ಅಲ್ಪ ಕಲ್ಪನೆ ಅಲ್ಪ ಸತ್ಯ ಭಾಗ 4 (ಶಿಕ್ಷಕ)
ಭಾಗ -3 ಲಿಂಕ್ 👇
https://urainpoems.blogspot.com/2024/09/3-2-httpsurainpoems.html
(ಹಿಂದಿನ ಸಂಚಿಕೆಯಲ್ಲಿ : ಜಗತ್ತಿನ ಸಮಸ್ಯೆಗಳಿಗೆ ಯಾವುದೇ ರೀತಿಯ ಸೂಕ್ತ ಪರಿಹಾರ ಕಾಣದಿದ್ದಾಗ, ದೇಶಮುಖ್ ಸರ್ ಈ ಉದ್ದೇಶದಿಂದಲೇ ಸುರೇಶ ತನ್ನ ಮುಂದಿನ ಜೀವನದ ಉದ್ದೇಶವನ್ನು ಘೋಷಣೆ ಮಾಡಿದ್ದಾನೆ ಎಂದು ನೆನಪಾಗಿ ಡಾ. ನಾಗೇಶ ಗೆ ಸುರೇಶನನ್ನು ಕರೆ ಮಾಡಿ ಕರೆಯಲು ಹೇಳುತ್ತಾರೆ. ನಂತರ.... )
ಆಗ ಡಾ. ನಾಗೇಶ ಸುರೇಶನಿಗೆ ಕರೆ ಮಾಡಿ ಬರಲು ಹೇಳುತ್ತಾರೆ.
ಆಗ ರಾಜೇಶ, ವಿಜ್ಞಾನ ವಿಭಾಗದಲ್ಲಿ ನಿಮ್ಮ ಜೊತೆ ಇದ್ದ ಸುರೇಶ ಏನು ? ಎಂದು ಕೇಳಿದ. ಆಗ ಹೌದು ಎಂದು ನಾಗೇಶ ಹೇಳಿದರು. ಆಗ ರಾಜೇಶ, *ಈ ಬಾರಿ ಸುರಕ್ಷೆ ಕುರಿತು ನಮ್ಮ ಸಂಸ್ಥೆಯವರು ಆತನನ್ನು ಅತಿಥಿಯಾಗಿ ಕರೆದಿದ್ದ ಕಾರ್ಯಕ್ರಮದಲ್ಲಿ ಆತ ಬಹಳ ಚೆನ್ನಾಗಿ ಮಾತನಾಡಿದ್ದ*, ಎಂದು ನಮ್ಮ ಹುಡುಗರು ಹೇಳುತ್ತಿದ್ದರು ಎಂದು ಹೇಳಿದ. ಆಗ ಡಾ. ನಾಗೇಶ, ಹೌದು ನೀವು ಆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಾನು ಸಹ, ಆತ ಪ್ರಥಮ ಬಾರಿಗೆ ಬೇರೆ ಸ್ಥಳದ ದೊಡ್ಡ ವೇದಿಕೆಯಲ್ಲಿ ಆ ರೀತಿಯಾಗಿ ಮಾತನಾಡಿದ್ದು ನೋಡಿದೆ.
*ಆಗ ನನಗೆ ನಮ್ಮ ಹೈಸ್ಕೂಲಿನ ಘಟನೆ ನೆನಪಾಯಿತು. ಆ ಘಟನೆ ನಂತರ ಆತ ಮುಂದೆ ಮಾತನಾಡುತ್ತಾನೆಯೋ ? ಇಲ್ಲವೋ ಎನ್ನುವ ಭಾವನೆ ಹಲವರಲ್ಲಿ ಮೂಡಿತ್ತು*. ಆದರೆ ಈಗ ದೊಡ್ಡ ವ್ಯತ್ಯಾಸವೇ ಆತನ ವ್ಯಕ್ತಿತ್ವದಲ್ಲಿ ಕಾಣುತ್ತಿದೆ ಎಂದರು. ಯಾಕೆ ಏನಾಗಿತ್ತು ಎಂದು ರಾಜೇಶ ಕೇಳಿದ.
