Posts

Showing posts from October, 2024
Image
 ಅಲ್ಪ ಕಲ್ಪನೆ ಅಲ್ಪ ಸತ್ಯ ಭಾಗ 4 (ಶಿಕ್ಷಕ)  ಭಾಗ -3 ಲಿಂಕ್ 👇 https://urainpoems.blogspot.com/2024/09/3-2-httpsurainpoems.html (ಹಿಂದಿನ ಸಂಚಿಕೆಯಲ್ಲಿ : ಜಗತ್ತಿನ ಸಮಸ್ಯೆಗಳಿಗೆ ಯಾವುದೇ ರೀತಿಯ ಸೂಕ್ತ ಪರಿಹಾರ ಕಾಣದಿದ್ದಾಗ, ದೇಶಮುಖ್ ಸರ್ ಈ ಉದ್ದೇಶದಿಂದಲೇ ಸುರೇಶ ತನ್ನ ಮುಂದಿನ ಜೀವನದ ಉದ್ದೇಶವನ್ನು ಘೋಷಣೆ ಮಾಡಿದ್ದಾನೆ ಎಂದು ನೆನಪಾಗಿ ಡಾ. ನಾಗೇಶ ಗೆ ಸುರೇಶನನ್ನು ಕರೆ ಮಾಡಿ ಕರೆಯಲು ಹೇಳುತ್ತಾರೆ. ನಂತರ.... ) ಆಗ ಡಾ. ನಾಗೇಶ ಸುರೇಶನಿಗೆ ಕರೆ ಮಾಡಿ ಬರಲು ಹೇಳುತ್ತಾರೆ.  ಆಗ ರಾಜೇಶ, ವಿಜ್ಞಾನ ವಿಭಾಗದಲ್ಲಿ ನಿಮ್ಮ ಜೊತೆ ಇದ್ದ ಸುರೇಶ ಏನು ? ಎಂದು ಕೇಳಿದ. ಆಗ ಹೌದು ಎಂದು ನಾಗೇಶ ಹೇಳಿದರು. ಆಗ ರಾಜೇಶ, *ಈ ಬಾರಿ ಸುರಕ್ಷೆ ಕುರಿತು ನಮ್ಮ ಸಂಸ್ಥೆಯವರು ಆತನನ್ನು ಅತಿಥಿಯಾಗಿ ಕರೆದಿದ್ದ ಕಾರ್ಯಕ್ರಮದಲ್ಲಿ ಆತ ಬಹಳ ಚೆನ್ನಾಗಿ ಮಾತನಾಡಿದ್ದ*, ಎಂದು ನಮ್ಮ ಹುಡುಗರು ಹೇಳುತ್ತಿದ್ದರು ಎಂದು ಹೇಳಿದ. ಆಗ ಡಾ. ನಾಗೇಶ, ಹೌದು ನೀವು ಆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಾನು ಸಹ, ಆತ ಪ್ರಥಮ ಬಾರಿಗೆ ಬೇರೆ ಸ್ಥಳದ ದೊಡ್ಡ ವೇದಿಕೆಯಲ್ಲಿ ಆ ರೀತಿಯಾಗಿ ಮಾತನಾಡಿದ್ದು ನೋಡಿದೆ.  *ಆಗ ನನಗೆ ನಮ್ಮ ಹೈಸ್ಕೂಲಿನ ಘಟನೆ ನೆನಪಾಯಿತು. ಆ ಘಟನೆ ನಂತರ ಆತ ಮುಂದೆ ಮಾತನಾಡುತ್ತಾನೆಯೋ ? ಇಲ್ಲವೋ ಎನ್ನುವ ಭಾವನೆ ಹಲವರಲ್ಲಿ ಮೂಡಿತ್ತು*. ಆದರೆ ಈಗ ದೊಡ...