*Break the pattern, ನಾಮ ಜಪ, ಮಂತ್ರ ಜಪದ ಮೊದಲನೇಯ ಫಲ*.


ನಮ್ಮ ಮನಸ್ಸು ನಿರಂತರವಾಗಿ ಏನನ್ನಾದರೂ ಯೋಚನೆ ಮಾಡುತ್ತಲೇ ಇರುವ ನಮ್ಮ ಒಂದು ಅಂಗ. (ಮನಸ್ಸಿಗೆ ನಿರಂತರವಾಗಿ ಯೋಚನೆ ಮಾಡಲು ಒಂದು ವಿಷಯ ಅಥವಾ ವಿಚಾರ ಬೇಕೇಬೇಕು.)


ಬಹಳಷ್ಟು ಸಲ ನಮ್ಮ ಮನಸ್ಸು ಏನನ್ನು ಯೋಚಿಸುತ್ತಿದೆ ? ಎನ್ನುವುದೇ ನಮಗೆ ಗೊತ್ತಾಗುವುದಿಲ್ಲ. ಆ ರೀತಿ ಮನಸ್ಸು ನಿರಂತರ ಯೋಚನೆ ಮಾಡುತ್ತದೆ.


ಮನಸ್ಸು ನಿರಂತರವಾಗಿ ಯಾವುದನ್ನು ಯೋಚನೆ ಮಾಡುತ್ತದೆ ? ಆ ಕೆಲಸಗಳು ನಮಗೆ ಗೊತ್ತಿಲ್ಲದೆ ನಮ್ಮಿಂದ ಆಗುತ್ತವೆ. ನಮಗೆ ಗೊತ್ತಿಲ್ಲದೆ ನಮ್ಮಿಂದ ತಪ್ಪು ಯೋಚನೆಗಳಾದರೆ ತಪ್ಪು ಕೆಲಸಗಳು ಆಗುತ್ತವೆ. 


ನಮಗೆ ಯಾರಾದರೂ ಏನನ್ನೋ ಅಂದಾಗ, ಅವರಿಗೆ ನಾನು ಹೀಗೆ ಹೇಳಬೇಕಿತ್ತು, ಹಾಗೇ ಹೇಳಬೇಕಿತ್ತು ಎನ್ನುವ (ಸುಧಾರಣೆಯ) ಯೋಚನೆ ನಮ್ಮಲ್ಲಿ ನಿರಂತರ ಬರುತ್ತಿರುತ್ತವೆ.


 ಕೆಲವೊಮ್ಮೆ ನಮ್ಮ ಜೀವನದಲ್ಲಿ ಘಟಿಸಿದ ಕೆಟ್ಟ ಘಟನೆಗಳ ನೆನಪುಗಳು ಬಂದಾಗ, ಆ ಕೆಟ್ಟ ಘಟನೆಗಳು ಈಗ ನಡೆಯುತ್ತಿದೆ ಎನ್ನುವಂತೆ ಆ ಕೆಟ್ಟ ಘಟನೆಗೆ ಮನಸ್ಸಿನಲ್ಲಿ ಕೆಟ್ಟ, ಕೆಟ್ಟ ಪ್ರತಿಕ್ರಿಯೆ ಹಾಕುತ್ತಿರುತ್ತೇವೆ.


ಈ ಕೆಟ್ಟ ಯೋಚನೆಗಳಿಂದ ನಮಗೆ ಗೊತ್ತಿಲ್ಲದೆ ಪುನಃ ಕೆಟ್ಟ ಘಟನೆಗಳು ನಮ್ಮ ಜೀವನದಲ್ಲಿ ಪುನಾರಾವರ್ತನೆ ಆಗುತ್ತವೆ. 


ಒಂದು ವೇಳೆ ಮನಸ್ಸಿಗೆ ನಾವು ನಾಮ ಜಪ, ಮಂತ್ರ ಜಪ ಎನ್ನುವ  ಒಂದು ಕೆಲಸವನ್ನು ಕೊಟ್ಟಲ್ಲಿ, ಮನಸ್ಸಿಗೆ ಕೆಟ್ಟ ಯೋಚನೆ ಮಾಡಲು ಅವಕಾಶವೇ ಸಿಗುವುದಿಲ್ಲ. ಕೆಟ್ಟ ಯೋಚನೆ ಮಾಡದಿದ್ದರೆ ಕೆಟ್ಟ ಘಟನೆಗಳು ಘಟಿಸುವುದಿಲ್ಲ.