ಶಾಲೆಯ ಒಂದು ಕಾರ್ಯಕ್ರಮದಲ್ಲಿ ಆತನಿಗೆ ವಂದನಾರ್ಪಣೆ ಜವಾಬ್ದಾರಿ ಕೊಟ್ಟಿದ್ದರು. ವಂದನಾರ್ಪಣೆ ಮಾಡುವಾಗ ಆತ ಎಷ್ಟೊಂದು ಸಭಾಕಂಪನದ ಭಯ ಕ್ಕೆ ಒಳಗಾಗಿದ್ದನೆಂದರೆ, ಆತನಿಗೆ ಯಾವ ಶಿಕ್ಷಕರ ಬಗ್ಗೆ ಅಭಿಮಾನ ಇತ್ತೋ ಅವರಿಗೆ ವಂದನೆ ಹೇಳುವಂತಹ ಸಮಯ, *ಕೆಲವು ಮಾತನಾಡಿದ ನಂತರ ಏನು ಅವರ ಹೆಸರು ತೆಗೆದುಕೊಳ್ಳಬೇಕು ಅಷ್ಟರಲ್ಲಿಯೇ ಆ ಶಿಕ್ಷಕರ ಹೆಸರೇ ಮರೆತುಹೋಯಿತು. ಸ್ವಲ್ಪ ಸಮಯ ನೆನಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಆತನ ನೆಚ್ಚಿನ ಶಿಕ್ಷಕರ ಹೆಸರೇ ಆತನಿಗೆ ನೆನಪಿಗೆ ಬರಲಿಲ್ಲ. ಆ ಸಮಯ ಆತನು ಎಲ್ಲರ ಅಪಮಾನ, ಭಯ, ದುಗುಡದಲ್ಲಿದ್ದ. ಅದೇ ಸಮಯದಲ್ಲಿ ಕೆಲವು ಹುಡುಗ ಹುಡುಗಿಯರ ನಗೆಪಾಟಲಿಗಿಡಾಗಿದ್ದ. ಆತನಿಗೆ ಆಗ ಎಲ್ಲಾ ಶಿಕ್ಷಕರ ಮುಂದೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಮುಂದೆ ಯಾರ ಬಳಿಯೂ ಹೇಳಿಕೊಳ್ಳಲಾಗದಷ್ಟು ಅವಮಾನ ಆಗಿತ್ತು*, ಎಂದು ಡಾ. ನಾಗೇಶ ಹೇಳಿದರು.
ಮುಂದುವರಿದು, ಆತನಿಗೆ ಯಾವ ಶಿಕ್ಷಕರ ಹೆಸರು ಹೇಳಲು ಬರಲಿಲ್ಲ ಗೊತ್ತೆ ? ಎಂದು ರಾಜೇಶ್ ಗೆ ಕೇಳಿದರು. ರಾಜೇಶ ಗೊತ್ತಿಲ್ಲ ಎಂದಾಗ, ಅವರೇ ಇಲ್ಲಿ ಕುಳಿತಿರುವ ದೇಶಮುಖ್ ಸರ್ ಎಂದು ನಾಗೇಶ ಹೇಳಿದರು..
ಆಗ ದೇಶಮುಖ್ ಸರ್, ಹೌದು ಆಗ, ಅಲ್ಲಿಯೇ ಆತನ ಹಿಂದಿದ್ದ ನಾನೇ ನನ್ನ ಹೆಸರು ಆತನಿಗೆ ಹೇಳಿ ಸಹಾಯ ಮಾಡಿದೆ ಎಂದರು. *ಮುಂದುವರಿದು ಆದರೆ ನಾಗೇಶ, ಜೀವನದಲ್ಲಿ ಒಬ್ಬ ಮನುಷ್ಯನಿಗೆ ಒಂದು ಛಲವಿದ್ದಾಗ, ಆತ ಎಷ್ಟೇ ಸೋತರು, ಎಷ್ಟೇ ಅಪಮಾನಕ್ಕೆ ಒಳಗಾದರು ತನ್ನ ಪ್ರಯತ್ನ ಬಿಡುವುದಿಲ್ಲ. ನಿರಂತರ ಪ್ರಯತ್ನದಿಂದ ಒಂದು ದಿನ ಆ ವ್ಯಕ್ತಿ ಯಶಸ್ವಿಯಾಗುತ್ತಾನೆ. ಇದನ್ನು ನಾನು ಸುರೇಶನಲ್ಲೀ ಕಾಣುತ್ತಿದ್ದೇನೆ* ಎಂದು ದೇಶಮುಖ್ ಸರ್ ಹೇಳಿದರು.
