Posts

Showing posts from December, 2024
Image
  *ಒಂದು ಚಿಕ್ಕ ಜೀವ, ಅದೆಷ್ಟು ಉನ್ನತ ಕಾರ್ಯ ?* ಮಹಾಭಾರತದಲ್ಲಿ ಶ್ರೀಕೃಷ್ಣನ ನಂತರ ಶಕ್ತಿಶಾಲಿ ಯಾರಾಗಿದ್ದರೂ ? ಎಂದು ಕೇಳಿದರೆ ಆಗ ಬರುವ ಉತ್ತರವೇನು ?  ಆ ಉತ್ತರವೇ ಬ್ರಹ್ಮಚಾರಿ ಭೀಷ್ಮ. ಅರ್ಜುನ, ಕರ್ಣ ಮಹಾಭಾರತದ ಇನ್ನಿತರ ಯಾರು ಸಹ ಭೀಷ್ಮನ ಶಕ್ತಿಗೆ ಸಮನಾಗಿ ಇರಲಿಲ್ಲ. ಅಷ್ಟೊಂದು ಸಾಮರ್ಥ್ಯ, ಶಕ್ತಿ ಭೀಷ್ಮಾಚಾರ್ಯರಲ್ಲಿತ್ತು. ಯಾರಲ್ಲಿ ಶಕ್ತಿ, ಶ್ರೀಮಂತಿಕೆ, ಅಧಿಕಾರ, ಜ್ಞಾನ ಇರುತ್ತದೆ, ಅವರಲ್ಲಿ ಸುರಕ್ಷತೆಯ ಭಾವ ಇರುತ್ತದೆ. ನಿರ್ಭಯ ಇರುತ್ತದೆ. ಅಂತಹವರು ಯಾರ ಮೇಲೆ ಬೇಕಾದರೂ ಪ್ರಭಾವ ಬೀರಬಹುದು. ತಮಗೆ ಬೇಕಾದ ಕೆಲಸ ಮಾಡಿಕೊಳ್ಳಬಹುದು. ಅಂತಹವರು ಪೂರ್ಣ ಅಲ್ಲದಿದ್ದರೂ ಬಹಳಷ್ಟು ಸ್ವಾತಂತ್ರ್ಯ ಅನುಭವಿಸುತ್ತಿರುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ *ನಮ್ಮಲ್ಲಿ ಬಹಳಷ್ಟು ಜನರಿಗೆ ನಾವು ಸಹ ಶಕ್ತಿಶಾಲಿಯಾಗಬೇಕು, ಶ್ರೀಮಂತರಾಗಬೇಕು, ಅಧಿಕಾರವನ್ನು ಹೊಂದಬೇಕು, ಜ್ಞಾನಿಗಳಾಗಬೇಕು ಎನ್ನುವ ಆಸೆ, ವಿಚಾರ. ಇದಕ್ಕೆ ಸಂಬಂಧಿಸಿದ ಪ್ರಯತ್ನ ಸಹ ನಮ್ಮಲ್ಲಿ ಇರುತ್ತದೆ*.  ಆದರೆ *ಶಕ್ತಿ ಹೊಂದುವುದು, ಶ್ರೀಮಂತಿಕೆ ಹೊಂದುವುದು, ಅಧಿಕಾರ ಹೊಂದುವುದು, ಜ್ಞಾನ ಹೊಂದುವುದು ಕೇವಲ ನಮ್ಮ ಸಲುವಾಗಿ ಮಾತ್ರವೇ ?* ನಮ್ಮ ಸಲುವಾಗಿ ಇವುಗಳನ್ನು ಪಡೆಯಬೇಕು ಎಂದು ನಾವು *ಇವುಗಳನ್ನು ಪಡೆದರೂ, ನಮಗೆ ಗೊತ್ತಿಲ್ಲದೆ ಇವುಗಳಿಗೆ ಸಂಬಂಧಿಸಿದ ಒಂದು ಜವಾಬ್ದಾರಿ ತನ್ನಿಂದ ತಾನೇ ನಮಗೆ ಬರುತ್ತದೆ*.  ಈ ವಿಷಯವನ್ನು ಯಾರು ತಿಳಿದುಕ...
