Posts

Showing posts from May, 2024
Image
ಯಾರು ಅವಳು ? (Disclaimer : ಈ ಲೇಖನ ಎಲ್ಲರಿಗೂ ಸಂಬಂಧಪಟ್ಟಿದ್ದಲ್ಲ.  ಇದು  ಆಧುನಿಕತೆಯ ಸೋಗಿನಲ್ಲಿ ಮಾನವೀಯ  ವಿವೇಚನಾ ಶಕ್ತಿಯನ್ನು ಕಳೆದುಕೊಂಡಿರುವವರಿಗೆ ಮಾತ್ರ. ) ಯಾರು ಅವಳು ? ಆಕೆ ವಿದ್ಯಾವಂತೆಯಲ್ಲ ವಿದ್ಯಾವಂತರು ಯಾಕೆ ? ಆಕೆಯ ಮುಂದೆ ಆಕೆ ಮುಂದುವರಿದವಳಲ್ಲ ಮುಂದುವರಿದವರು ಎಲ್ಲಿ ? ಆಕೆಯ ಮುಂದೆ ?  ಸ್ತ್ರೀ ಹಕ್ಕು ಅರಿತವಳಲ್ಲ, ಆದರೆ ಗೌರವದ ಹಕ್ಕು ದೊರಕಿ‌ಸಿದವಳು, ಅವಳು ಕ್ರಾಂತಿಯ ಬಗ್ಗೆ  ತಿಳಿದಿರಲಿಲ್ಲ, ಆದರೆ ರಾಜಪ್ರಭುತ್ವವನ್ನೆ ಬೆಚ್ಚಿಬೀಳಿಸಿದಳು, ಅವಳು ಬಂಡಾಯವೂ ಅರಿತಿರಲಿಲ್ಲ, ಆದರೆ ಅನ್ಯಾಯದ ವಿರುದ್ಧ ಸಿಡಿದೆದ್ದಳು, ಅವಳು ಎಷ್ಟೋ ಅಮಾಯಕ ಮಹಿಳೆಯರಿಗೆ   ಸ್ಪೂರ್ತಿಯಾದಳು, ಧ್ವನಿಯಾದಳು,  ಅವಳು ತನ್ನವರ ನ್ಯಾಯದ ಬದುಕಿಗಾಗಿ ಬಲಿಯಾದಳು, ಅವಳು ಸ್ತ್ರೀಯರ ಗೌರವದ ಬಾಳಿಗೆ  ತನ್ನನ್ನೇ ಅರ್ಪಿಸಿಕೊಂಡಳು, ಆತ್ಮಾಹುತಿಯಾದಳು, ಅವಳು      ‌.    ‌.    .   .    .    . ಅವಳು ಯಾರು ? ಎಂದು ಹೇಳುವ ಮುಂಚೆ ಒಂದು ಸರಳ ಪ್ರಶ್ನೆ.  ಕೆಲವು ಪ್ರಶ್ನೆಗಳು ಬಹಳ ಕಷ್ಟಕರವಾಗಿರುತ್ತವೆ. ಉತ್ತರಿಸಲು ಬರುವುದಿಲ್ಲ.  ಆದರೆ ನಾನು ಈಗ ಕೇಳುತ್ತಿರುವ ಪ್ರಶ್ನೆ ಬಹಳ ಸರಳವಾದುದು. ಇದನ್ನು ನಾಗರಿಕರಾದ ಯಾರು ಬೇಕಾದರೂ ಬಹಳ ಸರಳವಾಗಿ ಉತ್ತರಿಸಬಹುದು. ಆದರೂ ತಟ್ಟನೆ ಸರ್ವರು...
Image
