** ಸಾಕ್ಷಿ, ಮನಸ್ಸಾಕ್ಷಿಯೇ **
ಸಾಕ್ಷಿ, ಮನಸ್ಸಾಕ್ಷಿಯೇ ನೀನು ಆಗ, ಕಾರ್ಯವನ್ನು ಹೇಗೆ ಗುರುತಿಸುವೆ?, ನಾನು, ನನ್ನವರು ಮಾಡಿದ ಕಾರ್ಯ ಸರಿಯೆಂದಾಗ ಅದೇ ಕಾರ್ಯ ವಿರೋಧಿ ಮಾಡಿದರೆ ತಪ್ಪೆಂದಾಗ ಸಾಕ್ಷಿ, ಮನಸ್ಸಾಕ್ಷಿಯೇ ನೀನು ಆಗ ಹೇಗೆ ಅನುಭವಿಸುವೆ ? ನಾನು, ನನ್ನವರು ಮಾಡಿದ ಕೆಲಸ ಹೊಗಳಿದಾಗ ಅದೇ ಕೆಲಸ ವಿರೋಧಿ ಮಾಡಿದರೆ ತೆಗಳಿದಾಗ ಸಾಕ್ಷಿ, ಮನಸ್ಸಾಕ್ಷಿಯೇ ನಿನ್ನ ಈ ಗೊಂದಲ ಹೇಗೆ ಪರಿಹರಿಸಿಕೊಳ್ಳುವೆ ? ಸಾಕ್ಷಿಯೇ ಮನಸ್ಸಾಕ್ಷಿಯೇ ನಿನ್ನ ಈ ತಳಮಳ ಹೇಗೆ ಕೊನೆಗಾಣಿಸುವೆ ? ನಿನ್ನ ಸರಿ ತಪ್ಪು ಗೊಂದಲಕ್ಕೆ ಕಾರಣ, ನಿನ್ನ ಸತ್ಯ ಮಿಥ್ಯ ತಳಮಳಕ್ಕೆ ಕಾರಣ ಸತ್ಯವನ್ನು ಗುರುತಿಸುವ ನೀನು ಇಲ್ಲ, ದರ್ಪದ ನಾನೇ ಎಲ್ಲ ಎನ್ನುವ, ನನ್ನ ನಿರ್ಧಾರ ಸಾಕ್ಷಿ, ಮನಸ್ಸಾಕ್ಷಿಯೇ ನಿಜಕ್ಕೂ ದೈವಿ ಪ್ರತಿನಿಧಿಯಾದ ನೀನೇ ಎಲ್ಲ ಸಾಕ್ಷಿ, ಮನಸ್ಸಾಕ್ಷಿಯೇ ದರ್ಪದ ಪ್ರತಿನಿಧಿಯಾದ ನಾನು ಏನು ಇಲ್ಲ ಸಾಕ್ಷಿ, ಮನಸ್ಸಾಕ್ಷಿಯೇ ಇದು ಅರಿಯದವರಿಗೆ ನಿನ್ನಿಂದ ಸಿಗದು ಎಂದು ನಿಶ್ಚಿಂತ ನಿದ್ರೆ ನಿನಗೆ ಗೌರವಿಸದವರ ಕಾರ್ಯಕ್ಕೆ ಸಿಗದು ನಿನ್ನಿಂದ ಎಂದು ಸಹಕಾರ ಸಾಕ್ಷಿ, ಮನಸ್ಸಾಕ್ಷಿಯೇ ನಿಜಕ್ಕೂ ದೈವಿ ಪ್ರತಿನಿಧಿಯಾದ ನೀನೇ ಎಲ್ಲ ಸಾಕ್ಷಿ, ಮನಸ್ಸಾಕ್ಷಿಯೇ ದರ್ಪದ ಪ್ರತಿನಿಧಿಯಾದ ನಾನು ಏನು ಇಲ್ಲ © Urain Namah 08/07/2018