Posts

Showing posts from 2018

** ಸಾಕ್ಷಿ, ಮನಸ್ಸಾಕ್ಷಿಯೇ **

ಸಾಕ್ಷಿ, ಮನಸ್ಸಾಕ್ಷಿಯೇ ನೀನು ಆಗ, ಕಾರ್ಯವನ್ನು ಹೇಗೆ ಗುರುತಿಸುವೆ?, ನಾನು, ನನ್ನವರು ಮಾಡಿದ ಕಾರ್ಯ ಸರಿಯೆಂದಾಗ ಅದೇ ಕಾರ್ಯ ವಿರೋಧಿ ಮಾಡಿದರೆ ತಪ್ಪೆಂದಾಗ ಸಾಕ್ಷಿ, ಮನಸ್ಸಾಕ್ಷಿಯೇ ನೀನು ಆಗ ಹೇಗೆ ಅನುಭವಿಸುವೆ ? ನಾನು, ನನ್ನವರು ಮಾಡಿದ ಕೆಲಸ ಹೊಗಳಿದಾಗ ಅದೇ ಕೆಲಸ ವಿರೋಧಿ ಮಾಡಿದರೆ ತೆಗಳಿದಾಗ ಸಾಕ್ಷಿ, ಮನಸ್ಸಾಕ್ಷಿಯೇ ನಿನ್ನ ಈ ಗೊಂದಲ ಹೇಗೆ ಪರಿಹರಿಸಿಕೊಳ್ಳುವೆ ? ಸಾಕ್ಷಿಯೇ ಮನಸ್ಸಾಕ್ಷಿಯೇ ನಿನ್ನ ಈ ತಳಮಳ ಹೇಗೆ ಕೊನೆಗಾಣಿಸುವೆ ? ನಿನ್ನ ಸರಿ ತಪ್ಪು ಗೊಂದಲಕ್ಕೆ ಕಾರಣ, ನಿನ್ನ ಸತ್ಯ ಮಿಥ್ಯ ತಳಮಳಕ್ಕೆ ಕಾರಣ ಸತ್ಯವನ್ನು ಗುರುತಿಸುವ ನೀನು ಇಲ್ಲ, ದರ್ಪದ ನಾನೇ ಎಲ್ಲ ಎನ್ನುವ, ನನ್ನ ನಿರ್ಧಾರ ಸಾಕ್ಷಿ, ಮನಸ್ಸಾಕ್ಷಿಯೇ ನಿಜಕ್ಕೂ ದೈವಿ ಪ್ರತಿನಿಧಿಯಾದ ನೀನೇ ಎಲ್ಲ ಸಾಕ್ಷಿ, ಮನಸ್ಸಾಕ್ಷಿಯೇ ದರ್ಪದ ಪ್ರತಿನಿಧಿಯಾದ ನಾನು ಏನು ಇಲ್ಲ ಸಾಕ್ಷಿ, ಮನಸ್ಸಾಕ್ಷಿಯೇ ಇದು ಅರಿಯದವರಿಗೆ ನಿನ್ನಿಂದ ಸಿಗದು ಎಂದು ನಿಶ್ಚಿಂತ ನಿದ್ರೆ ನಿನಗೆ ಗೌರವಿಸದವರ ಕಾರ್ಯಕ್ಕೆ ಸಿಗದು ನಿನ್ನಿಂದ ಎಂದು ಸಹಕಾರ ಸಾಕ್ಷಿ, ಮನಸ್ಸಾಕ್ಷಿಯೇ ನಿಜಕ್ಕೂ ದೈವಿ ಪ್ರತಿನಿಧಿಯಾದ ನೀನೇ ಎಲ್ಲ ಸಾಕ್ಷಿ, ಮನಸ್ಸಾಕ್ಷಿಯೇ ದರ್ಪದ ಪ್ರತಿನಿಧಿಯಾದ ನಾನು ಏನು ಇಲ್ಲ ©  Urain Namah  08/07/2018

ಬೇರಿಲ್ಲದೆ ವೃಕ್ಷ ಹೇಗಾಯಿತಣ್ಣ?

