Posts

Showing posts from July, 2025

ಅಂಧ ಹೇಳವರು

 (ಶ್ರೀ ಗುರುದೇವರ ಪದತಲದಲ್ಲಿ ಸಾಷ್ಟಾಂಗ ನಮನ) *** ♥♥♥ ಅಂಧ ಹೇಳವರು ♥♥♥***                                                                                                                                                                           ಕಡು ಕಷ್ಟ, ಬಲು ವಿಪರೀತ್ ಕೊನೆಗೂ ತಲುಪಲಾರೆಯೋ, ಅಂಧನೆ ನೀ ತಲುಪಲಾರೆಯೋ  ನೀ ತಲುಪಲಾರೆ, ದಿವ್ಯ ಕ್ಷೇತ್ರ, ದೇವ ಕ್ಷೇತ್ರ  ಕೊನೆಗೂ ಸೇರಲಾರೆ ನೀನು, ನಮ್ಮ ದಿವ್ಯ ಮೂಲ ಮನೆ  ಅಂಧನೆ ನಿಜ ನಿನ್ನ ಕಾಲಲ್ಲಿಹುದು ಶಕ್ತಿ ಶಕ್ತಿಯಿಂದ ನೀನು ಕರ್ಮಠ  ನೀನು ಭಾವಿಸಿರುವೇ, ಪದೇ, ಪದೇ ನಡೆದು ನಡೆದು ದಾರಿ ಕ್ರಮಿಸಿ  ತಲುಪುವೆ ದಿವ್ಯ ಕ್ಷೇತ್ರ, ದೇವ ಕ್ಷೇತ್ರ, ಸೇರುವೆ ನಮ್ಮ ದಿವ್ಯ...
Image
  ನಾಗರ ಪಂಚಮಿಯ ನಿಗೂಢ ರಹಸ್ಯ. ಪ್ರಶ್ನೆ: ಜಗತ್ತಿನಲ್ಲಿ ಯಾವುದು ಅತಿ ಹೆಚ್ಚು ದೂರ ? ಯಾವುದು ಹೆಚ್ಚು ದೂರ ಎನ್ನುವ ಪ್ರಶ್ನೆ ಯಾರನ್ನಾದರೂ ಕೇಳಿದಾಗ, ಅನೇಕ ಜನರು ಅನೇಕ ಉತ್ತರಗಳನ್ನು ಕೊಡಬಹುದು.  ಕೆಲವರಿಗೆ ಬೆಂಗಳೂರು ದೂರ ಆಗಿರಬಹುದು. ಕೆಲವರಿಗೆ ದೆಹಲಿ ದೂರ ಆಗಿರುತ್ತದೆ. ಕೆಲವರು ಇಂಗ್ಲೇಂಡ ದೂರ ಎನ್ನಬಹುದು. ಕೆಲವರು ಅಮೇರಿಕಾ ದೂರ ಎನ್ನಬಹುದು.  ಹೀಗೆ ಅನೇಕರು ಅನೇಕ ರೀತಿಯಲ್ಲಿ ದೂರದ ಸ್ಥಳಗಳನ್ನು ಹೇಳಬಹುದು. ಆದರೆ (ನಮ್ಮ ಚೈತನ್ಯ, ಪ್ರಜ್ಞೆಗೆ) ಇವೆಲ್ಲಕ್ಕಿಂತಲೂ ದೂರವಾಗಿ ಇರುವುದು ಕೇವಲ ನಾಲ್ಕು, ಐದು ಫೀಟ್ ಉದ್ದ ಇರುವ ಒಂದು ಸ್ಥಳ.  ಇದು ವಿಚಿತ್ರವಾದರು, ಆಶ್ಚರ್ಯಕರವಾದರೂ ಇದೆ ಸತ್ಯ. ಜಗತ್ತಿನಲ್ಲಿ ಪ್ರಯಾಣಕ್ಕೆ ಅತಿ ಹೆಚ್ಚು ಸಮಯ ತೆಗೆದುಕೊಳ್ಳುವ ದೂರದ ಸ್ಥಳ ಎಂದರೆ ಇದೆ ಆಗಿದೆ.  