Posts

Showing posts from March, 2026
Image
 *Break the pattern, ನಾಮ ಜಪ, ಮಂತ್ರ ಜಪದ ಮೊದಲನೇಯ ಫಲ*. ನಮ್ಮ ಮನಸ್ಸು ನಿರಂತರವಾಗಿ ಏನನ್ನಾದರೂ ಯೋಚನೆ ಮಾಡುತ್ತಲೇ ಇರುವ ನಮ್ಮ ಒಂದು ಅಂಗ. (ಮನಸ್ಸಿಗೆ ನಿರಂತರವಾಗಿ ಯೋಚನೆ ಮಾಡಲು ಒಂದು ವಿಷಯ ಅಥವಾ ವಿಚಾರ ಬೇಕೇಬೇಕು.) ಬಹಳಷ್ಟು ಸಲ ನಮ್ಮ ಮನಸ್ಸು ಏನನ್ನು ಯೋಚಿಸುತ್ತಿದೆ ? ಎನ್ನುವುದೇ ನಮಗೆ ಗೊತ್ತಾಗುವುದಿಲ್ಲ. ಆ ರೀತಿ ಮನಸ್ಸು ನಿರಂತರ ಯೋಚನೆ ಮಾಡುತ್ತದೆ. ಮನಸ್ಸು ನಿರಂತರವಾಗಿ ಯಾವುದನ್ನು ಯೋಚನೆ ಮಾಡುತ್ತದೆ ? ಆ ಕೆಲಸಗಳು ನಮಗೆ ಗೊತ್ತಿಲ್ಲದೆ ನಮ್ಮಿಂದ ಆಗುತ್ತವೆ. ನಮಗೆ ಗೊತ್ತಿಲ್ಲದೆ ನಮ್ಮಿಂದ ತಪ್ಪು ಯೋಚನೆಗಳಾದರೆ ತಪ್ಪು ಕೆಲಸಗಳು ಆಗುತ್ತವೆ.  ನಮಗೆ ಯಾರಾದರೂ ಏನನ್ನೋ ಅಂದಾಗ, ಅವರಿಗೆ ನಾನು ಹೀಗೆ ಹೇಳಬೇಕಿತ್ತು, ಹಾಗೇ ಹೇಳಬೇಕಿತ್ತು ಎನ್ನುವ (ಸುಧಾರಣೆಯ) ಯೋಚನೆ ನಮ್ಮಲ್ಲಿ ನಿರಂತರ ಬರುತ್ತಿರುತ್ತವೆ.  ಕೆಲವೊಮ್ಮೆ ನಮ್ಮ ಜೀವನದಲ್ಲಿ ಘಟಿಸಿದ ಕೆಟ್ಟ ಘಟನೆಗಳ ನೆನಪುಗಳು ಬಂದಾಗ, ಆ ಕೆಟ್ಟ ಘಟನೆಗಳು ಈಗ ನಡೆಯುತ್ತಿದೆ ಎನ್ನುವಂತೆ ಆ ಕೆಟ್ಟ ಘಟನೆಗೆ ಮನಸ್ಸಿನಲ್ಲಿ ಕೆಟ್ಟ, ಕೆಟ್ಟ ಪ್ರತಿಕ್ರಿಯೆ ಹಾಕುತ್ತಿರುತ್ತೇವೆ. ಈ ಕೆಟ್ಟ ಯೋಚನೆಗಳಿಂದ ನಮಗೆ ಗೊತ್ತಿಲ್ಲದೆ ಪುನಃ ಕೆಟ್ಟ ಘಟನೆಗಳು ನಮ್ಮ ಜೀವನದಲ್ಲಿ ಪುನಾರಾವರ್ತನೆ ಆಗುತ್ತವೆ.  ಒಂದು ವೇಳೆ ಮನಸ್ಸಿಗೆ ನಾವು ನಾಮ ಜಪ, ಮಂತ್ರ ಜಪ ಎನ್ನುವ  ಒಂದು ಕೆಲಸವನ್ನು ಕೊಟ್ಟಲ್ಲಿ, ಮನಸ್ಸಿಗೆ ಕೆಟ್ಟ ಯೋಚನೆ ಮಾಡಲು ಅವಕಾಶವೇ ಸಿಗುವುದಿಲ...