*ಪ್ರತಿಯೊಬ್ಬ ವ್ಯಕ್ತಿಗೂ ಇರುವ ಋಣದ ಕರ್ತವ್ಯ* ಒಬ್ಬ ವ್ಯಕ್ತಿಗೆ ಅನೇಕ ರೀತಿಯ ಋಣ ಕರ್ತವ್ಯಗಳಿವೆ. ಅವುಗಳಲ್ಲಿ ಈ ಸಂದರ್ಭದಲ್ಲಿ ಮಾಡಬೇಕಿರುವುದು ಪಿತೃ ಋಣ ತೀರಿಸುವ ಕರ್ತವ್ಯ. *ಯಾರು ಪಿತೃ ?* ಈ ಸಂದರ್ಭಕ್ಕೆ ಹೇಳುವುದಾದರೆ, ಅಗಲಿ ಹೋದ ನಮ್ಮ ವಂಶ ವೃಕ್ಷ ದ ಹಿರಿಯರು ಪಿತೃಗಳು. ಅಗಲಿ ಹೋದ ಸಹೋದರ ಸಹೋದರಿ ಆಗಿರಬಹುದು. ನಮ್ಮ ತಂದೆ ತಾಯಿ ಇಬ್ಬರ ಕಡೆಯಿಂದ ಇರುವ ನಮ್ಮ ಅಜ್ಜ ಅಜ್ಜಿ ಆಗಿರಬಹುದು. ಇವರನ್ನು ನೆನೆದು ಅವರ ಬಗ್ಗೆ ಸದ್ಭಾವನೆ ಹೊಂದಿ ಅವರ ಸಲುವಾಗಿ ಮಾಡುವ ಕಾರ್ಯವೇ ಪಿತೃ ಕಾರ್ಯ. ಇಂದಿನ ದಿನಗಳಲ್ಲಿ ಅವರು ಮರಣಿಸಿದ ದಿನದಲ್ಲಿ ಅವರನ್ನು ಪುಣ್ಯ ತಿಥಿಯ ಹೆಸರಿನಲ್ಲಿ ನೆನೆಯುವ ಕೆಲಸ ಮಾಡಲಾಗುತ್ತದೆ. ಆದರೆ ಸಾಮೂಹಿಕವಾಗಿ ಅಗಲಿದ ಎಲ್ಲಾ ಹಿರಿಯರನ್ನು ನೆನೆಯುವ ದಿನಗಳೇ ಈಗ ನಡೆಯುತ್ತಿರುವ ಪಿತೃ ಪಕ್ಷ. ಇದು ಬರುವ *21ನೇ ತಾರೀಖು ರವಿವಾರ ಮಹಾಲಯ ಅಮಾವಾಸ್ಯೆ ದಿನದವರೆಗೆ ಇದೆ. ಈ ದಿನವೇ ಸೂರ್ಯಗ್ರಹಣ ವು ಸಹ ಇದೆ*. *ಅಗಲಿದ ನಮ್ಮ ಹಿರಿಯರನ್ನು ಏಕೆ ನೆನೆಯಬೇಕು ?* ಇದಕ್ಕೆ ಹಿರಿಯರು ಹೇಳುವ ಮಾತೆಂದರೆ, ಪಿತೃಗಳ ಶ್ರಾಧ್ಧ ಮಾಡುವುದರಿಂದ ಅವರು ಸಂತೃಪ್ತರಾಗಿ ಹಿರಿಯರು ನಮ್ಮನ್ನು ಆಶೀರ್ವದಿಸುತ್ತಾರೆ. ಇದರಿಂದ ನಮ್ಮ ಮನೆಯ ಕಲಹಗಳು ದೂರವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಅವರ ಆಶೀರ್ವಾದದಿಂದ ನಮ್ಮ ವಂಶ ಮುಂದುವರಿಯುತ್ತದೆ. ಶ್ರಾದ್ಧ ಮಾಡದಿದ್ದರೆ ಅವರು ನಿರಾಶರ...
Posts
Showing posts from 2025
- Get link
- X
- Other Apps
ಸಾಧುಗಳನ್ನು ಸಾಯಿಸಿದ ಪಾಪಕರ್ಮದ ಫಲ ಯಾರಿಗೆ ? ಒಂದು ಕಥೆ. ಬಹಳ ಪುರಾತನ ಕಾಲದಲ್ಲಿ ಒಂದು ದಿನ, ಒಂದು ಊರಿಗೆ ಸಾಧುಗಳ ದೊಡ್ಡ ಗುಂಪು ಬಂದಿತ್ತು. ಆ ಊರಿನ ಶಾಸಕ, ಅವರಿಗೆ ಸರಿಯಾದ ಆತಿಥ್ಯ ನೀಡಿ ಅವರಿಂದ ಆಶಿರ್ವಾದ ಪಡೆಯಬೇಕೆಂದು ತನ್ನ ಅತಿಥಿ ಗೃಹದಲ್ಲಿ ಆಶ್ರಯ ನೀಡಿದ. ಮರುದಿನ ಸಿಹಿಯಾದ ಪಾಯಸವನ್ನು ಅವರಿಗೆ ಊಟದಲ್ಲಿ ನೀಡಿ ಅವರನ್ನು ಖುಷಿಪಡಿಸಬೇಕು ಎನ್ನುವ ಉದ್ದೇಶದಿಂದ ತನ್ನ ಸೇವಕನಿಗೆ ಊರ ಹೊರಗಿರುವ ದೂರದ ಗೋ ಶಾಲೆಯಿಂದ ಹಾಲನ್ನು ತರಲು ಹೇಳಿದ. ಸೇವಕ ದೂರದ ಗೋ ಶಾಲೆಗೆ ನಡೆದುಕೊಂಡು ಹೋಗಿ ಹಾಲನ್ನು ಒಂದು ಕೊಡದಲ್ಲಿ ಹೊತ್ತುಕೊಂಡು ಬರುತ್ತಿದ್ದ. ಬರುವಾಗ ದಾರಿ ಮಧ್ಯೆ ಆಯಾಸವಾಯಿತು. ದಣಿವಾರಿಸಿಕೊಳ್ಳಲು ಒಂದು ಗಿಡದ ಕೆಳಗೆ ಕೊಡುವನ್ನಿಟ್ಟು ವಿಶ್ರಾಂತಿ ಮಾಡುತ್ತಿದ್ದ, ಆತನಿಗೆ ಹಾಗೆಯೇ ಸ್ವಲ್ಪ ನಿದ್ರೆ ಆವರಿಸಿತು. ಆ ಸಮಯದಲ್ಲಿಯೇ ಒಂದು ಹದ್ದು ಹಾವನ್ನು ಹಿಡಿದುಕೊಂಡು ಹಾರುತ್ತಾ ಬಂದು ಆ ಗಿಡದ ಮೇಲೆ ಕುಳಿತು ಅದನ್ನು ತಿನ್ನತೊಡಗಿತು. ಆ ಸಮಯದಲ್ಲಿ ಹಾವಿನ ವಿಷದ ಹನಿಗಳು ಆ ಕೊಡದಲ್ಲಿ ಬಿದ್ದವು. ಸ್ವಲ್ಪ ಸಮಯದ ನಂತರ ಸೇವಕನಿಗೆ ಎಚ್ಚರವಾಯಿತು. ನಂತರ ಆ ಹಾಲಿನ ಕೊಡವನ್ನು ಹೊತ್ತುಕೊಂಡು ಶಾಸಕನ ಮನೆಗೆ ಬಂದು ಹಾಲಿನ ಕೊಡವನ್ನು ಅಡುಗೆ ಮಾಡುವವರಿಗೆ ನೀಡಿದ. ಅಡುಗೆ ಮಾಡುವವರು ಮರುದಿನ ಆ ಹಾಲನ್ನೆ ಬಳಸಿ ಪಾಯಸವನ್ನು ಮಾಡಿದರು. ಆ ವಿಷದ ಹಾಲಿನ ಪಾಯ...
ಅಂಧ ಹೇಳವರು
- Get link
- X
- Other Apps
(ಶ್ರೀ ಗುರುದೇವರ ಪದತಲದಲ್ಲಿ ಸಾಷ್ಟಾಂಗ ನಮನ) *** ♥♥♥ ಅಂಧ ಹೇಳವರು ♥♥♥*** ಕಡು ಕಷ್ಟ, ಬಲು ವಿಪರೀತ್ ಕೊನೆಗೂ ತಲುಪಲಾರೆಯೋ, ಅಂಧನೆ ನೀ ತಲುಪಲಾರೆಯೋ ನೀ ತಲುಪಲಾರೆ, ದಿವ್ಯ ಕ್ಷೇತ್ರ, ದೇವ ಕ್ಷೇತ್ರ ಕೊನೆಗೂ ಸೇರಲಾರೆ ನೀನು, ನಮ್ಮ ದಿವ್ಯ ಮೂಲ ಮನೆ ಅಂಧನೆ ನಿಜ ನಿನ್ನ ಕಾಲಲ್ಲಿಹುದು ಶಕ್ತಿ ಶಕ್ತಿಯಿಂದ ನೀನು ಕರ್ಮಠ ನೀನು ಭಾವಿಸಿರುವೇ, ಪದೇ, ಪದೇ ನಡೆದು ನಡೆದು ದಾರಿ ಕ್ರಮಿಸಿ ತಲುಪುವೆ ದಿವ್ಯ ಕ್ಷೇತ್ರ, ದೇವ ಕ್ಷೇತ್ರ, ಸೇರುವೆ ನಮ್ಮ ದಿವ್ಯ...