ಅಷ್ಟರಲ್ಲಿಯೇ ಅವರ ಮೊಬೈಲ್ ರಿಂಗ್ ಆಯಿತು. ಮೊಬೈಲ್ನಲ್ಲಿ ಮಾತನಾಡಿದ ನಂತರ ದೇಶಮುಖ್ ಸರ್ ನಮ್ಮ ಮನೆಗೆ ಮದುವೆ ಆಮಂತ್ರಣ ಕೊಡಲು ಹತ್ತಿರದ ಸಂಬಂಧಿಕರು ಬಂದಿದ್ದಾರಂತೆ, ನಾನು ಈಗ ಹೋಗಬೇಕು. ಸುರೇಶ ಬಂದರೆ ಎಲ್ಲಾ ವಿಷಯವನ್ನು ಕೇಳಿ ನಂತರ ನನಗೆ ತಿಳಿಸು, ಮತ್ತೊಮ್ಮೆ ಬರುತ್ತೇನೆ ಎಂದರು. ರಾಜೇಶ ಸಹ, ನನಗೆ ಇನ್ನೂ ಬಹಳಷ್ಟು ಜನರಿಗೆ ಮೀಟಿಂಗ್ ಗೆ ಕರೆಯಬೇಕಾಗಿದೆ ನಾನು ಸಹ ಹೋಗುತ್ತೇನೆ ಎಂದು ಹೇಳಿದ.
ಸ್ವಲ್ಪ ಸಮಯದ ನಂತರ ಬಂದ ಸುರೇಶ, ಏಕೆ ಕರೆದಿರಲ್ಲ ? ನಮ್ಮ ಹುಡುಗಿಗೆ ಆರಾಮ ಇದೆ ತಾನೇ ಎಂದ. ಆಕೆ ಆರಾಮ ಇದ್ದಾಳೆ. ಆದರೆ ದೇಶಮುಖ್ ಸರ್ ನೀನು ಮಾಡಿದ ಘೋಷಣೆ ಬಗ್ಗೆ ಕೇಳಲು ಕರೆದಿದ್ದರು. ಆದರೆ ತುರ್ತು ಕರೆ ಬಂದ ಕಾರಣ ಹೋದರು ಎಂದರು. ಆಗ *ಸುರೇಶ ನಾನು ಇನ್ನೂ ಬೇಗ ಬಂದಿದ್ದರೆ, ಸಿಗುತ್ತಿದ್ದರೇನೋ ಎಂದು ಹಳಹಳಿಸಿದ. ಹೈಸ್ಕೂಲ್ ಆದ ನಂತರ ಅವರನ್ನು ಫ್ರೀಯಾಗಿ ಮಾತಾಡಿರಲಿಲ್ಲ, ಎಂದು ವಿಷಾದಿಸಿದ*.
ಮುಂದುವರಿದು ಸುರೇಶ, ಇಂದು ಮಾದರಿ ಶಿಕ್ಷಕ ಎಂದು ಎಷ್ಟೋ ಕಡೆಗಳಲ್ಲಿ ಪ್ರಶಸ್ತಿಗಳನ್ನು ಕೊಡುತ್ತಾರೆ. ನನ್ನ ಬಗ್ಗೆ ಅವರಿಗಿದ್ದ ನಿರೀಕ್ಷೆಗಳನ್ನು, ಪೂರ್ಣ ಮಾಡದ ಕುರಿತು ಅವರಲ್ಲಿ ನನ್ನ ಬಗ್ಗೆ ಏನೇ ಅಸಮಾಧಾನ ಇರಬಹುದು. *ಆದರೆ ನನ್ನ ಒಳಗಿನ ಧ್ವನಿ ಪದೇ ಪದೇ ಹೇಳುವುದು ಏನೆಂದರೆ, ನಮ್ಮ ಪ್ರಾಂಶುಪಾಲರ ನಂತರ ನಾನು ನನ್ನ ಜೀವನದಲ್ಲಿ ಕಂಡ ಮಾದರಿ ಶಿಕ್ಷಕ ಅಂದರೆ ಅವರೇ. ಒಬ್ಬ ಶಿಕ್ಷಕ ತನ್ನನ್ನು ಪ್ರತಿ ಸಲ ವಿಮರ್ಶೆ ಮಾಡಿಕೊಳ್ಳಬೇಕು. ತನ್ನಿಂದ ಯಾವುದೇ ತಪ್ಪುಗಳು ಆಗುತ್ತಿವೆಯೇ ಎನ್ನುವುದನ್ನು ಪ್ರತಿ ಸಲ ತನಗೆ ತಾನು ಕೇಳಿಕೊಳ್ಳಬೇಕು. ತಪ್ಪು ಗಮನಕ್ಕೆ ಬಂದಾಗ ಅವುಗಳನ್ನು ತಿದ್ದಿ, ಸರಿಪಡಿಸಿಕೊಳ್ಳಬೇಕು*.