ಕೆಲವು ಸ್ಥಳಗಳಿಗೆ ತಲುಪಲು ಅನೇಕ ಗಂಟೆಗಳು ಬೇಕಾಗಬಹುದು. ಇನ್ನೂ ಕೆಲವು ಸ್ಥಳಗಳನ್ನು ತಲುಪಲು ದಿನಗಳು ಬೇಕಾಗಬಹುದು. ಕೆಲವಕ್ಕೆ ತಿಂಗಳು ವರ್ಷಗಳು ಬೇಕಾಗಬಹುದು.  ಆದರೆ ಈಗ ಹೇಳುತ್ತಿರುವ ಸ್ಥಳಕ್ಕೆ ತಲುಪಲು‌ ಅನೇಕ ಜನ್ಮ ಜನ್ಮಗಳೇ ಬೇಕಾಗುತ್ತದೆ. ಅಷ್ಟೊಂದು ಸಮಯ ಬೇಕು, ಆದರೆ ಅದು ಇರುವ ಉದ್ದ ಬಹಳ ಕಡಿಮೆ. ಇದೇನು ವಿಚಿತ್ರ. ಅದು ಯಾವುದು ? ಅದು ಎಲ್ಲಿದೆ ? ಎನ್ನುವ ಕುತೂಹಲ ನಮ್ಮಲ್ಲಿ ಮೂಡಬಹುದು.  ಅದು ಎಲ್ಲಿಯೋ ಬೇರೆ ಕಡೆ ಇಲ್ಲ. ನಮ್ಮಲ್ಲಿಯೇ ಇದೆ.  ಅದುವೇ ಇಂದಿನ ನಾಗರ ...
 *ತನ್ನಂತೆ ಪರರ ಬಗೆದರೆ ಕೈಲಾಸ ಬಿನ್ನಾಣವಿಕ್ಕು ಸರ್ವಜ್ಞ - ಈ ಮಾತು ಎಷ್ಟು ಸರಿ ?* ಪರರನ್ನು ಸಹ ತನ್ನಂತೆ ಕಾಣುವುದು ಸರಿಯೇ? ಅಥವಾ *ಪರರನ್ನು ತನಗಿಂತ ಚಿಕ್ಕದಾಗಿ ಕಾಣುವುದು ಸರಿಯೇ ?* ತನಗೆ ಯಾವ ಮಾತುಗಳಿಂದ ನೋವಾಗುತ್ತದೆ ? *ಅಂತಹ ಮಾತುಗಳನ್ನು ಪರರು ತನಗೆ ಮಾತಾಡಬಾರದು. ಆದರೆ ತಾನು ಬೇರೆಯವರಿಗೆ ಮಾತನಾಡಿದರೆ ತಪ್ಪಿಲ್ಲ.*  ಪರರು ತನಗೆ ಯಾವ ರೀತಿ ನಡೆದುಕೊಂಡರೆ ತನಗೆ ಅಪಮಾನವಾಗುತ್ತದೆ ? *ಅಂತಹ ವ್ಯವಹಾರವನ್ನು ಬೇರೆಯವರು ತನ್ನ ಜೊತೆ ಮಾಡಬಾರದು. ಆದರೆ ತಾನು ಬೇರೆಯವರೊಂದಿಗೆ ಮಾಡಿದರೆ ತಪ್ಪೇನಿಲ್ಲ.*  ಈ ರೀತಿಯ ಮನುಷ್ಯನ ವ್ಯವಹಾರವನ್ನು ಕಂಡೆ ಸರ್ವಜ್ಞ ಮೇಲಿನ ಮಾತನ್ನು ಹೇಳಿದ್ದಾರೆ. ಪರರನ್ನು ಸಹ ತನ್ನಂತೆ ಕಾಣಬೇಕು. ಅವರು ಯಾರೇ ಇರಲಿ. ಯಾವುದೇ ಮಟ್ಟದಲ್ಲಿರಲಿ.  ನಮ್ಮಂತೆ ಪರರನ್ನು ಕಂಡಾಗ ಆ ದೇವರಿಗೆ ನಮ್ಮ ನಡವಳಿಕೆ ಪ್ರಿಯವಾಗುತ್ತದೆ. ಒಂದು ಆತ್ಮದ ಜೀವನ ಕಾಲದಲ್ಲಿ ಅಥವಾ ಒಬ್ಬ ವ್ಯಕ್ತಿಯ ಜೀವನಕಾಲದಲ್ಲಿ  *ವಿರುದ್ಧ ದಿಕ್ಕಿನ ಪರಿಸ್ಥಿತಿಗಳು ಬರುತ್ತವೆ*. ಉದಾಹರಣೆಗೆ. ಒಬ್ಬ ವ್ಯಕ್ತಿ ಈ ಜನ್ಮದಲ್ಲಿ ಗಂಡಾಗಿ ಹುಟ್ಟಿದರೆ ಇನ್ನೊಂದು