ಬೇರಿಲ್ಲದೆ ವೃಕ್ಷ ಹೇಗಾಯಿತಣ್ಣ? ಬೇರಿಲ್ಲದೆ ಹೂ ಹೇಗೆ ಅರಳಿತಣ್ಣ? ಬೇರಿಲ್ಲದೆ ಹಣ್ಣು ಹೇಗೆ ಕಟ್ಟಿಕೊಂಡಿತಣ್ಣ? ಹೂ, ಹಣ್ಣಿನ ಆಸೆಗೆ ಎಲೆ, ಬೇರನ್ನು ಮರೆತು ವೃಕ್ಷದೊಂದಿಗೆ ತನ್ನ ಗುರುತಿಸಿಕೊಂಡರೆ, ಅಣ್ಣ ಎಲೆಗೇನಿದೆ ಸೆಲೆ? ಅಣ್ಣ ಎಲೆಗೇನಿದೆ ನೆಲೆ? ಅಣ್ಣ ಎಲೆಗೇನಿದೆ ಬೆಲೆ? ಬೇರಾದ ಜ್ಯೋತಿಸ್ವರೂಪಳೇ ನೀನೇ ಎಲ್ಲಾ ಎಲೆಯಾದ ನಾನು ಏನು ಇಲ್ಲ. © URAIN  Urain Namah  06/07/18

* ಯಾವುದು ಸತ್ಯ?ಯಾವುದು ಸುಳ್ಳು? *

ನಾನು ಸತ್ಯ, ನಾವು ಸತ್ಯ ಬದಲಾಡದಿರುವದು, ಬದಲಾಗದಿರುವದು ಸತ್ಯ ನನ್ನದು ಸುಳ್ಳು, ನಮ್ಮದು ಸುಳ್ಳು ಬದಲಾಡುವದು, ಬದಲಾಗುವದು ಸುಳ್ಳು ನೋಡುಗ ನಾನು, ನೋಡಲ್ಪಡುವದು ನಾನಲ್ಲ ಸುಂದರ ಕುರೂಪ ಜಗತ್ತು ಬದಲಾದರೂ ಬಾಲ್ಯ ಯೌವ್ವನ ಮುಪ್ಪಿನ ಈ ದೇಹ ಬದಲಾದರೂ ನೋಡುಗ ನಾನು ಬದಲಾಗನು ಬದಲಾಗದ ನಾನು ನಾವು ಸತ್ಯ. ಬದಲಾಗುವ ನನ್ನದು, ನಮ್ಮದು ಸುಳ್ಳು ಕೇಳುಗ ನಾನು, ಕೇಳಲ್ಪಡುವದು ನಾನಲ್ಲ ಇಂಪು ಕರ್ಕಶ ಜಗಧ್ವನಿ ಬದಲಾದರೂ, ಬಾಲ್ಯ ಯೌವ್ವನ ಮುಪ್ಪಿನ ನನ್ನಧ್ವನಿ ಬದಲಾದರು ಕೇಳುಗ ನಾನು ಬದಲಾಗನು ಬದಲಾಗದ ನಾನು ನಾವು ಸತ್ಯ. ಬದಲಾಗುವ ನನ್ನದು, ನಮ್ಮದು ಸುಳ್ಳು ಮೂಸುವನು ನಾನು, ಮೂಸಲ್ಪಡುವದು ನಾನಲ್ಲ ಸುಗಂಧ ದುರ್ಗಂಧದ ಜಗದವಾಸನೆ ಬದಲಾದರೂ ಶುಚಿ ಅಶುಚಿ ಈ ದೇಹದವಾಸನೆ ಬದಲಾದರೂ, ವಾಸನೆ ಆಸ್ವಾದಿಸುವ ನಾನು ಬದಲಾಗನು ಬದಲಾಗದ ನಾನು ನಾವು ಸತ್ಯ. ಬದಲಾಗುವ ನನ್ನದು, ನಮ್ಮದು ಸುಳ್ಳು ರುಚಿಸುವವನು ನಾನು, ರುಚಿಗಳು ನಾನಲ್ಲ ಸೇವಿಸುವ ಆಹಾರದ ಸಿಹಿ ಕಹಿ ರುಚಿ ಬದಲಾದರೂ ರೋಗ ನೀರೋಗದಲ್ಲಿ, ಈ ನಾಲಿಗೆ ರುಚಿ ಬದಲಾದರೂ ರುಚಿ ನೋಡುವವ ನಾನು ಬದಲಾಗನು ಬದಲಾಗದ ನಾನು ನಾವು ಸತ್ಯ. ಬದಲಾಗುವ ನನ್ನದು, ನಮ್ಮದು ಸುಳ್ಳು ಸ್ಪರ್ಶನುಭವಿ ನಾನು, ಸ್ಪರ್ಶಿಸಲ್ಪಡುವದು ನಾನಲ್ಲ ಹಿತ ಅಹಿತ ಜಗದ ಸ್ಪರ್ಶ ಬದಲಾದರೂ ಬಾಲ್ಯ ಯೌವ್ವನ ಮುಪ್ಪಿನ ಈ ದೇಹ ಸ್ಪರ್ಶ ಬದಲಾದರೂ ಸ್ಪರ್ಶನುಭವಿ...

