ಸ್ನೇಹಿತರೇ ಎಲ್ಲರಿಗೂ ನಮಸ್ಕಾರ
ಜೀವನದಲ್ಲಿ ನಾನು ಎನ್ನುವುದು ಎಲ್ಲರಿಗೂ ಮುಖ್ಯವಾದುದು. ಇದಕ್ಕೆ ಸಂಬಂಧಿಸಿದಂತೆ ಅವರವರ ಸಂತೋಷಕ್ಕಾಗಿ ಹುಟ್ಟಿದ ದಿನಗಳ ಆಚರಣೆ ಈಗ ಹೆಚ್ಚುತ್ತಿದೆ.
ಆಪ್ತರು ಸಹ ಅವರಿಗೆ ತಮ್ಮ ಪ್ರೀತಿ ತೋರ್ಪಡಿಸಲು ಅವರನ್ನು ಸಂತೋಷಪಡಿಸಲು ಈ ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಇದು ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸಲು ಇಂದಿನ ಸಮಾಜ ಕಂಡುಕೊಂಡಿರುವ ಆಚರಣೆ.
ಆದರೂ ಸಹ ನಾವು ಸತ್ಯ ಏನಿದೆ, ಅದರ ಕಡೆಗೆ ಸ್ವಲ್ಪವಾದರೂ ಧ್ಯಾನವನ್ನು ಕೊಡಬೇಕು. ಸತ್ಯವನ್ನು ಸ್ವಲ್ಪವಾದರೂ ನೆನಪಿಸಿಕೊಳ್ಳಲು ಪ್ರಯತ್ನಿಸಬೇಕು.
ಒಂದು ಮನೆ ಕಟ್ಟಿರುತ್ತೇವೆ. ಮನೆಯಲ್ಲಿ ನಾವು ವಾಸಿಸುತ್ತವೆ, ಎಂದರೆ ಇದರ ಅರ್ಥ ನಾವೇ ಮನೆ ಎಂದಲ್ಲ. ಮನೆ ನಮ್ಮದೇ ಆಗಿದ್ದರೂ ನಮಗೂ ಮನೆಗೂ ಬಹಳ ವ್ಯತ್ಯಾಸವಿದೆ.
ಅದೇ ರೀತಿ ದೇಹದಲ್ಲಿ ನಾವು ಇದ್ದರೂ ದೇಹ ನಮಗೂ ವ್ಯತ್ಯಾಸ ಇದೆ.
ದೇಹ ಬಾಲ್ಯ, ಯೌವ್ವನ , ಮುಪ್ಪು ಆಗಿ ನಿರಂತರ ಬದಲಾಗುತ್ತಿದೆ. ಆದರೆ ದೇಹದಲ್ಲಿರುವ ಒಂದು ತಿಳುವಳಿಕೆ, ಒಂದು ಅನುಭವಿ ಅದೇ ಆಗಿರುತ್ತಾನೆ. ಬದಲಾಗುವುದಿಲ್ಲ. ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.
ದೇಹದಲ್ಲಿ ವಾಸಿಸುವ ಅನುಭವಿ ತಿಳುವಳಿಕೆ ಆತ್ಮ ಶಾಶ್ವತ. ಆದರೆ ದೇಹ ಹುಟ್ಟುತ್ತದೆ ಹಾಗೂ ಸಾಯುತ್ತದೆ.
ಈ ದೇಹದ ಹುಟ್ಟಿದ ದಿನಗಳನ್ನು ನನ್ನ ಹುಟ್ಟಿದ ದಿನ ಎಂದು ಭಾವಿಸಿದಾಗ ಮೊದಲೇ ಅಜ್ಞಾನ ಇರುವ ಜೀವಕ್ಕೆ, ದೇಹವೇ ನಾನು ಎನ್ನುವ ಅಜ್ಞಾನ ಇನ್ನೂ ಹೆಚ್ಚಾಗುತ್ತದೆ.
ಜೀವ ಜನ್ಮ ಮರಣಗಳ ಚಕ್ರದಿಂದ ಪಾರಾಗುವುದಿಲ್ಲ.
ಆದ್ದರಿಂದ ಇಂತಹ ಸಂದರ್ಭದಲ್ಲಿಯೂ ನಾವು ಜ್ಞಾನದ ಸ್ಮರಣೆ ಮಾಡುವ ಪ್ರಯತ್ನ ಮಾಡಬೇಕು.
ನಾವು ಮನುಷ್ಯರಾಗಿ ದೇಹ ಪಡೆದಿರುವುದೇ ನಮ್ಮನ್ನು ನಾವು ಯಾರು ಎಂದು ಕಂಡುಕೊಳ್ಳಲು. ನಾವು ಅಸೀಮೀತ, ಅನಂತ ಎನ್ನುವುದು ತಿಳಿದುಕೋಳ್ಳಲು. ಇದರ ಬಗ್ಗೆಯೂ ನಮ್ಮ ಗಮನವಿರಲಿ ಎಂದು ಎಲ್ಲರಲ್ಲಿ ನನ್ನ ಪ್ರಾರ್ಥನೆ.