ಇವೆಲ್ಲಾ ಗುಣಗಳನ್ನು ನಾನು ದೇಶಮುಖ್ ಸರ್ ಅವರಲ್ಲಿ ಪ್ರತಿ ಸಲ ನೋಡಿದ್ದೇನೆ. *ಅವರು ಅಷ್ಟು ಕಟ್ಟು ನಿಟ್ಟು ಇರಲಿಲ್ಲ. ಸಲಿಗೆಯನ್ನು ಕೊಡುತ್ತಿರಲಿಲ್ಲ. ವಿದ್ಯಾರ್ಥಿಗಳಲ್ಲಿ ಆದರ್ಶಗಳನ್ನು ಬಿತ್ತುತ್ತಿದ್ದರು, ಆದರ್ಶದಂತೆ ನಡೆದುಕೊಳ್ಳುತ್ತಿದ್ದರು*. ಒಂದು ವಿಷಯ ನನಗೆ ಸದಾ ನೆನಪಿಗೆ ಬರುತ್ತದೆ. ನಾಗೇಶ ನಿನಗೂ ನೆನಪಿರಬಹುದು. *ಹತ್ತನೇ ತರಗತಿ ಮುಗಿಯುವ ಸಂದರ್ಭದಲ್ಲಿ ದೇಶಮುಖ್ ಸರ್ ನಿಮ್ಮ ಜೀವನದ ಗುರಿ ಏನು ? ಶಾಲೆಯಲ್ಲಿ ನಿಮಗೆ ಯಾವುದೇ ಶಿಕ್ಷಕರಿಂದ ಕೆಟ್ಟ ಅನುಭವಗಳು ಆಗಿದ್ದರೆ ಅವುಗಳನ್ನು ಚೀಟಿಯಲ್ಲಿ ಬರೆದು ತಿಳಿಸಿ, ಎಂದು ನಮಗೆ ಹೇಳಿದ್ದರು, ನೆನಪಿದೆ ತಾನೇ ?* ಎಂದು ಸುರೇಶ ಪ್ರಶ್ನಿಸಿದ. ಹೌದು ನೆನಪಿದೆ ಎಂದು ನಾಗೇಶ ತಲೆ ಅಲ್ಲಾಡಿಸಿದರು.
ಮುಂದುವರಿದು ಸುರೇಶ, ನೀನು ಏನು ಗುರಿ ಬರೆದಿದ್ದೆ ? ಅದನ್ನು ಮುಟ್ಟಿದ್ದೀಯಾ ಎಂದು ನಾನು, ನಿನಗೂ ಮತ್ತು ಬೇರೆ ಯಾರಿಗೂ ಇಂದಿಗೂ ಕೇಳಿಲ್ಲ. ಆದರೆ
ನಾನು ಆಗ ಬರೆದಿದ್ದ ಗುರಿಯಂತು ನಾನು ತಲುಪಿಲ್ಲ.
ಆದರೆ, *ಎರಡನೇ ವಿಷಯವಾದ ಶಿಕ್ಷಕರ ತಪ್ಪಿನ ಬಗ್ಗೆ ಆಗ ನಾನು ಏನು ಬರೆದಿದ್ದೆ ಗೊತ್ತೇ ? ನಾಗೇಶ ಎಂದು ಸುರೇಶ ಕುತೂಹಲದಿಂದ ಕೇಳಿದ*. ಏನು? ಏನೆಂದು ನೀನು ಬರೆದಿದ್ದೆ ಎಂದು ನಾಗೇಶ ಕೇಳಿದರು.