 ಧನ್ಯವಾದಗಳು ಒಬ್ಬ ರಾಜನಿಗೆ ಕೆಟ್ಟದ್ದು ಆದಾಗ ಅವನ ಮಂತ್ರಿ ದುಃಖ ಪಡಬೇಕೇ ? ಸಂತೋಷ ಪಡಬೇಕೇ? ರಾಜನಿಗೆ ತೊಂದರೆ ಆದಾಗ ಸಂತೋಷ ಪಡುತ್ತಾನೆ.  ಮುಂದೇನಾಯಿತು.... ರಾಜ ಮಂತ್ರಿಯ ಪುಟ್ಟ ಕಥೆ ಒಬ್ಬ ರಾಜನ ಉಗುರುಗಳನ್ನು ಕ್ಷೌರಿಕ ಕತ್ತರಿಸುವಾಗ ಕತ್ತಿಯು ರಾಜನ ಬೆರಳಿನ ಸ್ವಲ್ಪ ಭಾಗವನ್ನು ಕತ್ತರಿಸಿ ಬಿಡುತ್ತದೆ.  ಆಗ ಅಲ್ಲಿಯೇ ಇರುವ ಮಂತ್ರಿ ಇದ್ದಕ್ಕಿದ್ದಂತೆ ಖುಷಿಯಿಂದ, ದೇವರೇ ! ಬಹಳ ಒಳ್ಳೆಯದಾಯಿತು. ನಿಮಗೆ ಅನಂತ ಧನ್ಯವಾದಗಳು ಎನ್ನುತ್ತಾನೆ. (ಇಂತಹ ಸ್ಥಿತಿಯಲ್ಲಿ ರಾಜನ ಸ್ಥಾನದಲ್ಲಿ ನಾವು ನೀವು ಇದ್ದರೆ ಏನು ಮಾಡುತ್ತಿದ್ದೆವು?) ನಿರೀಕ್ಷೆಯಂತೆ ರಾಜ ಮಂತ್ರಿಯನ್ನು ರಾಜ್ಯದಿಂದ ಗಡಿಪಾರು ಮಾಡುತ್ತಾನೆ. ಸ್ವಲ್ಪ ದಿನಗಳ ನಂತರ ರಾಜ ಬೇಟೆಯಾಡಲು ಸೈನಿಕರೊಂದಿಗೆ ಕಾಡಿಗೆ ಹೋಗುತ್ತಾನೆ. ಆಗ ದಟ್ಟವಾದ ಕಾಡಿನಲ್ಲಿ ಸೈನಿಕರು ರಾಜ ಬೇರ್ಪಟ್ಟು, ರಾಜ ಒಂಟಿಯಾಗುತ್ತಾನೆ.  ಆಗ ರಾಜ, ದೇವಿಯ ಆರಾಧನೆ ಮಾಡುತ್ತಿರುವ ಕಾಡು ಜನರಿಗೆ ಸಿಗುತ್ತಾನೆ. ಅವರು ರಾಜನನ್ನು ಕಂಡು ದೇವಿಯ ಬಲಿಗೆ ಒಳ್ಳೆಯ ಬೇಟೆಯೇ ಸಿಕ್ಕಿತ್ತು, ಎಂದು ಖುಷಿಪಡುತ್ತಾರೆ. ರಾಜನನ್ನು ಬಲಿ ಕೊಡಲು ಸಿದ್ಧಪಡಿಸಿ, ಕೊನೆಯದಾಗಿ ಆತನ ದೇಹದಲ್ಲಿ ಯಾವುದೇ ನ್ಯೂನತೆ ಇಲ್ಲ, ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಇಡೀ ದೇಹವನ್ನು ನೋಡಿದಾಗ, ಬೆರಳಿನ ಭಾಗ ಕತ್ತರಿಸಿರುವುದು ನೋಡಿ ರಾಜ ಬಲಿಗೆ ಯೋಗ್ಯನಲ್ಲ ಎಂದು ತಿಳಿದು ಆತನನ್ನು ಬಿಟ್ಟುಬಿಡುತ್ತಾರೆ. ಆಗ ರಾಜ...
