*ಪ್ರಶ್ನೆ ಎಂದರೇನು ? (ಭಾಗ 2)* ಕಳೆದ ಲೇಖನದಲ್ಲಿ ನಮಗೆ ಗೊತ್ತಿಲ್ಲದೆ ಇರುವುದನ್ನು, ತಿಳಿದವರಿಗೆ ಕೇಳಬೇಕು ಅಥವಾ ಮನಸ್ಸಿನಲ್ಲಿಯೇ ಅದರ ಕುರಿತು ಪ್ರಶ್ನಿಸಬೇಕು ಎಂದು ಹೇಳಲಾಗಿತ್ತು. ಗೊತ್ತಿಲ್ಲದೆ ಇರುವುದರ ಬಗ್ಗೆ, ಬೇರೆಯವರಿಗೆ ಪ್ರಶ್ನಿಸದಿದ್ದರು ಬಹಳಷ್ಟು ಜನ ಮನಸ್ಸಿನಲ್ಲಿಯೇ ಆ ವಿಷಯದ ಕುರಿತು ಪ್ರಶ್ನೆ ಮಾಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ *"ಸಾಧ್ಯವಾದರೆ*", ಅದನ್ನು ಮನಸ್ಸಿನಲ್ಲಿಯೇ ಪ್ರಶ್ನೆ ಮಾಡುವ ಬಗ್ಗೆ ನಾವು ಎಚ್ಚರವಹಿಸಬೇಕು. ಕಾರಣವೇನೆಂದರೆ ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಪ್ರಶ್ನೆ ಮಾಡಿದಾಗ, ಅದು ಮನಸ್ಸಿನಲ್ಲಿ ಮಾಡಿದರೂ ಸಹ, ಜಗತ್ತು ಅದರ ಬಗ್ಗೆ ಉತ್ತರವನ್ನು ನೀಡುತ್ತದೆ. ಉತ್ತರ ನೀಡುವ ಸಮಯದಲ್ಲಿ ಹೆಚ್ಚು ಕಡಿಮೆಯಾಗಬಹುದು. ಆದರೆ ಉತ್ತರ ಸಿಗುವುದಂತು ಗ್ಯಾರಂಟಿ. *ಇದು ಎಲ್ಲರಲ್ಲಿಯೂ ಘಟಿಸಿರುತ್ತದೆ. ಆದರೆ ಗಮನಿಸಿರುವುದಿಲ್ಲ. ನನ್ನದೆ ಒಂದು ಉದಾಹರಣೆ ಹೇಳುತ್ತೇನೆ. ನಾನು ಚಿಕ್ಕವನಿರುವಾಗ ನನ್ನ ಸುತ್ತಮುತ್ತ ಇರುವ ಸಂಬಂಧಿಕರು, ಸ್ನೇಹಿತರು, ಪರಿಚಿತರು ನನಗೆ ತಲೆ ನೋಯ್ಯುತ್ತಿದೆಯೆಂದು ತಮ್ಮ ದುಃಖ, ನೋವು ತೋಡಿಕೊಳ್ಳುತ್ತಿದ್ದರು.* ಅನೇಕರು, ಅನೇಕ ಸಲ ಹೀಗೆ ಹೇಳುವುದನ್ನು ಕೇಳಿದ ನಂತರ ನನ್ನ ಮನಸ್ಸಿನಲ್ಲಿ ನಾನು ಕೇಳಿಕೊಂಡ ಪ್ರಶ್ನೆ, ಎಲ್ಲರೂ ತಲೆ ನೋವು, ತಲೆ ನೋವು ಎನ್ನುತ್ತಾರೆ. ಇದರ ಬಗ್ಗೆ ನನಗೆ ಗೊತ್ತೇ ಇಲ್ಲವಲ್ಲ. ತಲೆ ನೋವು ಅಂದರೆ ಹೇಗಿರುತ್ತದೆ ? ಎನ್ನುವ ಪ್ರ...