Posts

Showing posts from 2026
Image
 *Break the pattern, ನಾಮ ಜಪ, ಮಂತ್ರ ಜಪದ ಮೊದಲನೇಯ ಫಲ*. ನಮ್ಮ ಮನಸ್ಸು ನಿರಂತರವಾಗಿ ಏನನ್ನಾದರೂ ಯೋಚನೆ ಮಾಡುತ್ತಲೇ ಇರುವ ನಮ್ಮ ಒಂದು ಅಂಗ. (ಮನಸ್ಸಿಗೆ ನಿರಂತರವಾಗಿ ಯೋಚನೆ ಮಾಡಲು ಒಂದು ವಿಷಯ ಅಥವಾ ವಿಚಾರ ಬೇಕೇಬೇಕು.) ಬಹಳಷ್ಟು ಸಲ ನಮ್ಮ ಮನಸ್ಸು ಏನನ್ನು ಯೋಚಿಸುತ್ತಿದೆ ? ಎನ್ನುವುದೇ ನಮಗೆ ಗೊತ್ತಾಗುವುದಿಲ್ಲ. ಆ ರೀತಿ ಮನಸ್ಸು ನಿರಂತರ ಯೋಚನೆ ಮಾಡುತ್ತದೆ. ಮನಸ್ಸು ನಿರಂತರವಾಗಿ ಯಾವುದನ್ನು ಯೋಚನೆ ಮಾಡುತ್ತದೆ ? ಆ ಕೆಲಸಗಳು ನಮಗೆ ಗೊತ್ತಿಲ್ಲದೆ ನಮ್ಮಿಂದ ಆಗುತ್ತವೆ. ನಮಗೆ ಗೊತ್ತಿಲ್ಲದೆ ನಮ್ಮಿಂದ ತಪ್ಪು ಯೋಚನೆಗಳಾದರೆ ತಪ್ಪು ಕೆಲಸಗಳು ಆಗುತ್ತವೆ.  ನಮಗೆ ಯಾರಾದರೂ ಏನನ್ನೋ ಅಂದಾಗ, ಅವರಿಗೆ ನಾನು ಹೀಗೆ ಹೇಳಬೇಕಿತ್ತು, ಹಾಗೇ ಹೇಳಬೇಕಿತ್ತು ಎನ್ನುವ (ಸುಧಾರಣೆಯ) ಯೋಚನೆ ನಮ್ಮಲ್ಲಿ ನಿರಂತರ ಬರುತ್ತಿರುತ್ತವೆ.  ಕೆಲವೊಮ್ಮೆ ನಮ್ಮ ಜೀವನದಲ್ಲಿ ಘಟಿಸಿದ ಕೆಟ್ಟ ಘಟನೆಗಳ ನೆನಪುಗಳು ಬಂದಾಗ, ಆ ಕೆಟ್ಟ ಘಟನೆಗಳು ಈಗ ನಡೆಯುತ್ತಿದೆ ಎನ್ನುವಂತೆ ಆ ಕೆಟ್ಟ ಘಟನೆಗೆ ಮನಸ್ಸಿನಲ್ಲಿ ಕೆಟ್ಟ, ಕೆಟ್ಟ ಪ್ರತಿಕ್ರಿಯೆ ಹಾಕುತ್ತಿರುತ್ತೇವೆ. ಈ ಕೆಟ್ಟ ಯೋಚನೆಗಳಿಂದ ನಮಗೆ ಗೊತ್ತಿಲ್ಲದೆ ಪುನಃ ಕೆಟ್ಟ ಘಟನೆಗಳು ನಮ್ಮ ಜೀವನದಲ್ಲಿ ಪುನಾರಾವರ್ತನೆ ಆಗುತ್ತವೆ.  ಒಂದು ವೇಳೆ ಮನಸ್ಸಿಗೆ ನಾವು ನಾಮ ಜಪ, ಮಂತ್ರ ಜಪ ಎನ್ನುವ  ಒಂದು ಕೆಲಸವನ್ನು ಕೊಟ್ಟಲ್ಲಿ, ಮನಸ್ಸಿಗೆ ಕೆಟ್ಟ ಯೋಚನೆ ಮಾಡಲು ಅವಕಾಶವೇ ಸಿಗುವುದಿಲ...