- Get link
- X
- Other Apps
ನಾಗರ ಪಂಚಮಿಯ ನಿಗೂಢ ರಹಸ್ಯ. ಪ್ರಶ್ನೆ: ಜಗತ್ತಿನಲ್ಲಿ ಯಾವುದು ಅತಿ ಹೆಚ್ಚು ದೂರ ? ಯಾವುದು ಹೆಚ್ಚು ದೂರ ಎನ್ನುವ ಪ್ರಶ್ನೆ ಯಾರನ್ನಾದರೂ ಕೇಳಿದಾಗ, ಅನೇಕ ಜನರು ಅನೇಕ ಉತ್ತರಗಳನ್ನು ಕೊಡಬಹುದು. ಕೆಲವರಿಗೆ ಬೆಂಗಳೂರು ದೂರ ಆಗಿರಬಹುದು. ಕೆಲವರಿಗೆ ದೆಹಲಿ ದೂರ ಆಗಿರುತ್ತದೆ. ಕೆಲವರು ಇಂಗ್ಲೇಂಡ ದೂರ ಎನ್ನಬಹುದು. ಕೆಲವರು ಅಮೇರಿಕಾ ದೂರ ಎನ್ನಬಹುದು. ಹೀಗೆ ಅನೇಕರು ಅನೇಕ ರೀತಿಯಲ್ಲಿ ದೂರದ ಸ್ಥಳಗಳನ್ನು ಹೇಳಬಹುದು. ಆದರೆ (ನಮ್ಮ ಚೈತನ್ಯ, ಪ್ರಜ್ಞೆಗೆ) ಇವೆಲ್ಲಕ್ಕಿಂತಲೂ ದೂರವಾಗಿ ಇರುವುದು ಕೇವಲ ನಾಲ್ಕು, ಐದು ಫೀಟ್ ಉದ್ದ ಇರುವ ಒಂದು ಸ್ಥಳ. ಇದು ವಿಚಿತ್ರವಾದರು, ಆಶ್ಚರ್ಯಕರವಾದರೂ ಇದೆ ಸತ್ಯ. ಜಗತ್ತಿನಲ್ಲಿ ಪ್ರಯಾಣಕ್ಕೆ ಅತಿ ಹೆಚ್ಚು ಸಮಯ ತೆಗೆದುಕೊಳ್ಳುವ ದೂರದ ಸ್ಥಳ ಎಂದರೆ ಇದೆ ಆಗಿದೆ. ಕೆಲವು ಸ್ಥಳಗಳಿಗೆ ತಲುಪಲು ಅನೇಕ ಗಂಟೆಗಳು ಬೇಕಾಗಬಹುದು. ಇನ್ನೂ ಕೆಲವು ಸ್ಥಳಗಳನ್ನು ತಲುಪಲು ದಿನಗಳು ಬೇಕಾಗಬಹುದು. ಕೆಲವಕ್ಕೆ ತಿಂಗಳು ವರ್ಷಗಳು ಬೇಕಾಗಬಹುದು. ಆದರೆ ಈಗ ಹೇಳುತ್ತಿರುವ ಸ್ಥಳಕ್ಕೆ ತಲುಪಲು ಅನೇಕ ಜನ್ಮ ಜನ್ಮಗಳೇ ಬೇಕಾಗುತ್ತದೆ. ಅಷ್ಟೊಂದು ಸಮಯ ಬೇಕು, ಆದರೆ ಅದು ಇರುವ ಉದ್ದ ಬಹಳ ಕಡಿಮೆ. ಇದೇನು ವಿಚಿತ್ರ. ಅದು ಯಾವುದು ? ಅದು ಎಲ್ಲಿದೆ ? ಎನ್ನುವ ಕುತೂಹಲ ನಮ್ಮಲ್ಲಿ ಮೂಡಬಹುದು. ಅದು ಎಲ್ಲಿಯೋ ಬೇರೆ ಕಡೆ ಇಲ್ಲ. ನಮ್ಮಲ್ಲಿಯೇ ಇದೆ. ಅದುವೇ ಇಂದಿನ ನಾಗರ ...
- Get link
- X
- Other Apps
*ತನ್ನಂತೆ ಪರರ ಬಗೆದರೆ ಕೈಲಾಸ ಬಿನ್ನಾಣವಿಕ್ಕು ಸರ್ವಜ್ಞ - ಈ ಮಾತು ಎಷ್ಟು ಸರಿ ?* ಪರರನ್ನು ಸಹ ತನ್ನಂತೆ ಕಾಣುವುದು ಸರಿಯೇ? ಅಥವಾ *ಪರರನ್ನು ತನಗಿಂತ ಚಿಕ್ಕದಾಗಿ ಕಾಣುವುದು ಸರಿಯೇ ?* ತನಗೆ ಯಾವ ಮಾತುಗಳಿಂದ ನೋವಾಗುತ್ತದೆ ? *ಅಂತಹ ಮಾತುಗಳನ್ನು ಪರರು ತನಗೆ ಮಾತಾಡಬಾರದು. ಆದರೆ ತಾನು ಬೇರೆಯವರಿಗೆ ಮಾತನಾಡಿದರೆ ತಪ್ಪಿಲ್ಲ.* ಪರರು ತನಗೆ ಯಾವ ರೀತಿ ನಡೆದುಕೊಂಡರೆ ತನಗೆ ಅಪಮಾನವಾಗುತ್ತದೆ ? *ಅಂತಹ ವ್ಯವಹಾರವನ್ನು ಬೇರೆಯವರು ತನ್ನ ಜೊತೆ ಮಾಡಬಾರದು. ಆದರೆ ತಾನು ಬೇರೆಯವರೊಂದಿಗೆ ಮಾಡಿದರೆ ತಪ್ಪೇನಿಲ್ಲ.* ಈ ರೀತಿಯ ಮನುಷ್ಯನ ವ್ಯವಹಾರವನ್ನು ಕಂಡೆ ಸರ್ವಜ್ಞ ಮೇಲಿನ ಮಾತನ್ನು ಹೇಳಿದ್ದಾರೆ. ಪರರನ್ನು ಸಹ ತನ್ನಂತೆ ಕಾಣಬೇಕು. ಅವರು ಯಾರೇ ಇರಲಿ. ಯಾವುದೇ ಮಟ್ಟದಲ್ಲಿರಲಿ. ನಮ್ಮಂತೆ ಪರರನ್ನು ಕಂಡಾಗ ಆ ದೇವರಿಗೆ ನಮ್ಮ ನಡವಳಿಕೆ ಪ್ರಿಯವಾಗುತ್ತದೆ. ಒಂದು ಆತ್ಮದ ಜೀವನ ಕಾಲದಲ್ಲಿ ಅಥವಾ ಒಬ್ಬ ವ್ಯಕ್ತಿಯ ಜೀವನಕಾಲದಲ್ಲಿ *ವಿರುದ್ಧ ದಿಕ್ಕಿನ ಪರಿಸ್ಥಿತಿಗಳು ಬರುತ್ತವೆ*. ಉದಾಹರಣೆಗೆ. ಒಬ್ಬ ವ್ಯಕ್ತಿ ಈ ಜನ್ಮದಲ್ಲಿ ಗಂಡಾಗಿ ಹುಟ್ಟಿದರೆ ಇನ್ನೊಂದು ಜನ್ಮದಲ್ಲಿ ಹೆಣ್ಣಾಗಿ ಹುಟ್ಟಬಹುದು. ಅಥವಾ ಒಂದು ಜೀವನಕಾಲದಲ್ಲಿಯೇ ಒಬ್ಬ ವ್ಯಕ್ತಿಗೆ ಯಜಮಾನನಂತಹ, ಶ್ರೀಮಂತನಂತಹ, ಅಥವಾ ಯುವಕನಂತಹ ಬಲಾಡ್ಯ ಪರಿಸ್ಥಿತಿ ಇರುತ್ತದೆ. ಇನ್ನೊಮ್ಮೆ ಅದೇ ವ್ಯಕ್ತಿಯ ಜೀವನದಲ್ಲಿ ಸೇವಕನಂತಹ, ಬಡವನಂತಹ, ಮುಪ್ಪಿನಂತಹ ದೌರ...