ಜನ್ಮದಲ್ಲಿ ಹೆಣ್ಣಾಗಿ ಹುಟ್ಟಬಹುದು. ಅಥವಾ ಒಂದು ಜೀವನಕಾಲದಲ್ಲಿಯೇ ಒಬ್ಬ ವ್ಯಕ್ತಿಗೆ ಯಜಮಾನನಂತಹ, ಶ್ರೀಮಂತನಂತಹ, ಅಥವಾ ಯುವಕನಂತಹ ಬಲಾಡ್ಯ ಪರಿಸ್ಥಿತಿ ಇರುತ್ತದೆ. ಇನ್ನೊಮ್ಮೆ ಅದೇ ವ್ಯಕ್ತಿಯ ಜೀವನದಲ್ಲಿ ಸೇವಕನಂತಹ, ಬಡವನಂತಹ, ಮುಪ್ಪಿನಂತಹ ದೌರ...
 ಸರ್ವೇ ಪ್ರದೀಪಾ -  ಭಾಗ (1) ಈ ಲೇಖನದ ಆರಂಭದಲ್ಲಿ  ಕೆಲವು ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಬರುವ ನಿಮ್ಮ ಉತ್ತರವನ್ನು ಲೇಖನದ ಕೊನೆಗೆ ವಿಮರ್ಶೆ ಮಾಡಿ.  ನಿಮ್ಮಲ್ಲಿ ಈಗ ಯಾವ ಇಚ್ಛೆಯಿದೆ ? ಯಾವ ಬಯಕೆಯಿದೆ ? ಯಾವ ಯೋಚನೆಯಿದೆ ? ಯಾವ ನಡವಳಿಕೆಯಿದೆ ? ಯಾವ ಹವ್ಯಾಸಯಿದೆ ? ಯಾವ ಚಟವಿದೆ ? ನೀವು ಹೇಗೆ ? ನಿಮ್ಮ ವ್ಯಕ್ತಿತ್ವ ಹೇಗೆ ?  ಇವುಗಳು ನಮ್ಮ ಹುಟ್ಟಿನಿಂದಲೇ ಬಂದಿತ್ತೆ ? ಅಥವಾ ಒಂದು ಸಮಯದ ನಂತರ ?  ಹುಟ್ಟಿದ ಒಂದು ಸಮಯದ ನಂತರ ಬಂದರೆ ಇವು ಯಾವಾಗ ಆರಂಭವಾದವು ?  *ಸರ್ವೆ ಪ್ರದೀಪಾ* ಎಂದರೆ ಏನು ಎನ್ನುವುದನ್ನು ತಿಳಿದುಕೊಳ್ಳುವ ಮುಂಚೆ  ಒಂದು ಉದಾಹರಣೆಯನ್ನು ನೋಡೋಣ. ಇದರಿಂದ *ಸರ್ವೆ ಪ್ರದೀಪಾ* ಸ್ಪಷ್ಟವಾಗಿ ಸರಿಯಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.  ನಾವು ಜೀವಂತವಾಗಿರಲು ಅನೇಕ ರೀತಿಯ ಆಹಾರವನ್ನು ಸೇವಿಸುತ್ತೇವೆ. ನಾವು ನಾಲಿಗೆಯ ರುಚಿಗೋಸ್ಕರವಾಗಲಿ ಅಥವಾ ಹೊಟ್ಟೆಯ ಹಸಿವೆಗೋಸ್ಕರವಾಗಲಿ ಯಾವುದೇ ಉದ್ದೇಶದಿಂದ ನಾವು ಸೇವಿಸುವ ಆಹಾರ,  ನಮ್ಮ ದೇಹವನ್ನು ನಿರ್ಧಾರ ಮಾಡುತ್ತದೆ. ನಾವು ಸೇವಿಸುವ ಆಹಾರ  ಕೊನೆಗೆ ನಮ್ಮ ದೇಹವೇ ಆಗಿ ಪರಿವರ್ತನೆಯಾಗುತ್ತದೆ.   ಬಾಯಿಯಿಂದ ಯಾವುದೇ ಆಹಾರ ಹೊಟ್ಟೆಯಲ್ಲಿ ಹೋದಾಗ, ಕಾಲಾನಂತರದಲ್ಲಿ ಅದು ದೇಹದ ಒಂದು ಭಾಗವೇ ಆಗುತ್ತದೆ. ಆ ದೇಹವೇ  ಆರೋಗ್ಯ, ಅನಾರೋಗ್ಯವನ್ನು ನೀಡಿ  ನಮ್ಮನ್ನು ...
