ್ಟುಕತೆ ಎನ್ನುವ ಯೋಚನೆ ಎಲ್ಲರಿಗೂ ಬರುತ್ತದೆ. ಆದರೂ ಇದು ಇತಿಹಾಸದ ಒಂದು ಭಾಗವಾಗಿದೆ. ಹೀಗಾಗಿ ಈ ಕಥೆಯನ್ನು ಓದಿದವರಿಗೆ ಆ ಪುಣ್ಯ ಸ್ನಾನ ಮಾಡಿದ ಸ್ವಲ್ಪ ಭಾಗವಾದರೂ ಸಿಕ್ಕೆ ಸಿಗುತ್ತದೆ. ಇದು ನನ್ನ ಪೂರ್ಣ ವಿಶ್ವಾಸ. ಅದು ವಾರಣಾಸಿಯ ಹತ್ತಿರದ ಗ್ರಾಮ ಅಲ್ಲಿ ನದಿಯಲ್ಲಿ ಸ್ನಾನ ಮಾಡಲು ಒಬ್ಬ ಬ್ರಾಹ್ಮಣ ಹೋಗುವಾಗ ತನ್ನ ಚಪ್ಪಲಿ ರಿಪೇರಿ ಮಾಡಲು ಒಬ್ಬ ಚಮ್ಮಾರನ ಹತ್ತಿರ ಹೋಗುತ್ತಾನೆ. ಚಮ್ಮಾರ ಚಪ್ಪಲಿ ರಿಪೇರಿ ಮಾಡಿದ ನಂತರ ಬ್ರಾಹ್ಮಣನ ಹತ್ತಿರ ದುಡ್ಡನ್ನು ಕೇಳದೆ ಒಂದು ಕೋರಿಕೆ ಮಂಡಿಸುತ್ತಾನೆ. ತಾನು ಉಳಿಸಿದ ಒಂದು ತಾಮ್ರದ ನಾಣ್ಯವನ್ನು ಕೊಟ್ಟು ಗಂಗಾ ನದಿಯಲ್ಲಿ ಹಾಕಲು ಕೇಳುತ್ತಾನೆ.  ಇನ್ನೊಂದು ಮಾತನ್ನು ಸಹ ಹೇಳುತ್ತಾನೆ, ನೇರವಾಗಿ ಗಂಗೆಯಲ್ಲಿ ನಾಣ್ಯ ಹಾಕಬೇಡಿ...
Image
 ಸ್ನೇಹಿತರೇ ಎಲ್ಲರಿಗೂ ನಮಸ್ಕಾರ ಜೀವನದಲ್ಲಿ ನಾನು ಎನ್ನುವುದು ಎಲ್ಲರಿಗೂ ಮುಖ್ಯವಾದುದು. ಇದಕ್ಕೆ ಸಂಬಂಧಿಸಿದಂತೆ ಅವರವರ ಸಂತೋಷಕ್ಕಾಗಿ ಹುಟ್ಟಿದ ದಿನಗಳ ಆಚರಣೆ ಈಗ ಹೆಚ್ಚುತ್ತಿದೆ. ಆಪ್ತರು ಸಹ ಅವರಿಗೆ ತಮ್ಮ ಪ್ರೀತಿ ತೋರ್ಪಡಿಸಲು ಅವರನ್ನು ಸಂತೋಷಪಡಿಸಲು ಈ ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸಲು ಇಂದಿನ ಸಮಾಜ ಕಂಡುಕೊಂಡಿರುವ ಆಚರಣೆ.  ಆದರೂ ಸಹ ನಾವು ಸತ್ಯ ಏನಿದೆ, ಅದರ ಕಡೆಗೆ ಸ್ವಲ್ಪವಾದರೂ ಧ್ಯಾನವನ್ನು ಕೊಡಬೇಕು. ಸತ್ಯವನ್ನು ಸ್ವಲ್ಪವಾದರೂ ನೆನಪಿಸಿಕೊಳ್ಳಲು ಪ್ರಯತ್ನಿಸಬೇಕು. ಒಂದು ಮನೆ ಕಟ್ಟಿರುತ್ತೇವೆ. ಮನೆಯಲ್ಲಿ ನಾವು ವಾಸಿಸುತ್ತವೆ, ಎಂದರೆ ಇದರ ಅರ್ಥ ನಾವೇ ಮನೆ ಎಂದಲ್ಲ. ಮನೆ ನಮ್ಮದೇ ಆಗಿದ್ದರೂ ನಮಗೂ ಮನೆಗೂ ಬಹಳ ವ್ಯತ್ಯಾಸವಿದೆ.  ಅದೇ ರೀತಿ ದೇಹದಲ್ಲಿ ನಾವು ಇದ್ದರೂ ದೇಹ ನಮಗೂ ವ್ಯತ್ಯಾಸ ಇದೆ.  ದೇಹ ಬಾಲ್ಯ, ಯೌವ್ವನ , ಮುಪ್ಪು ಆಗಿ ನಿರಂತರ ಬದಲಾಗುತ್ತಿದೆ. ಆದರೆ ದೇಹದಲ್ಲಿರುವ ಒಂದು ತಿಳುವಳಿಕೆ, ಒಂದು ಅನುಭವಿ ಅದೇ ಆಗಿರುತ್ತಾನೆ. ಬದಲಾಗುವುದಿಲ್ಲ. ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.  ದೇಹದಲ್ಲಿ ವಾಸಿಸುವ ಅನುಭವಿ ತಿಳುವಳಿಕೆ ಆತ್ಮ ಶಾಶ್ವತ. ಆದರೆ ದೇಹ ಹುಟ್ಟುತ್ತದೆ ಹಾಗೂ ಸಾಯುತ್ತದೆ. ಈ ದೇಹದ ಹುಟ್ಟಿದ ದಿನಗಳನ್ನು ನನ್ನ ಹುಟ್ಟಿದ ದಿನ ಎಂದು ಭಾವಿಸಿದಾಗ ಮೊದಲೇ ಅಜ್ಞಾನ ಇರುವ ಜೀವಕ್ಕೆ, ದೇಹವೇ ನಾನು ಎನ್ನುವ ಅಜ್ಞಾ...