  *ಇಡೀ ರಾಜ್ಯದ ಜನ ನನಗೆ ಭಯಪಡುತ್ತಾರೆ. ನೀನು, ನನಗೆ ಅಂಜುವುದಿಲ್ಲವೇನು?*  ಈ ಮಾತನ್ನು ಭಗವಾನ್ ಬುದ್ಧನಿಗೆ ಹೇಳಿದವನು ಆಗಿನ ಮಗಧ ರಾಜ್ಯದ ಕುಖ್ಯಾತ ರಾಕ್ಷಸ *ಅಂಗುಲಿಮಾಲಿ* . ಅಂಗುಲಿಮಾಲ ದಾರಿಯಲ್ಲಿ ಸಂಚರಿಸುವ ಜನರನ್ನು ತಡೆದು ಅವರಲ್ಲಿರುವ ಒಡವೆ ವಸ್ತ್ರ ಸಂಪತ್ತನ್ನು ದೋಚಿ ಅವರನ್ನು ಕೊಲೆ ಮಾಡುತ್ತಿದ್ದ.  ಕೊಂದ ನಂತರ ಅವರ ಬೆರಳನ್ನು ಕತ್ತರಿಸಿ ದಾರಕ್ಕೆ ಪೋಣಿಸಿ ಕೊರಳಲ್ಲಿ ಹಾಕಿಕೊಳ್ಳುತ್ತಿದ್ದ. ಹೀಗೆ ಸಾವಿರ ಬೆರಳುಗಳನ್ನು ಹಾಕಿಕೊಳ್ಳುವ ಶಪಥ ಮಾಡಿದ್ದ. ಒಂದು ದಿನ ಭಗವಾನ್ ಬುದ್ಧ ದೇಶ ಸಂಚಾರ ಮಾಡುತ್ತಾ ಕಾಡಿನ ಸಮೀಪದ ಹಳ್ಳಿಗೆ ಬಂದಾಗ ಹಳ್ಳಿಯ ಜನ ಹೆದರುತ್ತಾ ಈ ವಿಷಯ ಹೇಳಿ, ನೀವು ಆ ಕಡೆ ಹೋಗಬೇಡಿ ಎಂದು ಹೇಳುತ್ತಾರೆ. ಆದರೂ ಬುದ್ಧ ಆ ಕಾಡಿನ ಕಡೆ ಯಾವುದೇ ಅಂಜಿಕೆಯಿಲ್ಲದೆ ನಿರ್ಭೀತಿಯಿಂದ ನಡೆದ.   *ಆಗ ಅಂಗುಲಿಮಾಲ ನಿಲ್ಲು, ನಾನ್ಯಾರು ಎನ್ನುವುದು ಗೊತ್ತಿಲ್ಲವೇನು?*   *ಇಡೀ ದೇಶದ ಶಕ್ತಿಶಾಲಿ ವ್ಯಕ್ತಿ. ನನಗೆ ಇಡೀ ದೇಶದ ಜನ ಅಂಜಿ ಗಡ ಗಡ ನಡಗುತ್ತಾರೆ* ನಿನಗೆ ಸ್ವಲ್ಪವೂ  ಭಯವಾಗುತ್ತಿಲ್ಲವೇನು ? ಎಂದು ಕೇಳುತ್ತಾನೆ.  *ಆಗ ಬುದ್ಧ ನನಗೇಕೆ ಭಯ?*   *ಯಾರಿಗೆ ಸಾವಿನ ಭಯವಿದೆ, ಅವರು ಅಂಜುತ್ತಾರೆ.* ನಾನು ಎನ್ನುವ ಅಹಂಕಾರದ ಸಾವು ನನಗೆ ಆಗಲೇ ಆಗಿದೆ. ನನಗೇಕೆ ಭಯ.  *ಯಾರು ತಪ್ಪು ಕೆಲಸ ಮಾಡುತ್ತಾರೆ, ಅವರು ಭಯಪಡುತ್ತಾರೆ.* ನನಗೇಕೆ ಭಯ. ...