- Get link
- X
- Other Apps
ಸರ್ವೇ ಪ್ರದೀಪಾ - ಭಾಗ (1) ಈ ಲೇಖನದ ಆರಂಭದಲ್ಲಿ ಕೆಲವು ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಬರುವ ನಿಮ್ಮ ಉತ್ತರವನ್ನು ಲೇಖನದ ಕೊನೆಗೆ ವಿಮರ್ಶೆ ಮಾಡಿ. ನಿಮ್ಮಲ್ಲಿ ಈಗ ಯಾವ ಇಚ್ಛೆಯಿದೆ ? ಯಾವ ಬಯಕೆಯಿದೆ ? ಯಾವ ಯೋಚನೆಯಿದೆ ? ಯಾವ ನಡವಳಿಕೆಯಿದೆ ? ಯಾವ ಹವ್ಯಾಸಯಿದೆ ? ಯಾವ ಚಟವಿದೆ ? ನೀವು ಹೇಗೆ ? ನಿಮ್ಮ ವ್ಯಕ್ತಿತ್ವ ಹೇಗೆ ? ಇವುಗಳು ನಮ್ಮ ಹುಟ್ಟಿನಿಂದಲೇ ಬಂದಿತ್ತೆ ? ಅಥವಾ ಒಂದು ಸಮಯದ ನಂತರ ? ಹುಟ್ಟಿದ ಒಂದು ಸಮಯದ ನಂತರ ಬಂದರೆ ಇವು ಯಾವಾಗ ಆರಂಭವಾದವು ? *ಸರ್ವೆ ಪ್ರದೀಪಾ* ಎಂದರೆ ಏನು ಎನ್ನುವುದನ್ನು ತಿಳಿದುಕೊಳ್ಳುವ ಮುಂಚೆ ಒಂದು ಉದಾಹರಣೆಯನ್ನು ನೋಡೋಣ. ಇದರಿಂದ *ಸರ್ವೆ ಪ್ರದೀಪಾ* ಸ್ಪಷ್ಟವಾಗಿ ಸರಿಯಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ. ನಾವು ಜೀವಂತವಾಗಿರಲು ಅನೇಕ ರೀತಿಯ ಆಹಾರವನ್ನು ಸೇವಿಸುತ್ತೇವೆ. ನಾವು ನಾಲಿಗೆಯ ರುಚಿಗೋಸ್ಕರವಾಗಲಿ ಅಥವಾ ಹೊಟ್ಟೆಯ ಹಸಿವೆಗೋಸ್ಕರವಾಗಲಿ ಯಾವುದೇ ಉದ್ದೇಶದಿಂದ ನಾವು ಸೇವಿಸುವ ಆಹಾರ, ನಮ್ಮ ದೇಹವನ್ನು ನಿರ್ಧಾರ ಮಾಡುತ್ತದೆ. ನಾವು ಸೇವಿಸುವ ಆಹಾರ ಕೊನೆಗೆ ನಮ್ಮ ದೇಹವೇ ಆಗಿ ಪರಿವರ್ತನೆಯಾಗುತ್ತದೆ. ಬಾಯಿಯಿಂದ ಯಾವುದೇ ಆಹಾರ ಹೊಟ್ಟೆಯಲ್ಲಿ ಹೋದಾಗ, ಕಾಲಾನಂತರದಲ್ಲಿ ಅದು ದೇಹದ ಒಂದು ಭಾಗವೇ ಆಗುತ್ತದೆ. ಆ ದೇಹವೇ ಆರೋಗ್ಯ, ಅನಾರೋಗ್ಯವನ್ನು ನೀಡಿ ನಮ್ಮನ್ನು ...
- Get link
- X
- Other Apps
ಪರಮವಂದನೆ ಶ್ಲೋಕ -1 ಕಣ್ಣು ಹುಡುಕುವುದು ಏನು ? ಕಿವಿ ಬಯಸುವುದು ಏನು? ನಾಲಿಗೆ ಇಚ್ಛಿಸುವುದು ಏನು ? ಚರ್ಮ ಬಯಸುವುದು ಏನು? ಮೂಗು ಹುಡುಕುವುದು ಏನು? ಮನಸ್ಸು ಇಷ್ಟಪಡುವುದು ಏನು ? ಸುಂದರ ದೃಶ್ಯಗಳ ಸಂತೋಷ ಕಣ್ಣು ಬಯಸುವುದು. ಸುಮಧುರ ರಾಗಗಳ ಆನಂದ ಕಿವಿ ಬಯಸುವುದು. ರುಚಿ ರುಚಿಯಾದ ಆಹಾರ ತಿನಿಸುಗಳನ್ನು ನಾಲಿಗೆ ಬಯಸುವುದು. ಸುಗಂಧದ ವಾಸನೆ ಮೂಗು ಬಯಸುವುದು. ಮೃದುವಾದ ಮೆತ್ತನೆಯ ಸ್ಪರ್ಶ ಚರ್ಮ ಬಯಸುವುದು. ತನ್ನ ಅಹಂಕಾರವನ್ನು ಪುಷ್ಟಿ ಗೊಳಿಸುವ ಹೊಗಳಿಕೆ, ಸತ್ಕಾರ, ಗೌರವ, ಮರ್ಯಾದೆಗಳನ್ನು ಮನಸ್ಸು ಬಯಸುವುದು. ನಮ್ಮ ನಿತ್ಯ ಕ್ರಿಯೆ. ಹೋರಾಟ, ಹಾರಾಟ, ಪ್ರಯತ್ನ ಎಲ್ಲವೂ ಇವುಗಳ ಹಿಂದೆಯೇ ಬಿದ್ದಿರುತ್ತದೆ. ಮಗು ಇರುವಾಗಿನಿಂದ ಮುದುಕನಾಗುವವರೆಗೂ, ಹುಟ್ಟಿನಿಂದ ಸಾಯುವವರೆಗೆ ಇವುಗಳ ಚಿಂತೆಯೇ ನಮ್ಮನ್ನು ಕಾಡುತ್ತಿರುತ್ತದೆ. ಇವುಗಳನ್ನು ಪಡೆಯಲು ಹರ ಸಾಹಸ ನಡೆಯುತ್ತಿರುತ್ತದೆ. ನಮ್ಮ ಚಟ, ದುಶ್ಚಟ, ಹವ್ಯಾಸ, ಅಭ್ಯಾಸ ಎಲ್ಲವೂ ಇದರ ಹಿಂದೆಯೇ ಬಿದ್ದಿದೆ. ಯಾಕೆ ಹೀಗೆ ? ಎಂದು ಪ್ರಶ್ನಿಸಿದರೆ, ಉತ್ತರ ನಮಗೆಲ್ಲರಿಗೂ ಬೇಕಾಗಿರುವುದು ಸಂತೋಷ, ಸುಖ, ಆನಂದ ಖುಷಿ. ನಮನ್ನು ನಾವು ನಮ್ಮ ಜೀವನದ ಉದ್ದೇಶದ ಬಗ್ಗೆ ಪ್ರಶ್ನಿಸಿಕೊಂಡಾಗ, ನಮ್ಮೆಲ್ಲರಿಗೂ ಸಿಗುವ ಉತ್ತರವೇ, ಸುಖ ಪಡುವುದು ಸಂತೋಷ ಪಡುವುದು, ಆನಂದ ಪಡುವುದು, ಖುಷಿಯಿಂದ ತೃಪ್ತಿಪಡುವುದು, ಇವೆ ನಮ್ಮ ಜೀವನದ ಪರಮ ...
- Get link
- X
- Other Apps
ಗುರು ಏಕೆ ಬೇಕು ಬಾಳಲಿ ? ಒಬ್ಬ ಪ್ರವಚನಕಾರರು ಪ್ರವಚನ ನೀಡುತ್ತಾ, ಜನರನ್ನು ಉದ್ದೇಶಿಸಿ *ನಿಗುರಾ* ಎನ್ನುವುದು ದೊಡ್ಡ ಅಪಮಾನಕರ ಶಬ್ದ ನೀವು ನಿಮ್ಮ ಜೀವನದಲ್ಲಿ *ನಿಗುರಾ* ಎಂದು ಕರೆಸಿಕೊಳ್ಳಬಾರದು ಎಂದು ಹೇಳಿದರು. ಸಭಿಕರಲ್ಲಿದ್ದ ಒಬ್ಬ ವ್ಯಕ್ತಿ, ನಿಗುರಾ ಎಂದರೇನು ? ಎಂದು ಕೇಳುತ್ತಾನೆ. ಆಗ ಅವರು, ಯಾರು ತಮ್ಮ ಜೀವನದಲ್ಲಿ ಗುರುವನ್ನು ಹೊಂದಿರುವುದಿಲ್ಲವೋ, ಆತನೇ ನಿಗುರಾ ಎನ್ನುತ್ತಾರೆ. ಆಗ ಆತ ಅವರ ಮಾತನ್ನು ಅಪಹಾಸ್ಯ ಮಾಡುತ್ತಾ ಗುರು ಹೊಂದದೆ ಇರುವುದು ಹೇಗೆ ಒಂದು ನಿಂದನೆಯ ಶಬ್ದವಾಗುತ್ತದೆ ? ಅಷ್ಟಕ್ಕೂ ಜೀವನದಲ್ಲಿ ಗುರುವಿನ ಅವಶ್ಯಕತೆ ಏನಿದೆ ? ಎಂದು ಕೇಳುತ್ತಾನೆ. ಆಗ ಪ್ರವಚನಕಾರರು, ಒಂದು ಕತೆ ಹೇಳುತ್ತೇನೆ, ಕೇಳು ಆಗ ಗುರುವಿನ ಅವಶ್ಯಕತೆ ತಿಳಿಯುತ್ತದೆ, ಎಂದು ಒಂದು ಕತೆಯನ್ನು ಹೇಳಲು ಆರಂಭಿಸುತ್ತಾರೆ.. ಒಬ್ಬ ವ್ಯಕ್ತಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಕೆಲವೊಂದು ಸಾಮಾನುಗಳ ಗಂಟನ್ನು ಹೊತ್ತುಕೊಂಡು ಹೋಗುತ್ತಿರುತ್ತಾನೆ. ಆಗ ಆತನ ಸ್ನೇಹಿತರಾದ ಇನ್ನೊಂದು ಹಳ್ಳಿಯ ವ್ಯಕ್ತಿಗಳು ಬಂಡಿಯ ಮೇಲೆ ಕುಳಿತು ಆತನ ಎದುರಾಗುತ್ತಾರೆ. ಬಂಡಿಯಲ್ಲಿದ್ದ ಸ್ನೇಹಿತರು ಆತನ ಕುಶಲವನ್ನು ವಿಚಾರಿಸಿ, ಎಲ್ಲಾ ಮಾತು ಮುಗಿದ ನಂತರ "ಏನು ನೀನೆ ಸಾಮಾನನ್ನು ಹೊತ್ತುಕೊಂಡು ಹೊರಟಿರುವಿಯಲ್ಲ. ನಿನ್ನಲ್ಲಿ ಒಂದು ಕತ್ತೆ ಇತ್ತಲ್ಲ. ಅದಕ್ಕೆ ಹುಷಾರಿಲ್ಲವೇನು ?" ಎಂದು ಕೇಳುತ್ತಾರೆ. ಆಗ ಆತ, "ಕತ್ತೇನಾ ? ಅದ...