ಆಗ ಸುರೇಶ, ನಾನು ಒಮ್ಮೆ, ಒಂದು ವಿಷಯವನ್ನು ಬರೆದು ಕೊಡುವಂತೆ ಶಿಕ್ಷಕರ ಕೋಣೆಗೆ ಹೋಗಿದ್ದೆ. ಆಗ *ಅವರು, ಬರೆದು ಕೊಡುವವರೆಗೆ ಕೂಡು ಎಂದರು. ನಾನು ಟೇಬಲ್ ಮೇಲೆ ಕೂಡಲು ಯೋಚಿಸುತ್ತಿದ್ದೆ, ಅಷ್ಟರಲ್ಲಿ ಅವರು ನೆಲದ ಕಡೆಗೆ ಕೈ ತೋರಿಸಿ ಕೂಡಲು ಸನ್ನೆ ಮಾಡಿದರು. ಆಗ ನಾನು ನೆಲದ ಮೇಲೆಯೇ ಕುಳಿತೆ. ಅವರನ್ನು ಆದರ್ಶ ಶಿಕ್ಷಕರೆಂಬ ದೃಷ್ಟಿಯಲ್ಲಿ ನೋಡುತ್ತಿದ್ದ ನನಗೆ ಅವರ ಈ ನಡೆ ನನಗೆ ಆಗ ಸರಿ ಎನಿಸಿರಲಿಲ್ಲ*.
ಶಿಕ್ಷಕರಿಂದಾದ ಕೆಟ್ಟ ಅನುಭವ ಕುರಿತು ಬರೆಯಿರಿ ಅಂದಾಗ ನಾನು ಇದನ್ನೇ ಚೀಟಿಯಲ್ಲಿ ಬರೆದು ಸ್ವತಃ ಅವರಿಗೆ ಕೊಟ್ಟಿದೆ. ಮುಂದೇನಾಯಿತು ಗೊತ್ತೇ ? ನಾಗೇಶ ಎಂದು ಕುತೂಹಲದಿಂದ ಸುರೇಶ ಕೇಳಿದ.
ಆಗ ನಾಗೇಶ ಶಿಕ್ಷಕರಿಂದ ಕೆಟ್ಟ ಅನುಭವ ಬರೀರಿ, ಎಂದ್ರೆ ಅವರ ಬಗ್ಗೆನೇ ಬರೇಯೋದಾ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ, ತಮ್ಮ A ತರಗತಿಯಲ್ಲಿ ನಡೆದ ಘಟನೆ ಹಂಚಿಕೊಂಡರು. *ನಮ್ಮ ತರಗತಿಯಲ್ಲಿ ಗುಂಪಿನಿಂದ ಒಬ್ಬ ಹುಡುಗ ಶಿಕ್ಷಕರನ್ನು ಕೆಟ್ಟ ರೀತಿಯಲ್ಲಿ ಕರೆದಿದ್ದ, ಆತ ಯಾರೆಂದು ಗುರುತಿಸಲು ಅವರಿಗೆ ಸಾಧ್ಯವಾಗದೇ, ಇಡೀ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನೇ ಶಿಕ್ಷಕರು ಕೋಲಿನಿಂದ ಹೊಡೆದು ಶಿಕ್ಷಿಸಿದ್ದರು*, ಎನ್ನುವುದನ್ನು ಹೇಳಿದರು.