ಬೋಧಿಸಿದವರು ಭೋಧಿಸಿದಂತೆ ಪರಿವರ್ತನೆ ತಂದವರು

Image
  14/04/2024 "ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಿಕ್ಕು ಸರ್ವಜ್ಞ." ತನಗೆ ಯಾವುದರಿಂದ ನೋವಾಗುತ್ತದೆ ? ಅದರಿಂದ ಬೇರೆಯವರಿಗೂ ಸಹ ಅದೇ ರೀತಿಯ ನೋವಾಗುತ್ತದೆಯೆಂದು ತಿಳಿದು, ಪರರನ್ನು ನೋಯಿಸದೆ, ಪರರನ್ನು ಸಹ ತನ್ನಂತೆ ತಿಳಿದರೆ ಅಂತಹವರು ಅತಿ ಶ್ರೇಷ್ಠ ಕೈಲಾಸ ವಾಸಕ್ಕೆ ಯೋಗ್ಯರು. ಇದು ಸರ್ವಜ್ಞನ ವಚನದ ತಿರುಳು. ಆದರೆ "ಮೇಲು ಕೀಳಂಬ" ಆಚರಣೆಗಳನ್ನು ಶತ ಶತಮಾನಗಳಿಂದ ಪಾರಂಪರಿಕವಾಗಿ ಅನುಸರಿಸಿಕೊಂಡು ಬಂದ ಜನರು, ತನ್ನಂತೆ ಪರರು ಎಂಬ ಧರ್ಮದ ಹಾಗೂ ಧಾರ್ಮಿಕ ಯತಿಗಳ ಮಾತಿನ ಕುರಿತು ಚಿಂತಿಸಲಿಲ್ಲ, ಯೋಚಿಸಲಿಲ್ಲ, ಆ ಕಡೆ ಗಮನವೇ ಕೊಡಲಿಲ್ಲ.  ಪರರಿಗೂ ತಮ್ಮಂತೆ ನೋವಾಗುತ್ತದೆಯೆಂದು ಅರಿಯಲಿಲ್ಲ. ಪರರಿಗೂ ತಮ್ಮಂತೆ ಗೌರವ, ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯದ ಅವಶ್ಯಕತೆಯಿದೆಯೆಂದು ಚಿಂತಿಸಲಿಲ್ಲ. ಇವುಗಳ ಅರಿವು ಮೂಡಿಸಲು, ಇವುಗಳನ್ನು ಸರ್ವರಿಗೂ ದೊರಕುವಂತೆ ಮಾಡಲು ಶಕ ಪುರುಷ, ಯುಗ ಪುರುಷನೇ ಜನ್ಮ ತಳೆಯಬೇಕು.  ಅವರೇ ಬಾಬಾಸಾಹೇಬ.  14ನೇ ಏಪ್ರಿಲ್ ನ ಇಂದಿನ ಅವರ ಜನ್ಮ ದಿನದಂದು ನಾವು ಈಗ ತಿಳಿಯಬೇಕಾಗಿರುವುದೇನು ? ಕಲಿಯಬೇಕಾಗಿರುವುದೇನು ?  ಅಂಬೇಡ್ಕರವರು ಯಾವುದಕ್ಕಾಗಿ ಹೋರಾಟ ಮಾಡಿದರು?   ಆ ಸಮಯದಲ್ಲಿ ಯಾವುದು ಇರಲಿಲ್ಲ ? ಯಾವುದನ್ನು ಪಡೆಯುವದಕ್ಕೋಸ್ಕರ ಹೋರಾಟ ಮಾಡಿದರು ? ಈ ಪ್ರಶ್ನೆಗಳನ್ನು ಆಳವಾಗಿ ಯೋಚಿಸಿ ಉತ್ತರವನ್ನು ಹುಡುಕಿದಾಗ, ಬಾಬಾಸಾಹೇಬರ ಜೀವನದ ಕೆಲಸಗಳು, ಜನರಿಗೆ ಪ್ರಾಪ...