 ದು:ಖಿಸುವುದು  ಒಳಿತಲ್ಲ ಮನಸ್ಸೆ ಏನಾಯಿತು ಒಳ್ಳೆಯದೇ ಆಯಿತು ಏನಾಗುತ್ತಿದೆ ಒಳ್ಳೆಯದೇ ಆಗುತ್ತಿದೆ ಏನಾಗುವುದು ಒಳ್ಳೆಯದೇ  ಆಗುವುದು. ನಗು ನಗುತಾ ಕರ್ಮ ಮಾಡುವೆವು  ಫಲ ಬಂದಾಗ ಅಳುವುದು ಏತಕೆ ? ಫಲ ಬಂದಾಗ ಕರ್ಮ ಕಳೆಯಿತು ಎಂದು ಖುಷಿ ಪಡು ಎಷ್ಟೇ ಕತ್ತಲ ರಾತ್ರಿ ಇದ್ದರೂ  ಮತ್ತೆ ಹಗಲಾಗುವುದು ಖಚಿತ ಬದಲಾವಣೆಯೇ ಜಗತ್ತಿನ ನಿಯಮ  ಹಳಹಳಿಸದಿರು ದುಃಖಿಸದಿರು ಕಗ್ಗತ್ತಲ ಕಳೆದು ಹಗಲು ಬರುವುದು ನಿಶ್ಚಿತ  ದುಃಖದಿಂದ ಮತ್ತೆ ದುಃಖ ಜನನ ದುಃಖಿಸದಿರು ಹಳಹಳಿಸದಿರು ಮನಸೇ
Image
 ಸಮಾಜ ಕಂಡಿದ್ದು ಕೆಳಮಟ್ಟದವನೆಂದು, ಆದರೆ ಅವರ ವಿಚಾರ ಎಷ್ಟು ಎತ್ತರ ಮಟ್ಟದ್ದು !!! ( ವಿಡಿಯೋ ಭಾಗ 1 ) ಅದೊಂದು ಸಣ್ಣ ಹಳ್ಳಿ. ಅಲ್ಲಿ ಜನರಿಲ್ಲದ ಕಿರಿದಾದ ರಸ್ತೆ. ಅದರಲ್ಲಿಯೇ ಮುಂದೆ ಹೋದರೆ ಒಂದು ಸಂದಿ. ಅಲ್ಲಿ ಯಾರು ಇಲ್ಲ. ಬಾಗಿಲಿಗೆ ಕೀಲಿ.  ಅಲ್ಲಿ ಜನಜಂಗುಳಿ ಇಲ್ಲ. ಪ್ರವಾಸಿಗರಿಲ್ಲ. ಬಾಗಿಲು ತೆರೆದು ಒಳಗಡೆ ಹೋದಾಗ ಜೀವಂತವಾಗಿ ಏನು ಕಾಣುವುದಿಲ್ಲ. ಒಂದು ರೀತಿಯ  ಭಣ ಭಣ ವಾತಾವರಣ.  ಇದು ಭಾವನೆಗಳಿಲ್ಲದವರ, ಖಾಲಿ ಕಣ್ಣುಗಳಿಗೆ ಕಾಣುವ ಒಂದು ಸ್ಥಳದ ಚಿತ್ರಣ. ಎಷ್ಟೋ ವರ್ಷಗಳ ಹಿಂದೆ ನಡೆದ ಐತಿಹಾಸಿಕ ಘಟನೆಗೆ ಸಂಬಂಧಿಸಿದ ಸ್ಥಳ.  ಇಲ್ಲಿಯೇ ಸಮೀಪದಲ್ಲಿದ್ದರೂ ನಾನು ಇಲ್ಲಿಯವರೆಗೆ ಹೋಗಿರಲಿಲ್ಲ. ನನ್ನ ಜೀವನದ ಮೊದಲನೆಯ ಭೇಟಿ. ಸ್ಥಳ ಮೇಲಿನದೇ ಆದರೆ ಅಲ್ಲಿ ಹೋದಾಗ ಇತಿಹಾಸದ ನೆನಪುಗಳಿಂದ ನನ್ನಲ್ಲಿ ಭಾವನೆಗಳು ಉಕ್ಕಿ ಉಕ್ಕಿ ಬಂದವು. ಐತಿಹಾಸಿಕ ಪುಣ್ಯಾತ್ಮರ ಜೊತೆಯಲ್ಲಿಯೇ ಇದ್ದೇವೆ ಏನೋ ಎನ್ನುವ ಭಾವನೆ ಬರುತ್ತಿತ್ತು.  