ಆಗ ಸುರೇಶ ಬರೆದಾಗ ನನಗೆ ಹಾಗೇನು ಆಗಲಿಲ್ಲ. ನಾನು ಅವರದೆ ಘಟನೆ ಏಕೆ ಬರೆದಿದ್ದೆ ಆಮೇಲೆ ಹೇಳುತ್ತೇನೆ. ಆದರೆ ಅದರ ನಂತರದ ಅವರ ಪ್ರತಿಕ್ರಿಯೆ ಇಲ್ಲಿವರೆಗೂ ನಾನು ಯಾರೊಂದಿಗೂ ಹಂಚಿಕೊಂಡಿಲ್ಲ, ಅದನ್ನು ಕೇಳು ಎನ್ನುತ್ತಾ, ಚೀಟಿಯಲ್ಲಿ ಬರೆದ ಕೂಡಲೇ ಅಥವಾ ನಂತರದ ದಿನಗಳಲ್ಲಿ ಏನು ಆಗಲಿಲ್ಲ. ಆದರೆ *ಹತ್ತನೇ ತರಗತಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ... ನನಗೆ ಭಾಷಣ ಬರಲ್ಲ ಎಂದು ಗೊತ್ತಿದ್ದರೂ ಸಹ ಒಂದು ಜವಾಬ್ದಾರಿ ನೀಡಲು ದೇಶಮುಖ್ ಸರ್ ಅನಿರೀಕ್ಷಿತವಾಗಿ ನನಗೆ ಕರೆದರು. ಅವರು ಕರೆದಿದ್ದು ವಿಚಿತ್ರ ಅನ್ನಿಸಿದರೂ ಹೋದೆ*. ಆಗ ನನ್ನನ್ನು ಅದೇ ಶಿಕ್ಷಕರ ಕೋಣೆಗೆ ಕರೆದು ಕಾರ್ಯಕ್ರಮದ ಒಂದು ಜವಾಬ್ದಾರಿ ಕೊಟ್ಟರು. ಕೊಟ್ಟು ನಂತರ ತಮ್ಮ ಪಕ್ಕದ ಕುರ್ಚಿ ಮೇಲೆ ಕುಳಿತುಕೊಳ್ಳಲು ಹೇಳಿದರು. ಅವರು ಆಗ ತಮ್ಮ ಮನಸ್ಸಿನಲ್ಲಿದ್ದ ಒಂದು ಮಾತನ್ನು ಹೇಳಲಿಲ್ಲ. ನಾನು ಸಹ ಕೇಳಲಿಲ್ಲ. ಆದರೆ ಅವರ ಮನಸ್ಸಿನ ಮಾತು ನನ್ನ ಮನಸ್ಸಿಗೆ ಬಂದು ತಲುಪಿತ್ತು. ತಮ್ಮ ನಡುವಳಿಕೆ ಎನ್ನುವ ಮಾತಿನಿಂದ, *ಈ ಹಿಂದೆ ಕೆಳಗೆ ಕೂಡು ಎಂದು ಹೇಳುವಲ್ಲಿ ನನ್ನಲ್ಲಿ ಯಾವುದೇ ತಪ್ಪು ಭಾವನೆ ಇರಲಿಲ್ಲವೆಂದೋ ಅಥವಾ ಒಂದು ವೇಳೆ ನನ್ನಿಂದಲೂ ತಪ್ಪಾಗಿದ್ದರೆ ಅದನ್ನು ತಿದ್ದಿಕೊಳ್ಳುತ್ತಿದ್ದೇನೆ ಎನ್ನುವ ಸಂದೇಶವನ್ನು* ಯಾವುದೇ ಒಂದು ಮಾತಿಲ್ಲದೆ, ನಿಶ್ಶಬ್ದವಾಗಿ ತಮ್ಮ ವರ್ತನೆಯ ಮೂಲಕ ನನಗೆ ತಲುಪಿಸಿದರು.
ಶಿಕ್ಷಕರು *ತಮಗಿಂತಲೂ ಚಿಕ್ಕವನಾಗಿದ್ದ ಹುಡುಗನೊಂದಿಗೆ ನಡೆದುಕೊಂಡ ರೀತಿ, ನಡೆದುಕೊಂಡು ಆ ದಿನವನ್ನು, ನನಗೆ ಮೆರೆಯುವುದಕ್ಕೆ ಇನ್ನೂ ಆಗಿಲ್ಲ*.....
ಆಗ ಅವರಿಂದಾದ ಘಟನೆಯನ್ನೇ ಯಾಕೆ ಬರೆದಿದ್ದೆ ಅಂದರೆ, *ಅವರು ಸದಾ ತಮ್ಮನ್ನು ತಾವು ವಿಮರ್ಶೆ ಮಾಡಿಕೊಳ್ಳುತ್ತಿದ್ದರು. ಇದು ಆದರ್ಶ ವ್ಯಕ್ತಿಗಳ ಲಕ್ಷಣ. ಅವರಿಗೆ ಗೊತ್ತಾಗದೆ ಅವರಿಂದ ಏನಾದರೂ ತಪ್ಪಾದರೂ ಅದನ್ನು ತಿದ್ದಿಕೊಳ್ಳಬೇಕು* ಎನ್ನುವ ತೆರೆದು ಮನಸ್ಸು ಅವರಾದಾಗಿತ್ತು. ಹೀಗಾಗಿ ಆ ವಿಚಾರವೇ ಬರೆದಿದ್ದೆ.