ಸೀತಾರಾಮರನ್ನು ಆರಾಧಿಸದಿದ್ದರೆ, ನೆನೆಯದಿದ್ದರೆ ನಡೆಯುವುದಿಲ್ಲವೇನು ?*

(17 ಏಪ್ರಿಲ್ 2024 ರಂದು ರಾಮ ನವಮಿಯಂದು ಬರೆದ ಲೇಖನ)  *ನಾವು ಶ್ರೀರಾಮ ಸೀತೆಯನ್ನು ಏಕೆ ನೆನೆಯಬೇಕು ? ಸೀತಾರಾಮರನ್ನು ಆರಾಧಿಸದಿದ್ದರೆ, ನೆನೆಯದಿದ್ದರೆ ನಡೆಯುವುದಿಲ್ಲವೇನು ?* ಶ್ರೀ ರಾಮ ಮತ್ತು ಸೀತೆ ಅರಮನೆಯ ರಾಜ ವೈಭೋಗಗಳಲ್ಲಿ ಬೆಳೆದವರು. ಕಾಡಿನಲ್ಲಿ ವಾಸಿಸುವವರಿಗೆ ಕಲ್ಲು ಮುಳ್ಳುಗಳು ಚುಚ್ಚಿದರೂ ಅದೊಂದು ದೊಡ್ಡ ದುರ್ಘಟನೆಯ ರೀತಿ ಅನುಭವವಾಗುವದಿಲ್ಲ. ಅದು ಅವರಿಗೆ ಸಾಮಾನ್ಯ ವಿಷಯ. ಆದರೆ ಅರಮನೆಯ ಹುಲ್ಲು ಹಾಸಿಗೆಯ ಮೇಲೆ ನಡೆದವರಿಗೆ ಒಂದು ಮುಳ್ಳು ಚುಚ್ಚಿದರು ಒಂದು ದೊಡ್ಡ ಆಘಾತದ ಅನುಭವ ನೀಡುತ್ತದೆ.. ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ರಾಮ ಸೀತೆಯರು, ಇಂತಹ ಕಲ್ಲು ಮುಳ್ಳುಗಳು ಹಾಗೂ ರಾಕ್ಷಸರಿಂದ ಕೂಡಿದ ದುರ್ಗಮ ಅರಣ್ಯದಲ್ಲಿ ಹದಿನಾಲ್ಕು ವರ್ಷಗಳ ವರೆಗೆ ವನವಾಸದಲ್ಲಿ ಕಳೆದರು. ಅರಮನೆಯಲ್ಲಿ ಬೆಳೆದವರಿಗೆ ಕಾಡಿನ ವಾಸವೇ ಕಷ್ಟಕರವಾಗಿದ್ದಾಗ ರಾವಣ ಎನ್ನುವ ಶತ್ರುವಿನಿಂದ ತೊಂದರೆ ಆರಂಭವಾಯಿತು. ಅದರಲ್ಲಿಯೂ ಸೀತೆ ತನ್ನ ಹಿತ ಬಯಸುವ ಒಬ್ಬರೇ ಒಬ್ಬರು ಇಲ್ಲದ ಸ್ಥಳದಲ್ಲಿ, ತನಗೆ ಕೆಟ್ಟದ್ದನ್ನೇ ಬಯಸುವವನ ರಾಜ್ಯದಲ್ಲಿ, ತನ್ನ ಪತಿ ಶ್ರೀರಾಮನ ಆಶಾವಾದದ ಯಾವ ಸೂಚನೆಗಳು, ಸಂದೇಶಗಳು (WhatsApp, Facebook ಇಲ್ಲದ ಸಮಯ) ತಲುಪದೆ ಇರುವಂತಹ ಕಾಲದಲ್ಲಿ ಒಂಟಿಯಾಗಿ ಎಷ್ಟೋ ದಿನಗಳು ಕಳೆದಳು. ಒಂದಷ್ಟು ಸಮಯ ಸೀತೆ, ರಾಮರ ಜಾಗದಲ್ಲಿ ನಾವು ಇದ್ದುಕೊಂಡು ನೋಡೋಣ. ಆ ಕಷ್ಟದ, ನೋವಿನ ಸ್ಥಿತಿ ಹೇಗಿರಬಹುದು ? ಸೀತೆಗೆ ಹಾಗ...

ನಿಜವಾಗಿಯೂ ಇದು ಸತ್ಯವೇ ? ಹೀಗೆ ಆಗಲೂ ಸಾಧ್ಯವೇ ?