Image
ರಥ ಸಂದೇಶ   ಮುಖ ಪುಸ್ತಕದಲ್ಲಿ (Facebook) ನಿಜವಾದ ಜ್ಞಾನವನ್ನು ಪಡೆಯಬೇಕು ಎನ್ನುವ ಆಸಕ್ತಿ ಇರುವ ಜನರು ಬಹಳ ಕಡಿಮೆ. ಆದರೂ ಆಸಕ್ತಿ ಇರುವ ಕೆಲವರಿಗಾದರೂ ಸತ್ಯ  ಜ್ಞಾನದ ಸಂಗ ಸಿಗಲಿ ಎನ್ನುವ  ಉದ್ದೇಶ್ಯದಿಂದ ಈ ಚಿತ್ರವನ್ನು ಪೋಸ್ಟ ಮಾಡಿದ್ದೆ. ಇದಕ್ಕೆ ಮೆಚ್ಚುಗೆಗಳನ್ನು ನೀಡಿದ ಜ್ಞಾನಾಸಕ್ತರಿಗೂ ಹಾಗು ತಮ್ಮ ಪ್ರತಿಕ್ರಿಯೆ ಮೂಲಕ ಚಿತ್ರದ ವಿಷಯ "ಏನು ಇರಬಹುದು" ಎಂದು  ತಿಳಿಸಲು ಪ್ರಯತ್ನಿಸಿದವರಿಗೂ ಅನಂತ ಧನ್ಯವಾದಗಳು. ನಾನು ನಮ್ಮ ಸಂಸ್ಕಾರ ಕೇಂದ್ರದ ಮಕ್ಕಳಿಗೆ ಯಮನು ನಚಿಕೇತನಿಗೆ ಕೊಟ್ಟ ಜ್ಞಾನವನ್ನು ತಿಳಿಸಿ ಹೇಳುತ್ತಿದ್ದೆ. ಆಗ ನನಗೆ ಬಂದ ಯೋಚನೆಯೆಂದರೆ ಮುಖ ಪುಸ್ತಕದ Facebook  ಜ್ಞಾನಾಸಕ್ತರಿಗೂ ಈ ಜ್ಞಾನ ಸಿಗಲಿ ಎನ್ನುವ ವಿಚಾರ. ಆದ ಕಾರಣ ಈ ಚಿತ್ರವನ್ನು ನಾನು ಇಲ್ಲಿ ಪೋಸ್ಟ ಮಾಡಿದೆ. ಈಗ ಈ ಚಿತ್ರದ ಕುರಿತು ಹೇಳುತ್ತೇನೆ. ಚಿತ್ರದಲ್ಲಿ ಒಂದು ರಥ ಇದೆ. ಐದು ಕುದುರೆಗಳಿವೆ. ರಥದ ಯಜಮಾನ ರಥದಲ್ಲಿ ಕುಳಿತಿದ್ದಾನೆ. ಸಾರಥಿ ರಥ ಓಡಿಸುತ್ತಿದ್ದಾನೆ. ಆತನ ಕೈ ಯಲ್ಲಿ ಐದು ಕುದುರೆಗಳ ಲಗಾಮುಗಳಿವೆ. ರಥದ ಆಕಡೆ ಈಕಡೆ ಕುದುರೆಗೆ ಪ್ರಿಯವಾದ ಹಸಿರು ಮರಗಳಿವೆ.  ಒಂದು ವೇಳೆ ಸಾರಥಿ ಲಗಾಮು ಸರಿಯಾಗಿ ಹಿಡಿಯದಿದ್ದರೆ, ಕುದುರೆಗಳು ತಮಗೆ ಪ್ರಿಯವಾದ ಹಸಿರನ್ನು ತಿನ್ನಲು ಹೋಗುತ್ತವೆ. ಆಗ ರಥ ಮುರಿದು ಬೀಳುತ್ತದೆ. ರಥದಲ್ಲಿ ಕುಳಿತಿರುವ ಯಜಮಾನ ಅಪಾಯಕ್ಕೊಳಗಾಗುತ್ತಾನೆ. ಆಗ  ಅವನ ಪ್ರಯಾಣ ...