- Get link
- X
- Other Apps
*ಪ್ರಯಾಣದ ಪೂರ್ವ ತಯಾರಿ.* ನಾವು ರೈಲಿನ ಎಸಿ ಕೋಚ ನಲ್ಲಿ ದೂರದ ಊರಿಗೆ ಪ್ರಯಾಣ ಮಾಡುವಾಗ, ರೈಲಿನಲ್ಲಿಯೇ ಊಟ ಮಾಡುತ್ತೇವೆ, ಮಲಗುತ್ತೇವೆ, ಶೌಚ ಕ್ರಿಯೆ ಮಾಡುತ್ತೇವೆ. ಕಿಟಕಿಯಿಂದ ಪ್ರಕೃತಿ ಸೌಂದರ್ಯವನ್ನು ನೋಡಿ ಖುಷಿ ಪಡುತ್ತೇವೆ. ಹಾಗೆಯೇ ಜೊತೆಯಲ್ಲಿರುವವರ ಜೊತೆ ಮಾತಾಡುತ್ತೇವೆ. ನಾವು ಬೇರೆಯವರೊಂದಿಗೆ ಶಾಶ್ವತ ಸಂಬಂಧಿಗಳಂತೆ ವರ್ತಿಸುತ್ತಿದ್ದರೂ ರೈಲಿನಲ್ಲಿ ನಾವು ಬಹಳ ದಿನ ಇರುವುದಿಲ್ಲ ಎನ್ನುವ ಒಂದು ಯೋಚನೆಯಂತು ಖಚಿತವಾಗಿ ನಮ್ಮ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ಇದಕ್ಕಾಗಿಯೇ ನಾವು ಈ ಮೊದಲೇ ಈ ಪ್ರಯಾಣದ ನಂತರ ಯಾವ ಸುಂದರ ಸ್ಥಳಕ್ಕೆ ಹೋಗಿ ಖುಷಿ, ಸಂತೋಷ ಅನುಭವಿಸಬೇಕು, ಎನ್ನುವ ಯೋಜನೆ ರೂಪಿಸಿರುತ್ತೇವೆ. ಅದಕ್ಕಾಗಿ ಹಣ ಸಂಗ್ರಹಿಸಿರುತ್ತೇವೆ. ಈ ಪೂರ್ವ ತಯಾರಿಯಿಂದ ಯಾವುದೇ ಭಯವಿಲ್ಲದೆ, ಚಿಂತೆಯಿಲ್ಲದೆ ರೈಲಿನಿಂದ ಇಳಿದು ಮುಂದೆ ಸಾಗುತ್ತೇವೆ. ರೈಲಿನ ರೀತಿ ನಾವು ಪ್ರತಿನಿತ್ಯ ಸೂರ್ಯ ದೇವರ ಸುತ್ತಲೂ ಸೌರಮಂಡಲದ ಪ್ರಯಾಣವನ್ನು, ಭೂಮಿ ಎನ್ನುವ ವಾಹನದಲ್ಲಿ ಕುಳಿತು ಮಾಡುತ್ತಿದ್ದೇವೆ. ಇದು ಅನೇಕರ ಅನುಭವಕ್ಕೆ ಬಾರದೆ ಇರಬಹುದು. ಆದರೆ ನಾವು ಸೌರಮಂಡಲದ ಪ್ರಯಾಣ ಮಾಡುತ್ತಿರುವುದು ಸತ್ಯ. ಈ ಪ್ರಯಾಣದಲ್ಲಿ ಒಮ್ಮೆ ಸೂರ್ಯ ದೇವರ ಸ್ವಲ್ಪ ಹತ್ತಿರಕ್ಕೆ ಹೋಗುತ್ತೇವೆ, ಆಗ ಬಹಳ ಬಿಸಿಯ ಅನುಭವವಾಗುತ್ತದೆ (ಬೇಸಿಗೆ ಕಾಲ). ಇನ್ನೊಂದು ಬಾರಿ ಸೂರ್ಯ ದೇವರ ಸ್ವಲ್ಪ ದೂರಕ್ಕೆ ಹೋಗುತ್ತ...
- Get link
- X
- Other Apps
*Time Movement* Whether we want it or not, time does not stop its movement. Time is slowly and gracefully passing away... It is passing away..., passing away.... Time is passing away everyone......everything.... When happiness comes, we want time to stop When hardship comes, we ask it to move forward We want time to stop in a hurry When waiting, we ask it to move forward Whether there is happiness, hardship Whether there is hurry, waiting The movement of time in this world can never be stopped. Because the movement of time in this world is not under our control If gave so much wealth of the unimaginable rich also, the time that has passed will never come back. Time is not equal to wealth It is beyond wealth, it is amazing Time is moving forever and ever. It is making a boy young. It is pushing a young man to old age. Everyone's body is being killed slowly, slowly.... That too is being killed innocently. We don't see it, we don't experience it. The veil of karma, interest,...
- Get link
- X
- Other Apps
*ಸಮಯಚಲನ* ನಾವು ಬಯಸಿದರು, ಬಯಸದೆ ಇದ್ದರೂ ನಿಲ್ಲಿಸದು ಸಮಯ ತನ್ನ ಚಲನ. ಮೆಲ್ಲ ಮೆಲ್ಲನೆ ನಾಜೂಕಾಗಿ ಕಳೆದು ಹೋಗುತ್ತಿರುವುದು ಸಮಯ... ಹೋಗುತಾ..., ಕಳೆಯುತಾ.... ಕಳೆಯುತ್ತಿರುವುದು ಸಮಯ ಸರ್ವರನ್ನು......ಸರ್ವಸ್ವವನ್ನೂ.... ಸುಖ ಬಂದಾಗ ಸಮಯ ನಿಲ್ಲಲು ಬಯಸುವೆವು ಕಷ್ಟ ಬಂದಾಗ ಸರ್ರನೆ ಚಲಿಸಲು ಹೇಳುವೆವು ಗಡಿಬಿಡಿಯಲ್ಲಿ ಸಮಯ ನಿಲ್ಲಲು ಬಯಸುವೆವು ಕಾಯುವಾಗ ಸಮಯ ಸರ್ರನೆ ಚಲಿಸಲು ಹೇಳುವೆವು ಸುಖವಿರಲಿ, ಕಷ್ಟವಿರಲಿ ಗಡಿಬಿಡಿಯಿರಲಿ, ಕಾಯುವಿಕೆವಿರಲಿ ಎಂದಿಗೂ ನಿಲ್ಲಿಸಲಾಗದು ಈ ಜಗತ್ತಿನ ಸಮಯಚಲನ. ಕಾರಣ ನಮ್ಮ ನಿಯಂತ್ರಣದಲ್ಲಿಲ್ಲ ಈ ಜಗತ್ತಿನ ಸಮಯಚಲನ ಅಗರ್ಭ ಶ್ರೀಮಂತರ ಅಷ್ಟು ಸಂಪತ್ತನ್ನು ನೀಡಿದರು ಕಳೆದ ಸಮಯ ಮತ್ತೆ ಮರಳಿ ಬಾರದು. ಸಂಪತ್ತಿಗೆ ಸರಿಸಮವಲ್ಲವಿದು ಸಮಯ ಸಂಪತ್ತಿಗಿಂತ ಮಿಗಿಲಾದುದಿದು, ವಿಸ್ಮಯ ನಿತ್ಯ ನಿರಂತರ ಸಮಯ ಚಲಿಸುತ್ತಿರುವುದು. ಬಾಲಕರನ್ನು ಯುವಕನಾಗಿಸುತ್ತಿರುವುದು. ಯುವಕರನ್ನು ಮುಪ್ಪಿಗೆ ತಳ್ಳುತ್ತಿರುವುದು. ಎಲ್ಲರ ದೇಹವನ್ನು ನಿಧಾನ, ಸಾವಧಾನವಾಗಿ ಮೆಲ್ಲ ಮೆಲ್ಲನೆ ಕೊಲ್ಲುತ್ತಿರುವುದು.... ಅದು ಸಹ ನಿರಪರಾಧಿಯಾಗಿ ಕೊಲ್ಲುತ್ತಿರುವುದು. ಕಾಣುತ್ತಿಲ್ಲ, ಅನುಭವಕ್ಕೆ ಬರುತ್ತಿಲ್ಲ ನಮಗೆ ಆವರಿಸಿದೆ ಕರ್ಮ, ಆಸಕ್ತಿ, ರಾಗ, ದ್ವೇಷದ ಮುಸುಕು ಮೆಲ್ಲ ಮೆಲ್ಲನೆ ಕೈಯಲ್ಲಿ ಹಿಡಿದ, ಸಣ್ಣ ಉಸುಕಿನಂತೆ ಗೊತ್ತಿಲ್ಲದಂತೆ ಜಾರ...