Image
           ( 23 ಏಪ್ರಿಲ್ 2024 ಹನುಮಾನ ಜಯಂತಿಯಂದು ಬರೆದ ಲೇಖನ )                          ನಿಜವಾಗಿಯೂ ಇದು ಸತ್ಯವೇ ? ಹೀಗೆ ಆಗಲೂ ಸಾಧ್ಯವೇ ?                ನಾವು ಹನುಮಾನ ದೇವರ ಜೀವನದ ಒಂದು ಘಟನೆಯನ್ನು ಕೇಳಿದಾಗ ನಮ್ಮಲ್ಲಿ ಈ ಮೇಲಿನಂತೆ ಯೋಚನೆ ಬರುತ್ತದೆ. ರಾಮ ಸೀತೆಯರು ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ, ಸೀತೆ ತಮಗೆ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುವ ಉದ್ದೇಶದಿಂದ ಎಲ್ಲ ಕಪಿ ಸೈನ್ಯಕ್ಕೆ ಭೋಜನ ಏರ್ಪಡಿಸಿ, ಉಡುಗೊರೆಯನ್ನು ನೀಡುತ್ತಿರುತ್ತಾರೆ. ಎಲ್ಲರ ಸರದಿ ಮುಗಿದ ಮೇಲೆ ಹನುಮಾನ ದೇವರ ಸರದಿ ಬರುತ್ತದೆ.  ಆಗ ಸೀತಾ ಮಾತೆ ಹನುಮಾನ ದೇವರಿಗೆ ತನ್ನ ಕೊರಳಲ್ಲಿರುವ ಅತ್ಯಂತ ಬೆಲೆಬಾಳುವ ಮುತ್ತಿನ ಹಾರವನ್ನೇ ಉಡುಗೊರೆಯಾಗಿ ಕೊಡುತ್ತಾರೆ. ಆಗ ಅದನ್ನು ಪಡೆದು ಹನುಮಾನ ದೇವರು ಬಹಳ ಖುಷಿ ಪಡಬಹುದೆಂದು, ಸೀತಾ ಮಾತೆ ನಿರೀಕ್ಷಿಸುತ್ತಿರುತ್ತಾರೆ.   ಆದರೆ ಹನುಮಾನ ದೇವರು, ಮುತ್ತಿನ ಹಾರದ ಒಂದೊಂದು ಮುತ್ತುಗಳನ್ನು ಒಡೆಯಲು ಪ್ರಾರಂಭಿಸುತ್ತಾರೆ. ಉಡುಗೊರೆಯಿಂದ ಸಂತೋಷ ಪಡಬಹುದೆಂದು ನಿರೀಕ್ಷಿಸಿದ್ದ ಸೀತಾ ಮಾತೆಗೆ ಪ್ರಭು ಹನುಮಂತರ ಈ ಕೃತ್ಯ ಬಹಳ ಸಿಟ್ಟು ತರುತ್ತದೆ.  ಆಗ ಸೀತಾ ಮಾತೆ ಸಿಟ್ಟಿನಿಂದ, ನಾನು ಪ್ರೀ...

ಜೀವಿಗಳ ಶ್ರೇಣಿ

  ಜೀವಿಗಳ ಶ್ರೇಣಿ 1) ತನ್ನ ಒಳಿತು ಕೆಡುಕುಗಳ ಯೋಚನೆ ಮಾಡದೆ ಕೇವಲ ಅವಶ್ಯಕತೆ ಪೋರೈಸಿಕೊಳ್ಳುವಂತಹ ಪ್ರಾಣಿ.  2) ಅವಶ್ಯಕತೆ ಪೂರೈಸಿಕೊಳ್ಳುವಾಗ ಒಳಿತು ಕೆಡುಕುಗಳ ಬಗ್ಗೆ ಯೋಚನೆ ಮಾಡುವಂತಹ ತಿಳುವಳಿಕೆಯಿರುವ ಪ್ರಾಣಿ. 3) ಮೂರನೇ ರೀತಿಯ ಪ್ರಾಣಿ ತನ್ನ  ಅವಶ್ಯಕತೆ ಪೂರೈಸಿಕೊಳ್ಳಲು ಕೇವಲ ಒಳಿತು ಕೆಡುಕುಗಳ ಬಗ್ಗೆ  ಮಾತ್ರ ಯೋಚನೆ ಮಾಡುವುದಿಲ್ಲ. ಇದರ ಜೊತೆಗೆ ಸರಿ ತಪ್ಪುಗಳನ್ನು ಸಹ ಯೋಚಿಸಿ. ಅದು ತಪ್ಪಾಗಿದ್ದರೂ ಸಹ ಅದು ಸರಿಯೆಂದು ಸಮರ್ಥನೆಯ ವಿಚಾರಗಳನ್ನು ನೀಡಿ ತನ್ನ ಅವಶ್ಯಕತೆ ಪೊರೈಸಿಕೊಳ್ಳುತ್ತದೆ. 4) ನಾಲ್ಕನೆಯದೆ ಮನುಷ್ಯತ್ವದ ಸಂಸ್ಕಾರ ಇರುವ ಮನುಷ್ಯ. ಈತ/ಈಕೆ‌ ಸರಿ, ತಪ್ಪು ಯೋಚನೆ ಮಾಡಿ ಕೇವಲ ಸರಿ ಇದ್ದಾಗ ಮಾತ್ರ ಆ ಅವಶ್ಯಕತೆ ಪೊರೈಸಿಕೊಳ್ಳುತ್ತವೆ. ಇದಕ್ಕೆ ಹೊರತು ತನ್ನ ಬುದ್ಧಿ ಶಕ್ತಿಯಿಂದ ತಪ್ಪನ್ನು ಸರಿ ಎಂದು ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ.  (ಸರಿ ಇಲ್ಲದಿದ್ದರೆ "ಸಂಯಮ" ಎನ್ನುವ ಅಸ್ತ್ರ ಉಪಯೋಗಿಸುತ್ತವೆ. ) ಇನ್ನೂ ಮುಂದಿನ ಹಂತಗಳು ಸಹ ಇವೆ.

