Posts

Showing posts from August, 2024
Image
 *ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ.*  (ಜೀವನದ ಒಂದು ಘಟನೆ ಆಧಾರಿತ ಲೇಖನ. ) *ಭರವಸೆ ಎನ್ನುವುದು ಜೀವನ.*  *ಭರವಸೆ, ಕಳೆದುಕೊಳ್ಳುವುದೇ ಸಾವು.*  *ಭರವಸೆ ಎನ್ನುವುದು ಭವಿಷ್ಯದ ಆಶಾ ಕಿರಣ*.  *ಭರವಸೆ ಕಳೆದುಕೊಳ್ಳುವುದು ದಾರಿ ಕಾಣದ ಕಗ್ಗತ್ತಲು.*  ನಾವು ರಾತ್ರಿ ಮಲಗುವುದು ಸಹ ನಾಳೆ ನಾನು ಜೀವಂತವಾಗಿ ಏಳುತ್ತೇನೆ, ಎನ್ನುವ ಭರವಸೆಯಿಂದಲೇ.  ನಾವು ಬಸನ್ನು ಹತ್ತುವುದು, ಟ್ರೈನನ್ನು ಹತ್ತುವುದು ಸಹ ಡ್ರೈವರ್ ನಮ್ಮನ್ನು ಸುರಕ್ಷಿತವಾಗಿ ನಮ್ಮ ನಿಲ್ದಾಣ ತಲುಪಿಸುತ್ತಾನೆ, ಎನ್ನುವ ಭರವಸೆಯಿಂದ. ಭರವಸೆ ಎಲ್ಲರ ಜೀವನದಲ್ಲಿ ಬಹು ದೊಡ್ಡ ಪಾತ್ರವನ್ನು ನಿಭಾಯಿಸುತ್ತದೆ. ಇಂತಹ ಭರವಸೆಯನ್ನು ನಾವು ಯಾವಾಗಲೂ ಕಳೆದುಕೊಳ್ಳಬಾರದು.  *ನಮ್ಮ ಮೇಲೆ ಬೇರೆ ಯಾರಾದರೂ ಒಳ್ಳೆಯ ಭರವಸೆ ಇಟ್ಟಿದ್ದಾರೆ, ಅಂದಾಗ ನಾವು ಎಂದೆಂದಿಗೂ ಅದನ್ನು ಕಳೆದುಕೊಳ್ಳಬಾರದು. ಅವರ ಭರವಸೆಗೆ ಮೋಸ ಮಾಡಬಾರದು.*  ಇದಕ್ಕೆ ಸಂಬಂಧಿಸಿದಂತೆ ನನ್ನ ಜೀವನದ ಎರಡು ದಶಕಗಳ ಹಿಂದಿನ ಶಾಲಾ ಜೀವನದ ಆ ಘಟನೆಯನ್ನು ನೆನಪಿಸಿಕೊಂಡಾಗ ಆ ಸಮಯ *"ಭರವಸೆಗೆ ಸಂಬಂಧಿಸಿದಂತೆ"* ಎಷ್ಟೊಂದು ಭಯಾನಕವಾಗಿತ್ತು ? ಎನಿಸುತ್ತದೆ.  ದೇವರು ನನ್ನನ್ನು ನನ್ನ ವ್ಯಕ್ತಿತ್ವದ ಕೊಲೆಯಿಂದ ರಕ್ಷಿಸಿದನಲ್ಲ, ಎಂದು ದೇವರ ಬಗ್ಗೆ ನನ್ನಿಂದ ಈಗಲೂ ಕೃತಜ್ಞತೆ ಹೊರ ಹೊಮ್ಮುತ್ತದೆ. ನಾನು ಆರನೇ ತರಗತಿಯಲ್ಲಿರುವಾಗ ನಮ್ಮ ಶಿಕ್ಷಕರು, ನಿ...