ಅವರ ಒಂದೊಂದು ನೆನಪುಗಳು ಅದರ ಜೊತೆಗೆ ಇಂದಿನ ಜಗತ್ತಿನ ಹೋಲಿಕೆ, ಅನೇಕ ಅನುಮಾನಗಳನ್ನು, ಪ್ರಶ್ನೆಗಳನ್ನು, ನನ್ನ ಮನಸ್ಸಿನಲ್ಲಿ ಎಬ್ಬಿಸುತಿತ್ತು.  . ನಿಜಕ್ಕೂ ಇದು ನಡೆದ ಘಟನೆಯೇ ? . ಆಗ ಜನರು ಈ ರೀತಿಯೂ ಇದ್ದರೆ ? . ನಿರ್ಜೀವ ವಸ್ತುಗಳು ಸಹ ಈ ರೀತಿ ವರ್ತಿಸಿದವೆ ? . ದೈವೀ ಪ್ರಮಾಣ ಸಿಕ್ಕರೂ ಸಮಾಜ ಏಕೆ ಇಷ್ಟೊಂದು ಕ್ರೂರಿಯಾಯಿತು ? "ಕೊಟ್ಟವ ಕೊಡಂಗಿ,...
 ಶ್ರದ್ಧಾಂಜಲಿ ಪರಮ ಬೈರಾಗಿಗೆ (ಸಿದ್ದೇಶ್ವರ ಸ್ವಾಮಿಗಳು) ಆಡಂಬರವೇ ಇಲ್ಲದ ಸರಳ ಬದುಕು ಎಲ್ಲೆಲ್ಲೂ ದುರ್ಲಭ ವೈರಾಗ್ಯದ ಇಣುಕು ಜೇಬಿಲ್ಲದ ಜ್ಞಾನದ ಕುಬೇರ ಯಾವುದಕ್ಕೂ ಅಂಟಿಕೊಳ್ಳದ ಕಮಲ ನೋಡಲು ತೆಳ್ಳನೆಯ ಶರೀರ ಅನುಭವಕ್ಕೆ ನಿಲುಕದ ಶಾರೀರ ಸಹಜತೆಯ ದೇಶಿ ಭಾಷೆ ಸೋಗಡು ಕೇಳುಗನ ಅಂತರಾಳದಲ್ಲಿ ಮಾಡುವುದು ಗುಡುಗು ನಿಮ್ಮಿಂದ ಪ್ರಕೃತಿ ಸಹ ಜೀವ ಪಡೆಯುವುದು ಜೀವ ಪಡೆದು ಸಹಜ ಜ್ಞಾನ ಕೊಡುವುದು ಜಗತ್ತನ್ನು ನೋಡುವ ನೋಟವನ್ನೆ ಬದಲಾಯಿಸುವುದು ದ್ವೇಷ ಅಸೂಯೆ ಅಳಿಸಿ ಪ್ರೀತಿ ಪ್ರೇಮವ ಬೆಳೆಸುವುದು ಅನುಗ್ರಹಕ್ಕೆ ಕೇವಲ ನಿಮ್ಮ ಉಪಸ್ಥಿತಿ ಸಾಕು ತುಟಿ ಬಿಚ್ಚಿದರೆ ಎಲ್ಲರ ಮನಸ್ಸಾಗುವುದು ನಿಮ್ಮಯ ವಶ ಬೇಕಾದರೆ ಇರಲಿ ಸಹಸ್ರ ಸಹಸ್ರ ಜನರು ನೀವಿದ್ದರೆ ಸಣ್ಣ ಸೂಜಿ ಬಿದ್ದರೂ ದೊಡ್ಡ  ಶಬ್ದ ಮಾಡುವುದು ನಿಮ್ಮ ಪೂರ್ಣ ಜೀವನವೇ ವೈರಾಗ್ಯದ ತಪಸ್ಸು ನಿಮ್ಮ ಸ್ಮರಿಸಿದರೆ ಸಾಕು ನಿಮ್ಮ ತಪಸ್ಸಿನಲ್ಲಿ ನಮಗೆ ಸಿಗುವುದು ಪಾಲು ಆತ್ಮ ತತ್ವದಲ್ಲಿ ಏಕಾದಶ ಇಂದ್ರಿಯಗಳ ಇರಿಸಿದ ನೀವು  ನಮಗೆ ವಿದಾಯ ಹೇಳಿದೀರಲ್ಲ ಏಕಾದಶಿಯಂದೆ   ಈ ಜೀವನದಲ್ಲಿ ಮರೆಯಲಾಗದು ನಿಮ್ಮನ್ನು ಏಂದೆಂದು ನಿಮ್ಮಿಂದ ಬೆಳಗಿದ ಆಧ್ಯಾತ್ಮ ದೀಪ ಇದು, ಆರದು ಏಂದೆಂದು URAIN NAMAH 03/01/2022