ನಾಗೇಶ, *ಈ ಸಮಯದಲ್ಲಿ ಇಂತಹ ಶಿಕ್ಷಕರ ಅವಶ್ಯಕತೆ ಬಹಳಷ್ಟು ಇದೆ. ಬಹಳಷ್ಟು ಶಿಕ್ಷಕರು ತಮ್ಮ ವೃತ್ತಿ ಹೊಟ್ಟೆಪಾಡಿಗೆ ಎಂದು ಭಾವಿಸುತ್ತಾರೆ. ಅವರ ಮುಂದೆ ದೇಶದ ಭವಿಷ್ಯವೇ ಇದೆ ಎನ್ನುವುದನ್ನು ಯೋಚಿಸುವುದಿಲ್ಲ. ಎಷ್ಟೋ ಶಿಕ್ಷಕರು ನಮ್ಮ ಎದುರಿಗೆ ಚಿಕ್ಕ ಮಕ್ಕಳಿದ್ದಾರೆಂದು ಹೇಗೋ ವರ್ತಿಸುತ್ತಾರೆ. ಆದರೆ ಅವರ ಮುಂದೆ ಜಗತ್ತಿನ ಭವಿಷ್ಯವೇ ಇದೆ ಎಂದು ಚಿಂತಿಸುವುದಿಲ್ಲ. ಮಕ್ಕಳು ಜಗತ್ತಿನ ಭವಿಷ್ಯವೆಂದು ಚಿಂತಿಸುವ ದೇಶಮುಖ್ ಸರ್ ಅಂತಹ ಶಿಕ್ಷಕರು ಬೇಕಾಗಿದ್ದಾರೆ*. ಇಂತಹವರಿಂದಲೇ ಭವ್ಯ ಭಾರತದ ನಿರ್ಮಾಣವಾಗಲಿದೆ.
ನಾನು ನನ್ನ ಕಾರ್ಯಕ್ರಮಕ್ಕೆ ಅವರಿಗೆ ಕರೆಯಿಸಲು ಅವಕಾಶ ಸಿಗಲಿಲ್ಲ. ಆದರೆ *ನಾನು ಇಲ್ಲಿಂದಲೇ ಅವರನ್ನು ಮಾದರಿ ಶಿಕ್ಷಕ ಎಂದು ಗೌರವಿಸುತ್ತೇನೆ*,ಎಂದು ಅತ್ಯಂತ ಭಾವುಕವಾಗಿ ಸುರೇಶ ಹೇಳಿದ.
ಆಗ ಡಾ. ನಾಗೇಶ ಸಹ ತಮ್ಮ ಹೈ ಸ್ಕೂಲ್ ನೆನಪಿನಲ್ಲಿ ಮುಳುಗಿ ಅದರಲ್ಲಿಯೇ ಸ್ವಲ್ಪ ಸಮಯ ಕಳೆದುಹೋದರು.
ಸ್ವಲ್ಪ ಸಮಯದ ನಂತರ ಮತ್ತೆ ವರ್ತಮಾನಕ್ಕೆ ಬಂದು, ಸುರೇಶ ಮೂಲ ವಿಷಯವೇ ನೆನಪು ಹೋಯಿತು. ನೀನು ಆ ಸಮಾರಂಭದಲ್ಲಿ ಏನೆಂದು ಘೋಷಣೆ ಮಾಡಿರುವೆ ಎನ್ನುವ ಕುತೂಹಲವನ್ನು ದೇಶಮುಖ ಸರ್ ಸಹ ವ್ಯಕ್ತಪಡಿಸುತ್ತಿದ್ದರು. ಅದಕ್ಕಾಗಿಯೇ ನಿನ್ನನ್ನು ಕರೆದಿದ್ದು, ಈಗ ಹೇಳು ನೀನು ಏನೆಂದು ಘೋಷಣೆ ಮಾಡಿರುವೆ ? ಎಂದರು.......
(ಮುಂದುವರೆಯುವುದು....)
(ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ ಸರಣಿಯ 6 ನೇ ಲೇಖನ)
*******"****""""""*********

Comments
Post a Comment