ಬೇರಿಲ್ಲದೆ ವೃಕ್ಷ ಹೇಗಾಯಿತಣ್ಣ?

ಬೇರಿಲ್ಲದೆ ವೃಕ್ಷ ಹೇಗಾಯಿತಣ್ಣ?
ಬೇರಿಲ್ಲದೆ ಹೂ ಹೇಗೆ ಅರಳಿತಣ್ಣ?
ಬೇರಿಲ್ಲದೆ ಹಣ್ಣು ಹೇಗೆ ಕಟ್ಟಿಕೊಂಡಿತಣ್ಣ?

ಹೂ, ಹಣ್ಣಿನ ಆಸೆಗೆ
ಎಲೆ, ಬೇರನ್ನು ಮರೆತು
ವೃಕ್ಷದೊಂದಿಗೆ ತನ್ನ ಗುರುತಿಸಿಕೊಂಡರೆ,


ಅಣ್ಣ ಎಲೆಗೇನಿದೆ ಸೆಲೆ?
ಅಣ್ಣ ಎಲೆಗೇನಿದೆ ನೆಲೆ?
ಅಣ್ಣ ಎಲೆಗೇನಿದೆ ಬೆಲೆ?

ಬೇರಾದ ಜ್ಯೋತಿಸ್ವರೂಪಳೇ ನೀನೇ ಎಲ್ಲಾ
ಎಲೆಯಾದ ನಾನು ಏನು ಇಲ್ಲ.
© URAIN Urain Namah 06/07/18

Comments

Popular posts from this blog

ಅಂಧ ಹೇಳವರು