 *ದೇವ ದೇವನೋಲಿದ ಕುಲವೇ ಸತ್ಕುಲಂ* ಸಮಯ ‌ ಇದೇ 2025ನೇ ಇಸ್ವಿ ನವೆಂಬರ್ ಡಿಸೆಂಬರ್ ತಿಂಗಳು. ಬಾಲ್ಯದಿಂದಲೂ ವೇದ ಶಿಕ್ಷಣ ಪಡೆದ ಆಹಾರ ಕ್ರಮದಲ್ಲಿಯೂ ಪ್ರಾಣಿ ಹಿಂಸೆಯಿಲ್ಲದ ಒಬ್ಬ ಮಹಿಳೆ (ಆಚಾರ್ಯ ಶೃತಿ ಶಾಸ್ತ್ರಿ), ವೇದ ಮಂತ್ರಗಳನ್ನು ಉಚ್ಚರಿಸುತ್ತಾ ಗಾಯತ್ರಿ ಮಂತ್ರಗಳನ್ನು ಹೇಳುತ್ತಾ ಒಂದು ಮದುವೆ ಮಾಡಿಸುತ್ತಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ಜಾಲತಾಣದಲ್ಲಿ (ಫೆಸ್ ಬುಕ್) ಹಾಕುತ್ತಾರೆ. ಅಲ್ಲಿಗೆ ಬರುವ ಕೆಲವು ಜನರು, ಒಬ್ಬ ಮಹಿಳೆ ವೇದ ಮಂತ್ರ ಹೇಳುವುದು, ಗಾಯತ್ರಿ ಮಂತ್ರ ಹೇಳುವುದು ಮೂರ್ಖತನದ ಪರಮಾವಧಿ. ಇದರಿಂದ ಪಾಪ ಹತ್ತುತ್ತದೆ. ಮತ್ತು ನೀವು ನರಕಕ್ಕೆ ಹೋಗುತ್ತೀರಿ ಎಂದು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾರೆ ..  ಇದಕ್ಕೆ ಪ್ರತಿಕ್ರಿಯೆಯಾಗಿ ಆ ಮಹಿಳೆಯ ಬೆಂಬಲಿಗರು   "ಹುಟ್ಟಿನಿಂದ ಎಲ್ಲರೂ ಶೂದ್ರರೇ. ಒಳ್ಳೆಯ ಸಂಸ್ಕಾರದಿಂದ ಮಾತ್ರ ಒಬ್ಬ ವ್ಯಕ್ತಿ ಬ್ರಾಹ್ಮಣನಾಗುತ್ತಾನೆ.  (ಜನ್ಮನಾ ಜಾಯತೇ ಶೂದ್ರಃ, ಸಂಸ್ಕಾರಾತ್ ದ್ವಿಜ ಉಚ್ಚತ್ಯೇ -ಋಗ್ವೇದ ಹಾಗೂ ಸ್ಕಂದ ಪುರಾಣ ) ಎನ್ನುವ ಶ್ಲೋಕವನ್ನು ಹೇಳಿದಾಗಲೂ ಸಹ  ಶಾಸ್ತ್ರಗಳ ಉದಾಹರಣೆ ಕೊಡುತ್ತಾ, ಆ ಮಹಿಳೆಯನ್ನು  ಅವರು ಪುನಃ ವಿರೋಧಿಸುತ್ತಾರೆ.  ಈಗ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಹಾಗೂ ಎಲ್ಲರಿಗೂ ಸಮಾನ ಅವಕಾಶ ನೀಡುವ ಸಂವಿಧಾನದ ಮೂಲಕ ದೇಶ ನಡೆಯುವ ಈ ಸಮಯದಲ್ಲಿಯೂ ಒಬ್ಬ ಮಹಿಳೆ ವೇದ ಪಾಠ ಮಾಡುವುದನ್ನು ಗಾ...