- Get link
- X
- Other Apps
*ಶಂಕರಾಚಾರ್ಯರು ಸರಿಯೇ ?ಕನಕದಾಸರು ಸರಿಯೇ?* ಕನಕದಾಸರು ಇದದ್ದು ಹದಿನೈದನೇ ಶತಮಾನದಲ್ಲಿ. ಇವರು ಕುರುಬ ಜಾತಿಯಲ್ಲಿ ಜನಿಸಿದರು ಸಹ ದಾಸ ಶ್ರೇಷ್ಠರಾದವರು. ದಾಸ ಭಾವದಿಂದ ಶ್ರೀಕೃಷ್ಣನನ್ನೆ ಒಲಿಸಿಕೊಂಡವರು. ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ ದೇಶ ಪರ್ಯಟನೆ ಮಾಡಿ ಹಿಂದೂ ಧರ್ಮ ಪುನರುತ್ಥಾನ ಮಾಡಿದವರು. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಸಂದೇಶಗಳು ಜಿಜ್ಞಾಸುಗಳಲ್ಲಿ ವೈರುಧ್ಯವನ್ನು ಉಂಟುಮಾಡುತ್ತವೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ವಿಭಿನ್ನ ಸಂದೇಶ ಬಹಳಷ್ಟು ಗೊಂದಲವುಂಟು ಮಾಡುತ್ತಿವೆ. ಆದ್ದರಿಂದ ಶಂಕರಾಚಾರ್ಯರು ಸರಿಯೇ ? ಕನಕದಾಸರು ಸರಿಯೇ? ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿವೆ. ಒಮ್ಮೆ ಕನಕದಾಸರ ಗುರುಗಳು, ಶಿಷ್ಯರನ್ನು ಉದ್ದೇಶಿಸಿ ವೈಕುಂಠಕ್ಕೆ ಯಾರ್ಯಾರು ಹೋಗುವಿರಿ? ಎಂದು ಪ್ರಶ್ನೆ ಮಾಡುತ್ತಾರೆ. ಆಗ ಎಲ್ಲಾ ಶಿಷ್ಯರು ವೈಕುಂಠ ಎಂದರೆ ಮುಕ್ತಿ ಸ್ಥಳ, ಅಂತಹ ಅತ್ಯುನ್ನತ ಸ್ಥಳಕ್ಕೆ ಹೋಗುವ ಯೋಗ್ಯತೆ ನನ್ನಲಿಲ್ಲ ಎಂದು ಒಬ್ಬೊಬ್ಬರಾಗಿ, ನಾನು ಹೋಗುವುದಿಲ್ಲ, ನಾನು ಹೋಗುವುದಿಲ್ಲ ಎನ್ನುತ್ತಾರೆ. ಅದೇ ಪ್ರಶ್ನೆಯನ್ನು ಕನಕದಾಸರಿಗೆ ಕೇಳಿದಾಗ, ಕನಕದಾಸರು ನಾನು ಹೋದರೆ ಹೋಗುತ್ತೇನೆ ಎಂದು ಹೇಳುತ್ತಾರೆ. ಅದನ್ನು ಕೇಳಿದ ಎಲ್ಲಾ ಶಿಷ್ಯರು ದುರಹಂಕಾರಿ ಎಂದು ಕನಕದಾಸರನ್ನು ತೆಗಳುತ್ತಾರೆ. ಆಗ ಗುರುಗಳು ಪೂರ್ಣವಾಗಿ ಅರಿಯದೆ ಮಾತನಾಡಬೇಡಿ ಎಂದು ಹೇಳಿ. ಕನಕದಾಸರಿಗೆ ಇದರ ಅರ್ಥ...
- Get link
- X
- Other Apps
ಈ ವರ್ಷದ (2025ರ) ಶಿವರಾತ್ರಿ ಸಂದೇಶ ನಾವು ದೇವರನ್ನು ಸಂಪರ್ಕ ಮಾಡಲು ಹಾಗೂ ದೇವರಿಂದ ಕೃಪೆ ಪಡೆಯಲು ವ್ರತ ಮಾಡುತ್ತೇವೆ. ನಾವು ಸತ್ಯ ಪ್ರಾಮಾಣಿಕತೆಯಿಂದ ವ್ರತ ಮಾಡಿದಾಗ ಆ ದೇವರು ನಮಗೆ ಪ್ರತಿಸ್ಪಂದಿಸುತ್ತಾನೆ. ಇದು ಆರನೇ ಶಿವರಾತ್ರಿ ಕಾರ್ಯಕ್ರಮದಲ್ಲಿ ನನಗಾದ ಅನುಭವ. ಇದನ್ನು ಈಗಾಗಲೇ ಹಂಚಿಕೊಂಡಿದ್ದೇನೆ. ಈ ವರ್ಷದ ಶಿವರಾತ್ರಿಯಂದು ನನಗೆ ಲಭಿಸಿದ ಸಂದೇಶ ನನ್ನ ನಂಬಿಕೆ ವಿಶ್ವಾಸವನ್ನು ಗಟ್ಟಿಗೊಳಿಸಿತು. ಈ ಸಂದೇಶ ನನಗೆ ಎಷ್ಟು ಮುಖ್ಯವಾದುದು ಎನ್ನುವುದು ತಿಳಿಯಬೇಕಾದರೆ ಈ ಸಣ್ಣ ಕತೆ ಓದುವುದು ಮುಖ್ಯವಾಗಿದೆ. ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಸುಂದರವಾದ ಕುದುರೆಯನ್ನು ಬಹಳ ದುಡ್ಡು ಕೊಟ್ಟು ಖರೀದಿ ಮಾಡಿದ. ಇದನ್ನು ರಾಜನಿಗೆ ಕೊಟ್ಟು ತಾನು ಖರ್ಚು ಮಾಡಿದಕ್ಕಿಂತಲೂ ಹೆಚ್ಚಿನ ಉಡುಗೊರೆಗಳನ್ನು ರಾಜನಿಂದ ಪಡೆಯಬೇಕೆನ್ನುವುದು ಆತನ ಉದ್ದೇಶವಾಗಿತ್ತು. ವ್ಯಾಪಾರಿ ಕುದುರೆಯನ್ನು ತನ್ನ ಊರಿಗೆ ತೆಗೆದುಕೊಂಡು ಹೋಗುವಾಗ ಆ ಕುದುರೆಯ ಮೇಲೆ ಮೂರು ಜನ ಕಳ್ಳರ ಕಣ್ಣು ಬೀಳುತ್ತದೆ. ಯಾವುದೇ ರೀತಿಯಿಂದ ಅದನ್ನು ಪಡೆಯಬೇಕು ಎಂದು ಯೋಚಿಸಿ, ಅದಕ್ಕೆ ಒಂದು ಯೋಜನೆ ರೂಪಿಸುತ್ತಾರೆ. ಆ ಯೋಜನೆಯಂತೆ ಒಬ್ಬ ಕಳ್ಳ ವ್ಯಾಪಾರಿಯ ದಾರಿಯಲ್ಲಿ ಎದುರಾಗಿ, ಏನಪ್ಪಾ ಎಂತಹ ಕತ್ತೆಯನ್ನು ತೆಗೆದುಕೊಂಡು ಹೋಗುತ್ತಿರುವೆ ಸ್ವಲ್ಪವೂ ಸರಿಯಾಗಿಲ್ಲ, ಎಂದು ಬಹಳ ಅಸಮಾಧಾನದಿಂದ ಹೇಳಿದ. ಇದನ್ನು ಕೇಳಿ ಒಮ್ಮೆಲೆ ಸಿಟ್ಟಿಗೆ ಬಂದ ವ್ಯಾಪಾರಿ,...