ಸಹನೆ, ಪ್ರಯತ್ನ

ಏನಾಗಲಿ, ಏನೇನು ಆಗಲಿ ಸಹನೆ, ಸತತ ಪ್ರಯತ್ನ ಹೊರತು ಬೇರೆ ನೇರ ಮಾರ್ಗ ಇಲ್ಲ ಬಾಳಲಿ ಸಹಿಸದಿದ್ದರೆ ಬಾಣಲೆಯಿಂದ ಬೆಂಕಿಗೆ ನಿರಂತರ ಯತ್ನವಿಲ್ಲದಿದ್ದರೆ ಎಂದು ಏಳೊದಿಲ್ಲ ಮೇಲೆ ಸಹನೆ ಸಲೀಸಲ್ಲ, ನಿರಂತರ ಪ್ರಯತ್ನ ಹೇಳಿದ ಹಾಗಲ್ಲ ಸಿಹಿ ಗಿಂತ ಕಹಿ ನೆನೆದರೆ ಸಹಿಸಲಾಗದು ಗೆಲವಿಗಿಂತ ಸೋಲನ್ನು ಚಿಂತಿಸಿದರೆ ಯತ್ನ ಸಾಗದು ಸಹಿಸಲು ಘೋರ ಕಲ್ಲಾಗಬೇಕು ನಿರಂತರ ಪ್ರಯತ್ನಕ್ಕೆ ಗಾಣದ ಎತ್ತಾಗಬೇಕು ದೇವ, ಪ್ರಾರಬ್ಧಕ್ಕೆ ಸಹನೆ ಹೊರತು ಅನ್ಯ ಮದ್ದಿಲ್ಲ ಪುರುಷಾರ್ಥಕ್ಕೆ ಸತತ ಯತ್ನದ ಹೊರತು ಅನ್ಯ ದಾರಿಯಿಲ್ಲ ನಾನು ಯಂತ್ರ, ಯಂತ್ರ ನಡೆಸುವ ಶಕ್ತಿ ನೀನು ಇಂದ್ರಿಯ ಗೋಚರ ನೀನೆ ಎಲ್ಲಾ ಇಂದ್ರಿಯ ಅಗೋಚರ ನಾನು ಏನು ಇಲ್ಲ. ದೇವ, ಏನಾಗಲಿ, ಏನೇನು ಆಗಲಿ ಕಷ್ಟಕ್ಕೆ ಕಲ್ಲಿನಂಥ ಸಹನೆ ನಾನಾಗಲಿ ನಿರಂತರ ಯತ್ನಕ್ಕೆ ಸದಾ ಪ್ರೇರಣೆ ನಿನಾಗಲಿ ನಿಮ್ಮ ಕೃಪೆ ಅರಿಯುವವನು ನಾನಾಗಲಿ ನನ್ನ ಎಲ್ಲ ಯಶಸ್ಸು, ನನ್ನ ಕೈ ಹಿಡಿದು ನಡೆಸುವ ನಿಮ್ಮದಾಗಲಿ U R ALL I AM NOT (© U R A I N ) 24/06/2018
ಅತಿಥಿ. ಅರಿತಿಲ್ಲ, ನಾನು ಅತಿಥಿ. ಅಂಟಿಕೊಂಡಿರುವೆ ಮಾಲೀಕನಾಗಿ. ಮರೆತಿರುವೆ ಎಲ್ಲವು ಇರುವದು ಗುತ್ತಿಗೆಗೆ, ಗುತ್ತಿಗೆ ಮುಗಿದಾಗ ಸ್ವತ್ತು ಮಾಲೀಕನಿಗೆ. ಹೀಗಾಗಿ ಸಿಲಿಕಿರುವೆ ಹೊರ ಬರಲು ಆಗದ ಚಕ್ರವ್ಯೂಹಕ್ಕೆ. U R ALL I AM NOT (© U R A I N ) 