 ಪರಮವಂದನೆ ಶ್ಲೋಕ -1 ಕಣ್ಣು ಹುಡುಕುವುದು ಏನು ? ಕಿವಿ ಬಯಸುವುದು ಏನು? ನಾಲಿಗೆ ಇಚ್ಛಿಸುವುದು ಏನು ? ಚರ್ಮ ಬಯಸುವುದು ಏನು? ಮೂಗು ಹುಡುಕುವುದು ಏನು? ಮನಸ್ಸು ಇಷ್ಟಪಡುವುದು ಏನು ? ಸುಂದರ ದೃಶ್ಯಗಳ ಸಂತೋಷ ಕಣ್ಣು ಬಯಸುವುದು.  ಸುಮಧುರ ರಾಗಗಳ ಆನಂದ ಕಿವಿ ಬಯಸುವುದು.  ರುಚಿ ರುಚಿಯಾದ ಆಹಾರ ತಿನಿಸುಗಳನ್ನು ನಾಲಿಗೆ ಬಯಸುವುದು.  ಸುಗಂಧದ ವಾಸನೆ ಮೂಗು ಬಯಸುವುದು. ಮೃದುವಾದ ಮೆತ್ತನೆಯ ಸ್ಪರ್ಶ ಚರ್ಮ ಬಯಸುವುದು. ತನ್ನ ಅಹಂಕಾರವನ್ನು ಪುಷ್ಟಿ ಗೊಳಿಸುವ ಹೊಗಳಿಕೆ, ಸತ್ಕಾರ, ಗೌರವ, ಮರ್ಯಾದೆಗಳನ್ನು ಮನಸ್ಸು ಬಯಸುವುದು.  ನಮ್ಮ ನಿತ್ಯ ಕ್ರಿಯೆ. ಹೋರಾಟ, ಹಾರಾಟ, ಪ್ರಯತ್ನ ಎಲ್ಲವೂ ಇವುಗಳ ಹಿಂದೆಯೇ ಬಿದ್ದಿರುತ್ತದೆ. ಮಗು ಇರುವಾಗಿನಿಂದ ಮುದುಕನಾಗುವವರೆಗೂ, ಹುಟ್ಟಿನಿಂದ ಸಾಯುವವರೆಗೆ ಇವುಗಳ ಚಿಂತೆಯೇ ನಮ್ಮನ್ನು ಕಾಡುತ್ತಿರುತ್ತದೆ. ಇವುಗಳನ್ನು ಪಡೆಯಲು ಹರ ಸಾಹಸ ನಡೆಯುತ್ತಿರುತ್ತದೆ.  ನಮ್ಮ ಚಟ, ದುಶ್ಚಟ, ಹವ್ಯಾಸ, ಅಭ್ಯಾಸ ಎಲ್ಲವೂ ಇದರ ಹಿಂದೆಯೇ ಬಿದ್ದಿದೆ.  ಯಾಕೆ ಹೀಗೆ ? ಎಂದು ಪ್ರಶ್ನಿಸಿದರೆ, ಉತ್ತರ ನಮಗೆಲ್ಲರಿಗೂ ಬೇಕಾಗಿರುವುದು ಸಂತೋಷ, ಸುಖ, ಆನಂದ ಖುಷಿ.  ನಮನ್ನು ನಾವು ನಮ್ಮ ಜೀವನದ ಉದ್ದೇಶದ ಬಗ್ಗೆ ಪ್ರಶ್ನಿಸಿಕೊಂಡಾಗ, ನಮ್ಮೆಲ್ಲರಿಗೂ ಸಿಗುವ ಉತ್ತರವೇ,  ಸುಖ ಪಡುವುದು ಸಂತೋಷ ಪಡುವುದು, ಆನಂದ ಪಡುವುದು, ಖುಷಿಯಿಂದ ತೃಪ್ತಿಪಡುವುದು, ಇವೆ ನಮ್ಮ ಜೀವನದ ಪರಮ ...