ಇಲ್ಲಿವರೆಗೆ ನಾನಾಗಿ ನಾನು ದೇಹದ ಜನ್ಮ ದಿನ ಆಚರಿಸಿಕೊಂಡಿಲ್ಲ. ಆದರೂ ಹಿತೈಷಿಗಳು ತಮ್ಮ ಪ್ರೀತಿ ವ್ಯಕ್ತಪಡಿಸಲು ಈ ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಈಗ ನಾನು ಕೆಲಸ ಮಾಡುವ ಕಂಪನಿ ಬದಲಾಗಿದೆ. ಹೀಗಾಗಿ ಬಹಳ ಕೆಲಸ ಇರುವುದರಿಂದ ಈ ದಿನ ನಾನು ಕೆಲಸಕ್ಕೆ ಹೋಗಿದ್ದೆ ಆದರೆ ಮಕ್ಕಳು ನೀವು ಬನ್ನಿ, ಇಲ್ಲದಿದ್ದರೆ ನಾವೇ ಆಫೀಸಿಗೆ ಬರುತ್ತೇವೆ ಎಂದರು.
ನಾನು ಮೇಲಾಧಿಕಾರಿಗಳ ಒಪ್ಪಿಗೆ ಪಡೆದುಕೊಂಡು ಮನೆಗೆ ಬಂದೆ ಮಕ್ಕಳು ಆಚರಣೆ ಮೂಲಕ ಹಾಗೂ ಉಡುಗೊರೆ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.
ಪುನಃ ಆಫೀಸಿಗೆ ಹೋದಾಗ ಬಿಡುವಿಲ್ಲದ ಕೆಲಸದ ನಡುವೆಯೂ ಸಹೋದ್ಯೋಗಿಗಳು ತಮ್ಮ ಪ್ರೀತಿ ವ್ಯಕ್ತಪಡಿಸಿ ಶುಭ ಕೋರಿದರು.
ಮತ್ತೆ ರಾತ್ರಿ ಬಂದಾಗ ಮತ್ತೆ ಇನ್ನೊಂದು ಮಕ್ಕಳ ತಂಡ ನಮಗೆ ಗೊತ್ತಿರಲಿಲ್ಲ ಎಂದು ಬಂದು ಹುಟ್ಟುಹಬ್ಬ ಆಚರಿಸಿದರು.
ಇದೇ ರೀತಿ ಮುಖಪುಟದಲ್ಲಿಯೂ ಹಾಗೂ ವಾಟ್ಸಾಪ್ ನಲ್ಲಿಯೂ ಅನೇಕರು ತಮ್ಮ ಸಮಯವನ್ನು ಕೊಟ್ಟು ನನ್ನಗೆ ಶುಭ ಕೋರಿದ್ದೀರಿ.
ಎಲ್ಲಾ ಮಕ್ಕಳಿಗೂ, ನನ್ನ ಸಹೋದ್ಯೋಗಿಗಳಿಗೂ, ಎಲ್ಲಾ ಮುಖಪುಟದ ಸ್ನೇಹಿತರಿಗೂ ನನ್ನ ಅನಂತ ವಂದನೆಗಳು.
ಇನ್ನೊಂದು ವಿಷಯ ನಾವು ಆದಷ್ಟು ಸತ್ಯದ ಜೊತೆಗೆ ಇರಲು ಪ್ರಯತ್ನಿಸೋಣ. ಸುಳ್ಳು ಏನು ಎನ್ನುವುದನ್ನು ಅರಿಯೋಣ.
ಯಾವುದು ಶಾಶ್ವತ ಅದುವೇ ಸತ್ಯ. ಯಾವುದು ಬದಲಾಗುತ್ತಿದೆ ಅದುವೇ ಸುಳ್ಳು.
ಆ ಶಾಶ್ವತ ಸತ್ಯವೇ, ಅಪ್ಪಟ ತಿಳುವಳಿಕೆ ಆಗಿರುವ ನಾವಾಗಿದ್ದೆವೇ. ಇದನ್ನು ಅರಿಯಲು ಪ್ರಯತ್ನಿಸೋಣ. ಆ ಜ್ಞಾನದಲ್ಲಿ ನಿಲ್ಲಲ್ಲು ಪ್ರಯತ್ನಿಸೋಣ.
(ಇದಕ್ಕಾಗಿಯೇ ಹುಟ್ಟು ಇಲ್ಲ, ಸಾವು ಇಲ್ಲ ಎನ್ನುವ ಪುಸ್ತಕವನ್ನು ನಾನು ಬರೆದಿದ್ದೇನೆ. ಆದರೆ ಅದರ ಬಿಡುಗಡೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. )
ಸತ್ಯಕ್ಕೆ ಜಯವಾಗಲಿ. ಸತ್ಯ ಯುಗಕ್ಕೆ ಜಯವಾಗಲಿ.
ಕಲಿಯುಗ ಕೊನೆಗೊಳ್ಳಲಿ, ಸತ್ಯ ಯುಗ ಆರಂಭವಾಗಲಿ.
ಓಂ ನಮಃ ಶಿವಾಯ
ಎಲ್ಲರಿಗೂ ಅನಂತ ವಂದನೆಗಳು.

Comments
Post a Comment