 *ಹೊಸ ವರ್ಷ ಆಚರಿಸುತ್ತಿರುವ ಜಗತ್ತಿಗೆ ಹೊಸ ಚಿಂತನೆ.* ಮೊದಲಿಗೆ ಅಭೂತಪೂರ್ವ   ಯಶಸ್ವಿ ಕಾರ್ಯಕ್ರಮದ ಕಾರಣಕರ್ತರಾದ ಎಲ್ಲರಿಗೂ *ನನ್ನ ಅನಂತ ಅನಂತ ಅಭಿನಂದನೆಗಳು* ಇಂದಿಗೆ ಎರಡು ದಶಕಗಳಿಗೂ ಮುಂಚೆ ನನಗೆ ಲಭಿಸಿದ ಸಂದೇಶದಂತೆ ನಾನು ಸತ್ಯಯುಗಕ್ಕಾಗಿ ಜೀವನ ಮುಡಿಪಾಗಿಡುವ ನಿರ್ಧಾರವನ್ನು ಹೋದ ವರ್ಷ ಮಾಡಿದ್ದೆ. ಹೋದ ವರ್ಷವೇ ಇದಕ್ಕೆ ಸಂಬಂಧಿಸಿದಂತೆ ಸತ್ಯ ಯುಗ ಟ್ರಸ್ಟ್ ನ್ನು ಸಹ ರಚಿಸಿದ್ದೆ. ಟ್ರಸ್ಟ್ ಉದ್ಘಾಟನೆ ನಂತರ ಇಬ್ಬರು ಸತ್ಯವಂತರಿಗೆ ಪ್ರಶಸ್ತಿ ನೀಡಿ ಗೌರವಿಸಿದ ನಂತರ ಮತ್ತೆ ಬೇರೆ ಯಾವ ಚಟುವಟಿಕೆ ಮಾಡಿರಲಿಲ್ಲ.  ಇದೇ ಸಂಧರ್ಭದಲ್ಲಿ ಶಿವನೊಲುಮೆಯ ಸಾಕ್ಷಾತ್ಕಾರಿ ಶ್ರೀ ಮಾದಾರ ಚೆನ್ನಯ್ಯನವರ ಮೂರ್ತಿ ಅನಾವರಣ ನಿಮಿತ್ತ ಅವರ ಕುರಿತು ಲೇಖನವನ್ನು ಬರೆಯುವ ಸಂಬಂಧ ಸಂಶೋಧನೆ ನಡೆಸಿದಾಗ ನನಗೆ ತಿಳಿದ ವಿಷಯವೆಂದರೆ, ನಾನು ಈಗ ನನ್ನ ಜೀವನ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿದ್ದೇನೆ, ಅದನ್ನು ಶ್ರೀ ಮಾದಾರ ಚೆನ್ನಯ್ಯನವರು 900 ವರ್ಷಗಳ ಮೊದಲೇ ಮಾಡಿದ್ದರು . 900 ವರ್ಷಗಳಿಗೂ ಮುಂಚೆಯೇ ಸತ್ಯನಿಷ್ಠರಾಗಿ ಸಹ ಬದುಕಿದ್ದರು.  ಅದು ಸಹ  * *ಬಡತನದ ಗುಡಿಸಲಿನಲ್ಲಿ ವಾಸಿಸುವ ಪರಿಸ್ಥಿತಿಯಲ್ಲಿ ಇರುವಾಗ*,  * *ಕೂಲಿ ಮಾಡಿ ಬದುಕುವ ಪರಿಸ್ಥಿತಿಯಲ್ಲಿ,*   * *ಅಸ್ಪೃಶ್ಯತೆಯ ಕರಾಳ ಆಚರಣೆಯ ಪರಿಸ್ಥಿತಿಯಲ್ಲಿ ಸಹ ಸತ್ಯ ನಿಷ್ಠೆಯಿಂದ ಬದುಕಿದ್ದರು*. (ಇದರಿಂದಲೇ ಅವರಿಗೆ ಶಿವನೊಲುಮೆ ಪ್ರಾಪ್ತ...