 ಯಾವುದರ ರಕ್ಷಣೆ ಈ ಸಮಯದ ಅವಶ್ಯಕತೆ ? ಈ ಸಮಯದ ಅವಶ್ಯಕತೆಯನ್ನು ರಕ್ಷಿಸಲು ಸಾಧ್ಯವೇ ? ಇಂದಿನ ನಮ್ಮ ದೇಶದ, ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧ, ಧಾರ್ಮಿಕ ಉನ್ಮಾದ, ಪ್ರಕೃತಿ ವಿಕೋಪ ಮುಂಬರುವ ಜಗತ್ತು ಹೇಗಿರಬಹುದು ? ಯಾವ ರೀತಿ ಇರಬಹುದು ? ಎನ್ನುವ ಬಗ್ಗೆ ಒಂದು ಸೂಕ್ಷ್ಮ ಚಿತ್ರಣ ಕೊಡುತ್ತಿದೆ. ಈ ಚಿತ್ರಣ ಬಹಳವೆಂದರೆ, ಬಹಳ ಭಯಾನಕವಾಗಿದೆ. ಇದು ಹಾಗೆಯೇ ಮುಂದುವರಿದಲ್ಲಿ ಇನ್ನೂ ಕೆಲವು ಶತಮಾನಗಳಲ್ಲಿ ಮನುಷ್ಯ ಸಂತತಿ ಭೂಮಿಯ ಮೇಲೆ ಉಳಿಯಬಹುದೇ ? ಎನ್ನುವ ಕುರಿತು ಸಂದೇಹ ವ್ಯಕ್ತವಾಗುತ್ತದೆ. ಇದಕ್ಕೆ ಪರಿಹಾರ ಏನು ? ಎನ್ನುವ ಕುರಿತು ಲೇಖನಗಳ ಮೂಲಕ ನನ್ನ  ವಿಚಾರಗಳನ್ನು ವ್ಯಕ್ತಪಡಿಸಿದ್ದೇನೆ. ರಕ್ಷಾ ಬಂಧನದ ಈ ಸಮಯ ವಿಷಯದ ಕುರಿತು ಮತ್ತೆ ಚರ್ಚಿಸಲು ಸುಸಮಯ ಎಂದು ಭಾವಿಸುತ್ತೇನೆ. ಇದು ಭೂಮಿಯ ಮೇಲಿರುವ ಧರ್ಮಗಳಿಗೆ ಅವು ಆರಂಭವಾದ ಸಮಯ ಇದೆ (ಜನಿಸಿದ ದಿನ). ಅಂದರೆ ಆಯಾ ಧರ್ಮದ ಆರಂಭದ ಸಮಯಕ್ಕೂ  ಮೊದಲು ಆ ಧರ್ಮಗಳು ಜಗತ್ತಿನಲ್ಲಿ ಇರಲಿಲ್ಲ.  ಆದರೆ ಹಿಂದೂ ಧರ್ಮಕ್ಕೆ ಯಾವುದೇ ಆರಂಭದ ಸಮಯವಿಲ್ಲ. ಇದರಿಂದ ತಿಳಿಯುವ ವಿಷಯವೇನೆಂದರೆ, ಈಗಿರುವ ಯಾವುದೇ ಧರ್ಮಗಳು ಇಲ್ಲದೆ ಇರುವಾಗಲೂ ಕೇವಲ ಹಿಂದೂ ಧರ್ಮ ಮಾತ್ರ ಇತ್ತು.  ಸಂಸ್ಕೃತದಲ್ಲಿ ಒಂದು ಹೇಳಿಕೆಯಿದೆ, ತೇನ ವಿನಾ ತೃಣಮಪಿ ಚಲತಿ. ಅಂದರೆ, ಆ ಭಗವಂತನ ಇಚ್ಛೆಯಿಲ್ಲದೆ ಒಂದು ಹುಲ್ಲು ಕಡ್ಡಿ ಸಹ ಅಲುಗಾಡುವುದಿಲ್ಲ. ಹಾಗಾದರೆ ವಿಶ್ವದ ಬಹು...