ಅಲ್ಪ ಕಲ್ಪನೆ ಅಲ್ಪ ಸತ್ಯ - ಭಾಗ 3 (ಜಗತ್ತಿನ ಸಮಸ್ಯೆಗಳು) ಭಾಗ 2ರ ಲಿಂಕ್👇 https://urainpoems.blogspot.com/2024/09/2-4-1-httpsurainpoems.html ದೇಶಮುಖ್ ಸರ್ ಡಾ. ನಾಗೇಶ ಮೊಬೈಲ್ ನಲ್ಲಿದ್ದ ಸುರೇಶನು ಬರೆದ ಶ್ರದ್ಧಾಂಜಲಿ ಕವಿತೆ ಓದಿ ಅನೇಕ ಯೋಚನೆಗಳಲ್ಲಿ ಮುಳುಗಿರುವಾಗಲೇ, *ಆ ಮೋಬೈಲ್ ರಿಂಗ್ ಆಯಿತು ಹಾಗೂ ಅದರಲ್ಲಿ R.Chakravarti ಎನ್ನುವ ಹೆಸರು ಇರುವುದನ್ನು ನೋಡಿ ಮೊಬೈಲ್ ನ್ನು ಡಾ. ನಾಗೇಶ ಗೆ ನೀಡಿದರು. ನಾಗೇಶ ಮಾತನಾಡುವುದನ್ನು ಮುಗಿಸಿದ ನಂತರ, ಮಾತನಾಡಿದ್ದು ನಮ್ಮ ರಾಜೇಶ ಅಲ್ಲವೇನು ?* ಎಂದು ಊಹೆ ಮಾಡುತ್ತಾ ದೇಶಮುಖ್ ಸರ್ ಕೇಳಿದರು. ಆಗ ಹೌದು ರಾಜೇಶ್ ಮಾತನಾಡಿದ್ದ. ಒಂದು ಗಂಭೀರ ವಿಷಯದ ಬಗ್ಗೆ ಮಾತನಾಡಲು ಬರುತ್ತೇನೆ ಎಂದು ಹೇಳಿದ್ದಾನೆ, ಎಂದರು. ಡಾ. ನಾಗೇಶ, ಸುರೇಶ, ರಾಜೇಶ ಚಕ್ರವರ್ತಿ ಒಂದೇ ಶಾಲೆ, ಒಂದೇ ಕಾಲೇಜಿನಲ್ಲಿ ಪಿಯುಸಿ ವರೆಗೆ ಕಲಿತವರು. *ನಾಗೇಶ, ಸುರೇಶ ವಿಜ್ಞಾನ ವಿಭಾಗದಲ್ಲಿ ಇದ್ದರೆ, ರಾಜೇಶ ಕಲಾ ವಿಭಾಗದಲ್ಲಿದ್ದ. ಬೇರೆ ಬೇರೆ ವಿಭಾಗವಿದ್ದರೂ ಡಾ. ನಾಗೇಶ, ರಾಜೇಶ ಒಂದು ಸರ್ಕಾರೇತರ ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು*. ಹೀಗಾಗಿ ಅವರಲ್ಲಿ ಆಪ್ತತೆ, ಪರಸ್ಪರ ಗೌರವ ಇತ್ತು. ಸ್ವಲ್ಪ ಸಮಯದಲ್ಲಿಯೇ, ನಮಸ್ಕಾರ ನಾಗೇಶ ಎಂದು ರಾಜೇಶ ಒಳ ಬಂದರು. ಅಲ್ಲಿಯೇ ದೇಶಮುಖ ಸರ್ ಕುಳಿತಿರುವುದನ್ನು ಕಂಡು ಆಶ್ಚರ್ಯದಿಂದ ನಮಸ್ಕಾರ ಸರ್, ಏನು ನೀವು ಇಲ್ಲಿ !!! ? ಎಂದು ಕೇ...