* ಮನುಜ_ಮಾಡು_ನೀ_ಯೋಗ *

ಅಮೂಲ್ಯ ಮಾನವ ದೇಹ ದೇವರು ಕೊಡುಗೆಯಾಗಿ ಕೊಟ್ಟ ಅಮೂಲ್ಯತೆಯ ಹೆಚ್ಚಿಸುವದು ಬಿಡುವದು, ಮನುಷ್ಯನ ವಿವೇಚನೆಗೆ ಬಿಟ್ಟ. ಇದನ್ನರಿಯದೆ ಇಂದ್ರಿಯಗಳ ತೃಪ್ತಿಗಾಗಿ ದುಶ್ಚಟಗಳಿಗೆ ಬಲಿಯಾಗಿ ಭೋಗಿ ಕೆಟ್ಟ ಪುರುಷಾರ್ಥ ಮಾಡದೆ ಸೋಮಾರಿಯಾಗಿ ತಯ್ಯಾರಿಸುತಿಹನು ಯಾತನೆಯ ಚಟ್ಟ ಅರಿತು ಮಾಡಿದರೆ ಯೋಗ ಮುಂದೆ ಇರುವುದು ಲಾಭಗಳ ಬೆಟ್ಟ. ಸ್ವಲ್ಪ ನೋವನ್ನುಂಡು ಅಭ್ಯಸಿಸಿದರೆ ಮುಂದೆ ಕಾಯುತಿಹುದು ಯಶಸ್ಸಿನ ಅಟ್ಟ. ಮನುಜ ಮಾಡು ನೀ ಯೋಗ ಕಳೆಯಬೇಡ ಕಾಲ ಕೇವಲ ಭೋಗ ಹೊಡೆದೋಡಿಸುವೆ ಎಲ್ಲ ರೋಗ ಸಮೀಪಿಸುವದು ನಿನಗೆ ದೇವರ ಯೋಗ. 18/06/2018 © URAIN Urain Namah ಮುಂಚಿತವಾಗಿ ಎಲ್ಲರಿಗು ಅಂತಾರಾಷ್ಟ್ರೀಯ ಯೋಗ ದಿವಸದ "ಹಾರ್ದಿಕ ಶುಭ ಆಶಯಗಳು". WISH YOU HAPPY "INTERNATIONAL YOGA DAY" IN ADVANCE.