- Get link
- X
- Other Apps
ಪವಿತ್ರ ಮನಸ್ಸು ಗಂಗೆಯ ಆಸ್ಥಾನ ಇಂದಿನ ಲೆಕ್ಕದಲ್ಲಿ ಕುಂಭ ಮೇಳದಲ್ಲಿ 45 ಕೋಟಿ ಜನರು ಸ್ನಾನ ಮಾಡಿದ್ದಾರೆ. ಇನ್ನೂ ಅದೆಷ್ಟೋ ಜನ ನಮ್ಮಿಂದ ಕುಂಭಮೇಳದಲ್ಲಿ ಭಾಗವಹಿಸಲು ಆಗುತ್ತಿಲ್ಲವಲ್ಲ ಎಂದು ಹಳಹಳಿಸುತ್ತಿದ್ದಾರೆ. ದೇಶದ ಅತಿ ದೊಡ್ಡ ದೊಡ್ಡ ಧಾರ್ಮಿಕ ವ್ಯಕ್ತಿಗಳು ಜಗದ್ಗುರುಗಳು, ಮಹಾಂತ, ಮಹಾ ಮಂಡಲೇಶ್ವರರು, ನಾಗಾಗಳು, ಅಘೋರಿಗಳು, ಅನೇಕ ಸಾಧು ಸಂತರು ಪ್ರಯತ್ನಿಸುತ್ತಿರುವುದು ತ್ರಿವೇಣಿ ಸಂಗಮದ ಪುಣ್ಯ ನದಿಗಳ ಕೃಪೆಗೆ ಪಾತ್ರರಾಗಲು. ಮೂರು ನದಿಗಳಲ್ಲಿ ಮುಖ್ಯ ನದಿ ಗಂಗೆ. ಈಗ ಓದುತ್ತಿರುವ ಕಥೆ ಓದಿದ ನಂತರ ಇದು ಎಷ್ಟು ನಿಜವೋ ಎಷ್ಟು ಕಟ್ಟುಕತೆ ಎನ್ನುವ ಯೋಚನೆ ಎಲ್ಲರಿಗೂ ಬರುತ್ತದೆ. ಆದರೂ ಇದು ಇತಿಹಾಸದ ಒಂದು ಭಾಗವಾಗಿದೆ. ಹೀಗಾಗಿ ಈ ಕಥೆಯನ್ನು ಓದಿದವರಿಗೆ ಆ ಪುಣ್ಯ ಸ್ನಾನ ಮಾಡಿದ ಸ್ವಲ್ಪ ಭಾಗವಾದರೂ ಸಿಕ್ಕೆ ಸಿಗುತ್ತದೆ. ಇದು ನನ್ನ ಪೂರ್ಣ ವಿಶ್ವಾಸ. ಅದು ವಾರಣಾಸಿಯ ಹತ್ತಿರದ ಗ್ರಾಮ ಅಲ್ಲಿ ನದಿಯಲ್ಲಿ ಸ್ನಾನ ಮಾಡಲು ಒಬ್ಬ ಬ್ರಾಹ್ಮಣ ಹೋಗುವಾಗ ತನ್ನ ಚಪ್ಪಲಿ ರಿಪೇರಿ ಮಾಡಲು ಒಬ್ಬ ಚಮ್ಮಾರನ ಹತ್ತಿರ ಹೋಗುತ್ತಾನೆ. ಚಮ್ಮಾರ ಚಪ್ಪಲಿ ರಿಪೇರಿ ಮಾಡಿದ ನಂತರ ಬ್ರಾಹ್ಮಣನ ಹತ್ತಿರ ದುಡ್ಡನ್ನು ಕೇಳದೆ ಒಂದು ಕೋರಿಕೆ ಮಂಡಿಸುತ್ತಾನೆ. ತಾನು ಉಳಿಸಿದ ಒಂದು ತಾಮ್ರದ ನಾಣ್ಯವನ್ನು ಕೊಟ್ಟು ಗಂಗಾ ನದಿಯಲ್ಲಿ ಹಾಕಲು ಕೇಳುತ್ತಾನೆ. ಇನ್ನೊಂದು ಮಾತನ್ನು ಸಹ ಹೇಳುತ್ತಾನೆ, ನೇರವಾಗಿ ಗಂಗೆಯಲ್ಲಿ ನಾಣ್ಯ ಹಾಕಬೇಡಿ...
- Get link
- X
- Other Apps
ಸ್ನೇಹಿತರೇ ಎಲ್ಲರಿಗೂ ನಮಸ್ಕಾರ ಜೀವನದಲ್ಲಿ ನಾನು ಎನ್ನುವುದು ಎಲ್ಲರಿಗೂ ಮುಖ್ಯವಾದುದು. ಇದಕ್ಕೆ ಸಂಬಂಧಿಸಿದಂತೆ ಅವರವರ ಸಂತೋಷಕ್ಕಾಗಿ ಹುಟ್ಟಿದ ದಿನಗಳ ಆಚರಣೆ ಈಗ ಹೆಚ್ಚುತ್ತಿದೆ. ಆಪ್ತರು ಸಹ ಅವರಿಗೆ ತಮ್ಮ ಪ್ರೀತಿ ತೋರ್ಪಡಿಸಲು ಅವರನ್ನು ಸಂತೋಷಪಡಿಸಲು ಈ ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸಲು ಇಂದಿನ ಸಮಾಜ ಕಂಡುಕೊಂಡಿರುವ ಆಚರಣೆ. ಆದರೂ ಸಹ ನಾವು ಸತ್ಯ ಏನಿದೆ, ಅದರ ಕಡೆಗೆ ಸ್ವಲ್ಪವಾದರೂ ಧ್ಯಾನವನ್ನು ಕೊಡಬೇಕು. ಸತ್ಯವನ್ನು ಸ್ವಲ್ಪವಾದರೂ ನೆನಪಿಸಿಕೊಳ್ಳಲು ಪ್ರಯತ್ನಿಸಬೇಕು. ಒಂದು ಮನೆ ಕಟ್ಟಿರುತ್ತೇವೆ. ಮನೆಯಲ್ಲಿ ನಾವು ವಾಸಿಸುತ್ತವೆ, ಎಂದರೆ ಇದರ ಅರ್ಥ ನಾವೇ ಮನೆ ಎಂದಲ್ಲ. ಮನೆ ನಮ್ಮದೇ ಆಗಿದ್ದರೂ ನಮಗೂ ಮನೆಗೂ ಬಹಳ ವ್ಯತ್ಯಾಸವಿದೆ. ಅದೇ ರೀತಿ ದೇಹದಲ್ಲಿ ನಾವು ಇದ್ದರೂ ದೇಹ ನಮಗೂ ವ್ಯತ್ಯಾಸ ಇದೆ. ದೇಹ ಬಾಲ್ಯ, ಯೌವ್ವನ , ಮುಪ್ಪು ಆಗಿ ನಿರಂತರ ಬದಲಾಗುತ್ತಿದೆ. ಆದರೆ ದೇಹದಲ್ಲಿರುವ ಒಂದು ತಿಳುವಳಿಕೆ, ಒಂದು ಅನುಭವಿ ಅದೇ ಆಗಿರುತ್ತಾನೆ. ಬದಲಾಗುವುದಿಲ್ಲ. ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ದೇಹದಲ್ಲಿ ವಾಸಿಸುವ ಅನುಭವಿ ತಿಳುವಳಿಕೆ ಆತ್ಮ ಶಾಶ್ವತ. ಆದರೆ ದೇಹ ಹುಟ್ಟುತ್ತದೆ ಹಾಗೂ ಸಾಯುತ್ತದೆ. ಈ ದೇಹದ ಹುಟ್ಟಿದ ದಿನಗಳನ್ನು ನನ್ನ ಹುಟ್ಟಿದ ದಿನ ಎಂದು ಭಾವಿಸಿದಾಗ ಮೊದಲೇ ಅಜ್ಞಾನ ಇರುವ ಜೀವಕ್ಕೆ, ದೇಹವೇ ನಾನು ಎನ್ನುವ ಅಜ್ಞಾ...