ಇದು,ನಾಮ ಜಪ, ಮಂತ್ರ ಜಪದ ಮೊದಲ ಫಲ ಆಗಿದೆ. 


ಇದನ್ನು ಇಂಗ್ಲೀಷಿನಲ್ಲಿ Break the pattern ಎನ್ನುತ್ತಾರೆ. 


Pattern ಎಂದರೆ ಒಂದು ಸುತ್ತು ಇದ್ದ ಹಾಗೆ. ಉದಾಹರಣೆಗೆ, ಮಳೆಗಾಲ ಇದರ ನಂತರ ಚಳಿಗಾಲ, ಇದರ ನಂತರ ಬೇಸಿಗೆ ಕಾಲ. ಇದು ಒಂದು Pattern. ಒಂದರ ನಂತರ ಒಂದು ಘಟಿಸುತ್ತಲೇ ಇರುತ್ತವೆ. ಇದೇ ರೀತಿ ತಿಂಗಳುಗಳು, ವಾರಗಳ Pattern ಇದೆ. 


ಇದೇ ರೀತಿ ಘಟನೆಗಳು ಅದರ ನಂತರ ಅದೇ ರೀತಿಯ ಯೋಚನೆಗಳು. ಯೋಚನೆ ನಂತರ ಅದೇ ರೀತಿಯ ಘಟನೆಗಳು.

 

ಕೆಟ್ಟ ಘಟನೆ -> ಕೆಟ್ಟ ಯೋಚನೆ-> ಕೆಟ್ಟ ಘಟನೆ 


ಹೀಗೆ Pattern ನಮ್ಮ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಒಂದು ವೇಳೆ ಕೆಟ್ಟ ಘಟನೆಗಳು ನಡೆದಿದ್ದಲ್ಲಿ, ಇದರ ನಂತರ ಸಹಜವಾಗಿ ಕೆಟ್ಟ ಯೋಚನೆಗಳು ತನ್ನಿಂದ ತಾನೇ ಬರಲು ಆರಂಭಿಸುತ್ತವೆ. ಕೆಟ್ಟ ಯೋಚನೆಗಳ ಜೊತೆಗೆ ನಮ್ಮ ಬಗ್ಗೆ  ಸ್ವಯಂ ಕರುಣೆ ಸೇರಿಕೊಂಡರೆ, ಆ ಕೆಟ್ಟ ಯೋಚನೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ನಾವು ಮಾಡುತ್ತೇವೆ. ಆಗ ಪುನಃ ಅದೇ ರೀತಿಯ ಕೆಟ್ಟ ಘಟನೆಗಳು ಮರುಕಳಿಸುತ್ತವೆ.


ಒಂದು ವೇಳೆ 

ಕೆಟ್ಟ ಘಟನೆ -> ಕೆಟ್ಟ ಯೋಚನೆ-> ಕೆಟ್ಟ ಘಟನೆ, ಈ  pattern ಮಧ್ಯದಲ್ಲಿ ನಾಮ ಜಪ, ಮಂತ್ರ ಜಪ‌ ಸೇರಿಕೊಂಡರೆ, ಈ pattern ಮುರಿದು ಹೋಗುತ್ತದೆ. 


ಕೆಟ್ಟ ಘಟನೆ -> ಕೆಟ್ಟ ಯೋಚನೆ-> ಕೆಟ್ಟ ಘಟನೆ Pattern ಮುರಿದು ಹೋಗುವುದರಿಂದ ಕೆಟ್ಟ ಘಟನೆಗಳು ನಂತರ, ಅದೇ ರೀತಿಯ ಕೆಟ್ಟ ಘಟನೆಗಳು ಪುನಃ ಭವಿಷ್ಯದ ಜೀವನದಲ್ಲಿ ಘಟಿಸುವುದು ತಪ್ಪುತ್ತದೆ.


ಇದು ನಾಮ ಜಪ, ಮಂತ್ರ ಜಪದ ಮೊದಲನೇಯ ಫಲ. 


(ಮುಂದಿನ ಫಲಗಳನ್ನು ಸಮಯ ಸಿಕ್ಕಾಗ ನೋಡೋಣ.)



✍️ URAIN NAMAH 

(ಈ ಪದ ಸತ್ಯ ಯುಗದ ಮುನ್ನುಡಿ

ಈ ಪದ ಯುಗ ಪರಿವರ್ತನೆಗೆ ನಾಂದಿ) 


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ ಸೇಡಂ

Comments

Popular posts from this blog

ಅಂಧ ಹೇಳವರು