"ಅನಾಚಾರವನ್ನು ಸಮಾಜ ಸ್ವೀಕರಿಸಲಿ" ಎನ್ನುವ ಲೇಖನಕ್ಕೆ ಪ್ರತಿಕ್ರಿಯೆ

 (#ಜೀವಿಗಳ_ಶ್ರೇಣಿ) (ಒಂದು ಅನಾಚಾರವನ್ನು ಆಚಾರವೆಂದು ಸ್ವೀಕರಿಸಬೇಕು. ಸಮಾಜ ಅವರನ್ನು ಒಪ್ಪಿಕೊಳ್ಳಬೇಕು. ಹಾಗೂ ಗೌರವಿಸಬೇಕು, ಎಂದು ಒಬ್ಬರು ಬರೆದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಈ ಲೇಖನ ಬರೆದಿರುವೆ. ಹಾಗಾಗಿ ಮೊದಲು ಅವರು ಬರೆದಿರುವ ಲೇಖನ ಒಮ್ಮೆ ಓದಿ. ಲೇಖನದ Link 👇) https://kannada.asianetnews.com/women/masturbation-myths-parenting-tips-and-adolescent-girls-sexual-awareness-scllbk G. H ಮೇಡಮ್ , ನೀವು ನಿಜಕ್ಕೂ ನಿಮ್ಮ ಉತ್ತಮ ಸಂವಹನ ಕೌಶಲ್ಯದಿಂದ ಹಾಳಾಗುತ್ತಿದ್ದ ಒಂದು ಹುಡುಗಿಯ ಬಾಳನ್ನು ಕಾಪಾಡಿದ್ದೀರಿ. ವಿದ್ಯಾರ್ಥಿನಿಯ ಪ್ರತಿ ಸಹಾನುಭೂತಿ ತೋರಿ ಆಕೆಯ ಒಳ ಮನಸ್ಸನ್ನು ಅರಿತು ಅದಕ್ಕೆ ಒಳ್ಳೆಯ ಚಿಕಿತ್ಸೆಯನ್ನೇ ನೀಡಿದ್ದೀರಿ. ಆ ಹುಡುಗಿಗೆ ಮತ್ತೆ ಸರಿ ದಾರಿಯಲ್ಲಿ ತರುವುದಕ್ಕಾಗಿ ನೀವು ಆಕೆಯೊಂದಿಗೆ ಆಡಿರುವ ಮಾತುಗಳು (ಹಸ್ತ ಮೈಥುನ ತಪ್ಪಲ್ಲ ಎಂದು ಹೇಳಿದ್ದು) ಆ ಸಮಯದ ಅವಶ್ಯಕತೆಯೇ ಆಗಿತ್ತು. ಹಾಗೆಯೇ ನೀವು ಆಕೆಯ ಜೊತೆ ಸ್ಪಂದಿಸಿದ್ದು ಅಪ್ಪಿಕೊಂಡಿದ್ದು, ಪ್ರೀತಿ ತೋರಿದ್ದು, ಕರುಣೆ ಕಾಳಜಿ ತೋರಿದ್ದು. ಇವೆಲ್ಲವೂ ಸರಿ ಇದೆ. ಒಂದು ವೇಳೆ ನೀವು ಹೀಗೆ ಮಾಡದೆ ಇದ್ದಲ್ಲಿ ಆಕೆ ತನ್ನ ಅಂತರಂಗವನ್ನೆ ತೆರೆದುಕೊಳ್ಳುತ್ತಿರಲಿಲ್ಲ. ಮುಕ್ತವಾಗಿ ನಿಮ್ಮೊಂದಿಗೆ ಮಾತನಾಡುತ್ತಿರಲಿಲ್ಲ. ಆಗ ಆಕೆಯ ಸಮಸ್ಯೆ ಅರಿತು, ಆ ಸಮಸ್ಯೆಯಿಂದ ಆಕೆಯನ್ನು ಹೊರತರಲು ಆಗುತ್ತಿರಲಿಲ್ಲ. ನೀವು ಕೇವಲ ಆ ಹುಡುಗಿಯ...