- Get link
- X
- Other Apps
*ವೃತ್ತಿ ಧರ್ಮ* ಜೀವನದಲ್ಲಿ ಎಲ್ಲರೂ ಒಂದೊಂದು ವೃತ್ತಿಗಳನ್ನು ಮಾಡುತ್ತೇವೆ. ನಮ್ಮ ವೃತ್ತಿಗಳನ್ನು ನಾವು ಮಾಡುವುದರಿಂದ ನಮಗೆ ಅದಕ್ಕೆ ಸಂಬಂಧಿಸಿದಂತಹ ಫಲ ಅಥವಾ ವೇತನ ಸಿಗುತ್ತದೆ. ಹೀಗಾಗಿ ನಮ್ಮ ವೃತ್ತಿ ನಮ್ಮಿಂದ ಏನನ್ನು ನಿರೀಕ್ಷೆ ಮಾಡುತ್ತದೆ, ಅದಕ್ಕೆ ತಕ್ಕಂತೆ ಇತರ ನಿರೀಕ್ಷೆ ಮಾಡದೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ನಾವು ನಮ್ಮ ವೃತ್ತಿ ಧರ್ಮ ಪಾಲಿಸಿದಂತೆ. ಆದರೆ ನಾವು ದಾರಿ ತಪ್ಪುತ್ತಿರುವುದು, ಸಮಾಜ, ದೇಶ ದಾರಿ ತಪ್ಪುತ್ತಿರುವುದು ಇಲ್ಲಿಯೇ. ನಾವು ನಮ್ಮ ಸ್ವಂತ ವೃತ್ತಿ ಮಾಡಲು ಅಡ್ಡಡ್ಡ ನಿರೀಕ್ಷೆಗಳನ್ನು ವೃತ್ತಿಗೆ ಸಂಬಂಧಿಸಿದವರಿಂದ ಇಟ್ಟುಕೊಳ್ಳುತ್ತೇವೆ. ಈ ಕಾರಣದಿಂದಲೇ ಇಂದು ಎಲ್ಲೆಡೆ ಭ್ರಷ್ಟಾಚಾರ, ಲಂಚ, ಅನಾಚಾರಗಳು ತಾಂಡವವಾಡುತ್ತಿದೆ. ಯಾರಿಗೂ ಸರಿಯಾದ ರೀತಿಯಲ್ಲಿ ಸರ್ಕಾರದ ಸೇವೆಗಳಾಗಲಿ, ಇನ್ನಿತರ ಉದ್ದೇಶಗಳ ಸೇವೆಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಇದರಿಂದ ವ್ಯಕ್ತಿ ತನ್ನ ದೃಷ್ಟಿಯಲ್ಲಿ ಚಿಕ್ಕವನಾಗುತ್ತಾನೆ. ಸಮಾಜ, ದೇಶ, ದೇವರ ದೃಷ್ಟಿಯಲ್ಲಿಯೂ ದೋಷಿಗಳಾಗುತ್ತೇವೆ. ಇದನ್ನು ಹೇಳಲು ಕಾರಣ ಇಂದಿನ ಒಂದು ಘಟನೆ ಒಬ್ಬರ ಜೀವನದ ಭೂತಕಾಲಕ್ಕೆ ಕರೆದುಕೊಂಡುಹೋಯಿತು. ಅದು ಬಹುಶಃ ಇಪ್ಪತ್ತು ವರ್ಷಗಳ ಹಿಂದಿನ ವಿಷಯ. ಆತ ಡಿಗ್ರಿ ಓದುತ್ತಿದ್ದ ಸಮಯ. ದೇಹದ ಅನಾರೋಗ್ಯದ ಸಮಸ್ಯೆ ಆತನನ್ನು ಕಾಡುತ್ತಿತ್ತು. ಆಗ ಒಂದು ನಡು ರಾತ್ರಿ ಒಮ್ಮಿಂದೊಮ್ಮೆಲೆ ಸಮಸ್ಯೆ ಉಲ್ಬಣವಾಯಿತು. ಆ ಕುಟುಂಬದವರೆಲ್ಲರೂ ಗಾಬರಿಯಾದರು....
- Get link
- X
- Other Apps
*ಶಾಲೆ ಎಂದರೆ ಏನು ? ಶಾಲೆ ಎಂದರೆ ಯಾವ ಮನೋಭಾವ ವಿದ್ಯಾರ್ಥಿಗಳಲ್ಲಿ ಇರಬೇಕು ?* ನಾವು ಶಾಲೆ ಕಲಿಯುವಾಗ ಶಾಲೆ ಎಂದರೆ ಜ್ಞಾನದ ದೇಗುಲ. ಕೈ ಮುಗಿದು ಒಳಗೆ ಬಾ ಎಂದು ಹೇಳುತ್ತಿದ್ದರು. ವಿದ್ಯಾರ್ಥಿಗಳಿಗೂ ಸಹ ಶಾಲೆಯೆಂದರೆ ವಿದ್ಯೆ, ಶಿಕ್ಷಣ ಪಡೆಯುವ ಸ್ಥಳವಾಗಿತ್ತು. (ಇನ್ನೂ ಕೆಲವರಿಗೆ ಶಾಲೆ ಎಂದರೆ ಶಿಕ್ಷೆ ಸಿಗುವ ಸ್ಥಳ ಎನ್ನುವ ಭಯದ ಭಾವನೆಯಿತ್ತು. ) ಆದರೆ ಇಂದು ವಿಧ್ಯೆ ಶಿಕ್ಷಣಕ್ಕಿಂತಲೂ ಬೇರೆ ವಿಷಯಗಳು ಶಾಲೆಗಳಲ್ಲಿ ಮೇಲುಗೈ ಪಡೆಯುತ್ತಿವೆ. ಇದಕ್ಕೆ ಕಾರಣ ಇಂದಿನ ವಾತಾವರಣ, ಪರಿಸರ, ಚಲನಚಿತ್ರಗಳು, ಪಾಶ್ಚಾತ್ಯ ಸಂಸ್ಕೃತಿ. ವಿದ್ಯಾರ್ಥಿಗಳಲ್ಲಿ ಈಗಿರುವ ಮನೋಭಾವಕ್ಕೆ ಏನೇನೋ ಕಾರಣವಾಗಿರಬಹುದು. ಆದರೆ ಸಮಾಜದ ಪ್ರಜ್ಞಾವಂತ ಜನರು ಕ್ರಿಯಾಶೀಲರಾಗಿದ್ದಲ್ಲಿ. ಶಾಲೆಯ ಬಗ್ಗೆ ತಪ್ಪು ಮನೋಭಾವ ದೂರ ಮಾಡುವುದು ಸಾಧ್ಯವಿದೆ. ಈ ಲೇಖನ ಬರೆಯುತ್ತಿರುವುದಕ್ಕೆ ಕಾರಣ, ಇತ್ತೀಚೆಗೆ ನಾನು ನೋಡಿದ ಹತ್ತನೇ ತರಗತಿಯ ಬೀಳ್ಕೊಡುಗೆ ಸಮಾರಂಭದ ಒಂದು ವಿಡಿಯೋ. ಈ ಹಿಂದೆ ಬೀಳ್ಕೊಡುಗೆ ಸಮಾರಂಭದಲ್ಲಿ ನಮಗೆ ಮಾತನಾಡಲು ಹೇಳಿದಾಗ ಶಾಲೆಯ ಶಿಕ್ಷಕರು, ಶಾಲೆಯ ಪರಿಸರ ಶಾಲೆ ನನಗೆ ಎಷ್ಟು ಸಹಾಯ ಮಾಡಿತು, ಎನ್ನುವುದರ ಕುರಿತು ನಾವು ಮಾತನಾಡುತ್ತಿದ್ದೆವು. ಆದರೆ ಒಂದು ಸರ್ಕಾರಿ ಶಾಲೆಯ ವಿದ್ಯಾರ್ಥಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ್ದು ಎಲ್ಲಾ ಪ್ರಜ್ಞಾವಂತ ನಾಗರಿಕರು ಗಂಭೀರವಾಗಿ ಚಿಂತಿಸಬೇಕಾಗಿದೆ. ಆ ವಿಧ್ಯಾ...
- Get link
- X
- Other Apps
ಕುಂಭ ಮೇಳ ಯುವಕರು ಮಕ್ಕಳಿರುವಾಗ ದೇವರಂತೆ ಇರುತ್ತಾರೆ. ಯೌವನಕ್ಕೆ ಕಾಲಿಟ್ಟ ಕೂಡಲೇ ಇಂದಿನ ಪರಿಸರ ವಾತಾವರಣದ ಪ್ರಭಾವದಿಂದ ಬೇರೆಯೇ ಆಗುತ್ತಿದ್ದಾರೆ. ದುಶ್ಚಟ ಹೊಂದಿದ ಜನರ ಸಹವಾಸ. ದುಶ್ಚಟಗಳ ಸಂಗ ಮಾಡಿ. ಯೌವನದಲ್ಲಿ ಮುದುಕರಂತೆ ಕಾಣುತ್ತಿದ್ದಾರೆ. ಈಗಿನ ಬಹುತೇಕ ಹುಡುಗರ (ಎಲ್ಲರೂ ಅಲ್ಲ) ಬಾಯಿಯಲ್ಲಿ ಗುಟ್ಕಾ, ಕಣ್ಣಿನಲ್ಲಿ ಮದ್ಯಪಾನದ ನಶೆ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ, ಅವರನ್ನು ಸದಾಚಾರದ ಸನ್ಮಾರ್ಗದ ಕೆಲಸಗಳಲ್ಲಿ ಕಾಣುವುದು ಅಪರೂಪ. ಅದರಲ್ಲಿಯೂ ಯುವ ಸಮೂಹ ಸದಾಚಾರ, ಸನ್ಮಾರ್ಗದ ಕಡೆ ಆಸಕ್ತಿ ತೋರುವುದು ಸಹ ವಿರಳ. ಯಾವುದೇ ಸದಾಚಾರವು ದೇಹ, ವಚನ, ಮನಸ್ಸು ಈ ಮೂರನ್ನೂ ಒಂದುಗೂಡಿಸಿ ಮಾಡಿದಾಗ ಫಲ ನೀಡುತ್ತದೆ. ದೇವರನ್ನು ತಲುಪುತ್ತದೆ. ಈ ಮೂರು ಒಟ್ಟಿಗೆ ಇಲ್ಲದಿದ್ದರೂ ಕೇವಲ ಯಾವುದಾದರೂ ಒಂದನ್ನಾದರೂ ಸನ್ಮಾರ್ಗದಲ್ಲಿ ತೊಡಗಿಸಿದಾಗ, ಸಮಯ ಕಳೆದಂತೆ ಉಳಿದ ಮೂರು ಸಹ ಒಂದುಗೂಡುತ್ತವೆ. ಹೀಗಾಗಿ ಆರಂಭದಲ್ಲಿ ಕನಿಷ್ಠ ಒಂದು ಅಂತ:ಕರಣ ಉತ್ತಮ ಮಾರ್ಗದಲ್ಲಿದ್ದರೆ ಅದು ದೊಡ್ಡ ಸಾಧನೆಯೇ. ಇದು ಹೇಳುವುದಕ್ಕೆ ಕಾರಣ, 144 ವರ್ಷಗಳಿಗೊಮ್ಮೆ ಬರುವ, ಎರಡು ಪೀಳಿಗೆಯವರಲ್ಲಿ ಒಬ್ಬರು ಮಾತ್ರ ಕಾಣಲು ಸಾಧ್ಯವಾದ ಈಗ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ನನಗೆ ಹೋಗುವ ಮನಸ್ಸಿದ್ದರೂ, ಅವಕಾಶವಿದ್ದರೂ ಕೆಲವು ಕಾರಣಗಳಿಂದ ಹೋಗಲು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ಬಸವನಗರದ ...
