ಸಹನೆ, ಪ್ರಯತ್ನ
ಏನಾಗಲಿ, ಏನೇನು ಆಗಲಿ
ಸಹನೆ, ಸತತ ಪ್ರಯತ್ನ ಹೊರತು
ಬೇರೆ ನೇರ ಮಾರ್ಗ ಇಲ್ಲ ಬಾಳಲಿ
ಸಹಿಸದಿದ್ದರೆ ಬಾಣಲೆಯಿಂದ ಬೆಂಕಿಗೆ
ನಿರಂತರ ಯತ್ನವಿಲ್ಲದಿದ್ದರೆ ಎಂದು ಏಳೊದಿಲ್ಲ ಮೇಲೆ
ಸಹನೆ ಸಲೀಸಲ್ಲ, ನಿರಂತರ ಪ್ರಯತ್ನ ಹೇಳಿದ ಹಾಗಲ್ಲ
ಸಿಹಿ ಗಿಂತ ಕಹಿ ನೆನೆದರೆ ಸಹಿಸಲಾಗದು
ಗೆಲವಿಗಿಂತ ಸೋಲನ್ನು ಚಿಂತಿಸಿದರೆ ಯತ್ನ ಸಾಗದು
ಸಹಿಸಲು ಘೋರ ಕಲ್ಲಾಗಬೇಕು
ನಿರಂತರ ಪ್ರಯತ್ನಕ್ಕೆ ಗಾಣದ ಎತ್ತಾಗಬೇಕು
ದೇವ, ಪ್ರಾರಬ್ಧಕ್ಕೆ ಸಹನೆ ಹೊರತು ಅನ್ಯ ಮದ್ದಿಲ್ಲ
ಪುರುಷಾರ್ಥಕ್ಕೆ ಸತತ ಯತ್ನದ ಹೊರತು ಅನ್ಯ ದಾರಿಯಿಲ್ಲ
ನಾನು ಯಂತ್ರ, ಯಂತ್ರ ನಡೆಸುವ ಶಕ್ತಿ ನೀನು
ಇಂದ್ರಿಯ ಗೋಚರ ನೀನೆ ಎಲ್ಲಾ
ಇಂದ್ರಿಯ ಅಗೋಚರ ನಾನು ಏನು ಇಲ್ಲ.
ದೇವ, ಏನಾಗಲಿ, ಏನೇನು ಆಗಲಿ
ಕಷ್ಟಕ್ಕೆ ಕಲ್ಲಿನಂಥ ಸಹನೆ ನಾನಾಗಲಿ
ನಿರಂತರ ಯತ್ನಕ್ಕೆ ಸದಾ ಪ್ರೇರಣೆ ನಿನಾಗಲಿ
ನಿಮ್ಮ ಕೃಪೆ ಅರಿಯುವವನು ನಾನಾಗಲಿ
ನನ್ನ ಎಲ್ಲ ಯಶಸ್ಸು, ನನ್ನ ಕೈ ಹಿಡಿದು ನಡೆಸುವ ನಿಮ್ಮದಾಗಲಿ
U R ALL I AM NOT
(© U R A I N ) 24/06/2018
ಸಿಹಿ ಗಿಂತ ಕಹಿ ನೆನೆದರೆ ಸಹಿಸಲಾಗದು
ಗೆಲವಿಗಿಂತ ಸೋಲನ್ನು ಚಿಂತಿಸಿದರೆ ಯತ್ನ ಸಾಗದು
ಸಹಿಸಲು ಘೋರ ಕಲ್ಲಾಗಬೇಕು
ನಿರಂತರ ಪ್ರಯತ್ನಕ್ಕೆ ಗಾಣದ ಎತ್ತಾಗಬೇಕು
ದೇವ, ಪ್ರಾರಬ್ಧಕ್ಕೆ ಸಹನೆ ಹೊರತು ಅನ್ಯ ಮದ್ದಿಲ್ಲ
ಪುರುಷಾರ್ಥಕ್ಕೆ ಸತತ ಯತ್ನದ ಹೊರತು ಅನ್ಯ ದಾರಿಯಿಲ್ಲ
ನಾನು ಯಂತ್ರ, ಯಂತ್ರ ನಡೆಸುವ ಶಕ್ತಿ ನೀನು
ಇಂದ್ರಿಯ ಗೋಚರ ನೀನೆ ಎಲ್ಲಾ
ಇಂದ್ರಿಯ ಅಗೋಚರ ನಾನು ಏನು ಇಲ್ಲ.
ದೇವ, ಏನಾಗಲಿ, ಏನೇನು ಆಗಲಿ
ಕಷ್ಟಕ್ಕೆ ಕಲ್ಲಿನಂಥ ಸಹನೆ ನಾನಾಗಲಿ
ನಿರಂತರ ಯತ್ನಕ್ಕೆ ಸದಾ ಪ್ರೇರಣೆ ನಿನಾಗಲಿ
ನಿಮ್ಮ ಕೃಪೆ ಅರಿಯುವವನು ನಾನಾಗಲಿ
ನನ್ನ ಎಲ್ಲ ಯಶಸ್ಸು, ನನ್ನ ಕೈ ಹಿಡಿದು ನಡೆಸುವ ನಿಮ್ಮದಾಗಲಿ
U R ALL I AM NOT
(© U R A I N ) 24/06/2018
Comments
Post a Comment