ಹುಚ್ಚು ಬಾವಿಯ ಕಥೆ

(ಈ ಕಥೆ ಪೂರ್ಣ ಜ್ಞಾನಿಗಳಿಗಲ್ಲ. ಪೂರ್ಣ ಜ್ಞಾನಿಗಳು ಈ ಕಥೆಯಿಂದ ದೂರವೇ ಇರಲಿ.) ಹುಚ್ಚು ಬಾವಿಯ ಕಥೆ ಒಂದು ಹಳ್ಳಿಯಲ್ಲಿ ಒಬ್ಬ ವ್ಯಕ್ತಿಯ ತಪ್ಪಿಗಾಗಿ ಆತನಿಗೆ ಛೀಮಾರಿ ಹಾಕಿ ಆತನನ್ನು ಊರಿನಿಂದ ಬಹಿಷ್ಕಾರ ಹಾಕಲಾಗುತ್ತದೆ. ಅಪಮಾನದಿಂದ ಕ್ರೋಧೀತನಾದ ಆತನು ತನ್ನ  ಅಪಮಾನಕ್ಕಾಗಿ ಹಳ್ಳಿಯವರ ವಿರುದ್ಧ ಸೇಡು ತೀರಿಸಿಕೊಳ್ಳಲು ನಿಶ್ಚಯಿಸಿ ಉಗ್ರ ತಪಸ್ಸು ಆಚರಿಸಿ ಸಿದ್ದಿಗಳನ್ನು ಪಡೆದುಕೊಳ್ಳುತ್ತಾನೆ. ಕೆಲವು ವರ್ಷಗಳ ನಂತರ ಸಿಟ್ಟು, ಆಕ್ರೋಶ, ಸೇಡಿನ ಮನೋಭಾವದಿಂದ ತನ್ನ ಶಿಷ್ಯನೊಂದಿಗೆ ಊರಿಗೆ ಬರುತ್ತಾನೆ.  ಊರಿನ ಸ್ವಲ್ಪ ದೂರದಲ್ಲಿ ಒಂದು ಬಾವಿ ಇರುತ್ತದೆ. ಊರಿನವರೆಲ್ಲರು ಆ ಬಾವಿ ನೀರನ್ನೆ ಬಳಸುತ್ತಿರುತ್ತಾರೆ. ಆ ವ್ಯಕ್ತಿ ಕೆಲವು ಮಂತ್ರಗಳನ್ನು ಹೇಳಿ ತಾನು ತಂದಿದ್ದ ಗಿಡಮೂಲಿಕೆಗಳನ್ನು ಬಾವಿಯಲ್ಲಿ ಹಾಕುತ್ತಾನೆ. ಆಗ ಶಿಷ್ಯ ಹೀಗೆ ಮಾಡಿದ ಉದ್ದೇಶವೇನೆಂದು ? ಕೇಳುತ್ತಾನೆ. ಆಗ ನನಗೆ ಮಾಡಿರುವ ಅಪಮಾನಕ್ಕಾಗಿ ಸೇಡು ತೀರಿಸಿಕೊಳ್ಳುತ್ತಿದ್ದೇನೆ. ಈಗ ನೋಡು ಈ ಬಾವಿಯ ನೀರು ಕುಡಿಯುವರೆಲ್ಲರೂ ಹುಚ್ಚರಾಗುತ್ತಾರೆ, ಎನ್ನುತ್ತಾನೆ.  ಹೀಗೆ ಹೇಳುವಾಗ ಅಲ್ಲಿಂದ ಹಾದುಹೋಗುತ್ತಿದ್ದ ಹಳ್ಳಿಯ ಒಬ್ಬ ವ್ಯಕ್ತಿಗೆ ಈ ಮಾತು ಕೇಳಿಸುತ್ತದೆ. ಆಗ ಕತ್ತಲಾಗುತ್ತಿರುವದರಿಂದ ಯಾರು ಸರಿಯಾಗಿ ಕಾಣುವುದಿಲ್ಲ. ಕೇವಲ ನೀರು ಕುಡಿದರೆ ಹೇಗೆ ಹುಚ್ಚರಾಗುತ್ತಾರೆ ? ಇದು ನಂಬಲಿಕ್ಕೆ ಸಾಧ್ಯವಿಲ್ಲವೆಂದು ಆ ಮಾತನ್ನು ಹಗುರವಾಗಿ ತೆಗೆದುಕೊಂಡು ತನ...