- Get link
- X
- Other Apps
ಸರಸ್ವತಿ ಮಾತೆ 🙏 ಇಂದು ನಮ್ಮ ಆರಾಧ್ಯೆ ಸರಸ್ವತಿ ಮಾತೆಯ ಪ್ರಕಟವಾದ ದಿನ. ಯಾವಾಗಲೂ ನನಗೆ, ನನ್ನ ಮೇಲೆ ಸರಸ್ವತಿ ಮಾತೆಯ ಅನಂತವಾದ ಕೃಪೆಯಿದೆ ಅನ್ನಿಸುತ್ತದೆ. ಇಂದು ನಮ್ಮ ಬಳಗ (ಶಿಷ್ಯರು) ನಮ್ಮ ಜೊತೆ ಇಲ್ಲ. ಯಾರು ಇಲ್ಲದೆ ಆ ದೇವಿಯನ್ನು ಇಂದು ಹೇಗೆ ಆರಾಧಿಸಬೇಕು ಎಂದೆ ತಿಳಿಯುತ್ತಿರಲಿಲ್ಲ. ಆಗ ಬಂದ ಯೋಚನೆಯೇ ಈ ಲೇಖನ. ಚಿಕ್ಕಂದಿನಿಂದಲೂ (ಪ್ರಾಥಮಿಕ ಶಾಲೆಯಿಂದಲೂ) ನಾನು ಮೊದಲು ಸ್ನಾನ ಮಾಡಿದ ನಂತರ ದೇವರ ಮನೆಯಲ್ಲಿ ನಮಸ್ಕರಿಸುವುದು ಸರಸ್ವತಿ ಮಾತೆಯನ್ನೆ. ಈಗ ಇಂದು ಸರಸ್ವತಿ ಮಾತೆಯನ್ನು ಎಲ್ಲಾ ಕಡೆ ಹಂಚಿಕೊಳ್ಳುವುದೇ, ಇಂದಿನ ಒಂದು ರೀತಿಯ ಆರಾಧನೆ ಎಂದು ನಿರ್ಧಾರಕ್ಕೆ ಬಂದಿದ್ದೇನೆ. ಹೀಗಾಗಿ ಈ ಚಿತ್ರವನ್ನು ಎಲ್ಲರಿಗೂ ಕಳುಹಿಸುತ್ತಿದ್ದೇನೆ. (ಇದರಲ್ಲಿ ಒಂದು ರಹಸ್ಯ ಅಡಗಿದೆ.) ಇದು ಒಂದು ಟಾಸ್ಕ್ ಸಹ ಎಂದು ತಾವು ತೆಗೆದುಕೊಳ್ಳಬೇಕು. ಈಗ ನಾನು ಹಂಚಿಕೊಳ್ಳುತ್ತಿರುವುದು ಏನು ಅನ್ನುವುದನ್ನು ತಾವು ಸೂಕ್ಷ್ಮವಾಗಿ ಗಮನಿಸಿ ಹೇಳಬೇಕು. ಸೂಕ್ಷ್ಮವಾಗಿ ಗಮನಿಸಿ ನನ್ನ ಪ್ರಶ್ನೆಗೆ ಮನಸ್ಸಿನಲ್ಲಿಯೇ ಉತ್ತರ ಹೇಳಿಕೊಳ್ಳಿ. ಈಗ ತಾವು ಏನನ್ನು ನೋಡುತ್ತಿದ್ದೀರಿ ? ಓದುವುದನ್ನು ಸ್ವಲ್ಪ ನಿಲ್ಲಿಸಿ, ನಾನು ಕಳುಹಿಸಿರುವುದರ ಕಡೆ ನೋಡಿ ಹೇಳಿ. ನೀವು ನೋಡುತ್ತಿರುವುದು ಏನು ? ಸರಸ್ವತಿ ಮಾತೆಯ ಚಿತ್ರವನ್ನು ತಾವು ನೋಡುತ್ತಿರುವಿರಿ, ಎಂದು ಅನಿಸಬಹುದು. ಆದರೆ ಇದು ಸತ್ಯವಲ್ಲ. ನಿಜಕ್ಕೂ ಸತ್ಯವಾಗ...
- Get link
- X
- Other Apps
ದೇವರು ಎಲ್ಲಿದ್ದಾನೆ? ಈ ಪ್ರಶ್ನೆ ಬಹಳಷ್ಟು ಜನರಲ್ಲಿ ಇರುತ್ತದೆ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ. ಇದನ್ನು ಓದುತ್ತಿರುವ ಎಲ್ಲರಿಗೂ ಐದೇ ಬೆರಳುಗಳಿವೆ. ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲರ ಕೈ ಕಾಲುಗಳಿಗೆ ಐದೇ ಬೆರಳುಗಳು ಇರುತ್ತವೆ. ನಿರ್ದಿಷ್ಟವಾಗಿ ಕೇವಲ ಐದೇ ಬೆರಳುಗಳು ಏಕಿವೆ? 2,3,4, ಇಲ್ಲವೇ 6,7,8 ಹೀಗೆ ಏಕಿಲ್ಲ? ಬಹುತೇಕ ಎಲ್ಲರಿಗೂ ಐದೇ ಬೆರಳುಗಳಿವೆ. ಏಕೆಂದರೆ, ಐದು ಬೆರಳುಗಳಲ್ಲಿ ಈ ಜಗತ್ತಿನ ರಹಸ್ಯ ಇದೆ. ಅದೇನೆಂದರೆ, ಈ ವಿಶಾಲವಾದ ಅನಂತ ಜಗತ್ತು ಆಗಿರುವುದು. ಐದು ಮೂಲಭೂತ ಅಸ್ತಿತ್ವಗಳಿಂದ. ಅವುಗಳೇ 1.ಘನ (ಗಟ್ಟಿಯಾಗಿರುವ ಭೂ ತತ್ವ), 2.ದ್ರವ (ನೀರಿನಂತೆ), 3.ಅನಿಲ, 4.ಬೆಂಕಿ, 5.ಆಕಾಶ ಅಥವಾ ಖಾಲಿ ಸ್ಥಳ. ಈ ಜಗತ್ತು ಹೇಗೆ ಐದು ಅಸ್ತಿತ್ವಗಳಿಂದ ಆಗಿದೆಯೋ ಅದೇ ರೀತಿ ನಮ್ಮ ದೇಹವೂ ಈ ಐದೇ ಅಸ್ತಿತ್ವಗಳಿಂದ ಆಗಿದೆ. ನಮ್ಮ ದೇಹದಲ್ಲಿ 1.ಗಟ್ಟಿಯಾಗುವ ಭೂ ತತ್ವ ಎಂದರೆ ಮೂಳೆ ಹಲ್ಲು. 2.ದ್ರವ ಆಗಿರುವುದು ನೀರು ರಕ್ತ. 3.ವಾಯು ಆಗಿರುವುದು ಉಸಿರಾಟದ ಗಾಳಿ. 4.ಬೆಂಕಿ ದೇಹದ ಶಕ್ತಿ. 5.ಗಂಟಲಿನಲ್ಲಿ ಖಾಲಿ ಸ್ಥಳ. ಹೀಗೆ ಐದು ವಸ್ತುಗಳಿಂದ ದೇಹ ಆಗಿರುವುದರಿಂದ ನಮಗೆ ಐದು ಬೆರಳುಗಳಿವೆ. ಐದು ಬೆರಳುಗಳು ಒಂದೊಂದು ಪಂಚಭೂತದ ಪ್ರತೀಕ. 1.ಉಂಗುರ ಬೆರಳು ಭೂ ತತ್ವದ ಪ್ರತೀಕ. ಇದನ್ನು ನ ಅಕ್ಷರದಿಂದ ಗುರುತಿಸಲಾಗು...