 ಗುರು ಏಕೆ ಬೇಕು ಬಾಳಲಿ ? ಒಬ್ಬ ಪ್ರವಚನಕಾರರು ಪ್ರವಚನ ನೀಡುತ್ತಾ, ಜನರನ್ನು ಉದ್ದೇಶಿಸಿ *ನಿಗುರಾ* ಎನ್ನುವುದು ದೊಡ್ಡ ಅಪಮಾನಕರ ಶಬ್ದ ನೀವು ನಿಮ್ಮ ಜೀವನದಲ್ಲಿ *ನಿಗುರಾ* ಎಂದು ಕರೆಸಿಕೊಳ್ಳಬಾರದು ಎಂದು ಹೇಳಿದರು. ಸಭಿಕರಲ್ಲಿದ್ದ ಒಬ್ಬ ವ್ಯಕ್ತಿ, ನಿಗುರಾ ಎಂದರೇನು ? ಎಂದು ಕೇಳುತ್ತಾನೆ. ಆಗ ಅವರು, ಯಾರು ತಮ್ಮ ಜೀವನದಲ್ಲಿ ಗುರುವನ್ನು ಹೊಂದಿರುವುದಿಲ್ಲವೋ, ಆತನೇ ನಿಗುರಾ ಎನ್ನುತ್ತಾರೆ. ಆಗ ಆತ ಅವರ ಮಾತನ್ನು ಅಪಹಾಸ್ಯ ಮಾಡುತ್ತಾ ಗುರು ಹೊಂದದೆ ಇರುವುದು ಹೇಗೆ ಒಂದು ನಿಂದನೆಯ ಶಬ್ದವಾಗುತ್ತದೆ ? ಅಷ್ಟಕ್ಕೂ ಜೀವನದಲ್ಲಿ ಗುರುವಿನ ಅವಶ್ಯಕತೆ ಏನಿದೆ ? ಎಂದು ಕೇಳುತ್ತಾನೆ.  ಆಗ ಪ್ರವಚನಕಾರರು, ಒಂದು ಕತೆ ಹೇಳುತ್ತೇನೆ, ಕೇಳು ಆಗ ಗುರುವಿನ ಅವಶ್ಯಕತೆ ತಿಳಿಯುತ್ತದೆ, ಎಂದು ಒಂದು ಕತೆಯನ್ನು ಹೇಳಲು ಆರಂಭಿಸುತ್ತಾರೆ..  ಒಬ್ಬ ವ್ಯಕ್ತಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಕೆಲವೊಂದು ಸಾಮಾನುಗಳ ಗಂಟನ್ನು ಹೊತ್ತುಕೊಂಡು ಹೋಗುತ್ತಿರುತ್ತಾನೆ. ಆಗ ಆತನ ಸ್ನೇಹಿತರಾದ ಇನ್ನೊಂದು ಹಳ್ಳಿಯ ವ್ಯಕ್ತಿಗಳು ಬಂಡಿಯ ಮೇಲೆ ಕುಳಿತು ಆತನ ಎದುರಾಗುತ್ತಾರೆ.  ಬಂಡಿಯಲ್ಲಿದ್ದ ಸ್ನೇಹಿತರು ಆತನ ಕುಶಲವನ್ನು ವಿಚಾರಿಸಿ, ಎಲ್ಲಾ ಮಾತು ಮುಗಿದ ನಂತರ "ಏನು ನೀನೆ ಸಾಮಾನನ್ನು ಹೊತ್ತುಕೊಂಡು ಹೊರಟಿರುವಿಯಲ್ಲ. ನಿನ್ನಲ್ಲಿ ಒಂದು ಕತ್ತೆ ಇತ್ತಲ್ಲ. ಅದಕ್ಕೆ ಹುಷಾರಿಲ್ಲವೇನು ?" ಎಂದು ಕೇಳುತ್ತಾರೆ. ಆಗ ಆತ, "ಕತ್ತೇನಾ ? ಅದ...